ಬೇಸಿಗೆಯಲ್ಲಿ ತ್ವಚೆಯ ಆರೈಕೆ: ತ್ವಚೆಯ ಸೌಂದರ್ಯ ಹೆಚ್ಚಿಸುವ ಸರಳ ಫೇಸ್ ಪ್ಯಾಕ್​ಗಳ ವಿವರ

news18
Updated:April 16, 2018, 7:55 PM IST
ಬೇಸಿಗೆಯಲ್ಲಿ ತ್ವಚೆಯ ಆರೈಕೆ: ತ್ವಚೆಯ ಸೌಂದರ್ಯ ಹೆಚ್ಚಿಸುವ ಸರಳ ಫೇಸ್ ಪ್ಯಾಕ್​ಗಳ ವಿವರ
news18
Updated: April 16, 2018, 7:55 PM IST
ನ್ಯೂಸ್​ 18 ಕನ್ನಡ

ಬೇಸಿಗೆಯಲ್ಲಿ ಹೊರಗೆ ಹೋಗುವುದು ಎಂದರೆ ಬೆಂಕಿಯ ಜ್ವಾಲೆಯ ಮಧ್ಯೆ ನಡೆದಾಡಿದಂತೆ. ಬಿಸಿಲಿನ ದಗೆಗೆ ಮೈ ಉರಿದು ಚರ್ಮದಲ್ಲಿ ಬಿಸಿಲಿನಿಂದ ಕಪ್ಪು ಕಲೆಗಳು ಹಾಗೂ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಸಲ ಅನಿವಾರ್ಯವಾಗಿ ಹೊರ ಹೋಗಲೇಬೇಕಾದಾಗ ತ್ವಚೆಯ ಆರೈಕೆಗೆ ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ? ಹಾಗಾದರೆ ಈ ವರದಿ ಓದಿ.

ಈ ಹಿಂದಿನ ವರ್ಷಗಳಿಗಿಂತ ಮೊದಲೇ ಶುರುವಾದ ಬೇಸಿಗೆಯ ಬಿಸಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ. ಬೇಸಿಗೆ ಬಂತೆಂದರೆ ಮೃದು ತ್ವಚೆಯವರಿಗೆ ಹತ್ತಾರು ಕಿರಿಕಿರಿ. ತ್ವಚೆ ಒಣಗುವುದು, ಸುಡುವುದು, ಜತೆಗೆ ಸೆಖೆಗೆ ಸಹಜವೇ ಎಂಬಂತಹ ಫಂಗಸ್ ಇನ್ಫೆಕ್ಷನ್, ಅಧಿಕ ಬೆವರು ಮತ್ತು ದೇಹದ ದುರ್ವಾಸನೆಯ ತೊಂದರೆಗಳು ಸಾಮಾನ್ಯ.

ತ್ವಚೆಯ ಆರೈಕೆ ಅತ್ಯಾವಶ್ಯಕ. ಅದರಲ್ಲೂ ವಿಶಿಷ್ಟವಾಗಿ ಬೇಸಿಗೆಯಲ್ಲಿ ಮಾಡುವುದು ತುಂಬಾ ಮುಖ್ಯ. ಈ ದಿನಗಳಲ್ಲಿ ಬಿಸಿಲಿನ ತೀವ್ರ ಶಾಖದಿಂದ ಹಲವು ಸಮಸ್ಯೆಗಳನ್ನು ತೋರುತ್ತದೆ. ಈ ಹವಾಮಾನವು ಚರ್ಮಕ್ಕೆ ಹಾನಿಕಾರಕವಾಗಿದ್ದು ಚರ್ಮದಲ್ಲಿ ನೋವು ಮತ್ತು ಕಿರಿಕಿರಿಯನ್ನುಂಟುಮಾಡುತ್ತದೆ. ಈ ರೀತಿಯ ಬೇಡವಾದ ಚರ್ಮದ ಸಮಸ್ಯೆಗಳನ್ನು ಹೆಚ್ಚು ಸಮಯ ಹಾಗೂ ಖರ್ಚಿಲ್ಲದೆ ಮನೆಮದ್ದಿನಿಂದಲೇ ತಡೆಗಟ್ಟಬಹುದು. ಹಾಗಾಗಿ ತ್ವಚೆಯ ರಕ್ಷಣೆಗೆ ಇಲ್ಲಿವೆ ಕೆಲವೊಂದು ಉಪಯುಕ್ತ ಸಲಹೆಗಳು.

ತ್ವಚೆಯ ರಕ್ಷಣೆಗೆ ಇಲ್ಲಿವೆ ಕೆಲವೊಂದು ಉಪಯುಕ್ತ ಟಿಪ್ಸ್:

ಸೌತೆಕಾಯಿ: ಸೌತೆಕಾಯಿ ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುವುದು. ಸೌತೆಕಾಯಿ ಜ್ಯೂಸ್​ನಿಂದ ಮುಖ ತೊಳೆಯಿರಿ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.

ಕಲ್ಲಂಗಡಿ: ಹೆಚ್ಚು ನೀರಿನಾಂಶ ಹೊಂದಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಒಂದು ತುಂಡು ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದು 20 ನಿಮಿಷ ಕಾಲ ಹಾಗೇ ಇರಲಿ ಬಳಿಕ ತಣ್ಣೀರಿನಿಂದ ತೊಳೆಯಿರಿ.
Loading...

ಕಿತ್ತಳೆ ಸಿಪ್ಪೆಯ ಪುಡಿ: ವಿಟಮಿನ್ ಸಿ ಅಧಿಕವಾಗಿರುವಂತಹ ಕಿತ್ತಳೆ ಸಿಪ್ಪೆಯ ಪುಡಿ ಕಲೆ ನಿವಾರಣೆ ಮತ್ತು ಬಣ್ಣ ಮಾಸುವುದಕ್ಕೆ ಹೆಚ್ಚು ಪರಿಣಾಮಕಾರಿ. ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ವಾರಕ್ಕೊಂದು ಸಲ ಫೇಸ್ ಮಾಸ್ಕ್ ಆಗಿ ಬಳಸಿಕೊಳ್ಳಿ. ಇದರಿಂದ ಬಿಸಿಲಿನಿಂದ ಆಗಿರುವ ಕಲೆ ಮಾಯವಾಗುವುದು ಮತ್ತು ಚರ್ಮದ ಬಣ್ಣ ತಿಳಿಯಾಗುವುದು.

ಆರ್ಗನ್ ತೈಲ: ವಿಟಮಿನ್ ಇ ಯಿಂದ ಸಮೃದ್ಧವಾಗಿರುವಂತಹ ಆರ್ಗನ್ ತೈಲವು ಚರ್ಮಕ್ಕೆ ಮಾಯಿಶ್ಚರೈಸರ್​ನಂತೆ ಕೆಲದ ಮಾಡುತ್ತದೆ. ಜತೆಗೆ ಬೇಸಿಗೆಯಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುತ್ತದೆ. ಕೆಲವು ಹನಿ ಆರ್ಗಾನ್ ತೈಲ ಮತ್ತು ಆಲಿವ್ ತೈಲವನ್ನು ಜತೆ ಸೇರಿಸಿಕೊಂಡು ಚರ್ಮಕ್ಕೆ ಮಸಾಜ್ ಮಾಡಿಕೊಳ್ಳಿ. ಚರ್ಮದ ಸಮಸ್ಯೆ ನಿವಾರಣೆಗೆ ವಾರದಲ್ಲಿ ಒಂದು ಸಲ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಅಲೊವೆರ ಲೋಳೆ: ಅಲೊವೆರ ಲೋಳೆ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೊವೆರ ಲೋಳೆ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿ ಕೊಳ್ಳಿ.

ರೋಸ್ ವಾಟರ್​: ರೋಸ್ ವಾಟರ್ ಅನ್ನು ಹಿಂದಿನಿಂದಲೂ ಸೌಂದರ್ಯ ವರ್ಧಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಬೇಸಿಗೆಯಲ್ಲಿ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ರೋಸ್ ವಾಟರ್ ನಲ್ಲಿ ಒಂದು ಹತ್ತಿ ಉಂಡೆ ಅದ್ದಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಲಗುವ ಮೊದಲು ಹೀಗೆ ಮಾಡಿದರೆ ಮರುದಿನ ಕಾಂತಿಯುತ ಚರ್ಮವು ನಿಮ್ಮದಾಗುವುದು.

ಬೇಸಿಗೆಯಲ್ಲಿ ಮುಖ ಹಾಗೂ ಬಿಸಿಲು ತಾಕುವಂತಹ ಭಾಗಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಂಡು ಹೋಗೋದು ಉತ್ತಮ. ಬೇಸಿಗೆಯಲ್ಲಿ ಚರ್ಮಕ್ಕೆ ಹಿತಕಾರಿಯಾಗುವ ಮತ್ತು ತೇವಾಂಶ ನೀಡುವಂತಹ ಸೌಂದರ್ಯ ವರ್ಧಕ ಬಳಸಿದರೆ ಅತ್ಯುತ್ತಮ. ಇಷ್ಟು ಮಾತ್ರವಲ್ಲದೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು.

 

 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ