Self Confidence: ಇಂತಹ ನಡವಳಿಕೆಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬದುಕು ನಡೆಸಬೇಕೆಂದರೆ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ಇರಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸವು ಬಹಳ ಅಗತ್ಯ. ಆದರೆ ನಿಮ್ಮಲ್ಲಿನ ಆತ್ಮವಿಶ್ವಾಸ ಕಡಿಮೆಯಾಗಲು ಕೆಲವೊಂದು ನಡವಳಿಕೆಗಳೇ ಕಾರಣವಾಗಿರುತ್ತದೆ. ಹಾಗಿದ್ರೆ ಆ ನಡವಳಿಕೆಗಳು ಯಾವುದು ಎಂಬುದು ಈ ಲೇಖನದಲ್ಲಿದೆ ಓದಿ.

ಮುಂದೆ ಓದಿ ...
  • Share this:

ಬದುಕು (Life) ನಡೆಸಬೇಕೆಂದರೆ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ಇರಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸವು (Confidence) ಬಹಳ ಅಗತ್ಯ. ಆತ್ಮವಿಶ್ವಾಸ ಇದ್ದರೆ ಮಾತ್ರ ತಮ್ಮನ್ನು ತಾವು ನಂಬಲು ಸಾಧ್ಯವಾಗುತ್ತದೆ. ತಮ್ಮ ಸಾಮರ್ಥ್ಯಗಳನ್ನು ನಂಬಲು, ಸವಾಲುಗಳನ್ನು ಸ್ವೀಕರಿಸಲು, ಅದನ್ನು ಸಾಧಿಸಲು, ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಆದರೆ ಜೀವನದ ಕೆಲವು ಘಟ್ಟಗಳಲ್ಲಿ ನಮ್ಮ ಆತ್ಮವಿಶ್ವಾಸ ಕೈಕೊಡುತ್ತದೆ. ಹೌದು, ನಮ್ಮ ಸುತ್ತಮುತ್ತ ನಡೆಯುವಂತಹ ಕೆಲವಷ್ಟು ಅಂಶಗಳು ಅಥವಾ ನಡವಳಿಕೆಗಳು ಈ ಆತ್ಮವಿಶ್ವಾಸಕ್ಕೆ ಅಡ್ಡಿಯಾಗುತ್ತವೆ. ಹೀಗೆ ಆತ್ಮವಿಶ್ವಾಸ ಕುಗ್ಗಿದಾಗ ಜೀವನವನ್ನು ಎದುರಿಸುವುದು ಸುಲಭವಲ್ಲ. ಇದರಿಂದ ಒಬ್ಬ ವ್ಯಕ್ತಿಗೆ ತನ್ನ ಸಾಮರ್ಥ್ಯಗಳ ಬಗ್ಗೆಯೇ ಅನುಮಾನವನ್ನು ಉಂಟಾಗಬಹುದು.


ಅವರ ಬಗ್ಗೆಯೇ ಅವರು ನಂಬಿಕೆ ಕಳೆದುಕೊಳ್ಳಬಹುದು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನ ಅಗತ್ಯ.


ಕ್ಲಿನಿಕಲ್ ನ್ಯೂರೋಸೈಕಾಲಜಿಸ್ಟ್ ನವಲ್ ಮುಸ್ತಫಾ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುವ ನಡವಳಿಕೆಗಳ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ: ಸೊಳ್ಳೆ ಕಚ್ಚೋದ್ರಿಂದ ತುರಿಕೆ, ದಪ್ಪ ಏಕೆ ಆಗುತ್ತದೆ? ಇದಕ್ಕೂ ಒಂದು ಕಾರಣವಿದೆ


ಈ ನಡವಳಿಕೆಗಳು ಆತ್ಮವಿಶ್ವಾಸ ಕುಗ್ಗಲು ಕಾರಣವಾಗುತ್ತವೆ


1. ನಿಮ್ಮ ಬಗ್ಗೆ ನೀವೇ ನಕಾರಾತ್ಮಕವಾಗಿ ಮಾತನಾಡಿಕೊಳ್ಳುವುದು: ಕೆಲವೊಮ್ಮೆ ನಮ್ಮಷ್ಟಕ್ಕೆ ನಾವೇ ನಕಾರಾತ್ಮಕವಾಗಿ ಮಾತನಾಡುತ್ತೇವೆ. ಉದಾಹರಣೆಗೆ 'ನಾನು ಸಾಕಷ್ಟು ಒಳ್ಳೆಯವನಲ್ಲ', 'ನಾನು ಇದನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ' ಅಥವಾ 'ನಾನು ಇದನ್ನು ಮಾಡಲು ಸಾಧ್ಯವಿಲ್ಲ' ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಇಂತಹ ನಕಾರಾತ್ಮಕ ಸ್ವಯಂ-ಚರ್ಚೆಯು ನಮ್ಮಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಮ್ಮನ್ನು ಮತ್ತು ನಮ್ಮ ಸಾಮರ್ಥ್ಯಗಳನ್ನು ಅನುಮಾನಿಸಲು ಕಾರಣವಾಗುತ್ತದೆ. ಬದಲಾಗಿ, ನೀವು ತಪ್ಪುಗಳನ್ನು ಮಾಡಿದಾಗ ಅಥವಾ ನಿಮಗೆ ನೀವೇ ಕುಗ್ಗಿದಂತೆ ಭಾಸವಾದಾಗ ನಿಮ್ಮನ್ನು ನೀವು ಹುರಿದುಂಬಿಸಲು ಯತ್ನಿಸಿ.


2. ಯಾವಾಗಲೂ ವಿಷಯಗಳು ಪರಿಪೂರ್ಣವಾಗಿರಬೇಕು ಎಂದು ಬಯಸುವುದು: ನಾವು ನಮಗಾಗಿ ಅಸಾಧ್ಯವಾದ ಉನ್ನತ ಮಾನದಂಡಗಳನ್ನು ಹೊಂದಿಸಿದಾಗ ಇಂತಹ ಭಾವನೆ ಮೂಡಬಹುದು. ನಾವು ಎಂದಿಗೂ ಅದನ್ನು ಸಾಧಿಸಲು ಸಾಧ್ಯವಿಲ್ಲ ಎನಿಸಬಹುದು. ಯಾವಾಗಲೂ ವಿಷಯಗಳು ಪರಿಪೂರ್ಣವಾಗಿರಬೇಕು ಎಂದುಕೊಂಡು ಅದು ಸಾಧ್ಯವಾಗದಿದ್ದಾಗ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅಪನಂಬಿಕೆ ಉಂಟಾಗಬಹುದು.


ನಮ್ಮ ಸ್ವಂತ ನಿರೀಕ್ಷೆಗಳನ್ನು ಪೂರೈಸಲು ನಿರಂತರವಾಗಿ ವಿಫಲರಾಗುತ್ತಿದ್ದೇವೆ ಎಂಬ ಭಾವನೆ ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.


3. ನಿಮ್ಮನ್ನು ಇತರರಿಗೆ ಹೋಲಿಸಿಕೊಳ್ಳುವುದು: ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿದಾಗ ಕೀಳರಿಮೆ ಉಂಟಾಗಬಹುದು. ಕೆಲವೊಮ್ಮೆ ನಾವು ಇತರ ಜನರಂತೆ ಉತ್ತಮವಾಗಿಲ್ಲ ಎಂದು ಅನಿಸಬಹುದು. ಇದು ನಮ್ಮ ಬಗ್ಗೆ ನಮಗೇ ಕೀಳು ಭಾವನೆಯನ್ನು ಉಂಟುಮಾಡುವ ಮೂಲಕ ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.


ಸಾಂದರ್ಭಿಕ ಚಿತ್ರ


4. ಪ್ರಯತ್ನಿಸದೇ ಇರುವುದು: ನಾವು ವಿಫಲಗೊಳ್ಳುವ ಭಯದಲ್ಲಿದ್ದಾಗ ಪ್ರಯತ್ನಿಸಲು ಭಯಪಡಬಹುದು. ಹೊಸ ವಿಷಯಗಳನ್ನು ಪ್ರಯತ್ನಿಸುವುದಕ್ಕೆ ಹಿಂದೇಟು ಹಾಕಬಹುದು.


ಸವಾಲುಗಳನ್ನು ನಿಭಾಯಿಸಲು ಅಥವಾ ನಮ್ಮ ಗುರಿಗಳನ್ನು ಸಾಧಿಸಲು ನಾವು ಸಮರ್ಥರಲ್ಲ ಎಂಬ ಭಾವನೆ ಮೂಡಿಸುವ ಮೂಲಕ ಇದು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.




5. ನಕಾರಾತ್ಮಕ ಜನರು ನಿಮ್ಮನ್ನು ಸುತ್ತುವರೆದಿರುವುದು : ಇತರರು ಟೀಕಿಸಿದಾಗ ಅಥವಾ ನಮ್ಮ ಬಗ್ಗೆ ಕೀಳಾಗಿ ಮಾತನಾಡಿದಾಗ ಅದು ನಮ್ಮ ಸಾಮರ್ಥ್ಯಗಳನ್ನು ಅನುಮಾನಿಸುವಂತೆ ಮಾಡುತ್ತದೆ.


ಇದರಿಂದಾಗಿ ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ನಮಗೆ ಬೆಲೆಯೇ ಇಲ್ಲ, ಗೌರವವೇ ಇಲ್ಲ ಎಂದು ಭಾವಿಸುವಂತೆ ಮಾಡಬಹುದು.


6. ಉತ್ತಮ ಬೆಂಬಲ ವ್ಯವಸ್ಥೆಯನ್ನು ಹೊಂದಿಲ್ಲದಿರುವುದು: ನಾವು ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳ ಬೆಂಬಲ ನೆಟ್‌ವರ್ಕ್ಅನ್ನು ಹೊಂದಿಲ್ಲದಿದ್ದರೆ ಅದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.


ನಮ್ಮದೇ ತೊಂದರೆಗಳನ್ನು, ಸಮಸ್ಯೆಗಳನ್ನು ಎದುರಿಸಲು ಸಮರ್ಥರಲ್ಲ ಎಂಬ ಭಾವನೆ ಮೂಡಿಸುವ ಮೂಲಕ ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.

top videos
    First published: