• Home
  • »
  • News
  • »
  • lifestyle
  • »
  • Summer Tips: ಬೇಸಿಗೆ ಬಂದೇ ಬಿಡ್ತು.. ಅಪ್ಪಿತಪ್ಪಿ ಕೂಡ ಈಗ ಈ 5 ಆಹಾರಗಳನ್ನು ಸೇವಿಸಬೇಡಿ..!

Summer Tips: ಬೇಸಿಗೆ ಬಂದೇ ಬಿಡ್ತು.. ಅಪ್ಪಿತಪ್ಪಿ ಕೂಡ ಈಗ ಈ 5 ಆಹಾರಗಳನ್ನು ಸೇವಿಸಬೇಡಿ..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೆಲವು ಆಹಾರಗಳು ಈ ಸಮಯದಲ್ಲಿ ನಿಮ್ಮ ದೇಹದ ಆರೋಗ್ಯದ ಮೇಲೆ ಹಾನಿ ಮಾಡಬಹುದು. ಆದ್ದರಿಂದ ನೀವು ಈ ಬೇಸಿಗೆಯಲ್ಲಿ ಈ ಐದು ರೀತಿಯ ಆಹಾರಗಳಿಂದ ದೂರವಿರಿ.

  • Share this:

    ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನ ಕೊನೆಯಲ್ಲಿ ಬಿಸಿಲು (Summer) ಶುರುವಾಗುತ್ತದೆ ಎಂದು ಹೇಳಬಹುದು ಮತ್ತು ಈಗಂತೂ ವರ್ಷದಿಂದ ವರ್ಷಕ್ಕೆ ಈ ಬಿಸಿಲಿನ ತಾಪಮಾನ (Temperature) ಹೆಚ್ಚಾಗುತ್ತಲೇ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ತಾಪಮಾನವನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಈ ಬೇಸಿಗೆಯಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ತುಂಬಾ ನೀರನ್ನು ಕುಡಿಯಬೇಕು (Drinking Lot of Water) ಎಂದೆನಿಸುತ್ತದೆ .  ಇದರಿಂದ ನಾವು ತೆಗೆದುಕೊಳ್ಳುವ ಊಟದ ಪ್ರಮಾಣ ಕಡಿಮೆ ಆಗುತ್ತದೆ ಎಂದು ಹೇಳಬಹುದು. ಆದರೂ ವೈದ್ಯರು ಬೇಸಿಗೆಯಲ್ಲಿ ದೇಹವು ನಿರ್ಜಲೀಕರಣಕ್ಕೆ ಗುರಿಯಾಗದೆ ಕಾಪಾಡಿಕೊಳ್ಳಲು ಸಾಕಷ್ಟು ನೀರು ಮತ್ತು ಹಣ್ಣುಗಳನ್ನು ಸೇವಿಸಿರಿ ಎಂದು ಸಲಹೆ ನೀಡುತ್ತಾರೆ.


    ಎಷ್ಟೋ ಜನರು ಬೆಳಿಗ್ಗೆ ತಾವು ಕೆಲಸಕ್ಕೆ ಹೋದವರು ಸಂಜೆ ಸೂರ್ಯ ಮುಳಗಿದ ನಂತರವೇ ಮನೆಗೆ ಬರುತ್ತಾರೆ. ವಯಸ್ಸಾದ ಹಿರಿಯರಂತೂ ಬೇಸಿಗೆಯಲ್ಲಿ ಮನೆಯಿಂದ ಆಚೆ ಕಾಲಿಡುವುದೇ ತುಂಬಾ ಅಪರೂಪವಾಗಿರುತ್ತದೆ. ಎಲ್ಲರಿಗೂ ಇರುವ ಒಂದು ಸಾಮಾನ್ಯವಾದ ಗೊಂದಲ ಎಂದರೆ ಈ ಸುಡು ಬೇಸಿಗೆಯಲ್ಲಿ ಯಾವ ಆಹಾರ ಸೇವಿಸಿದರೆ ಒಳ್ಳೆಯದು ಮತ್ತು ನಮ್ಮ ದೇಹವನ್ನು ಹೇಗೆ ಹೈಡ್ರೆಟ್ ಆಗಿ ಇರಿಸಿಕೊಳ್ಳಬೇಕು ಎಂಬುದು ಎಂದು ಹೇಳಬಹುದು.


    ದೇಹದಲ್ಲಿ ಹೆಚ್ಚಿನ ಶಾಖವು ಉತ್ಪತ್ತಿ


    ಸಾಮಾನ್ಯವಾಗಿ ಈ ಬಿಸಿಲಿನ ವಾತಾವರಣದಲ್ಲಿ ದೇಹದಲ್ಲಿ ಹೆಚ್ಚಿನ ಶಾಖವು ಉತ್ಪತ್ತಿಯಾಗುತ್ತದೆ, ಇದು ನಮಗೆ ತುಂಬಾನೇ ಕಿರಿಕಿರಿ, ದಣಿವು, ಮಲಗಲು ತೊಂದರೆ ಮತ್ತು ನಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕೆಲಸವನ್ನು ಸಹ ಬಿಸಿಲಿನಲ್ಲಿ ಮಾಡುವುದರಿಂದ ದೇಹವು ಬೇಗನೆ ಆಯಾಸಗೊಳ್ಳುತ್ತದೆ ಮತ್ತು ನಿರ್ಜಲೀಕರಣಕ್ಕೆ ತುತ್ತಾಗುತ್ತದೆ ಎಂದು ಹೇಳಬಹುದು.


    ಇದನ್ನೂ ಓದಿ: Summer Trip: ಬೇಸಿಗೆಯ ರಜೆಯನ್ನು ಮಕ್ಕಳೊಂದಿಗೆ ಎಂಜಾಯ್ ಮಾಡಲು 10 ಸೂಪರ್ ಸ್ಥಳಗಳಿವು


    ಒಟ್ಟಿನಲ್ಲಿ ಈ ಬೇಸಿಗೆಯ ಶಾಖವನ್ನು ತಡೆದುಕೊಳ್ಳಲು ನೀವು ಎಲ್ಲೇ ಇದ್ದರೂ ಸಾಕಷ್ಟು ನೀರು ಕುಡಿಯುವುದು ತುಂಬಾನೇ ಮುಖ್ಯವಾಗಿರುತ್ತದೆ. ಬೇಸಿಗೆಯಲ್ಲಿ ದೇಹವನ್ನು ಸದೃಢ ಮತ್ತು ಆರೋಗ್ಯಕರವಾಗಿರಿಸಲು ಸರಿಯಾದ ಆಹಾರಗಳನ್ನು ಸಹ ಸೇವಿಸಬೇಕು. ಕೆಲವು ಆಹಾರಗಳು ಈ ಸಮಯದಲ್ಲಿ ನಿಮ್ಮ ದೇಹದ ಆರೋಗ್ಯದ ಮೇಲೆ ಹಾನಿ ಮಾಡಬಹುದು. ಆದ್ದರಿಂದ ನೀವು ಈ ಬೇಸಿಗೆಯಲ್ಲಿ ಈ ಐದು ರೀತಿಯ ಆಹಾರಗಳಿಂದ ದೂರವಿರಿ.


    1. ಹೆಚ್ಚು ಮಸಾಲೆಯುಕ್ತ ಆಹಾರ: ಹೆಚ್ಚು ಮಸಾಲೆ ಪುಡಿಗಳನ್ನು ಹಾಕಿ ಮಾಡಿದಂತಹ ಊಟವು ರುಚಿ ಇರಬಹುದು. ಆದರೆ ಈ ಮಸಾಲೆಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರಿಂದ ನಿಮ್ಮ ದೇಹದಲ್ಲಿ ಬಿಸಿಯಾದ ಅನುಭವವಾಗುವುದು.


    2. ಮಾಂಸಾಹಾರವನ್ನು ಸೇವಿಸಬೇಡಿ: ಬೇಸಿಗೆಯಲ್ಲಿ ನೀವು ಮಾಂಸಾಹಾರವನ್ನು ಎಂದರೆ ಮೀನು, ಕೋಳಿ ಮತ್ತು ಕುರಿಯ ಮಾಂಸವನ್ನು ಸೇವಿಸಲೇಬೇಡಿ. ಏಕೆಂದರೆ ಇದರ ಸೇವನೆಯು ನಿಮ್ಮನ್ನು ಹೆಚ್ಚು ಬೆವರುವಂತೆ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಕೆಲವೊಮ್ಮೆ ಬೇಸಿಗೆಯಲ್ಲಿ ಅತಿಸಾರಕ್ಕೂ ಕಾರಣವಾಗಬಹುದು.


    3. ಎಣ್ಣೆಯುಕ್ತ ಜಂಕ್ ಫುಡ್ ಸೇವಿಸಬೇಡಿ: ನೀವು ಮನೆಯಲ್ಲಿ ಅಥವಾ ಹೊರಗಡೆ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳು, ಪ್ಯಾಟಿಗಳು, ಫ್ರೈಸ್ ಮತ್ತು ಇತರ ಎಣ್ಣೆಯುಕ್ತ ಜಂಕ್ ಫುಡ್‌ಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.


    ಇದನ್ನೂ ಓದಿ: Summer Special: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು 5 ಬಗೆಯ ಸೌತೆಕಾಯಿ ರೆಸಿಪಿಗಳು


    4. ಚಹಾ ಮತ್ತು ಕಾಫಿ ಸೇವಿಸಬೇಡಿ: ಇವು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಪಾನೀಯಗಳಾಗಿವೆ. ಆದ್ದರಿಂದ ಇವುಗಳನ್ನು ಸೇವಿಸದೆ ಇದ್ದರೆ ಒಳ್ಳೆಯದು. ಸಕ್ಕರೆಯೊಂದಿಗೆ ಕೆಫೀನ್ ಮತ್ತು ಇತರ ಪಾನೀಯಗಳು ನಿಜವಾಗಿಯೂ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನಿಮ್ಮ ಮುಖದ ಚರ್ಮಕ್ಕೂ ಇದು ತುಂಬಾನೇ ಕೆಟ್ಟದ್ದು ಎಂದು ಹೇಳಬಹುದು.


    5. ಈ ಸಾಸ್‌ಗಳನ್ನು ಸೇವಿಸಲೇಬೇಡಿ:ಚೀಸ್ ಸಾಸ್ ಅನ್ನು ನೀವು ಸೇವಿಸಲೇಬೇಡಿ. ಇದು ಸುಮಾರು 350 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಇದು ನಿಮ್ಮಲ್ಲಿ ಮಂದಗತಿಯ ಭಾವನೆಯನ್ನು ಉಂಟು ಮಾಡುತ್ತದೆ. ಕೆಲವು ಸಾಸ್‌ಗಳು ಹೆಚ್ಚು ಮಾನೋಸೋಡಿಯಂ ಗ್ಲುಟಮೇಟ್ ಮತ್ತು ಉಪ್ಪನ್ನು ಸಹ ಹೊಂದಿರುತ್ತವೆ.

    Published by:Kavya V
    First published: