HOME » NEWS » Lifestyle » SUGARY BEVERAGES CONSUMED IN CHILDHOOD CAN LEAD TO MEMORY LOSS LATER STUDY STG LG

ಸಕ್ಕರೆಯುಕ್ತ ಪದಾರ್ಥ ಸೇವನೆಯಿಂದ ಮಕ್ಕಳ ಜ್ಞಾಪಕ ಶಕ್ತಿ ಕುಂಠಿತ: ಅಧ್ಯಯನ

ಸಕ್ಕರೆಯುಕ್ತ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಬೊಜ್ಜು, ಸಕ್ಕರೆ ಕಾಯಿಲೆ ಮತ್ತು ಹಲ್ಲು ನೋವು ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

news18-kannada
Updated:April 5, 2021, 2:57 PM IST
ಸಕ್ಕರೆಯುಕ್ತ ಪದಾರ್ಥ ಸೇವನೆಯಿಂದ ಮಕ್ಕಳ ಜ್ಞಾಪಕ ಶಕ್ತಿ ಕುಂಠಿತ: ಅಧ್ಯಯನ
ಸಕ್ಕರೆ
  • Share this:
ಇತ್ತೀಚೆಗೆ ಮಕ್ಕಳ ಬಾಯಿ ಚಪ್ಪರಿಸಲು ಮಾರುಕಟ್ಟೆಯಲ್ಲಿ ವಿವಿಧ ಸಿಹಿ ಪದಾರ್ಥಗಳು ಲಗ್ಗೆಯಿಟ್ಟಿವೆ. ತಯಾರಿಸಿಟ್ಟ ಸಿಹಿ ತಿನಿಸು ಮತ್ತು ಪಾನೀಯಗಳು ಮಕ್ಕಳು ಸೇವನೆ ಮಾಡುವುದರಿಂದ ದೇಹಕ್ಕೆ ಹಲವಾರು ದುಷ್ಪರಿಣಾಮ ಬೀರಲಿದೆ. ಅದರಲ್ಲೂ ಮಕ್ಕಳ ಜ್ಞಾಪಕ ಶಕ್ತಿ ಕುಂಠಿತವಾಗಲಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಸಕ್ಕರೆಯುಕ್ತ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಬೊಜ್ಜು, ಸಕ್ಕರೆ ಕಾಯಿಲೆ ಮತ್ತು ಹಲ್ಲು ನೋವು ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಈಗ ಇದರೊಂದಿಗೆ ಸಕ್ಕರೆಯುಕ್ತ ಪಾನೀಯಗಳನ್ನು ಸೇವಿಸುವುದರಿಂದ ಪ್ರೌಡಾವಸ್ಥೆಯಲ್ಲಿ ಜ್ಞಾಪಕ ಶಕ್ತಿ ದುರ್ಬಲಗೊಳ್ಳಬಹುದು ಎಂದು ಹೊಸ ಅಧ್ಯಯನ ಕಂಡುಹಿಡಿದಿದೆ.

'ಟ್ರಾನ್ಸ್ಲೇಷನಲ್‌ ಸೈಕಿಯಾಟ್ರಿ' ಜರ್ನಲ್ ನ ಅಧ್ಯಯನದಲ್ಲಿ ಪ್ರಕಟಿಸಿದಂತೆ, ಸಿಹಿಯುಕ್ತ ಪಾನೀಯಗಳ ಸೇವನೆಯಿಂದ ಮಕ್ಕಳಲ್ಲಿ ಕರುಳಿನ ಸೂಕ್ಷ್ಮಜೀವಿಗೆ ನಿರ್ದಿಷ್ಟ ಬದಲಾವಣೆ, ಹೊಟ್ಟೆ ಮತ್ತು ಕರುಳಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಜೀವಿಗಳು; ಮೆದುಳಿನ ನಿರ್ದಿಷ್ಟ ಪ್ರದೇಶದ ಕಾರ್ಯವನ್ನು ಹೇಗೆ ಬದಲಾಯಿಸಬಹುದು ಎಂದು ಈ ಅಂಶಗಳ ಮೇಲೆ ಅಧ್ಯಯನ ಮಾಡಲಾಗಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಸಕ್ಕರೆಯುಕ್ತ ಪಾನೀಯಗಳು ಅಮೆರಿಕ ಜನರ ಆಹಾರಕ್ರಮದಲ್ಲಿ ಅಧಿಕ ಸಕ್ಕರೆಗಳ ಪ್ರಮುಖ ಮೂಲವಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು ಮೂರನೇ ಎರಡರಷ್ಟು ಯುವಕರು ಪ್ರತಿದಿನ ಕನಿಷ್ಠ ಒಂದು ಸಕ್ಕರೆ ಪಾನೀಯವನ್ನು ಸೇವಿಸುತ್ತಾರೆ ಎಂದು ಹೇಳಲಾಗಿದೆ.

ಉಪಚುನಾವಣಾ ಪ್ರಚಾರದ ಕಣಕ್ಕೆ ಸಿಎಂ; ನಾಳೆ ಬೆಳಗಾವಿಗೆ ಯಡಿಯೂರಪ್ಪ ಪ್ರವಾಸ

ಯುಎಸ್ಸಿ ಡಾರ್ನ್‌ಸೈಫ್ ಕಾಲೇಜ್ ಆಫ್ ಲೆಟರ್ಸ್ ನ ಆರ್ಟ್ಸ್ ಅಂಡ್ ಸೈನ್ಸಸ್‌ನ ಜೈವಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ನರವಿಜ್ಞಾನಿ ಸ್ಕಾಟ್ ಕನೋಸ್ಕಿ ಅವರು, ಆಹಾರ ಮತ್ತು ಮೆದುಳಿನ ಮೇಲೆ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಸಕ್ಕರೆಯುಕ್ತ ಪಾನೀಯಗಳ ಸೇವನೆಯಿಂದ ಜ್ಞಾಪಕ ಶಕ್ತಿ ಕುಂಠಿತಗೊಳಿಸುತ್ತದೆ ಎಂಬುದನ್ನು ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಕಂಡುಕೊಂಡಿದ್ದಾರೆ. ಮತ್ತು ಅದೇ ಪಾನೀಯಗಳು ಕರುಳಿನ ಮೇಲೆ ದುಷ್ಫರಿಣಾಮ ಬೀರಲಿದೆ ಎಂದು ಅವರ ಸಂಶೋಧನೆಯಿಂದ ತಿಳಿದು ಬಂದಿದೆ.

ಪ್ರಸ್ತುತ ಅಧ್ಯಯನದಲ್ಲಿ, ಸೂಕ್ಷ್ಮಜೀವಿಯ ಮೇಲಾಗುವ ಪರಿಣಾಮ ಮತ್ತು ಜ್ಞಾಪಕ ಶಕ್ತಿ ಕಾರ್ಯಗಳ ನಡುವೆ ನೇರ ಸಂಪರ್ಕವಿದೆಯೇ ಎಂದು ಕಂಡುಹಿಡಿಯಲು ಕೆನೊಸ್ಕಿ ಮತ್ತು ಯುಸಿಎಲ್‌ಎ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯ, ಅಥೆನ್ಸ್‌ನ ಸಂಶೋಧಕರು ಪ್ರಯತ್ನಿಸಿದರು. ವಿಜ್ಞಾನಿಗಳು ಸಕ್ಕರೆಯುಕ್ತ ಪಾನೀಯವನ್ನು ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಕಂಡುಕೊಂಡಿದ್ದಾರೆ.ಇಲಿಗಳ ಮೇಲೆ ಮಾಡಿದ ಪ್ರಯೋಗವನ್ನು ಒಂದು ತಿಂಗಳುಗಳ ಕಾಲ ನಡೆಸಿದ ಸಂಶೋಧಕರು, ಎರಡು ವಿಭಿನ್ನ ವಿಧಾನಗಳನ್ನು ಬಳಸಿಕೊಂದು ಪರೀಕ್ಷಿಸಿದರು. ಒಂದನೇ ವಿಧಾನವು, ಹಿಪ್ಪೊಕ್ಯಾಂಪಸ್ ಎಂದು ಕರೆಯಲಾಗುವ ಮೆದುಳಿಗೆ ಸಂಬಂಧಿಸಿದ ನೆನಪಿನ ಶಕ್ತಿಯ ಮೇಲೆ ಪರೀಕ್ಷಿಸಲಾಯಿತು. ಮತ್ತೊಂದು ವಿಧಾನದಲ್ಲಿ ಪೆರಿಹಿನಲ್ ಕಾರ್ಟೆಕ್ಸ್ ಎಂಬ ಪ್ರದೇಶದಿಂದ ನಿಯಂತ್ರಿಸಲ್ಪಡುವ ನೆನಪಿನ ಕಾರ್ಯಚಟುವಟಿಕೆಯ ಮೇಲೆ ಪರೀಕ್ಷೆ ನಡೆಸಲಾಯಿತು.

ಸಂಶೋಧನೆಯಲ್ಲಿ ಬಳಸಿಕೊಂಡ ಇಲಿಗಳಲ್ಲಿ ಕೇವಲ ನೀರನ್ನು ಸೇವಿಸಿದ ಇಲಿಗಳಿಗೆ ಹೋಲಿಸಿದರೆ, ಸಕ್ಕರೆಯುಕ್ತ ಪಾನೀಯವನ್ನು ಸೇವಿಸಿದ ಇಲಿಗಳು ಸ್ಮರಣಾ ಶಕ್ತಿಯಲ್ಲಿ ಕುಂಠಿತವಾಗಿರುವುದು ಈ ಪರೀಕ್ಷೆಯಿಂದ ಕಂಡುಕೊಂಡಿದ್ದಾರೆ.

ಪ್ಯಾರಾಬ್ಯಾಕ್ಟೀರಾಯಡ್ಸ್ ಎಂಬ ಹೆಸರಿನ ಬ್ಯಾಕ್ಟೀರಿಯಾವು ಸಕ್ಕರೆಯ ಸಹಾಯವಿಲ್ಲದೆ ಇಲಿಗಳ ನೆನಪಿನ ಶಕ್ತಿಯ ಕಾರ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬುದರ ಅಂಶಗಳ ಮೇಲೆ ಸಂಶೋಧಕರು ಕೇಂದ್ರಿಕರಿಸಿದರು. ಪ್ರಯೋಗಾಲಯದಲ್ಲಿ ಬೆಳೆದ ಪ್ಯಾರಾಬ್ಯಾಕ್ಟೀರಾಯ್ಡ್ಸ್ ಬ್ಯಾಕ್ಟೀರಿಯಾವನ್ನು ಹೊಂದಿದ ಹದಿಹರೆಯದ ಇಲಿಗಳ ಕರುಳಿನಲ್ಲಿ ಸ್ಥಳಾಂತರಿಸಿ ಕೇವಲ ನೀರನ್ನು ಒದಗಿಸಿದರು. ಬ್ಯಾಕ್ಟೀರಿಯಾವನ್ನು ಸ್ವೀಕರಿಸುವ ಇಲಿಗಳು ಹಿಪ್ಪೊಕ್ಯಾಂಪಸ್‌ನಲ್ಲಿ ಸ್ಮರಣೆಯಲ್ಲಿ ದುರ್ಬಲತೆಯು ಕಂಡುಬಂದಾಗ ಅವು ಸಕ್ಕರೆಯುಕ್ತ ಪಾನೀಯವನ್ನು ಸೇವಿಸುವ ಇಲಿಗಳಂತೆಯೇ ಪ್ರೌಡಾವಸ್ಥೆಗೆ ಬೆಳೆವಣಿಗೆ ಕಂಡು ಬಂದಿತು.

ಸಕ್ಕರೆಯುಕ್ತ ಪಾನೀಯವನ್ನು ಸೇವನೆ ಮಾಡುವ ಇಲಿಗಳಿಗಿಂತ ಭಿನ್ನವಾಗಿ, ಕಸಿ ಮಾಡಿದ ಇಲಿಗಳು ಪೆರಿಹೈನಲ್ ಕಾರ್ಟೆಕ್ಸ್ ನಲ್ಲಿ ನೆನಪಿನ ಶಕ್ತಿಯ ದುರ್ಬಲತೆಯನ್ನು ತೋರಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡರು. ಆಹಾರದಲ್ಲಾದ ಬದಲಾವಣೆಯಿಂದ ಮೆದುಳಿನಲ್ಲಾದ ಚಟುವಟಿಕೆಯಿಂದ ಕರುಳಿನ ಸೂಕ್ಷ್ಮಜೀವಿಯ ಬದಲಾವಣೆಗಳಲ್ಲಿ ಪರಿಣಾಮ ಬೀರಿರುವುದು ಕಂಡು ಬಂದಿದೆ.

"ಮೊದಲನೇ ಹಂತದಲ್ಲಿ ಸಕ್ಕರೆಯನ್ನು ಸೇವಿಸುವ ಇಲಿಗಳು ಸ್ಮರಣ ಶಕ್ತಿಯ ಸಾಮರ್ಥ್ಯದ ಕೊರತೆ ಹೊಂದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸಕ್ಕರೆ ನೀಡದ ಇಲಿಗಳಲ್ಲಿ ಈ ಯಾವ ಕೊರತೆಗಳು ಕಂಡು ಬರಲಿಲ್ಲ" ಎಂದು ಅಮೆರಿಕದ ಅಥೆನ್ಸ್‌ನ ಜಾರ್ಜಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರಮುಖ ಲೇಖಕ ಎಮಿಲಿ ನೋಬಲ್ ಹೇಳಿದರು.

ಕರುಳಿನ ಸೂಕ್ಷ್ಮಜೀವಿಯ ಮತ್ತು ಮೆದುಳಿನ ಕ್ರಿಯೆಯ ನಡುವೆ ನೇರ ಪರಿಣಾಮ ಬೀರುತ್ತದೆ ಎಂದು ಈ ಅಧ್ಯಯನದ ಫಲಿತಾಂಶಗಳಿಂದ ಖಚಿತಪಡಿಸುತ್ತದೆ.

ಸತ್ವಯುತ ಆಹಾರದ ಸೇವನೆ, ದೈಹಿಕ ವ್ಯಾಯಮದಂತಹ ಉತ್ತಮ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸುಕೊಳ್ಳುವುದರೊಂದಿಗೆ ಜೀವನದಲ್ಲಿ ಮೊದಲಿನ ಸಕ್ಕರೆ ಸೇವನೆಯಿಂದ ಉಂಟಾಗುವ ಜ್ಞಾಪಕ ಶಕ್ತಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದಾಗಿದೆ ಎಂದು ಕನೋಸ್ಕಿ ಮತ್ತು ಸಂಶೋಧಕರು ತಮ್ಮ ಅಧ್ಯಯನದಿಂದ ಪರಿಹಾರ ಕಂಡುಕೊಂಡಿದ್ದಾರೆ.
Published by: Latha CG
First published: April 5, 2021, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories