• Home
  • »
  • News
  • »
  • lifestyle
  • »
  • Gym: ಅಧ್ಯಯನದ ಪ್ರಕಾರ ಮಹಿಳೆಯರು ಜಿಮ್‌ಗೆ ಹೋಗಲು ಹಿಂಜರಿಯುತ್ತಿರುವುದು ಇದೇ ಕಾರಣಕ್ಕೆ ಅಂತೆ

Gym: ಅಧ್ಯಯನದ ಪ್ರಕಾರ ಮಹಿಳೆಯರು ಜಿಮ್‌ಗೆ ಹೋಗಲು ಹಿಂಜರಿಯುತ್ತಿರುವುದು ಇದೇ ಕಾರಣಕ್ಕೆ ಅಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಂಶೋಧನೆಯ ಪ್ರಕಾರ, ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಯಾವುದೋ ಒಂದು ಭಯದಿಂದ ಜಿಮ್‌ಗೆ ಹೋಗುವುದನ್ನು ತಪ್ಪಿಸುತ್ತಾರೆ ಎಂದು ವರದಿ ಹೇಳಿದೆ. ಹೆಚ್ಚು ಬೆವರುತ್ತೇನೆ, ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ ಹೀಗೆ ಅನೇಕ ಕಾರಣಗಳನ್ನು ನೀಡಿಕೊಂಡು ಮಹಿಳೆಯರು ಜಿಮ್ ನಿಂದ ದೂರು ಉಳಿಯಲು ಬಯಸುತ್ತಾರಂತೆ.

ಮುಂದೆ ಓದಿ ...
  • Share this:

ಫಿಟ್ ಆಗಿರಬೇಕು ಎಂದು ಜಿಮ್ (Gym), ಡಯಟ್ (Diet) ಅಂತಾ ಸರ್ಕಸ್ ಮಾಡುವವರ ಜೊತೆ, ನಾಳೆಯಿಂದ ಮಿಸ್ ಮಾಡದೇ ಜಿಮ್‌ಗೆ ಹೋಗ್ತಿನಿ ಇವತ್ತು ಒಂದು ದಿನ ಮಲಗಿಬಿಡ್ತಿನಿ ಅಂತಾ ಹೊದ್ದು ಮಲಗುವವರ ಸಂಖ್ಯೆಯೇ ಜಾಸ್ತಿ ಇದೆ ಎನ್ನಬಹುದು. ಇನ್ನು ಕೆಲವರು ಜಿಮ್ ಬಿಲ್ ಏನೋ ಸರಿಯಾಗಿ ಪಾವತಿಸುತ್ತಾರೆ ಆದರೆ ಜಿಮ್‌ಗೆ ಮಾತ್ರ ಯಾವತ್ತೋ ಒಂದು ದಿನ ಮನಸ್ಸು ಬಂದಾಗ ಹೋಗ್ತಾರೆ. ಪುರುಷರು ಸೇರಿ ಮಹಿಳೆಯರದ್ದು (Women's) ಇದೇ ಸ್ಥಿತಿ. ಅದರಲ್ಲೂ ಜಿಮ್‌ಗೆ ಹೋಗಲು ಮಹಿಳೆಯರು ಹೆಚ್ಚು ಹಿಂಜರಿಯುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಮಹಿಳೆಯರು ಏಕೆ ಜಿಮ್‌ಗೆ ಹೋಗೋದನ್ನು ತಪ್ಪಿಸುತ್ತಾರೆ ಎನ್ನುವುದಕ್ಕೆ ಇತ್ತೀಚಿನ ಒಂದು ಅಧ್ಯಯನವು ಕೆಲವು ಕಾರಣಗಳನ್ನು ಕಂಡುಕೊಂಡಿದೆ.


ಸಂಶೋಧನೆಯ ಪ್ರಕಾರ, ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಯಾವುದೋ ಒಂದು ಭಯದಿಂದ ಜಿಮ್‌ಗೆ ಹೋಗುವುದನ್ನು ತಪ್ಪಿಸುತ್ತಾರೆ ಎಂದು ವರದಿ ಹೇಳಿದೆ. ಹೆಚ್ಚು ಬೆವರುತ್ತೇನೆ, ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ ಹೀಗೆ ಅನೇಕ ಕಾರಣಗಳನ್ನು ನೀಡಿಕೊಂಡು ಮಹಿಳೆಯರು ಜಿಮ್ ನಿಂದ ದೂರು ಉಳಿಯಲು ಬಯಸುತ್ತಾರಂತೆ.


ಅಧ್ಯಯನ ಏನು ಹೇಳುತ್ತದೆ?
ಸುಮಾರು 65 ಪ್ರತಿಶತದಷ್ಟು ಮಹಿಳೆಯರು ಭಯದಿಂದ ಜಿಮ್ ಗೆ ಹೋಗುವುದಿಲ್ಲ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ. ಯುಎಸ್ ನಾದ್ಯಂತ 1,000 ಮಹಿಳೆಯರ ಮೇಲೆ ಈ ಸಮೀಕ್ಷೆಯನ್ನು ನಡೆಸಿದಾಗ, ಸುಮಾರು 55 ಪ್ರತಿಶತದಷ್ಟು ಮಹಿಳೆಯರು ಜಿಮ್ ಗೆ ಹೋದಾಗ ಇತರರನ್ನು ನೋಡಿ ನಾವು ಇಷ್ಟು ಫಿಟ್ ಆಗಿಲ್ಲ ಎಂಬ ಅಸಮಾಧಾನದಿಂದ ದೂರ ಉಳಿದರೆ, 49 ಪ್ರತಿಶತದಷ್ಟು ಜನರು ತಮ್ಮ ವ್ಯಾಯಾಮದ ಬಟ್ಟೆಗಳ ಬಗ್ಗೆ ಚಿಂತಿಸುತ್ತಾ ಜಿಮ್ ಗೆ ಹೋಗುವುದಿಲ್ಲವಂತೆ, ಇನ್ನುಳಿದ 25 ಪ್ರತಿಶತದಷ್ಟು ಜನರು ಸ್ಟೀರಿಯೊಟೈಪ್ ಆಗುವ ಭಯವನ್ನು ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.


ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮಕ್ಕಳಾದ ಮೇಲಿನ ದೇಹದ ಬದಲಾವಣೆಯಾಗಿರಬಹುದು ಅಥವಾ ಬೊಜ್ಜು ಅಥವಾ ಸ್ಲಿಮ್ ಆಗಿರಬೇಕು ಎನ್ನುವ ಮನೋಭಾವಗಳನ್ನಿಟ್ಟುಕೊಂಡು ತಮ್ಮ ‘ಬಾಡಿ ಪಾಸಿಟಿವಿಟಿ’ ಬಗ್ಗೇ ಮರೆತೇ ಬಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಬಾಡಿ ಪಾಸಿಟಿವಿಟಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಂದರೆ ನಮ್ಮ ದೇಹ ಹೇಗಿದಿಯೋ ಹಾಗೆ ಅದನ್ನು ಒಪ್ಪಿಕೊಂಡು ಇಷ್ಟಪಡುವುದು. ಹಲವಾರು ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.


ಇದನ್ನೂ ಓದಿ: Weight Loss: ಸುಲಭವಾಗಿ ತೂಕ ಕಳೆದುಕೊಳ್ಳಬೇಕಾ? ಈ ಗಿಡಮೂಲಿಕೆಗಳನ್ನು ಬಳಸಿ ಬೊಜ್ಜು ಕರಗಿಸಿ


ಕೇವಲ ಸುಂದರವಾಗಿ ಕಾಣುವುದು ಮಾತ್ರವಲ್ಲದೇ ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ಮಾಡಬೇಕು. ಆದರೆ ಭಯದ ಜೊತೆ ಇತರೆ ಕಾರಣಗಳಿಂದ ಮಹಿಳೆಯರು ಜಿಮ್ ಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ ಎನ್ನುವ ವರದಿ ನಿಜಕ್ಕೂ ಆಘಾತಕಾರಿಯೇ ಸರಿ.


ಹಾಗಾದರೆ ಮಹಿಳೆಯರು ಈ ಭಯದಿಂದ ದೂರವಿರಲು ಮಾಡಬಹುದಾದ ಕೆಲವು ವಿಷಯಗಳು ಹೀಗಿವೆ.
1) ನಿಮ್ಮ ವ್ಯಾಯಾಮವನ್ನು ಮುಂಚಿತವಾಗಿ ಯೋಜಿಸಿ
ಜಿಮ್‌ಗೆ ಹೋಗುವ ಮೊದಲು, ನೀವು ಅಲ್ಲಿ ಏನು ಮಾಡಲಿದ್ದೀರಿ ಎಂಬುದನ್ನು ಮೊದಲೇ ಯೋಜಿಸಿ. ಈ ರೀತಿಯಾಗಿ ಮಾಡುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಜಿಮ್ ನಲ್ಲಿ ಆರಾಮದಾಯಕವಾಗುತ್ತೀರಿ.


2) ಮನೆಯಲ್ಲಿ ಅಭ್ಯಾಸ ಮಾಡಿ
ಸಾಮಾನ್ಯವಾಗಿ ಜನರು ವ್ಯವಸ್ಥಿತವಾಗಿ ವ್ಯಾಯಾಮ ಮಾಡಲು ಭಯಪಡುತ್ತಾರೆ. ಅಂತಹ ಸಂದರ್ಭದಲ್ಲಿ, ಹೆಚ್ಚು ಆತ್ಮವಿಶ್ವಾಸದಿಂದ ವ್ಯಾಯಾಮ ಮಾಡಲು ಮನೆಯಲ್ಲಿಯೇ ಅಭ್ಯಾಸ ಮಾಡಬಹುದು.


3) ಸಲಕರಣೆಗಳನ್ನು ತಿಳಿದುಕೊಳ್ಳಿ
ಎಲ್ಲಾ ಜಿಮ್ ಉಪಕರಣಗಳು ಒಂದೇ ಆಗಿರುವುದಿಲ್ಲ. ಹೀಗಾಗಿ ಯಾವ ಉಪಕರಣಗಳನ್ನು ಯಾವ ವ್ಯಾಯಾಮಕ್ಕೆ ಉಪಯೋಗಿಸಬೇಕು ಮತ್ತು ಹೇಗೆ ಬಳಸಬೇಕು ಎಂಬುವುದನ್ನು ಸ್ಪಷ್ಟವಾಗಿ ತಿಳಿದುಕೊಂಡರೆ ವ್ಯಾಯಾಮದ ಬಗೆಗಿನ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ತರಬೇತುದಾರರ ಜೊತೆ ಕೇಳಿ ತಿಳಿಯಬಹುದು.


4) ಕಿರುಕುಳಗಳ ಬಗ್ಗೆ ದೂರು ನೀಡಿ
ಸಾಮಾನ್ಯವಾಗಿ ಎಲ್ಲಾ ರಂಗದಲ್ಲೂ ಮಹಿಳೆಯರಿಗೆ ಒಂದಲ್ಲ ಒಂದು ರೀತಿ ಕಿರುಕುಳ ಇದ್ದೇ ಇರುತ್ತದೆ. ಹಲವರು ಈ ಭಯದಿಂದಲೇ ತಮ್ಮ ಕೆಲಸದಿಂದ ದೂರ ಉಳಿದು ಬಿಡುತ್ತಾರೆ. ನಿಮ್ಮ ಜಿಮ್‌ನಲ್ಲಿ ನಿಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ನೀವು ಭಾವಿಸಿದರೆ ಅದರ ಬಗ್ಗೆ ತಕ್ಷಣವೇ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿ.


ಇದನ್ನೂ ಓದಿ: Urinary Tract Infection: ಮೂತ್ರನಾಳದ ಸೋಂಕು ಉಂಟಾಗಲು ಕಾರಣ ಏನು? ಆಯುರ್ವೇದದಲ್ಲಿದೆ ಪರಿಹಾರ


5) ನಿಮ್ಮ ಗುರಿಗಳನ್ನು ನೆನಪಿಡಿ
ಜಿಮ್ ಗೆ ಏಕೆ ಬಂದಿದ್ದೀರಾ, ಏಕೆ ಹೋಗಬೇಕು, ನಿಮ್ಮ ಗುರಿ ಏನು ಎಂಬುದನ್ನು ಒಂದು ಕ್ಷಣ ಯೋಚಿಸಿದರೆ, ತನ್ನಿಂತಾನೇ ಜಿಮ್ ಗೆ ಹೋಗಲು ನಿಮ್ಮ ಮನಸ್ಸು, ದೇಹ ಎರಡೂ ಬಯಸುತ್ತದೆ.

Published by:Ashwini Prabhu
First published: