PCOS ಗೆ ಕುಂಬಳಕಾಯಿ ಮದ್ದು! ಹೀಗೆ ಬಳಸಿ ಅಂತಾರೆ ವೈದ್ಯರು

Pumpkin Seeds Benefits: ಮೆಗ್ನೀಶಿಯಮ್‌ನಿಂದ ಸಮೃದ್ಧವಾಗಿರುವ ಈ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದೆ. ಕುಂಬಳಕಾಯಿ ಬೀಜಗಳು ಪಿಸಿಒಎಸ್ ಹೊಂದಿರುವ ಮಹಿಳೆಯರಿಗೆ ತುಂಬಾನೇ ಸಹಾಯಕವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಋತುಚಕ್ರದ ನಂತರ ಮಹಿಳೆಯರಲ್ಲಿ ಆಸ್ಟಿಯೊಪೋರೋಸಿಸ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಆಧುನಿಕ ಜಗತ್ತಿನಲ್ಲಿರುವ(Modern Era) ಕೆಲಸದ ಒತ್ತಡ ಮತ್ತು ಜಡತ್ವದ ಜೀವನಶೈಲಿಯಿಂದಾಗಿ(Lifestyle) ಜನರು ತುಂಬಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಈ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಸಮಸ್ಯೆ ಕಂಡು ಬರುತ್ತಿದ್ದು, ಇದಕ್ಕೆ ಬಹುಮುಖ್ಯವಾದ ಕಾರಣ ಅವರ ಅನಿಯಮಿತ ಋತುಚಕ್ರ(Periods) ಎಂದು ಹೇಳಲಾಗುತ್ತಿದೆ.ಈ ಸಮಸ್ಯೆ ಸಾಮಾನ್ಯವಾಗಿದ್ದರೂ, ಪಿಸಿಒಎಸ್(PCOS) ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಭಾರಿ ಪರಿಣಾಮ ಬೀರುತ್ತದೆ ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ.ಈ ಸಮಸ್ಯೆಯನ್ನು ಹೋಗಲಾಡಿಸಲು ವೈದ್ಯಕೀಯ ಮತ್ತು ತಜ್ಞರ ಬಳಿ ವಿವಿಧ ಚಿಕಿತ್ಸೆಗಳು ಇದ್ದರೂ ಸಹ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.

ಆಹಾರದಲ್ಲಿ ಬದಲಾವಣೆ ಎಂದ ತಕ್ಷಣವೇ ಕುಂಬಳಕಾಯಿಯ ಬೀಜಗಳು ನೆನಪಿಗೆ ಬರುತ್ತವೆ. ಇತರ ಪೋಷಕಾಂಶಗಳ ಪೈಕಿ ಕುಂಬಳಕಾಯಿಯ ಬೀಜಗಳನ್ನು ವ್ಯಾಪಕವಾಗಿ ಸೂಚಿಸಲಾಗಿದೆ. ಪೆಪಿಟಾಸ್ ಎಂದೂ ಕರೆಯಲ್ಪಡುವ ಈ ಬೀಜಗಳು ನಿಮ್ಮ ಪಿಸಿಒಎಸ್ ಸಮಸ್ಯೆಗೆ ಉತ್ತಮವಾದ ಆಯ್ಕೆ ಎಂದುಕೊಳ್ಳಬಹುದು.

ಕುಂಬಳಕಾಯಿ ಬೀಜಗಳು ಪಿಸಿಒಎಸ್ ಚಿಕಿತ್ಸೆಗೆ ಹೇಗೆ ಸಹಾಯ ಮಾಡುತ್ತದೆ?

ಮೆಗ್ನೀಶಿಯಮ್‌ನಿಂದ ಸಮೃದ್ಧವಾಗಿರುವ ಈ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದೆ. ಕುಂಬಳಕಾಯಿ ಬೀಜಗಳು ಪಿಸಿಒಎಸ್ ಹೊಂದಿರುವ ಮಹಿಳೆಯರಿಗೆ ತುಂಬಾನೇ ಸಹಾಯಕವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಋತುಚಕ್ರದ ನಂತರ ಮಹಿಳೆಯರಲ್ಲಿ ಆಸ್ಟಿಯೊಪೋರೋಸಿಸ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚು ಪೋಷಣೆ ನೀಡುವ ಕುಂಬಳಕಾಯಿ ಬೀಜಗಳು ಹಾರ್ಮೋನ್ ಅಸಮತೋಲನವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಇಯರ್ ಬಡ್ಸ್​ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ ಟ್ರಿಕ್

ಕುಂಬಳಕಾಯಿಯ ಬೀಜಗಳು ರಂಜಕ, ತಾಮ್ರ, ಕಬ್ಬಿಣ, ಸತು ಮತ್ತು ಮ್ಯಾಂಗನೀಸ್‌ಗಳನ್ನು ಹೊಂದಿದ್ದು, ಪ್ರೋಟೀನ್, ಏಕ ಪರ್ಯಾಪ್ತ ಕೊಬ್ಬುಗಳು ಮತ್ತು ವಿಟಮಿನ್ ಎ ನ ಉತ್ತಮ ಮೂಲವಾಗಿದೆ ಎಂದು ಹೇಳಬಹುದು.

ಕುಂಬಳಕಾಯಿ ಬೀಜಗಳ ಪ್ರಯೋಜನಗಳು

1. ಕೂದಲು ಉದುರುವಿಕೆ ನಿಲ್ಲಿಸಲು ಸಹಾಯಕವಾಗಿದೆ.

2. ದೇಹಕ್ಕೆ ಬೇಕಾದ ಅಗತ್ಯ ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ.

3. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ.

4. ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸುತ್ತದೆ.

5. ನಿಮ್ಮ ನಿದ್ರೆ ಸುಧಾರಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಹೇಗೆ ಸೇರಿಸಿಕೊಳ್ಳುವುದು?

ಮೊದಲಿಗೆ ನೀವು ತಿನ್ನಲು ಬಯಸುತ್ತಿರುವ ಮೊಟ್ಟೆಯ ಆಕಾರದ ಕುಂಬಳಕಾಯಿಯ ಬೀಜಗಳನ್ನು ಚೆನ್ನಾಗಿ ತೊಳೆಯಬೇಕು. ನಂತರ ಈ ಕುಂಬಳಕಾಯಿಯ ಬೀಜಗಳನ್ನು ನೀವು ಹುರಿದುಕೊಳ್ಳಬಹುದು. ಕುಂಬಳಕಾಯಿ ಬೀಜಗಳನ್ನು ಸಲಾಡ್, ತರಕಾರಿಗಳಲ್ಲಿ, ಮೊಸರಿನಲ್ಲಿ ಅಥವಾ ಓಟ್ ಮೀಲ್‌ಗೆ ಸೇರಿಸಿಕೊಂಡು ಸೇವಿಸಬಹುದಾಗಿದೆ.

ಇಲ್ಲದೆ ಹೋದರೆ ಈ ಬೀಜಗಳನ್ನು ನೀವು ಕುಡಿಯಲು ತಯಾರಿಸಿಕೊಂಡಿರುವ ಸೂಪ್ ಮೇಲೆ ಸಹ ಸಿಂಪಡಿಸಿಕೊಳ್ಳಿರಿ ಅಥವಾ ಮಿಲ್ಕ್ ಶೇಕ್‌ಗಳ ಮೇಲೆ ಅವುಗಳನ್ನು ಅಲಂಕರಿಸಲು ಹಾಕಿಕೊಳ್ಳಬಹುದು. ನೀವು ಇನ್ನೂ ಸ್ವಲ್ಪ ಸೃಜನಶೀಲರಾಗಿದ್ದರೆ ಅವುಗಳನ್ನು ಸಾಸ್‌ಗಳಲ್ಲಿ ಹಾಕಿ ಪುಡಿಮಾಡಿಕೊಳ್ಳಬಹುದು.

ಇದನ್ನೂ ಓದಿ: ತೂಕ ಇಳಿಸೋಕೆ ನಿಂಬೆ ನಿಜಕ್ಕೂ ಎಷ್ಟು ಪ್ರಯೋಜನಕಾರಿ? ಇಲ್ಲಿದೆ ಸತ್ಯಾಂಶ

ಮನೆಯಲ್ಲಿ ಒಣ ಕುಂಬಳಕಾಯಿಯ ಬೀಜಗಳು ಮತ್ತು ಸ್ವಲ್ಪ ಆಲೀವ್ ಎಣ್ಣೆಯೊಂದಿಗೆ ಟೋಸ್ಟ್ ಮಾಡಿ ಮತ್ತು ದಾಲ್ಚಿನ್ನಿ, ಜಾಯಿಕಾಯಿ ಅಥವಾ ಮೆಣಸಿನಂತಹ ಮಸಾಲೆಗಳನ್ನು ಸೇರಿಸಿಕೊಂಡು ಸೇವಿಸಬಹುದು.
First published: