ತುಂಬಾ ಕಾಲ ಲೈಂಗಿಕ ಬದುಕನ್ನು ಮುಂದೂಡಿದರೆ ಅಡ್ಡಪರಿಣಾಮ; ಅಧ್ಯಯನದಲ್ಲಿ ಬಹಿರಂಗ

ಈ ಅಪಾಯದಿಂದ ದೂರವಿರಬೇಕಾದರೆ ಬದುಕಲ್ಲಿ ಒಂದು ನಿರ್ದಿಷ್ಟ ಸಮಯಕ್ಕೆ ಲೈಂಗಿಕ ಬದುಕನ್ನು ಅನುಭವಿಸುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲಾ ರೀತಿಯ ಅನುಭವಗಳು, (Experience) ಘಟನೆಗಳಿಗೆ ಒಳಗಾಗಲೇಬೇಕಾಗುತ್ತದೆ. ಮಕ್ಕಳು ಹದಿಹರೆಯಕ್ಕೆ  ಬರುವವರೆಗೆ ತಮ್ಮದೇ ಪ್ರಪಂಚದಲ್ಲಿದ್ದುಕೊಂಡು ಬಿಡುತ್ತಾರೆ. ಲೌಕಿಕ ಲೋಕದ ಜಂಜಾಟಗಳ, ಸಂತೋಷಗಳ ಬಗ್ಗೆ ಅರಿವಿರುವುದಿಲ್ಲ. ಆದರೆ ಹದಿಹರೆಯಕ್ಕೆ ಬಂದ ಮೇಲೆ ಗಂಡಾಗಲಿ, ಹೆಣ್ಣಾಗಲಿ ಬದುಕಿನ ದಿಕ್ಕೇ ಬದಲಾಗುತ್ತದೆ. ಜವಾಬ್ದಾರಿ ಹೆಗಲೇರುತ್ತದೆ. ಮದುವೆ, ಮಕ್ಕಳು ಸಂಸಾರ ಇವುಗಳ ಜೊತೆಗೆ ವೃತ್ತಿಜೀವನ ಇವೆಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಆದ ಕಾರಣ ಪುರುಷರಾಗಲಿ, ಮಹಿಳೆಯರಾಗಲಿ ಒಂದು ನಿರ್ದಿಷ್ಟ ಗುರಿ ತಲುಪುವುವವರೆಗೆ, ಬದುಕು ಸರಿಯಾದ ಹಾದಿ ಕಂಡುಕೊಳ್ಳುವವರೆಗೆ ಮದುವೆ ವಿಚಾರವನ್ನು ಮುಂದೂಡುತ್ತಲೇ ಇರುತ್ತಾರೆ.

ಲೈಂಗಿಕ ಜೀವನದ ( sex Life)ಕುರಿತಾಗಿ ಆಸಕ್ತಿ ತೋರುವುದಿಲ್ಲ. ಆದರೆ ಪುರುಷತ್ವ ಮತ್ತು ಕನ್ಯತ್ವವನ್ನು (virgins) ತುಂಬಾ ದಿನಗಳವರೆಗೆ ಮುಂದೂಡುವುದು ಸರಿಯಲ್ಲ ಎನ್ನುತ್ತವೆ ಅಧ್ಯಯನಗಳು. ಅಂದರೆ ಲೈಂಗಿಕ ಬದುಕನ್ನು ಹೆಚ್ಚೆಚ್ಚು ಕಾಲ ಮುಂದೂಡುತ್ತಾ ಹೋಗುವುದು ಸ್ವಲ್ಪವೂ ಉತ್ತಮವಲ್ಲ. ಈ ನಿರ್ಧಾರದಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಅಂದರೆ ಮಾನಸಿಕ ಆರೋಗ್ಯದಿಂದ (Mental health) ಹಿಡಿದು ದೈಹಿಕ ಆರೋಗ್ಯದ (Physical Health) ಮೇಲೂ ಪರಿಣಾಮ ಬೀರುತ್ತದೆ. ಈ ಅಪಾಯದಿಂದ ದೂರವಿರಬೇಕಾದರೆ ಬದುಕಲ್ಲಿ ಒಂದು ನಿರ್ದಿಷ್ಟ ಸಮಯಕ್ಕೆ ಲೈಂಗಿಕ ಬದುಕನ್ನು ಅನುಭವಿಸುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

1. ಯೋಚನೆಗಳು ನಿಧಾನವಾಗುತ್ತದೆ
ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ನಿಮ್ಮ ಲೈಂಗಿಕ ಜೀವನ ತುಂಬಾ ಕಡಿಮೆ ಹೊಂದಿದ್ದರೆ ಅಥವಾ ಯಾವುದೇ ಲೈಂಗಿಕತೆ ಜೀವನಕ್ಕೆ ತುಂಬಾ ವರ್ಷಗಳವರೆಗೆ ತಡೆಹಿಡಿದಿದ್ದರೆ, ವ್ಯಕ್ತಿಯು ತಮ್ಮ ಆಲೋಚನೆಗಳ ಜೊತೆಗೆ ಅವರೂ ಕೂಡ ನಿಧಾನವಾಗುತ್ತಾರೆ ಎನ್ನುತ್ತದೆ ಅಧ್ಯಯನ. ಅಂದರೆ ಲೈಂಗಿಕ ಜೀವನವು ನಿಮ್ಮ ನರಕೋಶದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆಲೋಚನೆಗಳು ತ್ವರಿತವಾಗಿ ಸಮರ್ಪಕವಾಗಿರುವುದಿಲ್ಲ.

2. ಹತಾಶೆ ಆವರಿಸುತ್ತದೆ
ಲೈಂಗಿಕ ಬದುಕು ತಡವಾಗಿ ಆರಂಭಿಸುವವರು ಪ್ರಚೋದನೆಗೆ ಒಳಗಾಗುವುದು ಬಹಳ ವಿರಳ. ನೀವು ನಿಮ್ಮನ್ನು ನಿಯಂತ್ರಿಸಬಹುದು. ಆದರೆ ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಖಂಡಿತವಾಗಿಯೂ ನೋವು ಕಾಣಿಸಿಕೊಳ್ಳುತ್ತದೆ. ಜನರು ಪರಾಕಾಷ್ಠೆ ಹೊಂದಿರುವಾಗ, ಅವರು ಬಹಳಷ್ಟು ಹತಾಶೆ ಹೊಂದಿರುತ್ತಾರೆ.

ಇದನ್ನು ಓದಿ: ಭಾರತೀಯ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಸಾನಿಯಾ ಮಿರ್ಜಾ

3. ವಿಶ್ವಾಸ ಹೆಚ್ಚುವುದಕ್ಕಿಂತ ಕಡಿಮೆಯಾಗುತ್ತದೆ
ನೀವು ಲೈಂಗಿಕತೆ ಜೀವನ ಸರಿಯಾದ ರೀತಿಯಲ್ಲಿದ್ದರೆ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಆದರೆ ನೀವು ಲೈಂಗಿಕ ಬದುಕಿಗೆ ಒಳಗಾಗದಿದ್ದಾಗ ನಿಮ್ಮ ಅಂಗವು ಮೂಲತಃ ಅದರ ಸಾಮರ್ಥ್ಯ ಕಳೆದುಕೊಳ್ಳುವುದರಿಂದ ನೀವು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತೀರಿ. ಉತ್ತಮ ಲೈಂಗಿಕತೆಯ ನಂತರ ಜನರು ಅನುಭವಿಸುವ ವಿಮೋಚನೆ, ಆತ್ಮವಿಶ್ವಾಸವನ್ನು ಎಂದಿಗೂ ಅನುಭವಿಸುವುದಿಲ್ಲ. ಅಷ್ಟೊಂದು ಆತ್ಮವಿಶ್ವಾಸ ಬದುಕಿನಲ್ಲಿ ಆವರಿಸುತ್ತದೆ.

ಇದನ್ನು ಓದಿ: ಚಳಿಗಾಲದ ಜ್ವರಕ್ಕೆ ಮನೆಯಲ್ಲಿಯೇ ಇದೆ ನೈಸರ್ಗಿಕ ಮದ್ದು

4. ಮೂತ್ರಕೋಶ ದುರ್ಬಲವಾಗುತ್ತದೆ
ಲೈಂಗಿಕತೆಯು ನಿಮ್ಮ ಸ್ನಾಯುಗಳಿಗೆ ಒಳ್ಳೆಯದು. ಅದು ನಿಮ್ಮ ಮೂತ್ರ ಹಿಡಿದಿಡಲು ಸಹಾಯ ಮಾಡುತ್ತದೆ. ನೀವು ಲೈಂಗಿಕ ಚಟುವಟಿಕೆಗಳಿಗೆ ಒಳಗಾಗದೆ ಬಹಳ ಕಾಲ ಮುಂದೂಡಿದರೆ ನಿಮ್ಮ ಸ್ನಾಯುಗಳು ದುರ್ಬಲಗೊಳ್ಳುವ ದೊಡ್ಡ ಸಾಧ್ಯತೆ ಇರುತ್ತವೆ ಮತ್ತು ನೀವು ಅಕಾಲಿಕ ಹಾನಿಗಳನ್ನು ಸಹ ಎದುರಿಸಬಹುದು.
First published: