Holiday Plan: ಬೇಸಿಗೆಯಲ್ಲಿ ದಕ್ಷಿಣ ಭಾರತದ ಈ ಸ್ಥಳಗಳಿಗೆ ಟ್ರಿಪ್ ಹೋಗ್ಬೇಕಂತೆ

Travel Tips: ಹೀಗೆ ಕೆಲವರು ತಮ್ಮ ಮಕ್ಕಳನ್ನು ಸಮುದ್ರಗಳು ಇರುವಂತಹ ಜಾಗಕ್ಕೆ ಕರೆದುಕೊಂಡು ಹೋದರೆ, ಇನ್ನೂ ಕೆಲವರು ಬೆಟ್ಟ ಗುಡ್ಡಗಳು ಇರುವ ಜಾಗಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಬೇಸಿಗೆಯಲ್ಲಿ ಸಮುದ್ರಗಳು ಮತ್ತು ಬೆಟ್ಟ ಗುಡ್ಡಗಳು ಇರುವ ಸ್ಥಳವು ಸಹ ಇನ್ನೂ ಹೆಚ್ಚು ತಾಪಮಾನದಿಂದ ಕೂಡಿರುತ್ತದೆ ಎಂದು ಹೇಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ನಾವೆಲ್ಲರೂ ಬೇಸಿಗೆಯಲ್ಲಿ (Summer) ಮನೆಯ ಹೊರಗೆ ಕಾಲಿಡಲು ತುಂಬಾನೇ ಹೆದರುತ್ತೇವೆ, ಏಕೆಂದರೆ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿದ್ದು, ಸೆಖೆ ಸಹ ತುಂಬಾನೇ ಆಗುತ್ತದೆ. ಹೆಚ್ಚಾಗಿ ಜನರು ತಮ್ಮ ಮನೆಯಲ್ಲಿಯೇ ಇರಲು ಬಯಸುತ್ತಾರೆ, ಆದರೆ ಮಕ್ಕಳಿಗೆ (Children) ಬೇಸಿಗೆಯಲ್ಲಿ ಶಾಲೆಗಳು ರಜೆ (School Holiday) ಇರುವುದರಿಂದ ಎಲ್ಲಾದರೂ ಸುತ್ತಾಡಿಸಿಕೊಂಡು ಬರುವ ಸಲುವಾಗಿ ಯಾವುದಾದರೂ ಪ್ರವಾಸಿ ತಾಣಗಳಿಗೆ (Tourist Place) ಹೋಗಲೇ ಬೇಕು.

ಹೀಗೆ ಕೆಲವರು ತಮ್ಮ ಮಕ್ಕಳನ್ನು ಸಮುದ್ರಗಳು ಇರುವಂತಹ ಜಾಗಕ್ಕೆ ಕರೆದುಕೊಂಡು ಹೋದರೆ, ಇನ್ನೂ ಕೆಲವರು ಬೆಟ್ಟ ಗುಡ್ಡಗಳು ಇರುವ ಜಾಗಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಬೇಸಿಗೆಯಲ್ಲಿ ಸಮುದ್ರಗಳು ಮತ್ತು ಬೆಟ್ಟ ಗುಡ್ಡಗಳು ಇರುವ ಸ್ಥಳವು ಸಹ ಇನ್ನೂ ಹೆಚ್ಚು ತಾಪಮಾನದಿಂದ ಕೂಡಿರುತ್ತದೆ ಎಂದು ಹೇಳಬಹುದು. ಆದರೆ ಕೆಲವು ಪರ್ವತಗಳು ಬೇಸಿಗೆಯಲ್ಲಿಯೂ ಸಹ ದೇಹಕ್ಕೆ ತಂಪನ್ನು ನೀಡುತ್ತವೆ ಮತ್ತು ಅಲ್ಲಿಗೆ ಹೋದರೆ ಅಷ್ಟೊಂದು ಬಿಸಿಲಿನ ಶಾಖ ದೇಹಕ್ಕೆ ತಾಕುವುದಿಲ್ಲ ಎಂದು ಹೇಳಲಾಗುತ್ತದೆ.

ಪರ್ವತಗಳ ವಿಷಯಕ್ಕೆ ಬಂದಾಗ ಹಿಮಾಲಯವು ಅನೇಕರಿಗೆ ಮೊದಲ ಆಯ್ಕೆಯಾಗಿದ್ದರೂ, ದಕ್ಷಿಣ ಭಾರತವು ಕೇವಲ ಕಡಲತೀರಗಳು ಮತ್ತು ಹಿನ್ನೀರುಗಳನ್ನು ಹೊಂದಿದೆ ಎಂದು ಭಾವಿಸುವುದು ಬಹುಶಃ ತಪ್ಪಾಗುತ್ತದೆ. ಈ ಬೇಸಿಗೆಯಲ್ಲಿ, ನೀವು ಸ್ವಲ್ಪ ಸಮಯದವರೆಗೆ ಈ ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದರೆ, ದೇಶದ ದಕ್ಷಿಣ ಭಾಗದಲ್ಲಿರುವ ಈ ಕೆಳಗಿನ ಪರ್ವತ ತಾಣಗಳಳಿಗೆ ಭೇಟಿ ನೀಡಿ.

1. ಕರ್ನಾಟಕದಲ್ಲಿರುವ ಸಕಲೇಶಪುರ

ನೀವು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರೆ, ನಿಮ್ಮ ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ ಹೋಗುತ್ತೀರಿ. ಅದನ್ನು ಬಿಟ್ಟು ಸಕಲೇಶಪುರಕ್ಕೆ ಒಮ್ಮೆ ಭೇಟಿ ನೀಡಿ. 'ಕರ್ನಾಟಕದ ಸ್ವಿಟ್ಜರ್‌ಲ್ಯಾಂಡ್' ಎಂದು ಕರೆಯಲ್ಪಡುವ ಹಾಸನದ ಸಕಲೇಶಪುರವು ಸಮುದ್ರ ಮಟ್ಟದಿಂದ 956 ಮೀಟರ್ ಎತ್ತರದಲ್ಲಿದೆ. ಪಶ್ಚಿಮ ಘಟ್ಟಗಳ ದೃಶ್ಯಗಳನ್ನು ಆನಂದಿಸುವುದರ ಜೊತೆಗೆ, ನೀವು ಸಕಲೇಶಪುರದ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಸಹ ಅನ್ವೇಷಿಸಬಹುದು.

2. ಆಂಧ್ರಪ್ರದೇಶದಲ್ಲಿರುವ ಪಾಪಿ ಹಿಲ್ಸ್

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಪಾಪಿ ಹಿಲ್ಸ್ (ಬೆಟ್ಟಗಳು) ನಿಜವಾಗಿಯೂ ಗುಪ್ತ ರತ್ನವಾಗಿದೆ. ಈ ಬೆಟ್ಟವು ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿದೆ, ಇದರ ಮೂಲಕ ಭವ್ಯವಾದ ಗೋದಾವರಿ ನದಿ ಉಕ್ಕಿ ಹರಿಯುತ್ತದೆ.

ಇದನ್ನೂ ಓದಿ: ಪ್ರತಿದಿನ 10,000 ಹೆಜ್ಜೆ ನಡಿತೀರಾ? ನಿಮ್ಮ ಆರೋಗ್ಯಕ್ಕೆ ಇಷ್ಟು ಮಾಡಿದ್ರೆ ಏನೂ ಸಾಲಲ್ಲ ಅಂತಿದಾರೆ ತಜ್ಞರು!

3. ಕೇರಳದಲ್ಲಿರುವ ದೇವಿಕುಲಂ

ನೀವು ಕೇರಳದಲ್ಲಿರುವ ಮುನ್ನಾರ್ ಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಮುನ್ನಾರ್ ನಲ್ಲಿ ಪ್ರವಾಸಕ್ಕೆ ತುಂಬಾ ಜನ ಬಂದಿದ್ದರೆ, ನೀವು ದೇವಿಕುಲಂಗೆ ಒಂದು ಸಲ ಹೋಗಿ ಬರುವುದು ಒಳ್ಳೆಯದು. ದೇವಿಕುಲಂ ಅನ್ನು 'ದೇವಿಯ ಸರೋವರ' ಎಂದು ಭಾಷಾಂತರಿಸಲಾಗಿದೆ. ಸ್ಥಳದ ಹಸಿರಿನಲ್ಲಿ ಮುಳುಗಿ, ಅದರ ಚಹಾ ಮತ್ತು ಮಸಾಲೆ ತೋಟಗಳಲ್ಲಿ ಸುತ್ತಾಡಿ, ಮತ್ತು ನಿಮಗೆ ಸಮಯವಿದ್ದರೆ, ಹತ್ತಿರದ ಚಿನ್ನಾರ್ ವನ್ಯಜೀವಿ ಅಭಯಾರಣ್ಯಕ್ಕೂ ಸಹ ಒಮ್ಮೆ ಹೋಗಿ ಭೇಟಿ ನೀಡಬಹುದು.

4. ಕೇರಳದ ಪೊನ್ಮುಡಿ

ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿರುವ ಪೊನ್ಮುಡಿಯನ್ನು 'ಗೋಲ್ಡನ್ ಹಿಲ್' ಅಥವಾ 'ಗೋಲ್ಡನ್ ಪೀಕ್' ಎಂದು ಹೇಳಲಾಗುತ್ತದೆ. ಇದು 1100 ಮೀಟರ್ ಎತ್ತರವನ್ನು ಹೊಂದಿದೆ. ಪ್ರವಾಸಿಗರು ಹಗಲಿನಲ್ಲಿ ಮಂಜು ಮುಸುಕಿದ ವಾತಾವರಣವನ್ನು ಕಾಣುವ ಸಾಧ್ಯತೆಯಿದೆ, ಇದು ಅದರ ಸುತ್ತಲಿನ ಪಶ್ಚಿಮ ಘಟ್ಟಗಳ ದೃಶ್ಯವನ್ನು ಅನಾವರಣಗೊಳಿಸುತ್ತದೆ ಮತ್ತು ಮರೆ ಮಾಡುತ್ತದೆ. ಇದು ತಿರುವನಂತಪುರಂ ವಿಮಾನ ನಿಲ್ದಾಣದಿಂದ 60 ಕಿಲೋ ಮೀಟರ್ ಮತ್ತು ತಿರುವನಂತಪುರ ರೈಲು ನಿಲ್ದಾಣದಿಂದ 55 ಕಿಲೋ ಮೀಟರ್ ದೂರದಲ್ಲಿದೆ.

ಇದನ್ನೂ ಓದಿ: ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮುನ್ನ ಇವುಗಳನ್ನು ನೆನಪಿನಲ್ಲಿಡಿ

5. ತಮಿಳುನಾಡಿನ ವಾಲ್ಪಾರೈ

ಸುಂದರವಾದ ಅನೈಮಲೈ ಬೆಟ್ಟಗಳ ನಡುವೆ ಇರುವ ವಾಲ್ಪರೈ ಬೆಟ್ಟಗಳು ಅನೈಮಲೈ ಹುಲಿ ಮೀಸಲು ಪ್ರದೇಶಕ್ಕೆ ನೆಲೆಯಾಗಿದೆ. ಆನೆಗಳು ಮತ್ತು ಘೇಂಡಾಮೃಗಗಳಿಂದ ತುಂಬಿರುವ ಮತ್ತು ಹಸಿರು ಚಹಾ ಎಸ್ಟೇಟ್ ಗಳಿಂದ ಕೂಡಿದ ಈ ಗಿರಿಧಾಮವು ನೋಡಲು ತುಂಬಾನೇ ಸುಂದರವಾಗಿದೆ.
Published by:Sandhya M
First published: