Diabetes: ಇದ್ದಕ್ಕಿದ್ದಂತೆ ಸಣ್ಣಗಾಗೋದು ಮಧುಮೇಹದ ಲಕ್ಷಣ, ಡಯಾಬಿಟಿಸ್ ಬಗ್ಗೆ ಇಂಥಾ ಮತ್ತಷ್ಟು ವಿಚಾರ ಇಲ್ಲಿದೆ

Weight Loss in Diabetes: ನಿಮಗೆ ಮಧುಮೇಹ ಬಂದಿದ್ದರೆ ನಿಮ್ಮ ದೇಹದ ರಕ್ತದಲ್ಲಿನ ಗ್ಲೂಕೋಸ್ ಅನ್ನು ಸರಿಯಾಗಿ ಪ್ರಕ್ರಿಯೆಗೊಳ್ಳಲು ಸಾಧ್ಯವಾಗದೇ ಹೋದಾಗ, ನಿಮ್ಮ ದೇಹದಲ್ಲಿನ ಕೊಬ್ಬಿನಾಂಶ ಹಾಗೂ ಸೆಲ್ಸ್ಗಳನ್ನು ಗ್ಲೂಕೋಸ್ ಮಾದರಿಯಲ್ಲಿ ಬಳಕೆಯಾಗುತ್ತದೆ. ಈ ಕಾರಣದಿಂದ ಮಧುಮೇಹಿಗಳು ಹಠಾತ್ತನೇ ತೂಕ ಕಡಿಮೆಯಾಗಿಬಿಡುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Reason for Diabetes: ಇಂದು ಡಯಾಬಿಟೀಸ್ ಎನ್ನುವುದು ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಪ್ರತಿ ಮೂರು ವ್ಯಕ್ತಿಯಲ್ಲಿ (One in Three) ಒಬ್ಬರಿಗೆ ಡಯಾಬಿಟೀಸ್ ಕಂಡು ಬರುತ್ತಿದೆ ಎಂದು ಅಧ್ಯಯನ ಹೇಳುತ್ತಿದೆ. ಇಡೀ ವಿಶ್ವದಲ್ಲಿಯೇ ಭಾರತ ಡಯಬಿಟೀಸ್ ರಾಜಧಾನಿಯಾಗಿದೆ (Diabetes capital of the World). ಡಯಾಬಿಟೀಸ್ ನಮ್ಮ ಗಮನಕ್ಕೆ ಬಾರದೇ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇದರ ಪ್ರಾರಂಭಿಕ ಹಂತವೇ ತೂಕ ಕಳೆದುಕೊಳ್ಳುವುದು (Loss of Weight), ಅನಿರೀಕ್ಷಿತವಾಗಿ ನಿಮ್ಮ ತೂಕ ಇಳಿಯುತ್ತಿದ್ದರೆ ಅದಕ್ಕೆ ಕಾರಣ ಮಧುಮೇಹವಾಗಿರಬಹುದು. ಈ ಲಕ್ಷಣವನ್ನು (Symptoms) ಕಡೆಗಣಿಸಿದರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆ ಇಂಟರ್ನಲ್ ಮೆಡಿಸನ್ ಹಿರಿಯ ಸಲಹೆಗಾರ ಡಾ. ಆದಿತ್ಯ ಎಸ್.ಚೌತಿ.

  ಮಧುಮೇಹಿಗಳ ತೂಕ ಇಳಿಕೆಗೆ ಕಾರಣವೇನು?

  ನಮ್ಮ ಮೆದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಧುಮೇಹ ಎನ್ನಲಾಗುತ್ತದೆ. ಒಮ್ಮೆ ನಿಮಗೆ ಮಧುಮೇಹ ಬಂದಿದ್ದರೆ ನಿಮ್ಮ ದೇಹದ ರಕ್ತದಲ್ಲಿನ ಗ್ಲೂಕೋಸ್ ಅನ್ನು ಸರಿಯಾಗಿ ಪ್ರಕ್ರಿಯೆಗೊಳ್ಳಲು ಸಾಧ್ಯವಾಗದೇ ಹೋದಾಗ, ನಿಮ್ಮ ದೇಹದಲ್ಲಿನ ಕೊಬ್ಬಿನಾಂಶ ಹಾಗೂ ಸೆಲ್ಸ್ಗಳನ್ನು ಗ್ಲೂಕೋಸ್ ಮಾದರಿಯಲ್ಲಿ ಬಳಕೆಯಾಗುತ್ತದೆ. ಈ ಕಾರಣದಿಂದ ಮಧುಮೇಹಿಗಳು ಹಠಾತ್ತನೇ ತೂಕ ಕಡಿಮೆಯಾಗಿಬಿಡುತ್ತಾರೆ.

  ಮಧುಮೇಹದ ಲಕ್ಷಣಗಳು ಇವು

  ತೂಕ ಕಡಿಮೆಗೊಳ್ಳುವುದು, ಮೂತ್ರವಿಸರ್ಜನೆ ಹೆಚ್ಚು, ಹೆಚ್ಚು ಹಸಿವಾಗುವಿಕೆ, ಸುಸ್ತು, ಗಾಯವಾದರೆ ಮಾಗದೇ ಇರುವುದು, ದೃಷ್ಟಿ ಮಂಜಾಗುವುದು, ತ್ವಚೆಯ ಬಣ್ಣ ಬದಲು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಯಾವ ಲಕ್ಷಣವಾದರೂ ನಿಮಗೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಇಲ್ಲವಾದರೆ, ಮೆದುಳು ಸ್ಟ್ರೋಕ್, ಹೃದಯ ಸ್ಥಂಭನ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗಬಹುದು.

  ಇದನ್ನೂ ಓದಿ: ಗ್ಲೂಕೋಸ್ ಮಟ್ಟವನ್ನು ಪತ್ತೆಹಚ್ಚಲು, ಬೆವರು ಉಪಯೋಗಿಸುವ ಸಾಧನವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು!

  ತೂಕ ನಿಯಂತ್ರಣದಲ್ಲಿಡಿ

  ಮಧುಮೇಹದ ಚಿಕಿತ್ಸೆ ಪಡೆದ ಬಳಿಕ ನೀವು ಕಳೆದುಕೊಂಡ ತೂಕಕ್ಕಿಂತ ಹೆಚ್ಚು ತೂಕ ಮರುಕಳುಹಿಸಲಿದೆ. ಆದರೆ, ಇದು ತೂಕ ಕಳೆದುಕೊಳ್ಳುವುದಕ್ಕಿಂತಲೂ ಅಪಾಯ. ದೇಹದ ತೂಕ ನಿಯಂತ್ರಣದಲ್ಲಿದ್ದಾಗ ಮಾತ್ರ ಡಯಾಬಿಟೀಸ್‌ನನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ. ತೂಕ ಹೆಚ್ಚಾದಂತೆ ಇತರೆ ಆರೋಗ್ಯ ಸಮಸ್ಯೆ ಕಾಡಬಹುದು. ಅದರಲ್ಲೂ ಹೃದಯಾಘಾತ, ಮೆದುಳು ಸ್ಟ್ರೋಕ್ ಆಗಬಹುದು.

  ಈ ಆಹಾರ ಸೇವಿಸಿ

  ಮಧುಮೇಹಿಗಳ ಆಹಾರ ಕ್ರಮ ಉತ್ತಮವಾಗಿರಬೇಕು. ಹೆಚ್ಚು ಪ್ರೋಟಿನ್ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇರಿಸಬೇಕು. ಸಾಧ್ಯವಾದಷ್ಟು ಪ್ರಿಸರ್ವೇಟಿವ್ ಬಳಸಿರುವ, ಜಂಕ್ ಫುಡ್‌ಗಳಿಂದ ದೂರವಿರಿ. ಜೊತೆಗೆ ಸಕ್ಕರೆ ಅಂಶವಿರುವ ಆಹಾರವನ್ನು ಸಂಪೂರ್ಣ ನಿಲ್ಲಿಸುವುದು ಒಳಿತು. ದಿನದ ಮೂರು ಹೊತ್ತು ಅನ್ನ ತಿನ್ನುತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ದಿನದಲ್ಲಿ ಮಧ್ಯಾಹ್ನ ಮಾತ್ರ ಅನ್ನ ಸೇವಿಸಬಹುದು. ರಾತ್ರಿ ಹಾಗು ಬೆಳಗ್ಗೆ ಅನ್ನವನ್ನು ನಿಯಂತ್ರಿಸಿ.

  ಇದನ್ನೂ ಓದಿ: Diabetes: ಮನೆಯಲ್ಲಿಯೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳುತ್ತೀರಾ? ಈ ತಪ್ಪುಗಳನ್ನು ಮಾಡಬೇಡಿ..!

  ಮಧುಮೇಹಿಗಳು ಈ ಹಣ್ಣು ತಿನ್ನಲೇ ಬಾರದು

  ಹಣ್ಣು ದೇಹಕ್ಕೆ ಒಳ್ಳೆಯದೇ, ಆದರೆ ಮಧುಮೇಹಿಗಳು ಎಲ್ಲಾ ಬಗೆಯ ಹಣ್ಣು ಸೇವಿಸುವುದು ಅಪಾಯ. ಮಾವು, ಸೀತಾಫಲ, ಸಪೋಟ, ಬಾಳೆಹಣ್ಣು ಸೇರಿದಂತ ಹೆಚ್ಚು ಸಿಹಿ ಇರುವ ಹಣ್ಣನ್ನು ಸೇವಿಸಬಾರದು. ಇದರ ಬದಲಿಗೆ ಆಪಲ್, ಕಿತ್ತಳೆ, ಕಿವಿ ಹಣ್ಣು, ಕರ್ಬೂಜ ಹಣ್ಣನ್ನು ಸೇವಿಸಬಹುದು.

  ಮಧುಮೇಹ ವಂಶಪಾರಂಪರಿಕ ಗಿಫ್ಟ್

  ಮಧುಮೇಹ ಎನ್ನುವುದು ಕೇವಲ ಆಹಾರ ಪಥ್ಯದಿಂದ ಮಾತ್ರ ಬರುವುದಿಲ್ಲ. ನಿಮ್ಮ ಕುಟುಂಬದಲ್ಲಿ ಮಧುಮೇಹ ಹಿನ್ನೆಲೆ ಇದ್ದರೆ, ನಿಮಗೂ ಬರಬಹುದು. ಹೀಗಾಗಿ ಸಾಧ್ಯವಾದಷ್ಟು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ. ವ್ಯಾಯಾಮ ಅತಿ ಮುಖ್ಯವಾದ್ದು. ಮಧುಮೇಹವನ್ನು ನಿಯಂತ್ರಣದಲ್ಲಿ ಇಡದೇ ಹೋದರೆ ಈ ಪರಂಪರೆ ಮುಂದುವರೆಯುತ್ತಾ ಹೋಗಬಹುದು.
  Published by:Soumya KN
  First published: