• Home
  • »
  • News
  • »
  • lifestyle
  • »
  • Vitamin D Recipe: ವಿಟಮಿನ್ ಡಿ ಕೊರತೆ ದೂರ ಮಾಡಲು ರಾತ್ರಿ ಊಟಕ್ಕೆ ಮಶ್ರೂಮ್ ಕೋಫ್ತಾ ಮಾಡಿ ಸೇವಿಸಿ!

Vitamin D Recipe: ವಿಟಮಿನ್ ಡಿ ಕೊರತೆ ದೂರ ಮಾಡಲು ರಾತ್ರಿ ಊಟಕ್ಕೆ ಮಶ್ರೂಮ್ ಕೋಫ್ತಾ ಮಾಡಿ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಟಮಿನ್ ಡಿ ಪಡೆಯಲು ಸೂರ್ಯನ ಹೊರತಾಗಿ ಪ್ರಾಣಿಗಳಿಗೆ ಹಾನಿಯಾಗದಂತೆ ನೀವು ಅಣಬೆಗಳಿಂದ ವಿಟಮಿನ್ ಡಿ ಅನ್ನು ಸಹ ಪಡೆಯಬಹುದು. ಅಣಬೆಗಳು ವಿಟಮಿನ್ ಡಿ ಯ ಅತ್ಯುತ್ತಮ ಸಸ್ಯಾಹಾರಿ ಮೂಲ ಆಗಿದೆ. ಆದ್ದರಿಂದ ರಾತ್ರಿ ಊಟಕ್ಕೆ ರುಚಿಕರ ಮತ್ತು ಆರೋಗ್ಯಕರವಾದ ಮಶ್ರೂಪ್ ಕೋಫ್ತಾ ರೆಸಿಪಿ ಮಾಡುವುದು ಹೇಗೆ ಎಂದು ಇಲ್ಲಿ ನೋಡೋಣ.

ಮುಂದೆ ಓದಿ ...
  • Share this:

    ದೇಹಕ್ಕೆ (Body) ಹಲವು ಪೋಷಕಾಂಶಗಳು (Nutrients) ಬೇಕು. ಅವುಗಳಲ್ಲಿ ಪ್ರಮುಖವಾಗಿ ಬೇಕಾಗಿರುವುದು ವಿಟಮಿನ್ ಡಿ (Vitamin D). ಸಸ್ಯಾಹಾರಿಗಳು (Vegetarians) ಹೆಚ್ಚು ವಿಟಮಿನ್ ಡಿ ಕೊರತೆ (Deficiency) ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ವಿಶೇಷ ಜೀವಸತ್ವಗಳಲ್ಲಿ ವಿಟಮಿನ್ ಡಿ ಕೂಡ ಒಂದು. ಮೂವತ್ತು ಅಥವಾ ನಲವತ್ತನೇ ವಯಸ್ಸಿನಲ್ಲಿ ಹೆಚ್ಚಿನ ಸಸ್ಯಾಹಾರಿಗಳು ವಿಟಮಿನ್ ಡಿ ಕೊರತೆ ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. ತುಂಬಾ ಜನರು ಸಸ್ಯಾಹಾರಿ ಆಹಾರವು ವಿಟಮಿನ್ ಡಿ ಒದಗಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದು ತಪ್ಪು ಕಲ್ಪನೆ. ವಿಟಮಿನ್ ಡಿ ಪಡೆಯಲು ಸೂರ್ಯನ ಹೊರತಾಗಿ, ಪ್ರಾಣಿಗಳಿಗೆ ಹಾನಿಯಾಗದಂತೆ ನೀವು ಅಣಬೆಗಳಿಂದ ವಿಟಮಿನ್ ಡಿ ಅನ್ನು ಸಹ ಪಡೆಯಬಹುದು.


    ಅಣಬೆಗಳು ವಿಟಮಿನ್ ಡಿ ಯ ಅತ್ಯುತ್ತಮ ಸಸ್ಯಾಹಾರಿ ಮೂಲ ಆಗಿದೆ. ಆದ್ದರಿಂದ ರಾತ್ರಿ ಊಟಕ್ಕೆ ರುಚಿಕರ ಮತ್ತು ಆರೋಗ್ಯಕರವಾದ ಮಶ್ರೂಪ್ ಕೋಫ್ತಾ ರೆಸಿಪಿ ಮಾಡುವುದು ಹೇಗೆ ಎಂದು ಇಲ್ಲಿ ನೋಡೋಣ.


    ಮಶ್ರೂಪ್ ಕೋಫ್ತಾ ರೆಸಿಪಿ ಪಾಕವಿಧಾನ ಟೇಸ್ಟಿ ಮತ್ತು ಆರೋಗ್ಯಕರ


    ನೀವು ದಿನ ನಿತ್ಯ ಒಂದೇ ರೀತಿಯ ಆಹಾರ ಸೇವನೆಯಿಂದ ಬೇಸರಗೊಂಡಿದ್ದರೆ ಮತ್ತು ಹೊಸದು ಬೇಕು ಎಂದುಕೊಂಡಿದ್ದರೆ ಅಣಬೆಯಿಂದ ಮಾಡಿದ ಕೋಫ್ತಾ ಟ್ರೈ ಮಾಡಬಹುದು. ಈ ರುಚಿಕರ ಖಾದ್ಯ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಮಶ್ರೂಮ್ ಅನ್ನು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು, ಸ್ತನ ಕ್ಯಾನ್ಸರ್ ತಡೆಗೆ, ಮಧುಮೇಹ ನಿಯಂತ್ರಿಸಲು ಬಳಸಲಾಗುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಮಶ್ರೂಮ್ ಕೋಫ್ತಾ ರೆಸಿಪಿ


    ಬೇಕಾಗುವ ಪದಾರ್ಥಗಳು


    ಕತ್ತರಿಸಿದ ಅಣಬೆಗಳು ಮೂರು ಕಪ್, ಪನೀರ್ ಮೂರು ಕಪ್, ಮೂರು ಬೇಯಿಸಿದ ಆಲೂಗಡ್ಡೆ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಎರಡು ಕತ್ತರಿಸಿದ ಟೊಮ್ಯಾಟೊ, ಎಂಟು ಪುಡಿಮಾಡಿದ ಬೆಳ್ಳುಳ್ಳಿ ಎಸಳು, ಒಂದು ಇಂಚು ಶುಂಠಿ ಪೇಸ್ಟ್, ಒಂದು ಟೀಸ್ಪೂನ್ ಗರಂ ಮಸಾಲಾ, ಎರಡು ಟೀ ಸ್ಪೂನ್ ಕಾರ್ನ್ ಫ್ಲೋರ್,


    ಒಂದು ಚಮಚ ತುಪ್ಪ, ಅಗತ್ಯವಿರುವಂತೆ ಎಣ್ಣೆ, ಕರಿಮೆಣಸು ಪುಡಿ ಒಂದು ಟೀಸ್ಪೂನ್, ಕೆಂಪು ಮೆಣಸಿನ ಪುಡಿ ಒಂದು ಟೀಸ್ಪೂನ್, ಏಲಕ್ಕಿ ಪುಡಿ ಕಾಲು ಟೀಸ್ಪೂನ್, ಅರಿಶಿನ ಪುಡಿ ಒಂದು ಟೀಸ್ಪೂನ್, ಉಪ್ಪು ರುಚಿಗೆ ತಕ್ಕಂತೆ, ಒಂದು ಟೀಸ್ಪೂನ್ ಕೆನೆ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೇಕು.


    ಮಶ್ರೂಮ್ ಕೋಫ್ತಾ ಮಾಡುವುದು ಹೇಗೆ?


    ಮೊದಲು ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಅಣಬೆ, ಕರಿಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಎರಡು ನಿಮಿಷ ಫ್ರೈ ಮಾಡಿ. ನಂತರ ಬೇಯಿಸಿದ ಆಲೂಗಡ್ಡೆ ಮತ್ತು ಪನೀರ್ ಅನ್ನು ಆಳವಾದ ಪಾತ್ರೆಯಲ್ಲಿ ಮ್ಯಾಶ್ ಮಾಡಿ. ಅದಕ್ಕೆ ಕೆನೆ, ಏಲಕ್ಕಿ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.


    ನಂತರ, ಮಶ್ರೂಮ್ ಮತ್ತು ಕಾರ್ನ್ಫ್ಲೋರ್ ಅನ್ನು ಸೇರಿಸಿ ಉಂಡೆ ಮಾಡಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಈಗ ಬಾಣಲೆಗೆ ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಆದ ಮೇಲೆ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿ. ನಂತರ ಈರುಳ್ಳಿ ಹಾಕಿ ಹುರಿಯಿರಿ.


    ನಂತರ ಟೊಮ್ಯಾಟೊ ಮತ್ತು ಎಲ್ಲಾ ಮಸಾಲೆ ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮತ್ತು 3 ರಿಂದ 5 ನಿಮಿಷಗಳ ಕಾಲ ಫ್ರೈ ಮಾಡಿ. ರುಬ್ಬಿದ ಮಸಾಲೆಗೆ ಒಂದು ಚಮಚ ಕೆನೆ ಸೇರಿಸಿ ಮತ್ತು 3 ರಿಂದ 5 ನಿಮಿಷ ಬೇಯಿಸಲು ಬಿಡಿ.


    ಮಸಾಲಾ ಸಂಪೂರ್ಣವಾಗಿ ಬೇಂದ ನಂತರ ಉಂಡೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಮೂರು ನಿಮಿಷದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಿನ್ನಿರಿ.  ಬಿಸಿ ಬಿಸಿಯಾಗಿ ಬಡಿಸಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಅಣಬೆಗಳು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದ್ದು, ರಕ್ತಹೀನತೆ, ಹೊಟ್ಟೆಯ ಸಮಸ್ಯೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿವೆ.

    Published by:renukadariyannavar
    First published: