ಬರ್ತಡೇ (Birthday), ಮದುವೆ, ಮದುವೆ ವಾರ್ಷಿಕೋತ್ಸವ (Marriage Anniversary), ಮೊದಲ ಸಂಬಳ, ನೌಕರಿ, ಸಭೆ, ಸಮಾರಂಭ ಸೇರಿದಂತೆ ಸಾಕಷ್ಟು ಖುಷಿಯ (Happiness) ಸನ್ನಿವೇಶಗಳಲ್ಲಿ ಜನರು ಪಾರ್ಟಿ (Party) ನಡೆಸುತ್ತಾರೆ. ಪಾರ್ಟಿ ಮಾಡುವುದು ಮನರಂಜನೆ (Entertainment) ಮತ್ತು ಖುಷಿಗಾಗಿ ಅಲ್ಲಿ ತಿನ್ನುವ ಆಹಾರ, ಕುಡಿಯುವ ಮತ್ತು ಪ್ರತೀ ವಿಷಯವೂ ಸಂತೋಷದ ಒಂದು ಸಂಗತಿ ಆಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಜನರು ಸಾಮಾನ್ಯವಾಗಿ ತಂಪಾದ ಸ್ಥಳದಲ್ಲಿ ತಿರುಗಾಡಲು ಇಷ್ಟ ಪಡುತ್ತಾರೆ. ಕ್ಷಣಗಳನ್ನು ಕಳೆಯಲು ಮತ್ತು ತಿರುಗಾಡಲು ತಂಪಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಜನರು ಬೇಸಿಗೆಯಲ್ಲಿ ಹೊರಗೆ ತಿರುಗಲು ಹೋಗಲು ಸಾಧ್ಯವಾಗದಿದ್ದಾಗ ಮನೆಯಲ್ಲೇ ಪಾರ್ಟಿ ಮಾಡಲು ಬಯಸುತ್ತಾರೆ.
ಬೇಸಿಗೆಯಲ್ಲಿ ಪಾರ್ಟಿ ಮಾಡುವುದು ಎಷ್ಟು ಸರಿ?
ಹೀಗಿದ್ದಾಗ ತಮ್ಮ ಆಯ್ಕೆಯ ಯಾವುದಾದರೂ ಸ್ಥಳದಲ್ಲಿ ಪಾರ್ಟಿ ಮಾಡುವುದು ಸರಿ ಎಂದು ಪರಿಗಣಿಸುತ್ತಾರೆ. ಪಾರ್ಟಿಯನ್ನು ಚಳಿಗಾಲದಲ್ಲಿ ಅಥವಾ ಇನ್ನಾವುದೇ ಸೀಸನ್ನಲ್ಲಿ ಮಾಡಿದರೆ ಅದು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಪಾರ್ಟಿ ಮಾಡುವುದು ಹೆಚ್ಚು ಸಮಸ್ಯೆ ಉಂಟು ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ.
ವಾಸ್ತವವಾಗಿ ಬೇಸಿಗೆಯಲ್ಲಿ, ನಿರ್ಜಲೀಕರಣ ಸಮಸ್ಯೆ, ಅಜೀರ್ಣ ಸಮಸ್ಯೆ ಮತ್ತು ಬಿಸಿಲಿನಿಂದ ಚರ್ಮದ ಟ್ಯಾನಿಂಗ್ ಸಮಸ್ಯೆ ಜನರನ್ನು ಕಾಡುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಿರ್ಲಕ್ಷಿಸಿ, ನೀವು ಬೇಸಿಗೆಯಲ್ಲಿ ಪಾರ್ಟಿ ಮಾಡಿದರೆ, ಅದು ನಿಮ್ಮ ಪಾರ್ಟಿಯ ಸಂತಸವನ್ನು ಹಾಳು ಮಾಡುತ್ತದೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಈ ಕ್ರಮಗಳನ್ನು ಫಾಲೋ ಮಾಡಿ!
ಹಾಗಾಗಿ ಬೇಸಿಗೆಯಲ್ಲಿ ಪಾರ್ಟಿ ಮಾಡುವುದನ್ನು ತಪ್ಪಿಸಬೇಕು ಎಂಬುದು ತಜ್ಞರ ಮಾತು. ಹಾಗಾದರೆ ಬೇಸಿಗೆಯಲ್ಲಿ ಪಾರ್ಟಿ ಮಾಡುವುದರಿಂದ ಆಗುವ ಅನಾನುಕೂಲತೆಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಪಾರ್ಟಿಯಲ್ಲಿ ಕುಡಿಯುವ ಆಲ್ಕೋಹಾಲ್ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ
ಪಾರ್ಟಿಯಲ್ಲಿ ಜನರು ಹೆಚ್ಚಾಗಿ ಮದ್ಯಪಾನ ಸೇವನೆ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಮದ್ಯಪಾನ ಮಾಡುವುದು ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚು ಮಾಡುತ್ತದೆ. ಮದ್ಯ ಸೇವನೆಯು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದಾಗಿ ರಕ್ತದೊತ್ತಡವು ಚರ್ಮದ ಮೇಲ್ಮೈನಲ್ಲಿ ಹೆಚ್ಚಾಗುತ್ತದೆ.
ಆಲ್ಕೋಹಾಲ್ ಸೇವಿಸಿದ ನಂತರ ಒಬ್ಬ ವ್ಯಕ್ತಿಯು ಹೆಚ್ಚು ತಾಪ ಅಥವಾ ಶಾಖ ಅನುಭವಿಸಲು ಇದು ಕಾರಣವಾಗುತ್ತದೆ. ಬೇಸಿಗೆ ಕಾಲದಲ್ಲಿ ಅಧಿಕ ರಕ್ತದೊತ್ತಡ ಮತ್ತು ಮದ್ಯ ಸೇವನೆ ದೇಹದ ಉಷ್ಣತೆ ಹೆಚ್ಚು ಮಾಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ಹಾಗಾಗಿ ಬೇಸಿಗೆಯಲ್ಲಿ ಪಾರ್ಟಿ ಮಾಡುವುದು ಮತ್ತು ವಿಶೇಷವಾಗಿ ಪಾರ್ಟಿಯಲ್ಲಿ ಮದ್ಯ ಸೇವನೆ ಮಾಡುವುದನ್ನು ತಪ್ಪಿಸಬೇಕು.
ಪಾರ್ಟಿಯಲ್ಲಿ ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ಕೆಡಿಸುತ್ತದೆ
ಬೇಸಿಗೆಯಲ್ಲಿ ಪಾರ್ಟಿ ಮಾಡುವುದನ್ನು ತಪ್ಪಿಸುವುದೇ ಬೆಟರ್. ಯಾಕೆಂದರೆ ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಅತಿಯಾಗಿ ತಿನ್ನುವುದು ಹಾಗೂ ಕುಡಿಯುವುದು ಆರೋಗ್ಯ ಸಮಸ್ಯೆಯನನ್ಉ ಹೆಚ್ಚು ಮಾಡುತ್ತದೆ. ಈ ಸಮಸ್ಯೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಹದಗೆಡುತ್ತದೆ. ಜೊತೆಗೆ ಮಧುಮೇಹ, ಬೊಜ್ಜು, ಹೃದ್ರೋಗ, ಮಿದುಳಿನ ಕಾರ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ಪಾರ್ಟಿ ಮಾಡುವುದನ್ನು ಆದಷ್ಟು ತಪ್ಪಿಸಬೇಕು.
ಪಾರ್ಟಿಗೆ ಹೋಗುವಾಗ ಮೇಕ್ಅಪ್ ಮಾಡುವುದು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ
ಪಾರ್ಟಿಗೆ ಹೋಗುವ ಮೊದಲು ಮಹಿಳೆಯರು ಅತಿಯಾದ ಮೇಕ್ಅಪ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಚರ್ಮದ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಬೇಸಿಗೆಯಲ್ಲಿ ಭಾರೀ ಮೇಕ್ಅಪ್ ಮಾಡುವುದು ಮುಖದ ಮೇಲೆ ರಾಶಸ್ ಗೆ ಕಾರಣವಾಗುತ್ತದೆ.
ಇದನ್ನೂ ಓದಿ: ತ್ವಚೆ, ಕೂದಲಿನ ಆರೋಗ್ಯಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಬಳಸುವ ಮುನ್ನ ಎಚ್ಚರಿಕೆ ವಹಿಸಿ!
ಇದರೊಂದಿಗೆ ತುರಿಕೆ ಸಮಸ್ಯೆ ಹೆಚ್ಚುತ್ತದೆ. ಇದರಿಂದಾಗಿ ಚರ್ಮದ ಮೇಲೆ ದದ್ದುಗಳು ಮತ್ತು ಗುರುತುಗಳು ಕಾಣಿಸಿಕೊಳ್ಳುತ್ತವೆ. ತ್ವಚೆಯ ಆರೈಕೆ ತಜ್ಞರು ಬೇಸಿಗೆಯಲ್ಲಿ ಭಾರೀ ಕ್ರೀಮ್ ಬಳಸುವುದನ್ನು ಬಿಡುವಂತೆ ಹೇಳುತ್ತಾರೆ. ಏಕೆಂದರೆ ಇದು ಚರ್ಮದ ನೈಸರ್ಗಿಕ ಹೊಳಪು ಮತ್ತು ತೇವಾಂಶ ಕಳೆದುಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ