• Home
  • »
  • News
  • »
  • lifestyle
  • »
  • Sudha Murty: ರಾಷ್ಟ್ರಪತಿ ಮುರ್ಮುಗೆ ಸುಧಾಮೂರ್ತಿ ಕೊಟ್ಟ ಈ ವಿಶೇಷ ಸೀರೆ ಬೆಲೆ ಎಷ್ಟು ಗೊತ್ತಾ? ನೀವೂ ಖರೀದಿಸಬಹುದು

Sudha Murty: ರಾಷ್ಟ್ರಪತಿ ಮುರ್ಮುಗೆ ಸುಧಾಮೂರ್ತಿ ಕೊಟ್ಟ ಈ ವಿಶೇಷ ಸೀರೆ ಬೆಲೆ ಎಷ್ಟು ಗೊತ್ತಾ? ನೀವೂ ಖರೀದಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sudha Murty Gifted Ilkal Saree: ಸೀರೆ ಹೆಣ್ಣಿಗೆ ಭೂಷಣ ಎನ್ನಬಹುದು. ಯಾವುದೇ ರೀತಿಯ ಟ್ರೆಂಡಿ ಡ್ರೆಸ್​ಗಳು ಬಂದಿದ್ದರೂ ಸಹ ಸೀರೆಯ ಮೇಲಿನ ಮೋಹ ಕಡಿಮೆಯಾಗುವುದಿಲ್ಲ. ಅದರಲ್ಲೂ ಇಳಕಲ್ ಸೀರೆಗೆ ಬಹಳ ಮಹತ್ವವಿದೆ. ಕರ್ನಾಟದ ಹೆಮ್ಮೆ ಈ ಇಳಕಲ್ ಸೀರೆ ಎನ್ನಬಹುದು.

  • Share this:

ಮೈಸೂರು ದಸರಾಗೆ (Mysuru Dasara)  ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi murmu) ನಿನ್ನೆ ಚಾಲನೆ ನೀಡಿದ್ದು, ನಿನ್ನೆ ಅವರು ಉಟ್ಟಿದ್ದ ಮೈಸೂರ್ ಸಿಲ್ಕ್ (Mysuru Silk)  ಸೀರೆಯ ಬಗ್ಗೆ ಬಹಳ ಚರ್ಚೆ ನಡೆದಿದ್ದು, ಇದೀಗ ಅವರಿಗೆ ಸುಧಾ ಮೂರ್ತಿ (Sudha Murthy) ಅವರು ಕೌದಿ ಮತ್ತು ಇಳಕಲ್ ಸೀರೆ (Ilkal Saree) ಉಡುಗೊರೆಯಾಗಿ ನೀಡಿದ್ದಾರೆ. ಕರ್ನಾಟಕದ (Karnataka) ಹೆಮ್ಮೆಯ ಇಳಕಲ್ ಸೀರೆಯನ್ನು ರಾಷ್ಟ್ರಪತಿ ಅವರಿಗೆ ನೀಡಿ ಗೌರವಿಸಿದ್ದು, ಈ ಸೀರೆಯ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.


ಇಳಕಲ್ ಸೀರೆ ಗಿಫ್ಟ್​ ಕೊಟ್ಟ ಸುಧಾ ಮೂರ್ತಿ


ಸೀರೆ ಹೆಣ್ಣಿಗೆ ಭೂಷಣ ಎನ್ನಬಹುದು. ಯಾವುದೇ ರೀತಿಯ ಟ್ರೆಂಡಿ ಡ್ರೆಸ್​ಗಳು ಬಂದಿದ್ದರೂ ಸಹ ಸೀರೆಯ ಮೇಲಿನ ಮೋಹ ಕಡಿಮೆಯಾಗುವುದಿಲ್ಲ. ಅದರಲ್ಲೂ ಇಳಕಲ್ ಸೀರೆಗೆ ಬಹಳ ಮಹತ್ವವಿದೆ. ಕರ್ನಾಟದ ಹೆಮ್ಮೆ ಈ ಇಳಕಲ್ ಸೀರೆ ಎನ್ನಬಹುದು.ಇಳಕಲ್ ಸೀರೆ ಸಾಂಪ್ರದಾಯಿಕ ಸೀರೆ ಎಂದು ಹೆಸರು ಪಡೆದಿದೆ. ಈ ಸೀರೆಯನ್ನು ಯಾವುದೇ ಮಹಿಳೆ ಇಷ್ಟವಿಲ್ಲ ಎನ್ನುವುದಿಲ್ಲ. ಇದು ಕೊಡುವ ಸುಂದರ ಲುಕ್ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಉಡಲು ಸಹ ಬಹಳ ಸುಲಭವಾಗುತ್ತದೆ. ಈ ಸೀರೆ ಉಡಲು ಹಗುರವಾಗಿರುವ ಕಾರಣ ಹಿರಿಯರ ಫೇವರೇಟ್ ಸಹ ಹೌದು.


ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಈ ಸೀರೆಗೆ ಇಳಕಲ್ ಎನ್ನುವ ಹೆಸರು ಬರಲು ಕಾರಣ, ಒಂದು ಊರು. ಈ ಇಳಕಲ್ ಎನ್ನುವುದು ಕರ್ನಾಟಕದ ಬಾಗಲಕೋಟೆಯಲ್ಲಿರುವ ಎಂಬ ಸ್ಥಳ. ಈ ಊರಿನಲ್ಲಿ ಈ ಸೀರೆಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಹಾಗಾಗಿ ಈ ಸೀರೆಗೆ ಅದೇ ಹೆಸರು ಬಂದಿದೆ.


sudha murty gifted ilkal saree to president draupadi murmu know interesting facts
ಸಾಂದರ್ಭಿಕ ಚಿತ್ರ


ಇಳಕಲ್​ನಲ್ಲಿ ನೇಕಾರರು ಈ ಸೀರೆಯನ್ನು ನೇಯ್ಗೆ ಮಾಡುವ ಕಾರಣ ಇದು ಕೈಮಗ್ಗ ಸೀರೆಯಾಗಿದ್ದು, ಸುಂದರವಾಗಿರುತ್ತದೆ. ಈ ಸೀರೆಯನ್ನು ಖಾಟನ್, ಸಿಲ್ಕ್, ಆರ್ಟ್ ಸಿಲ್ಕ್ ನಿಂದಲೂ ಮಾಡಲಾಗುತ್ತದೆ. ಇಳ್ಕಲ್ ಸೀರೆ ಭಾರತ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಜಿಯೋಗ್ರಾಫಿಕಲ್ ಇಂಡಿಕೇಷನ್ ಸಂಖ್ಯೆ 76 ಅನ್ನು ಹೊಂದಿದೆ. ಇದನ್ನು ಜಿ ಐ ಟ್ಯಾಗ್ ಎನ್ನುತ್ತಾರೆ. ಇದಕ್ಕೆ ಬಹಳವಾದ ಮಹತ್ವವಿದೆ. ಈ ಬಾರಿ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಈ ಬಾರಿಯ ಬೆಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಇದನ್ನೂ ಓದಿ: ಇಳಿಕೆಯಾಗಿದೆ ಬಂಗಾರದ ಬೆಲೆ, ದಸರಾ ಹಬ್ಬಕ್ಕೆ ಈ ಬ್ಯೂಟಿಫುಲ್ ಚಿನ್ನಾಭರಣಗಳನ್ನು ನೀವೂ ಖರೀದಿಸಿ


ಇಳಕಲ್ ಸೀರೆಯ ಇತಿಹಾಸ


ಇಳಕಲ್​ ಸೀರೆ ತಯಾರಿಕೆಯು 8ನೇ ಶತಮಾನದಲ್ಲಿ ಆರಂಭವಾಗಿತ್ತು. ಇದನ್ನು ಮೊದಲು ಮೈಸೂರ್ ಸಿಲ್ಕ್ ಸೀರೆಯಂತೆಯೇ ಇಳಕಲ್ ಊರಿನ ಸುತ್ತಮುತ್ತಲಿನ ಪ್ರದೇಶದ ಮುಖ್ಯಸ್ಥರಿಂದ ಮತ್ತು ಬಳ್ಳಾರಿ ಸುತ್ತಮುತ್ತಲಿನ ರಾಜರ ಕುಟುಂಬಸ್ಥರಿಗೆ ಮಾತ್ರ ಬಳಸಲಾಗುತ್ತಿತ್ತು. ಆದರೆ, ನಂತರ ಅಲ್ಲಿನ  ಜನರಿಂದ ಇದು ಪ್ರಸಿದ್ಧಿ ಪಡೆದಿದೆ.
ಈ ಸೀರೆಯನ್ನು ಮೊದಲು ಅದೇ ಊರಿನಲ್ಲಿ ಸಿಗುವ ಕಚ್ಚಾ ವಸ್ತುಗಳ ಬಳಕೆಯಿಂದ ತಯಾರಿಸುತ್ತಿದ್ದರು. ಈ ಸೀರೆ ತಯಾರಿಕೆಯನ್ನು 20000 ಜನರು ಮಾಡುತ್ತಿದ್ದ, ಈ ಸೀರೆಗಳನ್ನು ನೇಕಾರರು ಮನೆಗಳಲ್ಲಿ ತಯಾರಿಸುತ್ತಾರೆ.


ಈ ಒಂದು ಇಳಕಲ್​ ಸೀರೆ ತಯಾರಾಗಬೇಕೆಂದರೆ 7 ದಿನಗಳು ಬೇಕಾಗುತ್ತದೆ. ಈ ಸೀರೆಯ ವಿಶೇಷತೆ ಏನಂದರೆ ಈ ಸೀರೆಯ ಸೆರಗನ್ನು ಹೆಂಗಸರು ತಲೆ ಮೇಲೆ ಹೊದ್ದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು 6 ಮೊಳ , 8 ಮೊಳ , 9 ಮೊಳ ಉದ್ದವಾಗಿ ತಯಾರಿಸಲಾಗುತ್ತದೆ.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಉಟ್ಟಿದ್ದ ಮೈಸೂರು ಸಿಲ್ಕ್ ಸೀರೆ ಬೆಲೆ ಎಷ್ಟು? ನೀವೂ ಖರೀದಿಸ್ಬೇಕು ಅಂದ್ರೆ ಹೀಗೆ ಮಾಡಿ


ಸದ್ಯ ರಾಷ್ಟ್ರಪತಿ ಅವರಿಗೆ ಸುಧಾಮೂರ್ತಿ ಅವರು ಇಳಕಲ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದು, ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ನಿಮಗೆ 500 ರೂಪಾಯಿಯಿಂದ 7 ಸಾವಿರ ಒಳಗೆ ಉತ್ತರ ಕರ್ನಾಟಕದ ಭಾಗದಲ್ಲಿ ಲಭಿಸುತ್ತದೆ.

Published by:Sandhya M
First published: