Pet Care: ಸಾಕುಪ್ರಾಣಿಗಳ ಆರೋಗ್ಯಕ್ಕೆ ಆಯುರ್ವೇದ ಟಿಪ್ಸ್

Pet Care Tips: ನಿಮ್ಮ ಸಾಕುಪ್ರಾಣಿಗಳನ್ನು ದೀರ್ಘ ಸಮಯದವರೆಗೆ ಮನೆಯಿಂದ ಹೊರಗೆ ವಾಕಿಂಗ್ ಗೆ ಕರೆದುಕೊಂಡು ಹೋಗಿ, ಇದರಿಂದ ಅದಕ್ಕೆ ವ್ಯಾಯಾಮವಾಗುತ್ತದೆ. ಬೆಳಿಗ್ಗೆ ಹೊತ್ತಿನಲ್ಲಿ ನೀವು ಅದರ ಜೊತೆಗೆ ವಾಕಿಂಗ್ ಹೋಗುವುದು ಇನ್ನೂ ಉತ್ತಮವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮಲ್ಲಿ ಅನೇಕರು ಮನೆಯಲ್ಲಿ ಸಾಕುಪ್ರಾಣಿಗಳನ್ನು (Pets) ಸಾಕಿಕೊಂಡಿರುತ್ತಾರೆ, ಹೆಚ್ಚಿನವರು ಒಂದು ಕ್ಯೂಟ್ ಆದ ನಾಯಿ (Dog) ಮರಿಯನ್ನು ಸಾಕಿಕೊಂಡರೆ, ಇನ್ನೂ ಕೆಲವರು ಮುದ್ದಾದ ಬೆಕ್ಕಿನ (Cat) ಮರಿಗಳನ್ನು ಸಾಕಿಕೊಂಡಿರುತ್ತಾರೆ. ಒಟ್ಟಿನಲ್ಲಿ ಈ ಸಾಕುಪ್ರಾಣಿಗಳು ಎಂದರೆ ನಮಗೆಲ್ಲಾ ಅವುಗಳ ಮೇಲೆ ವಿಶೇಷವಾದ ಕಾಳಜಿ ಮತ್ತು ಪ್ರೀತಿ ಎಂದರೆ ತಪ್ಪಾಗುವುದಿಲ್ಲ. ಅವುಗಳೊಂದಿಗೆ ಮನೆಯವರು ಒಂದು ರೀತಿಯ ವಿಶೇಷ ಬಂಧವನ್ನು ಹಂಚಿ ಕೊಳ್ಳುತ್ತಾರೆ ಎಂದು ಹೇಳಬಹುದು. ಸಾಕುಪ್ರಾಣಿಗಳು ಸಹ ಸಾಕಿದವರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತವೆ. ಆದರೆ ನಮ್ಮಲ್ಲಿ ಅನೇಕರಿಗೆ ಸಾಕುಪ್ರಾಣಿಗಳನ್ನು ಈ ಬೇಸಿಗೆ (summer) ಬಂತು ಎಂದರೆ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದಿರುವುದಿಲ್ಲ.

ಬೇಸಿಗೆಯ ಬಿಸಿ ಮನುಷ್ಯರಾದ ನಮಗೆ ಇಷ್ಟೊಂದು ಅಹಿತಕರವೆನಿಸಿದರೆ, ಇನ್ನೂ ಆ ಪುಟ್ಟ ಸಾಕುಪ್ರಾಣಿಗಳಿಗೆ ಈ ಬಿಸಿ ತಟ್ಟದೆ ಇರುತ್ತದೆಯೇ? ಬೇಸಿಗೆಯಲ್ಲಿ ನಮ್ಮ ಸಾಕುಪ್ರಾಣಿಗಳು, ನೊಣಗಳು ಮತ್ತು ಉಣ್ಣೆಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಲ್ಲದೆ, ಹೆಚ್ಚುತ್ತಿರುವ ತಾಪಮಾನ ಹೀಟ್ ಸ್ಟ್ರೋಕ್, ನಿರ್ಜಲೀಕರಣ ಮತ್ತು ಸನ್ ಬರ್ನ್ ಗೆ ಕಾರಣವಾಗಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಏನು ಪರಿಹಾರಗಳೇ ಇಲ್ಲವೇ ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಖಂಡಿತವಾಗಿಯೂ ಆಯುರ್ವೇದದಲ್ಲಿ ಪರಿಹಾರಗಳಿವೆ.

ಆಯುರ್ವೇದ ಗಿಡಮೂಲಿಕೆಗಳು ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಮತ್ತು ಇದರಲ್ಲಿ ಅನೇಕ ಪಶುವೈದ್ಯಕೀಯ ಔಷಧಿಗಳು, ಚಿಕಿತ್ಸೆಗಳು ಮತ್ತು ನಿರ್ವಹಣೆಯನ್ನು ಉಲ್ಲೇಖಿಸಲಾಗಿದೆ. ಬೇಸಿಗೆಯಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಆಯುರ್ವೇದ ಸಲಹೆ ನೀಡುತ್ತದೆ ನೋಡಿ.

1. ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಸ್ನಾನ ಮಾಡಿಸಿ
ಸಾಮಾನ್ಯವಾಗಿ ನೀವು ತಿಂಗಳಿಗೊಮ್ಮೆ ನಿಮ್ಮ ಸಾಕುಪ್ರಾಣಿಗಳಿಗೆ ಸ್ನಾನ ಮಾಡಿಸುತ್ತಿದ್ದರೆ, ಆ ಸಾಕುಪ್ರಾಣಿಗಳನ್ನು ನೀವು ಬೇಸಿಗೆ ಸಮಯದಲ್ಲಿ ಪ್ರತಿ 10 ರಿಂದ 15 ದಿನಗಳಿಗೊಮ್ಮೆ ಚೆನ್ನಾಗಿ ಸ್ನಾನ ಮಾಡಿಸಬೇಕು. ಇದರಿಂದ ಸಾಕುಪ್ರಾಣಿಗಳ ಚರ್ಮಕ್ಕೆ ಮತ್ತು ಕೂದಲಿಗೆ ಅಂಟಿಕೊಂಡ ಧೂಳು ಮತ್ತು ಇನ್ನಿತರೆ ಕ್ರಿಮಿ ಕೀಟಗಳು ದೂರವಾಗುತ್ತವೆ ಮತ್ತು ದೇಹಕ್ಕೆ ಸ್ವಲ್ಪ ತಂಪು ಸಿಗುತ್ತದೆ.
ನಿಮ್ಮ ಸಾಕುಪ್ರಾಣಿಗಳಿಗಾಗಿ ಉತ್ಪನ್ನಗಳನ್ನು ಖರೀದಿಸುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಯಾವಾಗಲೂ ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುವ ಸೌಮ್ಯ ಮತ್ತು ವಿಷಕಾರಿಯಲ್ಲದ ಉತ್ಪನ್ನಗಳನ್ನು ಖರೀದಿಸಬೇಕು.

ಇದನ್ನೂ ಓದಿ: ಮೊಮೊ ಸವಿಯೋಕೆ ಬೆಂಗಳೂರಿನ ಈ ಜಾಗಗಳು ಬೆಸ್ಟ್, ಇಲ್ಲಿ ಟೇಸ್ಟ್ ಮಾಡಿದ್ರೆ ನೀವು ಬೇರೆ ಎಲ್ಲೂ ಹೋಗೋಕೆ ಚಾನ್ಸೇ ಇಲ್ಲ!

2. ನಿಮ್ಮ ಸಾಕುಪ್ರಾಣಿಗಳಿಗೆ ಗಿಡಮೂಲಿಕೆಗಳು
ನಿಮ್ಮ ಸಾಕುಪ್ರಾಣಿಗಳು ಸಹ ಮನುಷ್ಯರಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ, ಇದನ್ನು ಹೆಚ್ಚು ಮಾಡಿಕೊಳ್ಳಲು ಕೆಲವು ಗಿಡಮೂಲಿಕೆಗಳಿವೆ. ಇದರ ಪರಿಣಾಮವಾಗಿ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಸೋಂಕುಗಳನ್ನು ತಡೆಗಟ್ಟಬಹುದು.

ಅಶ್ವಗಂಧ, ಸ್ಪಿರುಲಿನಾ, ಗುಡುಚಿ, ಗಿಲೋಯ್, ನೆಲ್ಲಿಕಾಯಿ ಮತ್ತು ಅರಿಶಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ. ನೆಲ್ಲಿಕಾಯಿ, ತುಳಸಿ, ಶತಾವರಿ (ಶತಾವರಿ) ನಂತಹ ಗಿಡಮೂಲಿಕೆಗಳು ನಿಮ್ಮ ಸಾಕುಪ್ರಾಣಿಗಳ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದು ಅವುಗಳನ್ನು ಶಕ್ತಿಯುತವಾಗಿ ಕಾಣುವಂತೆ ಮಾಡುತ್ತವೆ.

3. ಚೆನ್ನಾಗಿ ಆಹಾರ ತಿನ್ನಿಸಿ ಮತ್ತು ವ್ಯಾಯಾಮ ಮಾಡಿಸಿ
ಬೇಸಿಗೆಯಲ್ಲಿ ಆಹಾರ ಜೀರ್ಣವಾಗುವುದು ಸ್ವಲ್ಪ ಕಷ್ಟವಾದ್ದರಿಂದ, ನಿಮ್ಮ ಸಾಕುಪ್ರಾಣಿಗಳಿಗೆ ಸಾಕಷ್ಟು ಸುಲಭವಾಗಿ ಜೀರ್ಣವಾಗುವ ಆಹಾರಗಳೊಂದಿಗೆ ಲಘು ಊಟವನ್ನು ನೀಡಲು ಪ್ರಯತ್ನಿಸಿ. ಅವುಗಳಿಗೆ ಹೆಚ್ಚಾಗಿ ಮೊಸರು, ಕಲ್ಲಂಗಡಿ, ಸೌತೆಕಾಯಿ ಮತ್ತು ಎಳನೀರು ಬೇಸಿಗೆ ಸಮಯದಲ್ಲಿ ಸೂಕ್ತವಾದ ಆಹಾರ ಪದಾರ್ಥಗಳಾಗಿವೆ. ನಿಮ್ಮ ಸಾಕುಪ್ರಾಣಿ ನಿಯಮಿತ ಮಧ್ಯಂತರಗಳಲ್ಲಿ ಶುದ್ಧ ನೀರನ್ನು ಕುಡಿಯುತ್ತಿದಿಯೇ ಎಂಬುದನ್ನು ನೋಡಿಕೊಳ್ಳಿರಿ.

ಇದನ್ನೂ ಓದಿ: ಭಾರತದ ಈ ಊರುಗಳಿಗೆ ಇನ್ಮೇಲೆ ಹೆಲಿಕಾಪ್ಟರ್​ನಲ್ಲೇ ಟ್ರಿಪ್ ಹೋಗ್ಬಹುದು, ಬುಕಿಂಗ್ ಹೇಗೆ- ಟಿಕೆಟ್ ರೇಟ್ ಎಷ್ಟು? ಫುಲ್ ಡೀಟೆಲ್ಸ್...

ನಿಮ್ಮ ಸಾಕುಪ್ರಾಣಿಗಳನ್ನು ದೀರ್ಘ ಸಮಯದವರೆಗೆ ಮನೆಯಿಂದ ಹೊರಗೆ ವಾಕಿಂಗ್ ಗೆ ಕರೆದುಕೊಂಡು ಹೋಗಿ, ಇದರಿಂದ ಅದಕ್ಕೆ ವ್ಯಾಯಾಮವಾಗುತ್ತದೆ. ಬೆಳಿಗ್ಗೆ ಹೊತ್ತಿನಲ್ಲಿ ನೀವು ಅದರ ಜೊತೆಗೆ ವಾಕಿಂಗ್ ಹೋಗುವುದು ಇನ್ನೂ ಉತ್ತಮವಾಗಿರುತ್ತದೆ.
Published by:Sandhya M
First published: