Sugar Foods: ಹೆಚ್ಚು ಸಕ್ಕರೆ, ಸಿಹಿ ತಿಂಡಿ ತಿಂತೀರಾ? ಚರ್ಮದ ಆರೋಗ್ಯ ಹಾಳಾದ್ರೆ ಬೈಯ್ಕೋಬೇಡಿ

ಎಷ್ಟೇ ಚರ್ಮದ ಮೇಲೆ ದುಬಾರಿ ಮೊತ್ತದ ಕ್ರೀಮ್‌ಗಳು ಮತ್ತು ಫೇಸ್ ಪ್ಯಾಕ್‌ ಹಚ್ಚಿದರೂ ಅದು ಕೆಲಸ ಮಾಡಲ್ಲ. ಸಕ್ಕರೆಯ ಸೇವನೆ ನಿಮ್ಮ ಚರ್ಮವನ್ನು ಸಡಿಲಗೊಳಿಸುತ್ತದೆ. ಹಾಗಾದ್ರೆ ಅತಿಯಾದ ಸಕ್ಕರೆ ಸೇವನೆ ಚರ್ಮದ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನೇಕರು ಸಿಹಿ ತಿಂಡಿಗಳನ್ನು (Sweet Foods) ಹೆಚ್ಚು ತಿನ್ನೋಕೆ (Eating) ಇಷ್ಟ ಪಡ್ತಾರೆ. ಕೆಲವೊಬ್ಬರು ಊಟದ (Dinner) ನಂತರ ಅಥವಾ ಮೊದಲು ಸಿಹಿ ತಿಂಡಿಗಳ ಸೇವನೆ ಮಾಡ್ತಾರೆ. ಇನ್ನು ಕೆಲವರು ಸಮಯ (Time) ಯಾವುದೇ ಆಗಿದ್ದರೂ ಸಿಹಿ ತಿಂಡಿ, ಪೇಡಾ, ಐಸ್ ಕ್ರೀಂ, ಪೇಸ್ಟ್ರೀ, ಕೇಕ್ (Cake) ಸೇರಿದಂತೆ ಹಲವು ಪದಾರ್ಥಗಳನ್ನು ಸೇವನೆ ಮಾಡ್ತಾರೆ. ತುಂಬಾ ಜನರು ಬೆಲ್ಲದ ಸಿಹಿ ತಿಂಡಿಗಳಿಗಿಂತ ಸಕ್ಕರೆಯ ತಿಂಡಿಗಳನ್ನೇ ತಿನ್ನಲು ಸಾಕಷ್ಟು ಇಷ್ಟ ಪಡ್ತಾರೆ. ಯಾವುದರ ಬಗ್ಗೆಯೂ ಚಿಂತಿಸದೆ ಪ್ರತಿದಿನ ಸಿಹಿ ಪದಾರ್ಥ ಸೇವನೆ ಮಾಡುತ್ತೇವೆ. ಹೆಚ್ಚು ಸಕ್ಕರೆ ಸೇವನೆ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀಡುತ್ತದೆ.

    ಸಕ್ಕರೆಯ ಸೇವನೆಯಿಂದ ಚರ್ಮದ ಮೇಲೆ ಕೆಟ್ಟ ಪರಿಣಾಮ

    ನೀವು ಎಷ್ಟೇ ಚರ್ಮದ ಮೇಲೆ ದುಬಾರಿ ಮೊತ್ತದ ಕ್ರೀಮ್‌ಗಳು ಮತ್ತು ಫೇಸ್ ಪ್ಯಾಕ್‌ ಹಚ್ಚಿದರೂ ಅದು ಕೆಲಸ ಮಾಡಲ್ಲ. ಮತ್ತು ಸಕ್ಕರೆಯ ಸೇವನೆ ನಿಮ್ಮ ಚರ್ಮವನ್ನು ಸಡಿಲಗೊಳಿಸುತ್ತದೆ ಮತ್ತು ಸುಕ್ಕು ಉಂಟಾಗುತ್ತದೆ. ಹಾಗಾದ್ರೆ ಇಂದು ನಾವು ಅತಿಯಾದ ಸಕ್ಕರೆ ಸೇವನೆ ಚರ್ಮದ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಾವು ಇಲ್ಲಿ ನೋಡೋಣ.

    ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಸಕ್ಕರೆ ನಿಮ್ಮ ಚರ್ಮಕ್ಕೆ ಹಲವು ರೀತಿಯಲ್ಲಿ ಹಾನಿಯುಂಟು ಮಾಡುತ್ತದೆ. ಕಾಲಜನ್ ಮಟ್ಟ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಚರ್ಮಕ್ಕೆ ಆರೈಕೆ ನೀಡಲು ವಿಟಮಿನ್ ಸಿ ಹೇಗೆ ಲಾಭಕಾರಿ?

    ಚರ್ಮದ ಉರಿಯೂತದ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆಯ ಸೇವನೆ ವಯಸ್ಸಾಗುವಿಕೆಗೆ ಕಾರಣ ಆಗುತ್ತದೆ. ಸಿಹಿ ಪದಾರ್ಥಗಳ ಸೇವನೆ ತ್ವಚೆಯ ವಯಸ್ಸಾಗುವಿಕೆಯನ್ನು ಹೆಚ್ಚಿಸುತ್ತದೆ.

    ಸಕ್ಕರೆ ಮುಖದ ಅಂದ ಹೇಗೆ ಹಾಳು ಮಾಡುತ್ತದೆ?

    ವೈದ್ಯಕೀಯ ವಿಜ್ಞಾನದ ಪ್ರಕಾರ ಸಕ್ಕರೆಯ ತಿಂಡಿಗಳ ಸೇವನೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸುತ್ತದೆ. ಇನ್ಸುಲಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು ದೇಹದ ಮೇಲೆ ಒತ್ತಡ ಉಂಟಾದಾಗ ಮತ್ತು ಇನ್ಸುಲಿನ್ ಹೆಚ್ಚಾಗಲು ಪ್ರಾರಂಭಿಸಿದಾಗ, ಚರ್ಮದಲ್ಲಿ ಊತ ಹೆಚ್ಚಾಗುತ್ತದೆ.

    ಹೀಗಾಗಿ ಮುಖ ಬಿರುಕು ಬಿಡುತ್ತದೆ. ಊದಿಕೊಳ್ಳುತ್ತದೆ. ಚರ್ಮವು ಬಣ್ಣರಹಿತವಾಗಿ ಮತ್ತು ದಣಿದಂತೆ ಕಾಣಿಸುತ್ತದೆ. ಕೆಲವೊಮ್ಮೆ ಮುಖದಲ್ಲಿ ಕೆಂಪು ವರ್ತುಲ, ಮೊಡವೆ, ಎಸ್ಜಿಮಾ ಅಥವಾ ಕಲೆ, ಸುಕ್ಕುಗಳು ಸಮಸ್ಯೆ ಕಾಣಿಸುತ್ತವೆ. ನಿಮ್ಮ ಚರ್ಮದ ಸ್ಥಿತಿಯನ್ನು ಇದು ಹದಗೆಡಿಸುತ್ತದೆ.

    ಮುಖದ ಅಂದ ಹಾಳಾಗುತ್ತದೆ

    ಮುಖದ ಚರ್ಮವು ಬಿರುಕು ಬಿಟ್ಟಂತೆ, ಊದಿಕೊಂಡಂತೆ ಮತ್ತು ಸಡಿಲವಾಗಿ ಕಾಣುತ್ತಿದ್ದರೆ ನಿಮ್ಮ ಚರ್ಮದಲ್ಲಿ ಆಂತರಿಕ ಉರಿಯೂತ ಸಮಸ್ಯೆ ಹೆಚ್ಚು ಆಗಿದೆ ಎಂದು ತಿಳಿಯಿರಿ. ನೀವು ಬಹಳಷ್ಟು ಸಿಹಿತಿಂಡಿ ಸೇವಿಸಿದರೆ ಮತ್ತು ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗದೇ ಹೋದರೆ ಈ ಎರಡೂ ಕಾರಣಗಳು ಈ ಸಮಸ್ಯೆ ಹೆಚ್ಚಿಸಬಹುದು.

    ಕಾಲಜನ್ ಮಟ್ಟ ಕಡಿಮೆ ಮಾಡುತ್ತದೆ

    ಕಾಲಜನ್ ಪ್ರೋಟೀನ್ ಆಗಿದೆ. ಅದು ನಿಮ್ಮ ಚರ್ಮವನ್ನು ಬಿಗಿಯಾಗಿ ಮತ್ತು ಯೌವನವಾಗಿ ಇಡುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆ ಕಾಲಜನ್ ಮಟ್ಟ ವೇಗವಾಗಿ ಕಡಿಮೆ ಆಗುತ್ತದೆ. ಚರ್ಮವು ಸಡಿಲಗೊಳ್ಳುತ್ತದೆ. ಮತ್ತು ಚರ್ಮದಲ್ಲಿ ಸುಕ್ಕುಗಳು ಮತ್ತು ಕಪ್ಪು ವೃತ್ತಗಳ ಸಮಸ್ಯೆ ಕಾಣಿಸುತ್ತದೆ.

    ಚರ್ಮದ ಬಿರುಕು ಹೆಚ್ಚಿಸುತ್ತದೆ

    ಚರ್ಮದಲ್ಲಿ ಬಿರುಕು ಬಿಡುವ ಸಮಸ್ಯೆಯು ಮುಖದಿಂದ ಇಡೀ ದೇಹಕ್ಕೆ ಹರಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಸೇವನೆ ಮೊಡವೆ ಸಮಸ್ಯೆ ಹೆಚ್ಚಿಸುತ್ತದೆ. ಮೊಡವೆಗಳ ಸಮಸ್ಯೆ ಮೊದಲಿಗೆ ಉರಿಯೂತದಿಂದ ಮತ್ತು ಬಿಳಿ ರಕ್ತ ಕಣಗಳ ಕಾರಣದಿಂದಾಗಿ ತುಂಬಾ ಹೆಚ್ಚಾಗುತ್ತದೆ.

    ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

    ಚರ್ಮದ ಅಲರ್ಜಿ ಹೆಚ್ಚಿಸುತ್ತದೆ

    ನೀವು ಯಾವುದೇ ರೀತಿಯ ಚರ್ಮದ ಅಲರ್ಜಿ ಹೊಂದಿದ್ದರೆ ಸಕ್ಕರೆ ಪದಾರ್ಥಗಳ ಸೇವನೆ ಚರ್ಮದ ಅಲರ್ಜಿ ಹೆಚ್ಚಿಸುತ್ತದೆ. ಇದು ಗುಣವಾಗಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಚರ್ಮದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ.
    Published by:renukadariyannavar
    First published: