Walking: ಪ್ರತಿದಿನ 10 ಸಾವಿರ ಹೆಜ್ಜೆ ನಡೆದರೆ ಈ ಕಾಯಿಲೆಗಳಿಂದ ದೂರವಿರಬಹುದು ಅಂತಿದೆ ಅಧ್ಯಯನ!

ನಮ್ಮ ಅನೇಕ ಆರೋಗ್ಯ ಪ್ರಯೋಜನಗಳಿಗಾಗಿ ಜನರು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವದನ್ನು ತಮ್ಮ ದೈನಂದಿನ ಆರೋಗ್ಯ ಗುರಿಯನ್ನಾಗಿಸಿಕೊಳ್ಳಬಹುದು. ಅದರ ಜೊತೆಗೆ ವೇಗವಾಗಿ ನಡೆಯುವುದನ್ನು ಗುರಿಯನ್ನಾಗಿಸಿ ಎಂದು ಸಿಡ್ನಿಯ ಚಾರ್ಲ್ಸ್ ಪರ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧನಾ ಸಹ-ಮುಖ್ಯ ಲೇಖಕ ಡಾ.ಮ್ಯಾಥ್ಯೂ ಅಹ್ಮದಿ ಅವರು ತಿಳಿಸಿದ್ದಾರೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರು ದಿನವೊದಕ್ಕೆ 10,000 ಹೆಜ್ಜೆಗಳನ್ನು ನಡೆಯುವುದರಿಂದ ಬುದ್ಧಿಮಾಂದ್ಯತೆ (Dementia), ಹೃದ್ರೋಗ (heart disease), ಕ್ಯಾನ್ಸರ್ (Cancer) ಮತ್ತು ಮರಣದ ಅಪಾಯವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದ್ದಾರೆ. ಗಾಳಿ ವಾಕ್‌ನಂತಹ ವೇಗದ ನಡಿಗೆಯ (Walking) ವೇಗವು ಅನೇಕ ಪ್ರಯೋಜನಗಳನ್ನು ತೋರಿಸಿದೆ. ಪ್ರಮುಖ ನಿಯತಕಾಲಿಕೆಗಳಾದ JAMA ಇಂಟರ್ನಲ್ ಮೆಡಿಸಿನ್ ಮತ್ತು JAMA ನ್ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನಗಳು, ಫಿಟ್‌ನೆಸ್‌ ಬ್ಯಾಂಡ್‌ (Fitness band) ಧರಿಸಿ ಟ್ರ್ಯಾಕರ್‌ಗಳೊಂದಿಗೆ 78, 500 ವಯಸ್ಕರನ್ನು ಮೇಲ್ವಿಚಾರಣೆ ಮಾಡಿದೆ. ಇದು ಆರೋಗ್ಯದ (Health) ಫಲಿತಾಂಶಗಳಿಗೆ ಸಂಬಂಧಿಸಿದಂತೆ ವಾಕ್‌ ಮಾಡುವ ಸ್ಟೆಪ್ಸ್‌ಗಳ ಸಂಖ್ಯೆಯನ್ನು ವಸ್ತುನಿಷ್ಠವಾಗಿ ಪತ್ತೆಹಚ್ಚಲು ಅತಿದೊಡ್ಡ ಅಧ್ಯಯನವಾಗಿದೆ.

10,000 ಹೆಜ್ಜೆ ನಡೆಯುವುದು ಎಷ್ಟು ಮುಖ್ಯ
"ನಮ್ಮ ಅನೇಕ ಆರೋಗ್ಯ ಪ್ರಯೋಜನಗಳಿಗಾಗಿ ಜನರು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವದನ್ನು ತಮ್ಮ ದೈನಂದಿನ ಆರೋಗ್ಯ ಗುರಿಯನ್ನಾಗಿಸಿಕೊಳ್ಳಬಹುದು. ಅದರ ಜೊತೆಗೆ ವೇಗವಾಗಿ ನಡೆಯುವುದನ್ನು ಗುರಿಯನ್ನಾಗಿಸಿ" ಎಂದು ಸಿಡ್ನಿಯ ಚಾರ್ಲ್ಸ್ ಪರ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧನಾ ಸಹ-ಮುಖ್ಯ ಲೇಖಕ ಡಾ.ಮ್ಯಾಥ್ಯೂ ಅಹ್ಮದಿ ಹೇಳಿದರು.

"ಕಡಿಮೆ ಸಕ್ರಿಯ ವ್ಯಕ್ತಿಗಳಿಗೆ, ನಮ್ಮ ಅಧ್ಯಯನವು ದಿನಕ್ಕೆ 3,800 ಹೆಜ್ಜೆಗಳಿಗಿಂತ ಹೆಚ್ಚು ಹೆಜ್ಜೆಗಳನ್ನು ನಡೆಯುವುದು ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆಗೊಳಿಸುವ ಶಕ್ತಿಯನ್ನು ಈ ವಾಕಿಂಗ್‌ ಹೊಂದಿದೆ ” ಎಂದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಸಹ-ಮುಖ್ಯ ಲೇಖಕ ಅಸೋಸಿಯೇಟ್ ಪ್ರೊಫೆಸರ್ ಮತ್ತು ಹಿರಿಯ ಸಂಶೋಧಕರಾದ ಬೋರ್ಜಾ ಡೆಲ್ ಪೊಜೊ ಕ್ರೂಜ್ ಹೇಳಿದರು..

ಈ ಅಧ್ಯಯನವನ್ನು ಹೇಗೆ ನಡೆಸಲಾಯಿತು?
ಈ ಅಧ್ಯಯನವನ್ನು 40 ರಿಂದ 79 ವರ್ಷ ವಯಸ್ಸಿನ 78,500 ಯುಕೆ ವಯಸ್ಕರ ಆರೋಗ್ಯದ ಫಲಿತಾಂಶಗಳೊಂದಿಗೆ 7 ವರ್ಷಗಳ ನಂತರ ಅವರು ನಡೆದಾಡಿರುವ ಹೆಜ್ಜೆಗಳ ಎಣಿಕೆ ಡೇಟಾವನ್ನು ಪರಿಶೀಲಿಸಿದಾಗ ಯುಕೆನ ಬಯೋಬ್ಯಾಂಕ್‌ನ ಡೇಟಾವು ಅಧ್ಯಯನ ನಡೆಸಲು ಪ್ರೇರಣೆ ಆಯಿತು. ಇದರಲ್ಲಿ ಭಾಗವಹಿಸುವವರು 7 ದಿನಗಳ ಅವಧಿಯಲ್ಲಿ ಅವರ ದೈಹಿಕ ಚಟುವಟಿಕೆಯನ್ನು ಅಳೆಯಲು ಅವರ ಕೈಗೆ ಫಿಟ್‌ನೆಸ್‌ ಬ್ಯಾಂಡ್‌ ಅನ್ನು ಧರಿಸಲು ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: Breast Cancer: ಆತಂಕ ಬೇಡ; ಈಗ ಇಂಜೆಕ್ಷನ್‌ ಮೂಲಕ ಗುಣಪಡಿಸಬಹುದು ಮಹಿಳೆಯರ ಸ್ತನ ಕ್ಯಾನ್ಸರ್

ಅವರ ಒಪ್ಪಿಗೆ ಮೇರೆಗೆ ಒಳರೋಗಿ ಆಸ್ಪತ್ರೆ, ಪ್ರಾಥಮಿಕ ಆರೈಕೆ ದಾಖಲೆಗಳು, ಕ್ಯಾನ್ಸರ್ ಮತ್ತು ಮರಣ ದಾಖಲಾತಿಗಳು ಸೇರಿದಂತೆ ಹಲವಾರು ಡೇಟಾ ಮೂಲಗಳು ಮತ್ತು ದಾಖಲಾತಿಗಳ ಮೂಲಕ ಭಾಗವಹಿಸುವವರ ಆರೋಗ್ಯ ದಾಖಲೆಗಳೊಂದಿಗೆ ಈ ಮಾಹಿತಿಯನ್ನು ಲಿಂಕ್ ಮಾಡಲಾಗಿದೆ.

ಅಧ್ಯಯನದ ಮೊದಲ ಎರಡು ವರ್ಷಗಳಲ್ಲಿ ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್ ಅಥವಾ ಬುದ್ಧಿಮಾಂದ್ಯತೆಯಿಂದ ಮುಕ್ತರಾದವರು ಮತ್ತು ಅಧ್ಯಯನದ ಮೊದಲ ಎರಡು ವರ್ಷಗಳಲ್ಲಿ ರೋಗದಿಂದ ಮುಕ್ತರಾಗಿರುವವರನ್ನು ಮಾತ್ರ ಅಂತಿಮ ಮೌಲ್ಯಮಾಪನದಲ್ಲಿ ಸೇರಿಸಲಾಗಿದೆ. ಗೊಂದಲ ಮಾಡಿಕೊಳ್ಳುವವರಿಗೆ ಅಂಕಿಅಂಶಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಅಧ್ಯಯನದಿಂದ ತಿಳಿದು ಬಂದಿರುವುದೇನು 
ಉದಾಹರಣೆಗೆ ಹೆಚ್ಚು ಹೆಜ್ಜೆಗಳನ್ನು ನಡೆಯುವ ಜನರು ಸಾಮಾನ್ಯವಾಗಿ ವೇಗವಾಗಿ ನಡೆಯುತ್ತಾರೆ. ಆದ್ದರಿಂದ ಅಧ್ಯಯನಗಳು ಅವಲೋಕನಾತ್ಮಕವಾಗಿವೆ ಎಂದು ಸಂಶೋಧಕರು ಗಮನಿಸುತ್ತಾರೆ. ಅಂದರೆ ಈ ಅಧ್ಯಯನಗಳು ದಿನಕ್ಕೆ 10000 ಹೆಜ್ಜೆಗಳನ್ನು ನಡೆಯುವುದರಿಂದ ಅಷ್ಟೆ ರೋಗಗಳಿಂದ ಮುಕ್ತಿ ಪಡೆಯುವುದಕ್ಕೆ ನೇರ ಕಾರಣವಾಗಿಲ್ಲ ಎಂದು ಕೂಡ ಅಧ್ಯಯನಗಳು ಹೇಳುತ್ತಿವೆ.

"ಅಧ್ಯಯನದಲ್ಲಿ ಭಾಗಿಯಾದವರು ತಮ್ಮ ಕೈಗೆ ಫಿಟ್‌ನೆಸ್‌ ಬ್ಯಾಂಡ್‌ ಅನ್ನು ಧರಿಸಿದ್ದರು. ಫಿಟ್‌ನೆಸ್‌ ಬ್ಯಾಂಡ್‌ ಅನ್ನು ಧರಿಸಿದ ಟ್ರ್ಯಾಕರ್‌ಗಳನ್ನು ಬಳಸಿ ನಡೆಸಿರುವ ಈ ಅಧ್ಯಯನಗಳಿಂದ ತಿಳಿದು ಬಂದ ಅತ್ಯಂತ ದೃಢವಾದ ಮಾಹಿತಿ ಎಂದರೆ ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಲು ಸಹಾಯಕಾರಿ ಆಗಿದೆ. ಅದರ ಜೊತೆಗೆ ವೇಗವಾಗಿ ನಡೆಯುವುದು ಕೂಡ ಹೆಚ್ಚು ಲಾಭಗಳನ್ನು ಗಳಿಸಲು ಸಹಾಯಕಾರಿ ಆಗಿದೆ” ಎಂದು ಡಾ. ಮ್ಯಾಥ್ಯೂ ಅಹ್ಮದಿ ಹೇಳಿದರು.

ಇದನ್ನೂ ಓದಿ: Blood Test: ರೋಗಲಕ್ಷಣಗಳಿಲ್ಲದೇ ಹಲವು ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುತ್ತಂತೆ ಈ ಹೊಸ ರಕ್ತ ಪರೀಕ್ಷೆ!

ಈ ಫಿಟ್‌ನೆಸ್‌ ಟ್ರ್ಯಾಕರ್‌ಗಳ ದೀರ್ಘಾವಧಿಯ ಬಳಕೆಯೊಂದಿಗೆ ಹೆಚ್ಚಿನ ಸಂಶೋಧನೆಯನ್ನು ಮುಂದುವರಿಸುವುದು ದಿನಾಲು ನಾವು ನಡೆಯುವ ಹೆಜ್ಜೆಗಳು ಹೇಗೆ ನಮ್ಮ ಆರೋಗ್ಯಕ್ಕೆ ನೇರವಾದ ಸಂಬಂಧ ಹೊಂದಿದೆ ಮತ್ತು ಆರೋಗ್ಯ ಪ್ರಯೋಜನಗಳ ಮೇಲೆ ಹೇಗೆ ಬೆಳಕು ಚೆಲ್ಲುತ್ತದೆ ಎಂಬುದಕ್ಕೆ ಈ ಹೆಚ್ಚಿನ ಅಧ್ಯಯನಗಳು ಸಹಾಯಕಾರಿಯಾಗಬಹುದು.
Published by:Ashwini Prabhu
First published: