• Home
  • »
  • News
  • »
  • lifestyle
  • »
  • Pregnancy: ಹೆರಿಗೆ ಬಳಿಕ ಶಾಶ್ವತವಾಗಿ ಬದಲಾಗುತ್ತೆ ಸ್ತ್ರೀ ಮೂಳೆಗಳು: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ!

Pregnancy: ಹೆರಿಗೆ ಬಳಿಕ ಶಾಶ್ವತವಾಗಿ ಬದಲಾಗುತ್ತೆ ಸ್ತ್ರೀ ಮೂಳೆಗಳು: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ!

ಮಾನವಶಾಸ್ತ್ರಜ್ಞರ ತಂಡವು ಇತ್ತೀಚೆಗೆ ನಡೆಸಿದ ಸಂಶೋಧನೆಯು ಮಗುವಿನ ಪ್ರಸವದ ನಂತರ ಮಹಿಳೆಯ ಮೂಳೆಗಳಲ್ಲಾಗುವ ಬದಲಾವಣೆಯ ಬಗ್ಗೆ ತಿಳಿಸಿದ್ದು, ಸಂತಾನೋತ್ಪತ್ತಿ ಪ್ರಕ್ರಿಯೆಯು ಹೆಣ್ಣಿನ ದೇಹದಲ್ಲಿರುವ ಮೂಳೆಗಳನ್ನು ಶಾಶ್ವತವಾಗಿ ಮಾರ್ಪಡಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ.

ಮಾನವಶಾಸ್ತ್ರಜ್ಞರ ತಂಡವು ಇತ್ತೀಚೆಗೆ ನಡೆಸಿದ ಸಂಶೋಧನೆಯು ಮಗುವಿನ ಪ್ರಸವದ ನಂತರ ಮಹಿಳೆಯ ಮೂಳೆಗಳಲ್ಲಾಗುವ ಬದಲಾವಣೆಯ ಬಗ್ಗೆ ತಿಳಿಸಿದ್ದು, ಸಂತಾನೋತ್ಪತ್ತಿ ಪ್ರಕ್ರಿಯೆಯು ಹೆಣ್ಣಿನ ದೇಹದಲ್ಲಿರುವ ಮೂಳೆಗಳನ್ನು ಶಾಶ್ವತವಾಗಿ ಮಾರ್ಪಡಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ.

ಮಾನವಶಾಸ್ತ್ರಜ್ಞರ ತಂಡವು ಇತ್ತೀಚೆಗೆ ನಡೆಸಿದ ಸಂಶೋಧನೆಯು ಮಗುವಿನ ಪ್ರಸವದ ನಂತರ ಮಹಿಳೆಯ ಮೂಳೆಗಳಲ್ಲಾಗುವ ಬದಲಾವಣೆಯ ಬಗ್ಗೆ ತಿಳಿಸಿದ್ದು, ಸಂತಾನೋತ್ಪತ್ತಿ ಪ್ರಕ್ರಿಯೆಯು ಹೆಣ್ಣಿನ ದೇಹದಲ್ಲಿರುವ ಮೂಳೆಗಳನ್ನು ಶಾಶ್ವತವಾಗಿ ಮಾರ್ಪಡಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ.

  • Share this:

    ಹೆಣ್ಣು ಮಗುವಿಗೆ ಜನ್ಮನೀಡಿದ ನಂತರ ಆಕೆಯ ದೇಹಲ್ಲಾಗುವ ಬದಲಾವಣೆಗಳು ಹಾಗೂ ಆಕೆಯ ಮೂಳೆಗಳಲ್ಲಾಗುವ ಶಾಶ್ವತ ಪರಿವರ್ತನೆಗಳು ಕುರಿತು ಹೆಚ್ಚಿನವರು ತಿಳಿದಿಲ್ಲ. ಏಕೆಂದರೆ ಮಾನವಶಾಸ್ತ್ರಜ್ಞರ ತಂಡವು ಇತ್ತೀಚೆಗೆ ನಡೆಸಿದ ಸಂಶೋಧನೆಯು ಮಗುವಿನ ಪ್ರಸವದ ನಂತರ ಮಹಿಳೆಯ ಮೂಳೆಗಳಲ್ಲಾಗುವ ಬದಲಾವಣೆಯ ಬಗ್ಗೆ ತಿಳಿಸಿದ್ದು, ಸಂತಾನೋತ್ಪತ್ತಿ ಪ್ರಕ್ರಿಯೆಯು ಹೆಣ್ಣಿನ ದೇಹದಲ್ಲಿರುವ ಮೂಳೆಗಳನ್ನು ಶಾಶ್ವತವಾಗಿ ಮಾರ್ಪಡಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ.


    ಸಂತಾನೋತ್ಪತ್ತಿಯ ನಂತರ ಹೆಣ್ಣಿನ ಮೂಳೆಗಳಲ್ಲಾಗುವ ಬದಲಾವಣೆಗಳೇನು


    ಈ ಆವಿಷ್ಕಾರಗಳನ್ನು ಜರ್ನಲ್ ಪ್ಲಸ್ ಒನ್‌ನಲ್ಲಿ ಪ್ರಕಟಿಸಲಾಗಿದ್ದು ಆಶ್ಚರ್ಯಕರ ರೀತಿಯಲ್ಲಿ ಈ ಸಂಶೋಧನೆಗಳನ್ನು ತಜ್ಞರು ನಡೆಸಿದ್ದಾರೆ. ಸಂಶೋಧಕರು ಸಂತಾನೋತ್ಪತ್ತಿ ಕ್ರಿಯೆಯ ನಂತರ ಹೆಣ್ಣಿನ ಮೂಳೆಗಳಲ್ಲಾಗುವ ಬದಲಾವಣೆಗಳ ಬಗ್ಗೆ ಪುರಾವೆ ಸಹಿತ ಮಾಹಿತಿಗಳನ್ನು ಒದಗಿಸಿದ್ದು, ಜೀವನದ ಘಟನೆಗಳೊಂದಿಗೆ ಅಸ್ಥಿಪಂಜರ ಕೂಡ ಬದಲಾಗುವ ಕ್ರಿಯಾತ್ಮಕ ಅಂಗವಾಗಿದ್ದು, ಇದು ಸ್ಥಿರವಾದ ಅಂಗವಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಅಧ್ಯಯನ ಕೈಗೊಂಡಿರುವ ಪಾವೊಲಾ ಸೆರಿಟೊ ಸಂತಾನೋತ್ಪತ್ತಿ ಕ್ರಿಯೆಯ ನಂತರ ಮಹಿಳೆಯರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಸಾಂದ್ರತೆಗಳು ಕಡಿಮೆ ಎಂದು ತಿಳಿಸಿದ್ದಾರೆ. ಮಗುವಿಗೆ ಜನ್ಮನೀಡುವುದು ಹಾಗೂ ಮಗುವಿಗೆ ಹಾಲುಣಿಸುವ ಪ್ರಕ್ರಿಯೆಗೆ ಈ ಬದಲಾವಣೆಗಳು ಸಂಬಂಧ ಹೊಂದಿವೆ.


    ಇದನ್ನೂ ಓದಿ: Cancer: 36 ವರ್ಷದಲ್ಲಿ 12 ಬಾರಿ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ; ಸಂಶೋಧನೆ ನಡೆಸಿದವರಿಗೆ ಕಾದಿತ್ತು ಅಚ್ಚರಿ!


    ಮೂಳೆಯು ಅಸ್ಥಿಪಂಜರದ ಸ್ಥಿರ ಹಾಗೂ ಮೃತ ಭಾಗವಲ್ಲ


    ಇತರ ಅಧ್ಯಯನಗಳು ತಿಳಿಸಿರುವಂತೆ ಮೂಳೆಗಳ ಸಾಮರ್ಥ್ಯಕ್ಕೆ ಹಾಗೂ ಬಲಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅಗತ್ಯವೆಂದು ತೋರಿಸಿದ್ದರೂ, ಹೊಸ ಸಂಶೋಧನೆಗಳ ಪ್ರಕಾರ ಸಸ್ತನಿಗಳು ಅಥವಾ ಮಾನವರಿಗೆ ಒಟ್ಟಾರೆ ಆರೋಗ್ಯದ ಪರಿಣಾಮಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದ್ದು ಮೂಳೆಗಳ ಕ್ರಿಯಾತ್ಮಕ ಸ್ವಭಾವವನ್ನು ವಿವರಿಸುತ್ತದೆ ಎಂದು ತಿಳಿಸಿದ್ದಾರೆ. ಮಾನವಶಾಸ್ತ್ರಜ್ಞ ಶಾರಾ ಬೈಲಿ ಹೇಳುವಂತೆ ಮೂಳೆಯು ಅಸ್ಥಿಪಂಜರದ ಸ್ಥಿರ ಹಾಗೂ ಮೃತ ಭಾಗವಲ್ಲ ಎಂದು ಹೇಳಿದ್ದಾರೆ.


    ಮೂಳೆಗಳು ನಿರಂತರವಾಗಿ ಸರಿಹೊಂದುತ್ತದೆ ಹಾಗೂ ಶಾರೀರಿಕ ಪ್ರಕ್ರಿಯೆಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಪ್ಲಸ್ ಒನ್ ಜರ್ನಲ್‌ನಲ್ಲಿನ ಅಧ್ಯಯನದ ಲೇಖಕರು ತಿಳಿಸಿದ್ದಾರೆ. ಋತುಬಂಧವು ಸ್ತ್ರೀಯರ ಎಲುಬುಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಬಹಳ ಹಿಂದಿನಿಂದಲೂ ಸ್ಥಾಪಿತವಾಗಿರುವ ಅಧ್ಯಯನವಾಗಿದೆ. ಸಂತಾನೋತ್ಪತ್ತಿಯಂತಹ ಜೀವನ-ಚಕ್ರ ಘಟನೆಗಳು ಅಸ್ಥಿಪಂಜರದ ಸಂಯೋಜನೆಯ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದು ಕಡಿಮೆ ಸ್ಪಷ್ಟವಾಗಿದೆ. ಇದಕ್ಕಾಗಿ, ಪ್ರಬುದ್ಧ ಅಸ್ಥಿಪಂಜರದಲ್ಲಿ ಮೂಳೆಯ ಮುಖ್ಯ ವಿಧವಾದ ಪ್ರಾಥಮಿಕ ಲ್ಯಾಮೆಲ್ಲರ್ ಮೂಳೆಯನ್ನು ಸಂಶೋಧಕರು ಅಧ್ಯಯನ ಮಾಡಿದರು.


    ಸಸ್ತನಿಗಳ ಮೇಲೆ ಪ್ರಯೋಗ


    ಅಸ್ಥಿಪಂಜರದ ಈ ಅಂಶವನ್ನು ಪರೀಕ್ಷಿಸಲು ದೇಹದ ಸೂಕ್ತ ಭಾಗವಾಗಿದೆ ಏಕೆಂದರೆ ಅದು ಕಾಲಾನಂತರದಲ್ಲಿ ಬದಲಾಗುತ್ತದೆ ಮತ್ತು ಈ ಬದಲಾವಣೆಗಳು ಜೈವಿಕ ಗುರುತುಗಳ ಅವಶೇಷಗಳನ್ನು ಹಾಗೆಯೇ ಬಿಡುತ್ತದೆ. ಇದರಿಂದ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ವಿಜ್ಞಾನಿಗಳಿಗೆ ಅವಕಾಶ ಒದಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಪೋರ್ಟೊ ರಿಕೊದ ಸಬಾನಾ ಸೆಕಾ ಫೀಲ್ಟ್‌ನಲ್ಲಿ ವಾಸಿಸುತ್ತಿದ್ದ ಮತ್ತು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ ಹೆಣ್ಣು ಮತ್ತು ಗಂಡು ಸಸ್ತನಿಗಳ ಫೆಮೊರಾ ಅಥವಾ ತೊಡೆಯ ಮೂಳೆಗಳಲ್ಲಿನ ಲ್ಯಾಮೆಲ್ಲರ್ ಮೂಳೆಯ ಬೆಳವಣಿಗೆಯ ಪ್ರಮಾಣವನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಫೀಲ್ಡ್ ಸ್ಟೇಷನ್‌ನಲ್ಲಿರುವ ಪಶುವೈದ್ಯರು ಈ ಸಸ್ತನಿಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮಾಹಿತಿಯ ಕುರಿತು ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ದಾಖಲಿಸಿದ್ದಾರೆ.


    ಮೂಳೆಗಳಲ್ಲಿ ಬದಲಾವಣೆಯಾಗಲು ಕಾರಣಗಳೇನು?


    ಸಸ್ತನಿಗಳ ಮೂಳೆಗಳಲ್ಲಿನ ಕ್ಯಾಲ್ಸಿಯಂ, ರಂಜಕ, ಆಮ್ಲಜನಕ, ಮೆಗ್ನೀಸಿಯಮ್ ಮತ್ತು ಸೋಡಿಯಂ ಸಾಂದ್ರತೆಗಳಲ್ಲಿನ ಬದಲಾವಣೆಗಳನ್ನು ತಿಳಿದುಕೊಳ್ಳಲು ಅಧ್ಯಯನಕಾರರು ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಮತ್ತು ಶಕ್ತಿ-ಪ್ರಸರಣ ವಿಶ್ಲೇಷಣೆಯನ್ನು ಬಳಸಿದ್ದಾರೆ. ಈ ಅಧ್ಯಯನದಿಂದ ದೊರೆತ ಫಲಿತಾಂಶಗಳು ಪ್ರಸವದ ನಂತರ ಸ್ತ್ರೀಯರಲ್ಲಿ ಕೆಲವು ಅಂಶಗಳಲ್ಲಿ ವಿಭಿನ್ನ ಸಾಂದ್ರತೆಯನ್ನು ತೋರಿಸಿದೆ. ಇದಕ್ಕೆ ಕಾರಣ ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣಿನ ಮೂಳೆಗಳಲ್ಲಿ ಕ್ಯಾಲ್ಸಿಯಂ ಹಾಗೂ ರಂಜಕ ಕಡಿಮೆಯಾಗುವುದಾಗಿದೆ.

    Published by:Precilla Olivia Dias
    First published: