• Home
  • »
  • News
  • »
  • lifestyle
  • »
  • ಹೆದರಬೇಡಿ! ತೆಂಗಿನಕಾಯಿ ರಸದ ಸಕ್ಕರೆ Type 2 Diabetes ಇರುವವರಿಗೆ ತುಂಬಾ ಸಹಕಾರಿ

ಹೆದರಬೇಡಿ! ತೆಂಗಿನಕಾಯಿ ರಸದ ಸಕ್ಕರೆ Type 2 Diabetes ಇರುವವರಿಗೆ ತುಂಬಾ ಸಹಕಾರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಕ್ಕರೆಯು ಮಧುಮೇಹಕ್ಕೆ ಮಾತ್ರ ಕಾರಣವಾಗುವುದಿಲ್ಲ ಬದಲಾಗಿ ಅದು ಪೌಷ್ಟಿಕಾಂಶದ ಮೌಲ್ಯವನ್ನು ಶೂನ್ಯಗೊಳಿಸುತ್ತದೆ. ನಿಮ್ಮ ಹಸಿವಿನ ಹಂಬಲವನ್ನು ಹೆಚ್ಚಿಸುತ್ತದೆ.

  • Share this:

ಜಗತ್ತಿನಾದ್ಯಂತ ಹಲವು ಜನ ಮಧುಮೇಹದಿಂದ (Diabetes) ಬಳಲುತ್ತಿದ್ದಾರೆ. ನಮ್ಮ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ (Insulin) ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿರುವ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 2 ಮಧುಮೇಹ (Type 2 Diabetes) ಎನ್ನುತ್ತಾರೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹಲವಾರು ರೀತಿಯಿಂದ ಪ್ರಯತ್ನಿಸಬೇಕು. ಹಾಗಾಗಿ ನಮ್ಮ ಜೀವನಶೈಲಿ, ಆಹಾರ ಕ್ರಮ, ವ್ಯಾಯಾಮ ಇತ್ಯಾದಿಗಳ ಕಡೆಗೆ ಗಮನಹರಿಸಬೇಕು. ಅದರಲ್ಲೂ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಟೈಪ್ 2 ಮಧುಮೇಹ ನಿಯಂತ್ರಣದಲ್ಲಿಡುವ ಉತ್ತಮ ಮಾರ್ಗ. ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ ಸಕ್ಕರೆ ಪರ್ಯಾಯವಾಗಿ (Sugar Alternatives) ಕೆಲವು ಪದಾರ್ಥಗಳಿವೆ


ಮಧುಮೇಹಕ್ಕೆ ಕಾರಣವೇನು
ಮಧುಮೇಹವು ಅಧಿಕ ರಕ್ತದ ಮಟ್ಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದರೂ, ಸಕ್ಕರೆಯ ಸೇವನೆಯು ನಿಮ್ಮ ಮಧುಮೇಹ ಅಪಾಯವನ್ನು ಹೆಚ್ಚಿಸುವ ಏಕೈಕ ವಿಷಯವಲ್ಲ. ನಿಮ್ಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ, ಅನೇಕ ಅಂಶಗಳು ಮಧುಮೇಹವನ್ನು ಅಭಿವೃದ್ಧಿಪಡಿಸುವ ಲಕ್ಷಣಗಳನ್ನು ಹೊಂದಿದೆ.


ವಾಸ್ತವದಲ್ಲಿ ಮಧುಮೇಹ ಎದುರಾದ ಬಳಿಕ ಸೂಕ್ತ ನಿಯಂತ್ರಣವಿಲ್ಲದಿದ್ದರೆ ಭಾರೀ ಹಾನಿಯನ್ನುಂಟುಮಾಡುತ್ತದೆ, ಕೆಲವೊಮ್ಮೆ ತೀವ್ರವಾಗಿರುತ್ತದೆ, ವರ್ಷಗಳ ಮೊದಲೇ ರೋಗಲಕ್ಷಣಗಳು ಗಮನಕ್ಕೆ ಬಂದಾಗಲೂ ಇದಕ್ಕೆ ಸೂಕ್ತ ಚಿಕಿತ್ಸೆ ದೊರಕದೇ ಉಲ್ಬಣಿಸುತ್ತಾ ಹೋಗುತ್ತದೆ.


ರೋಗ ಲಕ್ಷಣ ಗುರುತಿಸಿ
ರೋಗ ಲಕ್ಷಣಗಳನ್ನು ತಕ್ಷಣವೇ ಗುರುತಿಸಿ ತಜ್ಞರ ಸಲಹೆ ಪಡೆಯುವ ಮೂಲಕ ಮಧುಮೇಹ ಪೂರ್ಣವಾಗಿ ಆವರಿಸುವುದನ್ನು ಆದಷ್ಟೂ ಮಟ್ಟಿಗೆ ತಡವಾಗಿಸಬಹುದು ಅಥವಾ ಅದರ ಪ್ರಾಬಲ್ಯವನ್ನು ಕ್ಷೀಣಿಸಬಹುದು.


ಮಧುಮೇಹಿಗಳು ಸಕ್ಕರೆ ಸೇವನೆಯನ್ನು ಏಕೆ ಮಿತಿಗೊಳಿಸಬೇಕು?
ಟೈಪ್ 2 ಡಯಾಬಿಟಿಸ್‌ನೊಂದಿಗೆ, ಜನರು ಇನ್ಸುಲಿನ್ ನಿರೋಧಕರಾಗಿತ್ತಾರೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವ ಮತ್ತು ಶಕ್ತಿಗಾಗಿ ಬಳಸುವ ಜೀವಕೋಶಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿ ಸಕ್ಕರೆಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ: Protein: ಅತಿಯಾಗಿ ಪ್ರೋಟೀನ್ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ! ಏನೆಲ್ಲ ಸಮಸ್ಯೆ ಆಗುತ್ತೆ?


ಸಕ್ಕರೆ ಸೇವನೆ ಮಧುಮೇಹ ಹೊಂದಿರುವ ಜನರಿಗೆ ಸಾಕಷ್ಟು ಅಪಾಯಕಾರಿ ಅಂಶಗಳನ್ನು ತಂದೊಡುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ಸಕ್ಕರೆ ಸೇವನೆಯ ಅಂಶವನ್ನು ಕಡಿತಗೊಳಿಸಬೇಕು.


ಸಕ್ಕರೆಯು ಮಧುಮೇಹಕ್ಕೆ ಮಾತ್ರ ಕಾರಣವಾಗುವುದಿಲ್ಲ ಬದಲಾಗಿ ಅದು ಪೌಷ್ಟಿಕಾಂಶದ ಮೌಲ್ಯವನ್ನು ಶೂನ್ಯಗೊಳಿಸುತ್ತದೆ. ನಿಮ್ಮ ಹಸಿವಿನ ಹಂಬಲವನ್ನು ಹೆಚ್ಚಿಸುತ್ತದೆ. ಆಹಾರದಿಂದ ಸಕ್ಕರೆ ತೆಗೆದುಹಾಕುವುದು ತೂಕ ಕಡಿಮೆ ಮಾಡುವ ಮೊದಲ ವಿಧಾನವಾಗಿದೆ.


ಸಕ್ಕರೆಗೆ ಪರ್ಯಾಯಗಳು
ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ ಸಕ್ಕರೆ ಪರ್ಯಾಯವಾಗಿ ಈ ಪದಾರ್ಥಗಳನ್ನು ಸೇವಿಸಬಹುದು.


1) ಸ್ಟೀವಿಯಾ
ಸ್ಟೀವಿಯಾವು ವ್ಯಾಪಕ ಪೌಷ್ಟಿಕಾಂಶವಿರುವ ಸಿಹಿಕಾರಕ ಅಥವಾ ಸಕ್ಕರೆ ಬದಲಿ ಪದಾರ್ಥವಾಗಿದೆ. ಇದು ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಸ್ಥಳೀಯ ಪದಾರ್ಥವಾಗಿದ್ದು, ಇದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ ಪ್ರಕಾರ ಟೈಪ್ 2 ಮಧುಮೇಹಕ್ಕೆ ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ


2) ಸುಕ್ರಲೋಸ್
ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಸುಕ್ರಲೋಸ್ ಅಥವಾ ಸ್ಪ್ಲೆಂಡಾ ಪ್ರಯೋಜನಕಾರಿ ಸಕ್ಕರೆ ಬದಲಿಯಾಗಿ ಉತ್ತಮವಾಗಿದೆ. ಸುಕ್ರಲೋಸ್ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುತ್ತದೆ ಆದರೆ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ನಂಬುತ್ತಾರೆ.


3) ಟ್ಯಾಗಟೋಸ್
ಟ್ಯಾಗಟೋಸ್ ಜನಪ್ರಿಯ ಕೃತಕ ಸಿಹಿಕಾರಕವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.


4) ಮಾಂಕ್ ಹಣ್ಣಿನ ಸಾರ
ಲುವೊ ಹಾನ್ ಗುವೊ ಹಣ್ಣು ಎಂದೂ ಕರೆಯಲ್ಪಡುವ ಮಾಂಕ್ ಹಣ್ಣು ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುತ್ತದೆ, ಮುಖ್ಯವಾಗಿ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಅಂಶವಿದ್ದು, ಮಧುಮೇಹಿಗಳಿಗೆ ಸಕ್ಕರೆ ಬದಲಿನ ಪರ್ಯಾಯವಾಗಿದೆ.


ಇದನ್ನೂ ಓದಿ: Good News: ಈ ಆಹಾರ ತಿಂದ್ರೆ ನಿಮ್ಮ ಆಯಸ್ಸು ಮಿನಿಮಮ್ 10 ವರ್ಷ ಹೆಚ್ಚಾಗುತ್ತಂತೆ!


5) ತೆಂಗಿನಕಾಯಿ ಪಾಮ್ ಸಕ್ಕರೆ
ತೆಂಗಿನಕಾಯಿ ಪಾಮ್ ಸಕ್ಕರೆ ತೆಂಗಿನಕಾಯಿ ರಸದಿಂದ ತಯಾರಿಸಿದ ನೈಸರ್ಗಿಕ ಸಕ್ಕರೆಯಾಗಿದೆ, ಇದು ಸಂಸ್ಕರಿಸಿದ ಸಕ್ಕರೆಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ ಎಂದು ಹೇಳಲಾಗುತ್ತದೆ.


6) ಖರ್ಜೂರದ ಸಕ್ಕರೆ
ಮತ್ತೊಂದು ಅತ್ಯುತ್ತಮ ಸಕ್ಕರೆ ಪರ್ಯಾಯವೆಂದರೆ ಖರ್ಜೂರದ ಸಕ್ಕರೆ. ಇದನ್ನು ಸಂಪೂರ್ಣ ಖರ್ಜೂರದಿಂದ ಹೊರತೆಗೆಯಲಾಗುತ್ತದೆ. ಇದನ್ನು ಮಿತವಾಗಿ ಸೇವಿಸುವುದು, ಮಧುಮೇಹ ಇರುವವರಿಗೆ ಉತ್ತಮ ಆಯ್ಕೆ ಎನ್ನಲಾಗಿದೆ.

Published by:guruganesh bhat
First published: