Stroke: ಫ್ಲೂ ಲಸಿಕೆ ಪಡೆದುಕೊಂಡ್ರೆ ಸ್ಟ್ರೋಕ್‌ ಅಪಾಯ ಕಡಿಮೆಯಂತೆ: ಸಂಶೋಧನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫ್ಲೂ ಲಸಿಕೆ ಜ್ವರ, ಕೆಮ್ಮಿನಂತಹ ವೈರಸ್‌ ಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೇ ಮತ್ತೊಂದು ಅದ್ಭುತವನ್ನು ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆ ಮೂಲಕ ತಿಳಿದು ಬಂದಿದೆ. ಹೌದು, ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಫ್ಲೂ ಲಸಿಕೆಯು ಜನರಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.

ಮುಂದೆ ಓದಿ ...
  • Share this:

ಜ್ವರ, ನೆಗಡಿ, ಕೆಮ್ಮು, ತಲೆನೋವು ಸಾಮಾನ್ಯ ಕಾಯಿಲೆಗಳಾಗಿವೆ. ಆದರೆ ಈಗ ಕೋವಿಡ್‌ ಬಂದ ಮೇಲೆ ಈ ಸಾಮಾನ್ಯ ಕಾಯಿಲೆಗಳ (Diseases) ಉಲ್ಲೇಖ ಬೇರೆಯದ್ದೇ ಆಗಿದೆ. ಶಿಶುಗಳಿಂದ ಹಿಡಿದು ವಯೋವೃದ್ಧರನ್ನೂ ಹಿಂಡಿ ಹಿಪ್ಪೆ ಮಾಡುವ ಈ ಫ್ಲೂಗೆ (Flu) ಸಾಮಾನ್ಯವಾಗಿ ಲಸಿಕೆ ತೆಗೆದುಕೊಳ್ಳಲಾಗುತ್ತದೆ. ಜ್ವರಕ್ಕೆ ಕಾರಣವಾಗುವ ವೈರಸ್ ಅನ್ನು (Virus) ನಿಯಂತ್ರಿಸಲು ಪ್ಲೂ ಲಸಿಕೆಗಳನ್ನು ಆರೋಗ್ಯ ಇಲಾಖೆ ನೀಡುತ್ತದೆ. ಪ್ರತಿಕಾಯಗಳನ್ನು ಉತ್ಪಾದಿಸಲು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರೇರೇಪಿಸುವ ಮೂಲಕ ಫ್ಲೂ ಲಸಿಕೆ (Flu Vaccine) ಕಾರ್ಯನಿರ್ವಹಿಸುತ್ತದೆ. ಫ್ಲೂ ಲಸಿಕೆ ಜ್ವರ, ಕೆಮ್ಮಿನಂತಹ ವೈರಸ್‌ ಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೇ ಮತ್ತೊಂದು ಅದ್ಭುತವನ್ನು ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆ (Study) ಮೂಲಕ ತಿಳಿದು ಬಂದಿದೆ. 


ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಫ್ಲೂ ಲಸಿಕೆ
ಹೌದು, ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಫ್ಲೂ ಲಸಿಕೆಯು ಜನರಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ. "ಫ್ಲೂ ವೈರಸ್‌ ಉಂಟಾದ ಸಂದರ್ಭದಲ್ಲಿ ಪಾರ್ಶ್ವವಾಯು ತಗಲುವ ಅಪಾಯ ಹೆಚ್ಚಿರುತ್ತದೆ ಎಂದು ಅಧ್ಯಯನಗಳು ಈ ಹಿಂದೆ ಹೇಳಿವೆ. ಆದರೆ ಇದೇ ರೀತಿ ಫ್ಲೂ ಲಸಿಕೆಯನ್ನು ಪಡೆಯುವುದು ಪಾರ್ಶ್ವವಾಯು ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ ಎಂಬುವುದು ಇತ್ತೀಚಿನ ಸಂಶೋಧನೆಯಾಗಿದೆ" ಎಂದು ಅಧ್ಯಯನ ಲೇಖಕ ಫ್ರಾನ್ಸಿಸ್ಕೊ ​​ಜೆ ಡಿ ಅಬಾಜೊ, MD, MPH, PhD ಹೇಳಿದ್ದಾರೆ.


"ಫ್ಲೂ ಶಾಟ್ ತೆಗೆದುಕೊಂಡವರು ಪಾರ್ಶ್ವವಾಯುವಿನ ಕಡಿಮೆ ಅಪಾಯವನ್ನು ಎದುರಿಸುತ್ತಾರೆ ಎಂದು ಈ ಅಧ್ಯಯನವು ಸೂಚಿಸುತ್ತದೆ. ಇದು ಲಸಿಕೆಯ ರಕ್ಷಣಾತ್ಮಕ ಪರಿಣಾಮದಿಂದಲೋ ಅಥವಾ ಇತರ ಅಂಶಗಳಿಂದಾಗಿ ಇದೆಯೇ ಎಂದು ನಿರ್ಧರಿಸಲು, ಹೆಚ್ಚಿನ ಸಂಶೋಧನೆಯ ಅಗತ್ಯವಿದೆ." ಎಂದು ಅವರು ತಿಳಿಸಿದರು.


ಅಧ್ಯಯನ ನಡೆದಿದ್ದು ಹೇಗೆ?
­­ಅಧ್ಯಯನಕ್ಕಾಗಿ, ಸಂಶೋಧಕರು ಸ್ಪೇನ್‌ನಲ್ಲಿನ ಆರೋಗ್ಯ ರಕ್ಷಣೆ ಡೇಟಾಬೇಸ್ ಅನ್ನು ಬಳಸಿಕೊಂಡಿದ್ದಾರೆ. ಮತ್ತು ಕನಿಷ್ಠ 40 ವರ್ಷ ವಯಸ್ಸಿನ ಮತ್ತು 14 ವರ್ಷಗಳ ಅವಧಿಯಲ್ಲಿ ಮೊದಲ ಸ್ಟ್ರೋಕ್ ಹೊಂದಿರುವ ಜನರನ್ನು ಗುರುತಿಸಿ, ಪಾರ್ಶ್ವವಾಯುವಿಗೆ ಒಳಗಾದ ಪ್ರತಿಯೊಬ್ಬ ವ್ಯಕ್ತಿಯನ್ನು ಒಂದೇ ವಯಸ್ಸಿನ ಮತ್ತು ಲಿಂಗದ ಐದು ಜನರಿಗೆ ಹೋಲಿಕೆ ಮಾಡಲಾಗಿದೆ­­. ಅದರಲ್ಲಿ 14,322 ಮಂದಿ ಪಾರ್ಶ್ವವಾಯು ಮತ್ತು 71,610 ಮಂದಿ ಪಾರ್ಶ್ವವಾಯುವಿಗೆ ಒಳಗಾಗಿಲ್ಲದವರು ಸೇರಿದ್ದರು. ನಂತರ ಸಂಶೋಧಕರು ಪಾರ್ಶ್ವವಾಯುವಿಗೆ ಕನಿಷ್ಠ 14 ದಿನಗಳ ಮೊದಲು ಅಥವಾ ಪಾರ್ಶ್ವವಾಯು ಇಲ್ಲದವರಿಗೆ ಅದೇ ದಿನಾಂಕದ ಮೊದಲು ಈ ಫ್ಲೂ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂಬುವುದನ್ನು ಖಚಿತಪಡಿಸಿಕೊಂಡರು.


ಇದನ್ನೂ ಓದಿ:Bowel Cancer: ಈ ಸಮಸ್ಯೆಗಳು ನಿಮ್ಮನ್ನೂ ಕಾಡ್ತಿದ್ಯಾ? ಹಾಗಿದ್ರೆ ಇದು ಕರುಳು ಕ್ಯಾನ್ಸರ್ ಆಗಿರಬಹುದು ಎಚ್ಚರ!


ಫ್ಲೂ ಲಸಿಕೆ ಸ್ವೀಕರಿಸಿದವರಲ್ಲಿ ಪಾರ್ಶ್ವವಾಯು ಅಪಾಯ 12% ಕಡಿಮೆ
ಪರೀಕ್ಷೆಯ ನಂತರ ಪಾರ್ಶ್ವವಾಯುವಿಗೆ ಒಳಗಾದವರಲ್ಲಿ ಒಟ್ಟು 41.4% ಜನರು ಫ್ಲೂ ಶಾಟ್ ಅನ್ನು ಪಡೆದಿದ್ದಾರೆ ಮತ್ತು 40.5% ಲಸಿಕೆ ಪಡೆದಿಲ್ಲ ಎಂಬುವುದು ತಿಳಿದು ಬಂತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಫ್ಲೂ ಶಾಟ್ ಅನ್ನು ಸ್ವೀಕರಿಸಿದವರಿಗೆ ಪಾರ್ಶ್ವವಾಯು ಬರುವ ಸಾಧ್ಯತೆ 12% ಕಡಿಮೆ ಎಂದು ಸಂಶೋಧಕರು ಕಂಡುಕೊಂಡರು.


"ನಮ್ಮ ಸಂಶೋಧನೆಯ ಈ ಫಲಿತಾಂಶಗಳು ಜನರು ತಮ್ಮ ವಾರ್ಷಿಕ ಫ್ಲೂ ಶಾಟ್ ಪಡೆಯಲು ಮತ್ತೊಂದು ಕಾರಣವಾಗಿದೆ, ವಿಶೇಷವಾಗಿ ಸ್ಟ್ರೋಕ್ ಅಪಾಯವನ್ನು ಹೊಂದಿದ್ದರೆ, ತಪ್ಪದೇ ಈ ಲಸಿಕೆ ತೆಗೆದುಕೊಳ್ಳಬೇಕು. ಇಂತಹ ಸರಳ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ." ಎಂದು ಸಂಶೋಧಕರು ತಿಳಿಸಿದರು.


ಇದನ್ನೂ ಓದಿ:  Heart Health: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳಿಂದ ದೂರವಿರಿ


ಸಂಶೋಧಕರು ಕೇವಲ ಅವಲೋಕನವನ್ನು ಮಾತ್ರ ಹಂಚಿಕೊಂಡಿದ್ದು, ಈ ಕುರಿತಾದ ಹೆಚ್ಚಿನ ಅಧ್ಯಯನವನ್ನು ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಪಾರ್ಶ್ವವಾಯು ಅಪಾಯವು ಪ್ಲೂ ಲಸಿಕೆ ತೆಗೆದುಕೊಂಡವರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇದೆ ಎಂದು ಅವರ ಅಧ್ಯಯನದ ಫಲಿತಾಂಶ ತಿಳಿಸಿದೆ.

top videos
    First published: