ಕೆಲವೊಮ್ಮೆ ಪಾದಗಳು (Feet) ಪದೇ ಪದೇ ಶೂ (Shoe) ಹಾಕಿದಾಗ ಕೆಟ್ಟದಾಗಿ ವಾಸನೆ (Bad Smell) ಬರುತ್ತವೆ. ನೀವು ಶೂಗಳನ್ನು ತೊಳೆಯದೇ ಪದೇ ಪದೇ ಧರಿಸಿದರೂ ಸಹ ಕೆಟ್ಟ ವಾಸನೆ ಬರುತ್ತವೆ. ಆದರೆ ಕೆಲವೊಮ್ಮೆ ಪಾದಗಳು ಕೊಳಕು ವಾಸನೆ ಬರುತ್ತಿದ್ದರೆ ಇದನ್ನು ಲಘುವಾಗಿ ತೆಗೆದುಕೊಳ್ಳುವುದು ಅಥವಾ ನಿರ್ಲಕ್ಷ್ಯ ಮಾಡುವುದು ಮಾಡಬಾರದು ಅಂತಾರೆ ತಜ್ಞರು. ನಿಮ್ಮ ಪಾದಗಳು ವಿನೆಗರ್ ನಂತೆ ಕೆಟ್ಟ ವಾಸನೆ ಬರುತ್ತಿದ್ದರೆ, ನಿಮ್ಮ ಪಾದಗಳಿಗೆ ಸೂಕ್ತ ಆರೈಕೆ (Care) ಮಾಡುವುದು ತುಂಬಾ ಮುಖ್ಯ. ಕೆಲವೊಮ್ಮೆ ಪಾದಗಳ ದುರ್ವಾಸನೆ ಕೊಳಕು ಸಾಕ್ಸ್ ಅಥವಾ ಬೂಟು ಧರಿಸುವುದರ ಪರಿಣಾಮ ಆಗಿರಲ್ಲ.
ದುರ್ವಾಸನೆ ಬರುವ ಪಾದಗಳ ಸಮಸ್ಯೆ ಲಘುವಾಗಿ ಪರಿಗಣಿಸಬೇಡಿ
ದೇಹದಲ್ಲಿ ಅನೇಕ ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಅಂತಾರೆ ತಜ್ಞರು. ಇದು ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆಯ ಸಂಕೇತವೂ ಆಗಿರಬಹುದು. ಒಂದು ವರದಿಯ ಪ್ರಕಾರ, ದುರ್ವಾಸನೆ ಬೀರುವ ಪಾದಗಳನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೊಮೊಡೋಸಿಸ್ ಎಂದು ಕರೆಯುತ್ತಾರೆ ಎಂದು ಹೇಳಿದೆ.
ಪಾದಗಳು ಬೆವರುತ್ತವೆ. ಆಗ ಪಾದಗಳಿಂದ ಕೆಟ್ಟ ವಾಸನೆ ಬರುತ್ತದೆ. ಈ ಬೆವರು ಶೂ ಮತ್ತು ಸಾಕ್ಸ್ ಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾದ ಜೊತೆ ಬರೆತು ದುರ್ವಾಸನೆ ಬೀರುವ ಆಮ್ಲ ಉತ್ಪಾದನೆ ಮಾಡುತ್ತದೆ. ಇದು ಕೆಟ್ಟ ವಾಸನೆ ಬರಲು ಕಾರಣ ಆಗುತ್ತದೆ.
ಕೆಲವು ಜನರ ಪಾದದದಲ್ಲಿ ಬೆವರು ಬರುವುದು ಪ್ರೊಪಿಯೋನಿಕ್ ಆಮ್ಲ ಹೊಂದಿರುತ್ತದೆ. ಇದು ಪ್ರೊಪಿಯೋನಿ ಬ್ಯಾಕ್ಟೀರಿಯಾದ ಅಮೈನೋ ಆಮ್ಲಗಳ ವಿಭಜನೆಯ ನಂತರ ರೂಪುಗೊಳ್ಳುತ್ತದೆ. ಇದು ಪಾದದ ದುರ್ವಾಸನೆಗೆ ಕಾರಣ ಆಗಬಹುದು. ಇನ್ನು ಪಾದದ ದುರ್ವಾಸನೆಗೆ ಹಲವು ಕಾರಣಗಳಿವೆ.
ಹೈಪರ್ ಹೈಡ್ರೋಸಿಸ್
ಪಾದಗಳು ಹೆಚ್ಚು ಬೆವರಲು ಮತ್ತು ವಿನೆಗರ್ ರೀತಿಯ ಕೆಟ್ಟ ವಾಸನೆ ಬರಲು ಹೈಪರ್ ಹೈಡ್ರೋಸಿಸ್ ಎಂಬ ಸ್ಥಿತಿ ಕಾರಣವಾಗಿದೆ. ಇದು ಅತಿಯಾದ ಬೆವರುವಿಕೆಯ ಸ್ಥಿತಿ ಆಗಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಹೈಪರ್ಹೈಡ್ರೋಸಿಸ್ ಎಂದು ಕರೆಯುತ್ತಾರೆ.
ಇದು ಅತಿಯಾದ ದೈಹಿಕ ಚಟುವಟಿಕೆಯಿಂದ ಉಂಟಾಗಲ್ಲ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು ಅಂತಾರೆ ತಜ್ಞರು. ಇದರಲ್ಲಿ ಎರಡು ವಿಧಗಳಿವೆ. ಒಂದು ಪ್ರಾಥಮಿಕ ಫೋಕಲ್ ಹೈಪರ್ಹೈಡ್ರೋಸಿಸ್. ಮತ್ತೊಂದು ಸೆಕೆಂಡರಿ ಫೋಕಲ್ ಹೈಪರ್ಹೈಡ್ರೋಸಿಸ್.
ಪ್ರಾಥಮಿಕ ಫೋಕಲ್ ಹೈಪರ್ಹೈಡ್ರೋಸಿಸ್ ಎಂದರೇನು?
ಅದಾಗ್ಯೂ ಫೋಕಲ್ ಹೈಪರ್ಹೈಡ್ರೋಸಿಸ್ ಆಗಲು ಮೂಲ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇದು ಯಾಕೆ ತೀವ್ರ ಬೆವರುವಿಕೆಗೆ ಕಾರಣವಾಗುತ್ತದೆ ಎಂಬುದು ತಿಳಿದಿಲ್ಲ. ನಿಮ್ಮ ಪಾದಗಳು ಸ್ವಚ್ಛವಾಗಿದ್ದರೂ ಸಹ ಪಾದಗಳು ದುರ್ವಾಸನೆ ಬೀರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ದ್ವಿತೀಯ ಫೋಕಲ್ ಹೈಪರ್ಹೈಡ್ರೋಸಿಸ್ ಎಂದರೇನು?
ಒಂದು ವರದಿಯ ಪ್ರಕಾರ, ದ್ವಿತೀಯ ಫೋಕಲ್ ಹೈಪರ್ಹೈಡ್ರೋಸಿಸ್ ಉಂಟಾಗಲು ಕೆಲವು ಗಂಭೀರ ಕಾಯಿಲೆ ಕಾರಣವಾಗಿರಬಹುದು. ಹಾಗಾಗಿ ಪಾದಗಳ ದುರ್ವಾಸನೆಯ ಬಗ್ಗೆ ನಿರ್ಲಕ್ಷಿಸಬೇಡಿ.
ಪಾದಗಳು ದುರ್ವಾಸನೆಗೆ ಈ ಕಾಯಿಲೆಗಳು ಕಾರಣವಾಗಿರಬಹುದು!
ಮಧುಮೇಹ, ಥೈರಾಯ್ಡ್ ಸಮಸ್ಯೆ, ನರಮಂಡಲದ ಅಸ್ವಸ್ಥತೆ, ಫಂಗಲ್ ಸೋಂಕು, ರಕ್ತದಲ್ಲಿ ಕಡಿಮೆ ಸಕ್ಕರೆ ಕಂಡು ಬರುವುದು, ಮೆನೋಪಾಸ್ ಹಾಟ್ ಫ್ಲಾಶಸ್, ಕೆಲವು ಮೂತ್ರಪಿಂಡದ ಕಾಯಿಲೆ ಇದ್ದಾಗಲೂ ಪಾದಗಳು ಕೆಟ್ಟ ವಾಸನೆ ಬೀರುತ್ತವೆ.
ಪಾದಗಳು ವಿನೆಗರ್ ವಾಸನೆ ಬರುವುದು ಸಾಮಾನ್ಯವೇ?
ಪಾದಗಳು ಕೆಟ್ಟ ವಾಸನೆ ಹಾಗೂ ವಿನೆಗರ್ ವಾಸನೆ ಬರುವುದು ಸಹಜವಲ್ಲ ಅಂತಾರೆ ತಜ್ಞರು. ಇದು ಎಲ್ಲರಲ್ಲೂ ಕಂಡು ಬರುವ ಸ್ಥಿತಿಯಲ್ಲ. ಅನೇಕ ಜನರ ಪಾದಗಳು ವಿನೆಗರ್ ವಾಸನೆ ಬೀರುತ್ತವೆ. ಯಾರು ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆ ಸಮಸ್ಯೆ ಹೊಂದಿರುತ್ತಾರೋ ಅವರಲ್ಲಿ ಪಾದಗಳು ವಿನೆಗರ್ ವಾಸನೆ ಬೀರುತ್ತವೆ.
ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!
ಪಾದದ ವಾಸನೆ ತೊಡೆದು ಹಾಕಲು ಆಹಾರದಲ್ಲಿ ಜೀವಸತ್ವ ಸೇರಿಸಿ. ಶುಚಿತ್ವ ಕಾಪಾಡಿ. ಆಗಾಗ್ಗೆ ಪಾದಗಳನ್ನು ತೊಳೆಯಿರಿ. ಕಾಟನ್ ಸಾಕ್ಸ್ ಧರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ