Bloating Problem: ಬೇಸಿಗೆಯಲ್ಲಿ ಹೊಟ್ಟೆಯುಬ್ಬರ ಸಮಸ್ಯೆ ತಡೆಗೆ ಈ ಆಹಾರ ತಿನ್ನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೇಸಿಗೆಯಲ್ಲಿ ಉಂಟಾಗುವ ಹೊಟ್ಟೆಯುಬ್ಬರ ಮತ್ತು ಗ್ಯಾಸ್ ಸಮಸ್ಯೆ ದೂರ ಮಾಡಲು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಕೆಲವು ಉತ್ತಮ ಪದಾರ್ಥ ಸೇರಿಸುವುದು ಮುಖ್ಯ. ಬೇಸಿಗೆಯಲ್ಲಿ ನಿಮ್ಮ ಹೊಟ್ಟೆ ಮತ್ತು ಜೀರ್ಣಕ್ರಿಯೆ ಆರೋಗ್ಯವಾಗಿಡಲು ಈ ಪದಾರ್ಥಗಳನ್ನು ತಿನ್ನಿ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ಬೇಸಿಗೆಯಲ್ಲಿ (Summer) ತುಂಬಾ ಜನರು (People) ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ (Stomach Related Diseases) ಅನುಭವಿಸುತ್ತಾರೆ. ಈ ಸೀಸನ್ ನಲ್ಲಿ ಹಸಿವು ಕಡಿಮೆ. ಹಾಗಾಗಿ ಸ್ವಲ್ಪ ಏನಾದ್ರೂ ತಿಂದ್ರೆ ಸಾಕು ಹೊಟ್ಟೆ ತುಂಬುತ್ತದೆ. ಹಾಗೆಯೇ ತಿನ್ನುವ ಆಹಾರವು ಕೆಲವೊಮ್ಮೆ ಹೊಟ್ಟೆಯುಬ್ಬರ (Bloating) ಸಮಸ್ಯೆ ಎದುರಿಸುವಂತೆ ಮಾಡುತ್ತದೆ. ಜೊತೆಗೆ ಗ್ಯಾಸ್ಟ್ರಿಕ್, ಆಸಿಡಿಟಿ, ಆಮ್ಲೀಯತೆ ಉಂಟಾಗುತ್ತದೆ. ಜೊತೆಗೆ ದೈಹಿಕ ಚಟುವಟಿಕೆಯ ಕೊರತೆಯು, ಕಡಿಮೆ ನೀರು ಕುಡಿಯುವುದು ಮತ್ತು ಆಹಾರದಲ್ಲಿ ಫೈಬರ್ ಕೊರತೆ ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ. ಹಾಗಾಗಿ ಇದು ಗ್ಯಾಸ್ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ತಂದೊಡ್ಡುತ್ತದೆ. ಅನಿಲ ಮತ್ತು ಜೀರ್ಣಾಂಗ ವ್ಯವಸ್ಥೆ ಸಂಬಂಧಿಸಿದ ಅಸ್ವಸ್ಥತೆ ತಪ್ಪಿಸಲು ನಿಮ್ಮ ಆಹಾರ ಬದಲಾಯಿಸಿ.


    ಹೊಟ್ಟೆಯುಬ್ಬರ ಸಮಸ್ಯೆ ತಪ್ಪಿಸಲು ಆಹಾರದಲ್ಲಿ ಈ ಪದಾರ್ಥ ಸೇರಿಸಿ


    ಬೇಸಿಗೆಯಲ್ಲಿ ಉಂಟಾಗುವ ಹೊಟ್ಟೆಯುಬ್ಬರ ಮತ್ತು ಗ್ಯಾಸ್ ಸಮಸ್ಯೆ ದೂರ ಮಾಡಲು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಕೆಲವು ಉತ್ತಮ ಪದಾರ್ಥ ಸೇರಿಸುವುದು ಮುಖ್ಯ. ಬೇಸಿಗೆಯಲ್ಲಿ ನಿಮ್ಮ ಹೊಟ್ಟೆ ಮತ್ತು ಜೀರ್ಣಕ್ರಿಯೆ ಆರೋಗ್ಯವಾಗಿಡಲು ಈ ಪದಾರ್ಥಗಳನ್ನು ತಿನ್ನಿ ಅಂತಾರೆ ತಜ್ಞರು.


    ಮೊಸರು ತಿನ್ನಿ


    ಮೊಸರು ಲ್ಯಾಕ್ಟೋಬಾಸಿಲಸ್, ಅಸಿಡೋಫಿಲಸ್ ಮತ್ತು ಬೈಫಿಡಸ್‌ನಂತಹ ಬ್ಯಾಕ್ಟೀರಿಯಾ ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೂ ಹೊಟ್ಟೆಯುಬ್ಬರ ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ಸಿಹಿ ರಹಿತ ಮೊಸರು ತಿನ್ನಿ. ಇದು ಹೊಟ್ಟೆಯನ್ನು ಆರೋಗ್ಯವಾಗಿಡುತ್ತದೆ.




    ಕಲ್ಲಂಗಡಿ ತಿನ್ನಿ


    ಕಲ್ಲಂಗಡಿಯಲ್ಲಿ ಶೇ.92 ರಷ್ಟು ನೀರಿದೆ. ಇದು ಬೇಸಿಗೆಯಲ್ಲಿ ಚೆನ್ನಾಗಿ ತಿನ್ನಿ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ತಡೆಯುತ್ತದೆ. ಪೊಟ್ಯಾಸಿಯಮ್ ಉಬ್ಬುವುದು ಮತ್ತು ಅನಿಲ ಸಮಸ್ಯೆ ತಡೆಗೆ ಸಹಾಯ ಮಾಡುತ್ತದೆ.


    ಅರಿಶಿನ ಬಳಕೆ


    ಎಲ್ಲಾ ಜೀರ್ಣಕಾರಿ ಸಮಸ್ಯೆಗೆ ಅರಿಶಿನ ಅತ್ಯುತ್ತಮ ಪರಿಹಾರ. ಇದು ಪಿತ್ತರಸದ ಉತ್ಪಾದನೆ ಹೆಚ್ಚಿಸುತ್ತದೆ. ಇದು ಕೊಬ್ಬಿನ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಇದು ದೇಹದಲ್ಲಿ ಊತ ಕಡಿಮೆ ಮಾಡುತ್ತದೆ. ಉರಿಯೂತದ ಏಜೆಂಟ್ ಗಳು ಆರೋಗ್ಯ ಕಾಪಾಡುತ್ತವೆ.


    ಸೊಪ್ಪು ಬಳಕೆ


    ಪಾಲಕ್ ತಿನ್ನಿ. ಇದು ಕರಗದ ನಾರಿನ ಉತ್ತಮ ಮೂಲ. ಜೀರ್ಣಾಂಗ ವ್ಯವಸ್ಥೆ ಸ್ವಚ್ಛವಾಗಿಡುತ್ತದೆ. ಅನಿಲ ಮತ್ತು ವಾಯು ಸಮಸ್ಯೆ ಕಡಿಮೆ ಮಾಡುತ್ತದೆ. ಪಾಲಕ್ ಕಚ್ಚಾ ತಿನ್ನುವುದನ್ನು ತಪ್ಪಿಸಿ. ಯಾಕಂದ್ರೆ ಇದು ಅಜೀರ್ಣಕ್ಕೆ ಕಾರಣವಾಗುತ್ತದೆ.


    ಸಾಂದರ್ಭಿಕ ಚಿತ್ರ


    ಅನಾನಸ್ ತಿನ್ನಿ


    ಅನಾನಸ್ ಹಣ್ಣು 85 ಪ್ರತಿಶತ ನೀರು ಹೊಂದಿದೆ. ಇದು ಬ್ರೋಮೆಲೈನ್ ಎಂಬ ಪರಿಣಾಮಕಾರಿ ಜೀರ್ಣಕಾರಿ ಕಿಣ್ವ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿಡುತ್ತದೆ. ಸ್ವಚ್ಛ ಮತ್ತು ನಯವಾಗಿಡುತ್ತದೆ. ಚರ್ಮವನ್ನು ಯೌವನವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.


    ನಿಂಬೆಹಣ್ಣು 


    ಉದರಶೂಲೆಗೆ ನಿಂಬೆ ಅತ್ಯಂತ ಪರಿಣಾಮಕಾರಿ ಪರಿಹಾರ. ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆ ಹೋಗಲಾಡಿಸಲು ನಿಂಬೆ ಪಾನಕ ಕುಡಿಯಿರಿ. ನಿಂಬೆ ನೀರು ಸೌಮ್ಯ ವಿರೇಚಕ. ಇದು ಕರುಳನ್ನು ಶುದ್ಧೀಕರಿಸಲು ಮತ್ತು ಹೊಟ್ಟೆ ಉಬ್ಬುವಿಕೆ ತಡೆಯಲು ಸಹಕಾರಿ ಆಗಿದೆ.


    ಸೋಂಪು ಕಾಳು


    ಫೆನ್ನೆಲ್ ಬೀಜಗಳಲ್ಲಿರುವ ತೈಲಗಳು ಜೀರ್ಣಕ್ರಿಯೆ ಸುಧಾರಿಸುತ್ತವೆ. ಅನಿಲ ಮತ್ತು ವಾಯು ಸಾಧ್ಯತೆ ಕಡಿಮೆ ಮಾಡುತ್ತವೆ. ಊಟದ ನಂತರ ಫೆನ್ನೆಲ್ ಬೀಜ  ಅಗಿಯಿರಿ.


    ಇದನ್ನೂ ಓದಿ: ದಿನಾ 2 ಸೇಬು ತಿಂದ್ರೆ ಕೊಲೆಸ್ಟ್ರಾಲ್ ಸಮಸ್ಯೆ ಬರೋದೇ ಇಲ್ಲ


    ಸೌತೆಕಾಯಿ 


    ಸಿಲಿಕಾ ಮತ್ತು ವಿಟಮಿನ್ ಸಿ ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಸೌತೆಕಾಯಿ ಈ ಎರಡು ವಸ್ತುಗಳು ನೀರಿನ ಧಾರಣ ತಡೆಯುತ್ತದೆ. ಇದು ಉಬ್ಬುವಿಕೆ ತಪ್ಪಿಸಲು ಸಹಕಾರಿ. ಇದು ಕರುಳಿನ ಕಾರ್ಯ ಸುಧಾರಿಸಿ, ಹೊಟ್ಟೆಯ ಸಮಸ್ಯೆ ತಡೆಯುತ್ತದೆ.

    Published by:renukadariyannavar
    First published: