ಬೇಸಿಗೆಯಲ್ಲಿ ಮೊಡವೆ ಸಮಸ್ಯೆಯೇ: ಹಾಗಿದ್ರೆ ಇಲ್ಲಿದೆ ಪರಿಹಾರ

ಬಿಸಿಲಿನ ಬೇಗೆಗೆ ಆಯ್ಲಿ ಸ್ಕಿನ್​ ಮತ್ತು ಮೊಡವೆ ಸಮಸ್ಯೆ ಹೆಚ್ಚಾಗುತ್ತವೆ. ಹಾಗಾದ್ರೆ ಬೇಸಿಗೆ ಸಂದರ್ಭದಲ್ಲಿ ಚರ್ಮದ ರಕ್ಷಣೆ ಹೇಗಿರ ಬೇಕು..? ಇಲ್ಲಿದೆ ಮಾಹಿತಿ

news18
Updated:April 16, 2019, 10:57 PM IST
ಬೇಸಿಗೆಯಲ್ಲಿ ಮೊಡವೆ ಸಮಸ್ಯೆಯೇ: ಹಾಗಿದ್ರೆ ಇಲ್ಲಿದೆ ಪರಿಹಾರ
ಪ್ರಾತಿನಿಧಿಕ ಚಿತ್ರ
news18
Updated: April 16, 2019, 10:57 PM IST
ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚು. ವಿಪರೀತ ಧೂಳು ಹಾಗೂ ಬಿಸಿಲಿನಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತವೆ. ಮಾತ್ರವಲ್ಲದೆ ಬಿಸಿಲಿನ ಬೇಗೆಗೆ ಆಯ್ಲಿ ಸ್ಕಿನ್​ ಮತ್ತು ಮೊಡವೆ ಸಮಸ್ಯೆ ಹೆಚ್ಚಾಗುತ್ತವೆ. ಹಾಗಾದ್ರೆ ಬೇಸಿಗೆ ಸಂದರ್ಭದಲ್ಲಿ ಚರ್ಮದ ರಕ್ಷಣೆ ಹೇಗಿರ ಬೇಕು..? ಇಲ್ಲಿದೆ ಮಾಹಿತಿ

ಮೊಡವೆ:

ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬೆವರುವುದರಿಂದ ಚರ್ಮದಲ್ಲಿ ಮೊಡವೆಗಳು ಮೂಡುತ್ತವೆ. ಬೆವರಿನಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಚರ್ಮದ ಎಣ್ಣಿಯಾಂಶದೊಂದಿಗೆ ಬೆರೆತು ಮೊಡವೆಗಳು ರಂಧ್ರಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮೊಡವೆಯಿಂದ ರಕ್ಷಿಸಿಕೊಳ್ಳಲು ಆಗಾಗ ಮುಖ ತೊಳೆಯುವ ಅಭ್ಯಾಸ ಮಾಡಿಕೊಳ್ಳುವುದು ಒಳಿತು.

ಮೊಡವೆ ಹುಟ್ಟಿಕೊಂಡರೆ ಕಡಲೆ ಹಿಟ್ಟು ಮತ್ತು ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿರಿ. ಒಣಗಿದ ನಂತರ ಮುಖ ತೊಳೆಯಿರಿ. ಇದರಿಂದ ನಿಮ್ಮ ಚರ್ಮದಲ್ಲಿನ ಜಿಡ್ಡಿನಾಂಶ ತೆಗೆದು ಮೊಡವೆಗಳು ಹುಟ್ಟದಂತೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅವತ್ತಿನ ಕಣ್ಣೀರಲ್ಲಿ ನೋವಿತ್ತು, ಇವತ್ತಿನ ಕಣ್ಣೀರಲ್ಲಿ ಧೈರ್ಯವಿದೆ; ಸುಮಲತಾ ಅಂಬರೀಶ್

ಸನ್​ಬರ್ನ್ಸ್:
Loading...

ಬೇಸಿಗೆಯ ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಸನ್​ಬರ್ನ್ಸ್​ ಕಾಣಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಕಡಿಮೆ ಕೆಮಿಕಲ್​ ಇರುವ ಸನ್​ಸ್ಕ್ರೀಮ್​ಗಳನ್ನು ಬಳಸುವುದು ಉತ್ತಮ.

ಮುಖಕ್ಕೆ ತಂಪಾದ ಹಾಲನ್ನು ಅಥವಾ ಮೊಸರನ್ನು ಹಚ್ಚಿಕೊಳ್ಳುದರಿಂದ ಸನ್​ಬರ್ನ್​ನಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬಹುದು.

ಆಯ್ಲಿ ಸ್ಕಿನ್​:

ಧೂಳು ಅಥವಾ ಬಿಸಿಲಿನಿಂದ ಆಯ್ಲಿಸ್ಕಿನ್​ ಸಮಸ್ಯೆ ಹೆಚ್ಚು. ಇದರಿಂದಾಗಿ ಮುಖದಲ್ಲಿ ಮೊಡವೆಗಳು ಹುಟ್ಟಿಕೊಳ್ಳಲು ಕಾರಣವಾಗಬಹುದು. ಹಾಗಾಗೀ ಆಯ್ಲಿಸ್ಕಿನ್​ನಿಂದ ರಕ್ಷಿಸಿಕೊಳ್ಳಲು ಮೊಟ್ಟೆಯ ಬಿಳಿಭಾಗಕ್ಕೆ ತಣ್ಣನೆಯ ಹಾಲು ಮತ್ತು ಅಲೋವೆರಾ ಬೆರೆಸಿ ಮುಖಕ್ಕೆ ಹಚ್ಚಿಸಿಕೊಂಡರೆ ಈ ಸಮಸ್ಯೆಯಿಂದ ಪಾರಾಗಬಹುದು.

ಫಂಗಲ್​ ಇನ್​ಫೆಕ್ಷನ್​:

ಚರ್ಮದ ಸಂದುಗಳಲ್ಲಿ ಹೆಚ್ಚಾಗಿ ಫಂಗಲ್​ ಇನ್​​ಫೆಕ್ಷನ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಬೇಸಿಗೆ ಕಾಲದಲ್ಲಿ ತೆಳುವಾದ ಕಾಟನ್​ ಬಟ್ಟೆಗಳನ್ನು ಬಳಸುವುದು ಉತ್ತಮ. ಬಿಸಿಲಿಗೆ ಓಡಾಡುವವರು ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವುದರಿಂದ ಫಂಗಲ್​ ಇನ್​ಫೆಕ್ಷನ್ ದೂರವಿರಬಹುದು​​

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626