• Home
 • »
 • News
 • »
 • lifestyle
 • »
 • Measles Rubella Disease: ಪೋಷಕರೇ ಹುಷಾರ್, ಹೆಚ್ಚಾಗುತ್ತಿದೆ ದಡಾರ ಕಾಯಿಲೆ ಅಬ್ಬರ; ಮೂವರು ಮಕ್ಕಳು ಸಾವು!

Measles Rubella Disease: ಪೋಷಕರೇ ಹುಷಾರ್, ಹೆಚ್ಚಾಗುತ್ತಿದೆ ದಡಾರ ಕಾಯಿಲೆ ಅಬ್ಬರ; ಮೂವರು ಮಕ್ಕಳು ಸಾವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದಲ್ಲಿ ನಲವತ್ತೆಂಟು ಗಂಟೆಗಳಲ್ಲಿ ದಡಾರ ಕಾಯಿಲೆ ಏಕಾಏಕಿ ಹೆಚ್ಚಿದೆ. ಕಾಯಿಲೆಗೆ ಒಂದೇ ಕುಟುಂಬದ ಮೂರು ಮಕ್ಕಳು ಮೃತಪಟ್ಟಿದ್ದಾರೆ. ಒಮ್ಮೆ ದಡಾರ ಬಂದರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ದಡಾರ ಕಾಯಿಲೆ ಲಕ್ಷಣಗಳ ಬಗ್ಗೆ ಸಂಪೂರ್ಣವಾಗಿ ಎಲ್ಲರೂ ತಿಳಿದಿರಬೇಕು. ಇದರಿಂದ ನೀವು ಸಕಾಲಿಕ ವೈದ್ಯಕೀಯ ಆರೈಕೆ ಪಡೆಯಬಹುದು.

ಮುಂದೆ ಓದಿ ...
 • News18 Kannada
 • Last Updated :
 • Mumbai, India
 • Share this:

  ಭಾರತದಲ್ಲಿ (India) ಹಠಾತ್ ದಡಾರ ಕಾಯಿಲೆ (Measles Rubella Disease) ಕಾಣಿಸಿಕೊಂಡಿದೆ. ಈಗ 48 ಗಂಟೆಗಳಲ್ಲಿ ಮೂವರು ಮಕ್ಕಳು ಸಾವನ್ನಪ್ಪಿವೆ (Three Children’s Death). ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಎಲ್ಲಾ ಮೂರು ಮಕ್ಕಳು ಒಂದೇ ಕುಟುಂಬದವರು ಆಗಿದ್ದಾರೆ. ಒಮ್ಮೆ ದಡಾರ ಬಂದರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ದಡಾರ ಕಾಯಿಲೆ ಲಕ್ಷಣಗಳ ಬಗ್ಗೆ ಸಂಪೂರ್ಣವಾಗಿ ಎಲ್ಲರೂ ತಿಳಿದಿರಬೇಕು. ಇದರಿಂದ ನೀವು ಸಕಾಲಿಕ ವೈದ್ಯಕೀಯ ಆರೈಕೆ ಪಡೆಯಬಹುದು. ದಡಾರ ರುಬೆಲ್ಲಾ ಕೂಡ ದಡಾರದ ಮತ್ತೊಂದು ಹೆಸರು ಆಗಿದೆ. ಮುಂಬೈನಲ್ಲಿ ದಡಾರ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿವೆ. ಹೀಗಾಗಿ ಇದರ ಹಿಂದಿನ ಕಾರಣ ತಿಳಿಯಲು ಕೇಂದ್ರ ಸರ್ಕಾರ ಬುಧವಾರ ತಂಡವನ್ನು ಕಳುಹಿಸಿದೆ.


  ದಡಾರ ರುಬೆಲ್ಲಾ ಕಾಯಿಲೆ ಮುಂಬೈನಲ್ಲಿ ಏಕೆ ಹರಡಿದೆ?


  ಕೇಂದ್ರ ತಂಡವು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ನವದೆಹಲಿ ಮತ್ತು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಮೂವರು ತಜ್ಞರನ್ನು ಹೊಂದಿದೆ. ಹಾಗೆಯೇ ಪುಣೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಯ ಮೂವರು ತಜ್ಞರೂ ಸಹ ತಂಡದಲ್ಲಿದ್ದಾರೆ. IDSP (NCDC) ಉಪ ನಿರ್ದೇಶಕ ಡಾ. ಅನುಭವ್ ಶ್ರೀವಾಸ್ತವ ಅವರು ಇದರ ನೇತೃತ್ವ ವಹಿಸಲಿದ್ದಾರೆ.


  ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಡಾರ ಕಾಯಿಲೆ ಅತ್ಯಂತ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾಗಿದೆ. ಕಡಿಮೆ ಸಮಯದಲ್ಲಿ 29 ಅಧಿಕೃತ ಪ್ರಕರಣಗಳು ದಾಖಲಾಗಿವೆ.


  ದಡಾರ ಲಸಿಕೆ ಪಡೆದ ನಂತರವೂ ಸೋಂಕು


  ಸುಮಾರು 50 ಪ್ರತಿಶತ ಮಕ್ಕಳಿಗೆ ದಡಾರ ಲಸಿಕೆ ನೀಡಲಾಗಿದೆ ಎಂದು ವರದಿ ಹೇಳಿದೆ. ಅದರಲ್ಲಿ ಕೆಲವು ಮಕ್ಕಳು 9 ತಿಂಗಳಿಗಿಂತ ಕಡಿಮೆ ವಯಸ್ಸಿನಲ್ಲೇ ಮೊದಲ ದಡಾರ ಲಸಿಕೆ ಪಡೆದಿವೆ. ಬಿಎಂಸಿ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಡಾ. ಮಂಗಳಾ ಗೋಮಾರೆ ಮಾತನಾಡಿ, ನಾವು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಜೊತೆ ದಡಾರ ಕಾಯಿಲೆ ಏಕಾಏಕಿ ಹೆಚ್ಚಿರುವ ಬಗ್ಗೆ ಸಂಶೋಧಿಸುತ್ತೇವೆ. ಮತ್ತು ದಡಾರ ವೈರಸ್ ಯಾಕೆ ಏಕಾಏಕಿ ವೈರಲ್ ಆಗುತ್ತಿದೆ ಎಂದು ತನಿಖೆ ಮಾಡಲಾಗುವುದು ಎಂದಿದ್ದಾರೆ.


  ದಡಾರ ಕಾಯಿಲೆಯ ಲಕ್ಷಣಗಳು


  ಸಿಡಿಸಿ ಪ್ರಕಾರ, ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕು ಆಗಿದೆ. ಸೋಂಕು ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು.


  ದಡಾರ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಂಕಿತ ಮಗುವಿನಲ್ಲಿ 2 ರಿಂದ 3 ದಿನಗಳ ನಂತರ, ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಬೆಳೆಯುತ್ತವೆ ಎಂದು ಸಿಡಿಸಿ ಹೇಳಿದೆ. ಕೆಂಪು-ಫ್ಲಾಟ್ ರಾಶ್ 3 ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರ ರಾಶಸ್ ಉಂಟಾಗುತ್ತದೆ.


  ದಡಾರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ


  ದಡಾರ ಕಾಯಿಲೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕುವುದು. ದಡಾರದಿಂದ ಮಕ್ಕಳನ್ನು ರಕ್ಷಿಸಲು, ಅವರಿಗೆ 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಏಕೆಂದರೆ ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹಾಗಾಗಿ ದಡಾರ ಸಂಭವಿಸಿದ ನಂತರ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯ.


  ದಡಾರ ಬಂದರೆ ಏನು ಮಾಡಬೇಕು?


  ಎನ್ ಎಚ್ ಎಸ್ ಪ್ರಕಾರ, ಮಗುವಿಗೆ ದಡಾರ ರೋಗ ನಿರ್ಣಯವಾದ ನಂತರ ವಿಶ್ರಾಂತಿ ನೀಡುವುದು, ಮಗುವನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು, ಒದ್ದೆ ಹತ್ತಿಯಿಂದ ಮಗುವಿ ದೇಹ ಸ್ವಚ್ಛಗೊಳಿಸುವುದು, ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು.  ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು.


  ದಡಾರ ಕಾಯಿಲೆ ಇದೊಂದು ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್‌ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ನಂತರ ಕೆಮ್ಮು ಅಥವಾ ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಸೋಂಕು ತಗುಲುತ್ತದೆ.

  Published by:renukadariyannavar
  First published: