Gardening Tips: ಮನೆಯಲ್ಲೊಂದು ಪುಟ್ಟ ಕೈ ತೋಟವಿದ್ರೆ ಎಷ್ಟು ಚೆಂದ ಅಲ್ವಾ? ಬೇಸಿಗೆಯಲ್ಲಿ ಗಿಡಗಳ ಆರೈಕೆಗೆ ಇಲ್ಲಿದೆ ಟಿಪ್ಸ್

ಸುಡು ಬೇಸಿಗೆಯಲ್ಲಿ ಗಿಡಗಳು ಒಣಗಿ ಹೋಗುತ್ತೆ. ಹೀಗಾಗಿ ಬೇಸಿಗೆಯಲ್ಲಿ ಕೈತೋಟ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡ್ರೆ ನಿಮ್ಮ ಮನೆಯಲ್ಲೇ ಚೆಂದದ ತೋಟ ನಿರ್ಮಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೆಂದದ ಹೂವಿನ ಗಿಡಗಳನ್ನು, ತರೆವಾರಿ ಹಣ್ಣು (Fruits) ತರಕಾರಿಗಳ ಗಿಡಗಳನ್ನು (Vegetables) ಬೆಳೆಸಿ ಮನೆಯಲ್ಲೊಂದು ಪುಟ್ಟ ಕೈತೋಟ (Garden) ನಿರ್ಮಿಸುವ ಹವ್ಯಾಸ ಬಹಳಷ್ಟು ಮಂದಿಗಿರುತ್ತದೆ. ಆದರೆ ಆಯಾ ಋತುವಿಗೆ ಅನುಗುಣವಾದ ಗಿಡಗಳನ್ನು ಬೆಳೆಸಿ , ಅವುಗಳನ್ನು ರಕ್ಷಿಸುವ ಕೆಲಸ ಸವಾಲಿನದ್ದು. ಅದರಲ್ಲೂ ಮುಖ್ಯವಾಗಿ ಬೇಸಿಗೆಯಲ್ಲಿ (Summer) ಕೈತೋಟ ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ (Caring) ವಹಿಸಬೇಕಾಗುತ್ತದೆ. ಭಾರತದ ಹವಾಮಾನದಲ್ಲಿ, ಅದರಲ್ಲೂ ಈ ಸುಡು ಬೇಸಿಗೆಯಲ್ಲಿ ಕೈತೋಟ ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲ ಮತ್ತು ಆಸಕ್ತಿ ನಿಮಗಿದ್ದರೆ ಇಲ್ಲಿದೆ ಮಾಹಿತಿ.

1. ಸೂಕ್ತ ಗಿಡಗಳನ್ನು ಆರಿಸಿಕೊಳ್ಳಿ
ಕೈತೋಟದಲ್ಲಿ ಸುಂದರ ಹೂವಿನ ಗಿಡಗಳಿದ್ದರೆ, ಮನೆಗೊಂದು ಸೊಬಗು. ಭಾರತದಲ್ಲಿ ಬೇಸಿಗೆ ಕಾಲದಲ್ಲಿ , ದಾಸವಾಳ, ಬೋಗನ್‍ವಿಲ್ಲಾ, ಕರವೀರ, ಗುಲಾಬಿ ಮತ್ತು ಸೂರ್ಯಕಾಂತಿ ಗಿಡಗಳನ್ನು ಬೆಳೆಯುವ ಮೂಲಕ, ನಿಮ್ಮ ಕೈತೋಟವನ್ನು ವರ್ಣಮಯವಾಗಿಸಬಹುದು.

2. ಆಸನದ ವ್ಯವಸ್ಥೆ
ಸುಂದರವಾದ ಕೈತೋಟ ಇದ್ದ ಮೇಲೆ, ಅಲ್ಲಿ ಸಂತಸದ ಕ್ಷಣಗಳನ್ನು ಕಳೆಯದೇ ಇರಲು ಸಾಧ್ಯವೇ. ಹಾಗೆ ಮಾಡಬೇಕು ಎಂದಲ್ಲಿ, ಕೈತೋಟದಲ್ಲಿ ನೆರಳಿರುವ ಜಾಗವನ್ನು ಆರಿಸಿಕೊಂಡು ಮರದ ಬೇಸಿಗೆ ಉದ್ಯಾನ ಪೀಠೋಪಕರಣಗಳನ್ನು ಅಲಂಕರಿಸಿ. ಸುತ್ತಲೂ ಹೂವಿನ ಗಿಡಗಳನ್ನು ನೆಟ್ಟು, ಆ ಜಾಗವನ್ನು ಇನ್ನಷ್ಟು ಸುಂದರಗೊಳಿಸಿ.

3. ಚಿಕ್ಕ ಕೊಳ
ಹಕ್ಕಿಗಳು ಬಂದು ನೀರಾಟವಾಡಲು ಸ್ಥಳ ಅಥವಾ ಚಿಕ್ಕ ಕೊಳವನ್ನು ನಿರ್ಮಿಸಿ. ಅದು ಹಕ್ಕಿಗಳನ್ನು ಆಕರ್ಷಿಸುತ್ತದೆ. ನೀವು ಅದನ್ನು ಸ್ವತಃ ನಿರ್ಮಾಣ ಮಾಡಿಸಬಹುದು ಅಥವಾ ಮಾರುಕಟ್ಟೆಯಿಂದ ರೆಡಿಮೆಡ್ ಆಗಿ ಸಿಗುವಂತದ್ದನ್ನೂ ಖರೀದಿಸಿ ತರಬಹುದು.

4. ತೂಗು ಬುಟ್ಟಿಗಳು
ನಿಮ್ಮ ಕೈತೋಟದಲ್ಲಿ ಮರವಿದ್ದರೆ, ಅದರ ಕೊಂಬೆಗೆ ಹೂ ಬೀಡುವ ಗಿಡಗಳಿರುವ ಕುಂಡಗಳನ್ನು ನೇತು ಹಾಕಿ. ಅವುಗಳಿಗೆ ದೀಪ ಮತ್ತು ಬಲ್ಬ್‌ಗಳ ತಂತಿಗಳನ್ನು ನೇತು ಹಾಕಿದರೆ, ಕೈತೋಟದ ಸೌಂದರ್ಯ ಇನ್ನಷ್ಟು ಇಮ್ಮಡಿಸುತ್ತದೆ.

ಇದನ್ನೂ ಓದಿ: Memory & Concentration: ಪರೀಕ್ಷೆ ಸಮಯದಲ್ಲಿ ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ 5 ಆಹಾರಗಳು!

ಬೇಸಿಗೆಯಲ್ಲಿ ನಿಮ್ಮ ಕೈ ತೋಟದಲ್ಲಿರುವ ಗಿಡಗಳ ನಿರ್ವಹಣೆ ಮಾಡಲು ಇಲ್ಲಿವೆ ಒಂದಿಷ್ಟು ಸಲಹೆಗಳು..

1. ಗಿಡಗಳನ್ನು ರಕ್ಷಿಸಿ
ಬೇಸಿಗೆಯಲ್ಲಿ, ಸೂಕ್ಷ್ಮ ಕಂಟೇನರ್‍ಗಳು ಮತ್ತು ಉದ್ಯಾನವನದ ಗಿಡಗಳನ್ನು ರಕ್ಷಿಸಲು, ಬಟ್ಟೆಯನ್ನು ಬಳಸಿ ಅವುಗಳಿಗೆ ನೆರಳು ನೀಡಿ. ಹೀಗೆ ಮಾಡುವುದರಿಂದ ಅವುಗಳನ್ನು ಮಟ ಮಟ ಮಧ್ಯಾಹ್ನ ಬಿಸಿಲಿನಿಂದ ಕಾಪಾಡಬಹುದು ಮತ್ತು ಅವುಗಳು ತಮ್ಮ ಬೆಳವಣಿಗೆಗಾಗಿ ಫಿಲ್ಟರ್ ಮಾಡಿದ ಬೆಳಕನ್ನು ಪಡೆಯುವಂತೆ ಮಾಡಬಹುದು.

2. ಮಣ್ಣಿನ ಗುಣಮಟ್ಟ ಸುಧಾರಣೆ
ಬೇಸಿಗೆ ಆರಂಭವಾಗುತ್ತಲೇ, ಕೈತೋಟದ ಮಣ್ಣು, ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಮತ್ತು ಗಾಳಿಯನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿ. ಅದಕ್ಕಾಗಿ ನೀವು , ಸಾವಯವ ಪದಾರ್ಥಗಳು ಮತ್ತು ಮಿಶ್ರ ಗೊಬ್ಬರವನ್ನು ಬಳಸಿ. ಏಕೆಂದರೆ , ಅದು ಮಣ್ಣಿನ ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಜೊತೆಗೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಮತ್ತು ಹುಳಗಳಿಗೆ ಪ್ರಯೋಜನಕಾರಿ ಆಗಿದೆ.

3. ಸರಿಯಾದ ನೀರುಣಿಸುವ ಕ್ರಮ
ಬೆಳಗ್ಗೆ ಮತ್ತು ಸಂಜೆ ಗಿಡಗಳಿಗೆ ನೀರು ಹಾಕಲು ಸೂಕ್ತ ಸಮಯ, ಏಕೆಂದರೆ ಆ ಸಮಯದಲ್ಲಿ ಮಣ್ಣು ತಂಪಾಗಿರುತ್ತದೆ. ಮಧ್ಯಾಹ್ನದ ಸಮಯದಲ್ಲಿ ಗಿಡಗಳಿಗೆ ನೀರು ಹಾಕುವುದರಿಂದ ಗಿಡಗಳಿಗೆ ಹಾನಿ ಆಗುತ್ತದೆ. ಕುಂಡಗಳ ನೀರು ಆವಿಯಾಗುವುದರಿಂದ, ಆಗಾಗ್ಗೆ ಗಿಡವಿರುವ ಕುಂಡಗಳಿಗೆ ನೀರು ಹಾಕುತ್ತಿರಿ ಮತ್ತು ಕುಂಡಗಳ ಕೆಳಗೆ ತಟ್ಟೆಗಳನ್ನು ಇರಿಸಿ.

ಇದನ್ನೂ ಓದಿ: Weight Loss: ಬೊಜ್ಜಿನ ಸಮಸ್ಯೆ ಹಾಗೂ ದಿಢೀರ್ ತೂಕ ಇಳಿಕೆ ಎಷ್ಟು ಡೇಂಜರ್? ಈ ಲಕ್ಷಣಗಳಿದ್ರೆ ಎಚ್ಚರ!

4. ಹಸಿಗೊಬ್ಬರ ಹಾಕಿ
ಬೇಸಿಗೆಯಲ್ಲಿ ಗಿಡಗಳ ಬುಡಕ್ಕೆ 2-3 ಇಂಚುಗಳಷ್ಟು ಜಾಗದಲ್ಲಿ ಸಾವಯವ ಹಸಿಗೊಬ್ಬರವನ್ನು ಹಾಕುವುದರಿಂದ ಗಿಡಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಕಾಂಪೋಸ್ಟ್, ಹುಲ್ಲು ಇತ್ಯಾದಿಗಳನ್ನು ಬಳಸಬಹುದು. ಹಸಿಗೊಬ್ಬರ ಬೇಸಿಗೆಯ ಬಿಸಿಲಿನಲ್ಲಿ, ಮಣ್ಣನ್ನು ತಂಪಾಗಿರಿಸುತ್ತದೆ ಹಾಗೂ ಕಳೆಗಳು ಬೆಳೆಯದಂತೆ ನಿಗ್ರಹಿಸುತ್ತದೆ.
Published by:Pavana HS
First published: