Summer Tips: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸಲು ಮಾವಿನ ಹಣ್ಣಿನ ಪಾನೀಯ ಕುಡಿಯಿರಿ

ಬೇಸಿಗೆಯ ಬಿಸಿಲು ತುಂಬಾನೇ ಹೆಚ್ಚಾಗಿರುವುದರಿಂದ ಶಾಖವನ್ನು ಕಡಿಮೆ ಮಾಡಲು ತಂಪಾದ ಮಾವಿನಹಣ್ಣಿನಿಂದ ತಯಾರಿಸಿದ ಪಾನೀಯಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೇಸಿಗೆ (Summer) ಕಾಲವು ಶುರುವಾಗಿ ಈಗಾಗಲೇ 2 ತಿಂಗಳು ಆಗಿದ್ದು, ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನವು (Temperature) ತಾರಕಕ್ಕೆ ಏರುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಿಸಿಲಿನಲ್ಲಿ ಶೆಖೆ ಒಂದು ಕಡೆಯಾದರೆ, ಇನ್ನೊಂದು ಕಡೆ ನಮಗೆ ಈ ಶೆಖೆಯಿಂದ ಬರುವ ವಿಪರೀತ ಬೆವರು, ಇವೆರಡೂ ಮನುಷ್ಯನಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ಈ ಹಳದಿ ಬಣ್ಣವು (Yellow Color) ಹೆಚ್ಚಿನ ಶಕ್ತಿ ಮತ್ತು ಉಷ್ಣತೆಯನ್ನು ಪ್ರತಿನಿಧಿಸುವ ಬಣ್ಣವಾಗಿದೆ, ಇವೆರಡೂ ಬೇಸಿಗೆಯ ಅಂಶಗಳಾಗಿವೆ ಎಂದು ಹೇಳಬಹುದು. ಬೇಸಿಗೆಯಲ್ಲಿ ಸೂರ್ಯನು ಪ್ರಕಾಶಮಾನವಾಗುತ್ತಾನೆ ಮತ್ತು ಇನ್ನೊಂದು ಹಳದಿ ಬಣ್ಣ ಎಂದರೆ ನಮಗೆ ನೆನಪಿಗೆ ಬರುವುದು ಮಾವಿನಹಣ್ಣು (Mango).

ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಒಂದು ರೀತಿಯ ಸಮಾಧಾನ ನೀಡುವುದು ಹಾಗೂ, ನಮ್ಮ ಹೊಟ್ಟೆಯನ್ನು ತುಂಬಿಸುವುದು ಈ ಮಾವಿನಹಣ್ಣುಗಳು ಎಂದು ಹೇಳಬಹುದು. ಈ ಹಳದಿ ಬಣ್ಣದ ಹಣ್ಣುಗಳ ರಾಜ ಬೇಸಿಗೆಯಲ್ಲಿ ನಮಗೆ ಎಷ್ಟು ಆನಂದವನ್ನು ನೀಡುತ್ತದೆ ಎಂದರೆ ಮಾವಿನ ಹಣ್ಣಿನಿಂದ ಮಾಡಿದ ಸಿಹಿ ತಿಂಡಿಗಳು, ಮೇಲೋಗರಗಳು ಮತ್ತು ಪಾನೀಯಗಳಾಗಿ ಮಾಡಿಕೊಂಡು ಆನಂದಿಸಬಹುದು.

ಈಗಾಗಲೇ ಬೇಸಿಗೆಯ ಬಿಸಿಲು ತುಂಬಾನೇ ಹೆಚ್ಚಾಗಿದ್ದರಿಂದ, ಶಾಖವನ್ನು ಸಮತೋಲನಗೊಳಿಸಲು ತಂಪಾದ, ಮಾವಿನಹಣ್ಣಿನಿಂದ ತಯಾರಿಸಿದ ಪಾನೀಯಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ ಎಂದು ಹೇಳಬಹುದು. ಆದ್ದರಿಂದ, ಈ ಬೇಸಿಗೆಯಲ್ಲಿ ನೀವು ಟ್ರೈ ಮಾಡಬಹುದಾದ ಕೆಲವು ಮಾವಿನಹಣ್ಣಿನ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1. ಮ್ಯಾಂಗೋ ಸ್ಟ್ರಾಬೆರಿ ಡೀಕನ್ಸಟ್ರಕ್ಟ್‌

ಈ ಮಾವಿನಹಣ್ಣಿನ ಪಾನೀಯವನ್ನು ತಯಾರಿಸಲು ಮುಖ್ಯವಾಗಿ ಬೇಕಾಗಿರುವುದು ಪುದೀನ ಎಲೆಗಳು, ಶುಂಠಿ ಮತ್ತು ಸ್ಟ್ರಾಬೆರಿಗಳು ಎಂದು ಹೇಳಬಹುದು. ಇದನ್ನು ತಯಾರಿಸಲು ನಿಮಗೆ ಬೇಕಾಗಿರುವುದು ಮೊಸರು, ಸ್ಟ್ರಾಬೆರಿ, ಸಕ್ಕರೆ, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಸಹಜವಾಗಿ ಮಾವಿನಹಣ್ಣುಗಳು. ನಿಮ್ಮ ನಾಲಿಗೆಗೆ ಒಂದೇ ಸಮಯದಲ್ಲಿ ಹೊಸ ರೀತಿಯ ರುಚಿಯನ್ನು ಪರಿಚಯಿಸುವುದಕ್ಕೆ ಇದನೆಲ್ಲವನ್ನು ಹಾಕಿ ಒಟ್ಟಿಗೆ ಮಿಶ್ರಣ ಮಾಡಿ.

Soaking Mangoes: ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಬಳಿಕ ತಿನ್ನಿ; ಅಜ್ಜಿ ಸಲಹೆ ಹಿಂದಿದೆ ಅದ್ಭುತ ವೈಜ್ಞಾನಿಕ ಕಾರಣ

2. ಮ್ಯಾಂಗೋ ಶರ್ಬತ್

ಬೇಸಿಗೆಯ ಬಿಸಿಯ ದಿನದಂದು ಒಂದು ಲೋಟದ ತುಂಬಾ ನೀವು ಮಾವಿನಹಣ್ಣಿನ ಶರ್ಬತ್ ಕುಡಿದರೆ ಅದಕ್ಕಿಂತ ತಂಪಾದ ಅನುಭವ ಬೇರೆ ಯಾವುದು ನಿಮಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಬಹುದು. ನೀವು ಈ ಪಾನೀಯವನ್ನು ಬೆಳಗ್ಗಿನ ಉಪಾಹಾರವಾಗಿರಲಿ ಅಥವಾ ಸಂಜೆಯ ತಿಂಡಿ ವಿರಾಮದ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಇದನ್ನು ಮಾಡಿಕೊಂಡು ಸೇವಿಸಬಹುದು.

3. ಮ್ಯಾಂಗೋ ಸನ್‌ರೈಸ್

ಸುಲಭವಾಗಿ ತಯಾರಿಸಬಹುದಾದ ಪಾನೀಯವಾದ ಮ್ಯಾಂಗೋ ಸನ್‌ರೈಸ್, ಪ್ರಯತ್ನಿಸಲೇಬೇಕಾದ ಪಾನೀಯವಾಗಿದೆ. ಮಾವು ಮತ್ತು ಗ್ರೆನಡೈನ್ ಸಿರಪ್‌ನ ಸಂಯೋಜನೆಯು ನಿಜವಾಗಿಯೂ ಸನ್‌ರೈಸ್ ಎಂಬ ಪದದಷ್ಟೇ ಆನಂದ ಈ ಪಾನೀಯ ಕುಡಿದಾಗ ನಮಗೆ ಆಗುತ್ತದೆ ಎಂದು ಹೇಳಬಹುದು. ಮ್ಯಾಂಗೋ ಸನ್‌ರೈಸ್ ಖಂಡಿತವಾಗಿಯೂ ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಮತ್ತು ನೀವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವವರೆಗೆ ನಿಮ್ಮ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ.

4. ಆಮ್ ಪನ್ನಾ

ನೀವು ಪ್ರೀತಿಸುವ ಮಾವಿನಹಣ್ಣು ಮತ್ತು ಪುದೀನಾ ಎಲೆಗಳ ಮತ್ತೊಂದು ಸಂಯೋಜನೆ ಈ ಆಮ್ ಪನ್ನಾ ಪಾನೀಯ ಆಗಿದೆ ಎಂದು ಹೇಳಬಹುದು. ಇದು ನಿಮ್ಮ ಬಾಯಾರಿಕೆಯನ್ನು ತಣಿಸುವುದಲ್ಲದೆ, ದೇಹಕ್ಕೆ ತಂಪು ನೀಡುತ್ತದೆ. ಈ ಪಾನೀಯವು ರುಚಿಕರವಾಗಿರುವಂತೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ ಮತ್ತು ಜಠರ ಗರುಳಿನ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆಯಾಗಿದೆ.

ಇದನ್ನೂ ಓದಿ: ಚರ್ಮದ ಆರೈಕೆಗೆ ಹೇಗೆ ಮಾಡಬೇಕು? ನಿರ್ದೇಶಕಿ ದಿವ್ಯಾ ಖೋಸ್ಲಾ ಬ್ಯೂಟಿ ಟಿಪ್ಸ್ ಹೀಗಿದೆ

5. ಮ್ಯಾಂಗೋ ಲಸ್ಸಿ

ಕೊನೆಯದಾಗಿ ಹೇಳುವುದಾದರೆ ಸರ್ವಕಾಲಿಕ ನೆಚ್ಚಿನದು ಎಂದರೆ ಅದು ಮ್ಯಾಂಗೋ ಲಸ್ಸಿ ಎಂದು ಹೇಳಬಹುದು. ಈ ಪಾನೀಯವನ್ನು ನಾವು ಪರಿಪೂರ್ಣ ಸಂಯೋಜನೆ ಎಂದು ಕರೆಯುತ್ತೇವೆ. ಲಸ್ಸಿ ಅತ್ಯಂತ ರುಚಿಕರವಾಗಿರುತ್ತದೆ, ಅದರಲ್ಲೂ ಅದರಲ್ಲಿ ಮಾವಿನಹಣ್ಣನ್ನು ಸೇರಿಸಿ ತಯಾರಿಸಿದ್ದರೆ, ಅದು ಇನ್ನಷ್ಟು ರುಚಿಕರವಾಗಿರುತ್ತದೆ.
Published by:Pavana HS
First published: