HOME » NEWS » Lifestyle » SUFFERING FROM PERIOD CRAMPS HERE ARE 3 BEST SLEEPING POSITIONS FOR RELIEF STG MAK

Periods Pain| ಪೀರಿಯಡ್ಸ್ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಲಗಿ ನೋವು ಶಮನ ಮಾಡಿಕೊಳ್ಳಿ

ಗರ್ಭಧಾರಣೆಯ ಪ್ರತೀಕವಾದ ಈ ವೇಳೆ ಮಹಿಳೆಯರು ಸಾಕಷ್ಟು ಹೊಟ್ಟೆನೋವು, ಆಯಾಸ, ಬೆನ್ನುನೋವು, ಕಾಲು ಕೈ ಸೆಳೆತ ಕಾಣಿಸಿಕೊ ಳ್ಳುತ್ತದೆ. ಇವೆಲ್ಲವೂ ಋತುಚಕ್ರದ ಲಕ್ಷಣಗಳು.

news18-kannada
Updated:June 24, 2021, 4:08 PM IST
Periods Pain| ಪೀರಿಯಡ್ಸ್ ನೋವಿನಿಂದ ಬಳಲುತ್ತಿದ್ದೀರಾ? ಈ ರೀತಿ ಮಲಗಿ ನೋವು ಶಮನ ಮಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
  • Share this:
ಋತುಚಕ್ರ ಎನ್ನುವುದು ಮಹಿಳೆಯರಲ್ಲಿ ಕಾಣುವ ಪ್ರಕೃತಿ ಸಹಜ ಪ್ರಕ್ರಿಯೆ. ಜನನದ ಆದಿ ಎಂದೇ ಪರಿಗಣಿಸಲಾಗುವ ಋತುಚಕ್ರವು ಪ್ರತಿ ತಿಂಗಳ ಮೂರು ದಿನ ಅಥವಾ ಐದು ದಿನದ ಪ್ರಕ್ರಿಯೆ. ಈ ವೇಳೆ ಹೆಣ್ಣಿನ ದೇಹದಲ್ಲಿ ಸಾಕಷ್ಟು ಬದಲಾವಣೆ ಗಳಾಗುವುದು ಸಹಜ. ಗರ್ಭಧಾರಣೆಯ ಪ್ರತೀಕವಾದ ಈ ವೇಳೆ ಮಹಿಳೆಯರು ಸಾಕಷ್ಟು ಹೊಟ್ಟೆನೋವು, ಆಯಾಸ, ಬೆನ್ನುನೋವು, ಕಾಲು ಕೈ ಸೆಳೆತ ಕಾಣಿಸಿಕೊ ಳ್ಳುತ್ತದೆ. ಇವೆಲ್ಲವೂ ಋತುಚಕ್ರದ ಲಕ್ಷಣಗಳು. ಇಂತಹ ಸಮಯದಲ್ಲಿ ಮಹಿಳೆ ಯರು ಅನುಭವಿಸುವ ಹೊಟ್ಟೆನೋವು ಯಾವ ಮನುಷ್ಯನಿಗೂ ಬೇಡ ಎಂದೆನಿ ಸುತ್ತದೆ. ಅಂತಹ ಪರಿಸ್ಥಿತಿಯಲ್ಲಿರುತ್ತಾರೆ ಮಹಿಳೆಯರು. ಕೆಲವರು ಇಂತಹ ಸಮಯದಲ್ಲಿ ಚಟುವಟಿಕೆಯಿಂದ ಇದ್ದರೆ, ಇನ್ನು ಕೆಲವರು ಯಮಯಾತನೆಯಲ್ಲಿ ನರಳುತ್ತಾರೆ.

ಇದಕ್ಕೆ ಅರಿಶಿಣ ನೀರು ಕುಡಿಯುವುದು, ಹಾಟ್ ವಾಟರ್ ಬ್ಯಾಗ್ ಇರಿಸಿಕೊಳ್ಳುವುದು ಹೀಗೆ ನಾನಾ ರೀತಿಯ ಕಸರತ್ತಿನ ಮೂಲಕ ಅದರ ಶಮನಕ್ಕೆ ಒದ್ದಾಡಬೇಕಾಗುತ್ತದೆ. ಆದರೆ ಕೆಲವು ಮಲಗುವ ಭಂಗಿಗಳ ಮೂಲಕವೂ ಹೊಟ್ಟೆನೋವು ಕಡಿಮೆಯಾಗುವ ಸಾಧ್ಯತೆಗಳಿವೆ. ಹಾಗಾದರೆ ಯಾವ ಭಂಗಿಯಲ್ಲಿ ಮಲಗಿದರೆ ಹೊಟ್ಟೆನೋವು ಕಡಿಮೆಯಾಗುವುದು ಎಂದು ತಿಳಿಸಲಾಗುವುದು.

ಭ್ರೂಣದ ರೂಪದಲ್ಲಿ ಮಲಗುವುದು ತಾಯಿಯ ಗರ್ಭದಲ್ಲಿ ಭ್ರೂಣ ಯಾವ ರೀತಿಯಲ್ಲಿ ಮಲಗಿರುತ್ತದೆ ಎಂದು ನೀವು ಫೋಟೋದಲ್ಲಿ ನೋಡೇ ಇರುತ್ತೀರಾ? ಅಂದರೆ ಭ್ರೂಣವೂ ತಲೆ ಹಾಗೂ ಕಾಲನ್ನು ಎದೆಯ ಭಾಗಕ್ಕೆ ಹತ್ತಿರ ತಂದು ಮಲಗಿರುತ್ತದೆ. ಮೂಲತಃ, ನೀವು ಈ ರೀತಿ ನಿದ್ದೆ ಮಾಡುವಾಗ, ನಿಮ್ಮ ಕಿಬ್ಬೊಟ್ಟೆಯ ಸುತ್ತಲಿನ ಸ್ನಾಯುಗಳು ಸಡಿಲ ಗೊಳ್ಳುತ್ತವೆ ಮತ್ತು ಇದು ನಿಮ್ಮ ಪಿರಿಯಡ್ಸ್ ಸೆಳೆತಕ್ಕೆ ಹೆಚ್ಚು ಪರಿಹಾರ ನೀಡುತ್ತದೆ. ಅಲ್ಲದೆ, ನೀವು ಈ ರೀತಿ ಮಲಗಿದರೆ, ಸೋರಿಕೆಯಾಗುವ ಸಾಧ್ಯತೆಗಳು ಬಹುತೇಕ ಕಡಿಮೆ ಇರುತ್ತದೆ.

ಮೊಣಕಾಲುಗಳ ಕೆಳಗೆ ದಿಂಬನ್ನಿರಿಸಿ ಮಲಗಿ ಮೊದಲು ಒಂದು ವೃತ್ತಾಕಾರದ ದಿಂಬನ್ನು ತೆಗೆದುಕೊಳ್ಳಿ. ಬೆನ್ನಿನ ಮೇಲೆ ಮಲಗಿ ತೆಗೆದುಕೊಂಡಿರುವ ವೃತ್ತಾಕಾರದ ದಿಂಬನ್ನು ಮೊಣಕಾಲುಗಳ ಕೆಳಗೆ ಇರಿಸಬೇಕು. ನಿಮ್ಮ ಕಾಲುಗಳು ನೇರವಾಗಿರಬೇಕು. ಒಂದು ಕಾಲು ಮೇಲೆ, ಇನ್ನೊಂದು ಕಾಲು ಕೆಳಗೆ ಇರಬಾರದು. ಸಮಮಟ್ಟದಲ್ಲಿರಬೇಕು. ಹೀಗಿಲ್ಲದಿದ್ದರೆ ಇದು ಬ್ಲೀಡಿಂಗ್ ಮೇಲೆ ಪರಿಣಾಮ ಬೀರುತ್ತದೆ. ವೃತ್ತಾಕಾರದ ದಿಂಬು ಇಲ್ಲದಿದ್ದರೆ ದಿಂಬನ್ನು ವೃತ್ತಾಕಾರವಾಗಿ ಇರಿಸಿಕೊಳ್ಳಬಹುದು. ಕೆಲವೇ ಕ್ಷಣಗಳಲ್ಲಿ ನಿಮ್ಮ ಸ್ನಾಯುಗಳು ಸಡಿಲಗೊಂಡು ಆರಾಮದಾಯಕ ಎನಿಸುವುದು.

ಇದನ್ನೂ ಓದಿ: Delta Plus Variant in India| ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣಗಳು; ಇವು ಮೂರನೇ ಅಲೆಯ ಸೂಚನೆಯೇ?

ಮಗುವಿನ ಭಂಗಿಯಲ್ಲಿ ಮಲಗುವುದು, ಈ ರೀತಿ ಯಾರು ಮಲಗುತ್ತಾರೆ ಎಂದು ಎನಿಸಬಹುದು. ಆದರೆ ನೋವಿನ ಶಮನಕ್ಕೆ ಈ ಭಂಗಿ ನಿಜಕ್ಕೂ ಅನುಕೂಲದಾಯ ಕವಾಗಿದೆ. ಈ ಅವಧಿಯಲ್ಲಿ ತಲೆನೋವು ಅನುಭವಿಸುವವರು ಈ ಭಂಗಿಯನ್ನು ಪ್ರಯತ್ನಿಸುವುದು. ಇದು ಹೆಚ್ಚಿನ ನಿದ್ರೆಯನ್ನು ಪ್ರಚೋದಿಸುತ್ತದೆ. ಏಕೆಂದರೆ ಇಂತಹ ಸಮಯದಲ್ಲಿ ದೇಹ ಮತ್ತು ಮನಸ್ಸು ವಿಶ್ರಾಂತಿಗೆ ಒಳಗಾಗುತ್ತದೆ. ಚೆನ್ನಾಗಿ ನಿದ್ರಿಸುವುದರಿಂದ ನೋವು ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: Delta Plus| ಡೆಲ್ಟಾ ಫ್ಲಸ್​ ಸೋಂಕು ಮೂರನೇ ಕೊರೋನಾ ಅಲೆ ಸೃಷ್ಟಿಸುತ್ತದೆ ಎನ್ನಲು ಆಧಾರಗಳಿಲ್ಲ; ಐಜಿಐಬಿ ನಿರ್ದೇಶಕಈ ಭಂಗಿಗಳ ಹೊರತಾಗಿಯೂ ವಿಶ್ರಾಂತಿ ಪಡೆಯುವುದು, ಹೆಚ್ಚು ಭಾರ ಎತ್ತುವ ಕೆಲಸಗಳಿಂದ ದೂರವಿರುವುದು ಒಳ್ಳೆಯದು. ಜೊತೆಗೆ ಕೋಣೆಯ ಉಷ್ಣತೆ ನಿಯಂತ್ರಣದಲ್ಲಿಡುವುದು, ಶುಂಠಿ ಚಹಾ ಕುಡಿಯುವುದು, ಹೀಗೆ ವಿವಿಧ ಮನೆಮದ್ದುಗಳ ಮೂಲಕ ನೋವಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 24, 2021, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories