Attraction: ಲೈಂಗಿಕ ಆಕರ್ಷಣೆಗೂ ನೀವು ಓಡಾಡೋ ವಾಹನಕ್ಕೂ ಲಿಂಕ್ ಇದ್ಯಂತೆ!

ನಿಮಗೆ ಯಾವ ವಾಹನದಲ್ಲಿ ಓಡಾಡೋಕೆ ಇಷ್ಟ? ಸ್ವಂತ ವಾಹನದಲ್ಲಿ ಹೋಗ್ತೀರಾ ಅಥವಾ ಸಾರ್ವಜನಿಕ ವಾಹನ ಬಳಸ್ತೀರಾ? ಯಾಕಂದ್ರೆ ನಿಮ್ಮ ಈ ಆಯ್ಕೆ ನಿಮ್ಮ ಲೈಂಗಿಕ ಆಸಕ್ತಿಯ ಬಗ್ಗೆಯೂ ತಿಳಿಸುತ್ತಂತೆ

ಆಕರ್ಷಣೆ

ಆಕರ್ಷಣೆ

  • Share this:
ನೀವು ಯಾರೊಂದಿಗಾದರೂ ಪ್ರೇಮಪಾಶಕ್ಕೆ (Love) ಸಿಲುಕಿದ್ದೀರಾ ಎಂಬ ಕುರಿತು ನಿಮ್ಮ ಸಹೋದ್ಯೋಗಿಗಳಿಗೆ ಹೇಗೆ ಸುಳಿವು ದೊರೆಯುತ್ತದೆ? ಇಲ್ಲೊಂದು ಅಚ್ಚರಿದಾಯಕ ಸಂಶೋಧನೆ (Research) ಹೊರಬಿದ್ದಿದ್ದು, ಬ್ರಿಟನ್ (Britain) ಮೂಲದ ಸಂಶೋಧಕರು ನಮ್ಮ ಲೈಂಗಿಕಾಸಕ್ತಿಯ (Sexual Interest) ಕೇಂದ್ರೀಕರಣಕ್ಕೂ ನಾವು ಉದ್ಯೋಗಕ್ಕೆ ತೆರಳಲು ಬಳಸುವ ಸಾರಿಗೆಗೂ ನೇರ ಸಂಬಂಧವಿದೆ ಎನ್ನುತ್ತಿದ್ದಾರೆ! ಸಲಿಂಗಿ ದಂಪತಿಗಳಿಗೆ ಸಾರ್ವಜನಿಕ ಸಾರಿಗೆ (Public Transport) ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಹೆಚ್ಚು ಅನುಕೂಲಕರವಾಗಿದೆ. ವ್ಯಕ್ತಿಯೊಬ್ಬ ಬಳಸುವ ಸಾರಿಗೆ ಮಾಧ್ಯಮವನ್ನು ಬಳಸಿಕೊಂಡು ಆತನ ಲೈಂಗಿಕಾಸಕ್ತಿ ಕೇಂದ್ರೀಕರಣವನ್ನು ಅಳೆಯುವುದು ಅಚ್ಷರಿದಾಯಕ ವಿಷಯವಾಗಿದ್ದರೂ, ಬ್ರಿಟನ್‌ನ ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರು ಮಾತ್ರ ಈ ವಿಷಯದತ್ತಲೇ ಗಮನ ಹರಿಸಿದ್ದಾರೆ.

ಅಮೆರಿಕಾ ಸಮುದಾಯ ಸಮೀಕ್ಷೆ(ACS) ಸಂಸ್ಥೆಯ ಮೂರು ದಶಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಸ್ಥ ದಂಪತಿಗಳ ದತ್ತಾಂಶಗಳನ್ನು ಶೇಖರಿಸಿ ಸಂಶೋಧಕರು, ಅವರ ಪ್ರಾಂತ್ಯ, ಆರ್ಥಿಕತೆ, ಸಾಮಾಜಿಕತೆ, ಉದ್ಯೋಗ ಹಾಗೂ ಕುಟುಂಬ (Family) ಮಾಹಿತಿಯನ್ನು ವಿಶ್ಲೇಷಿಸಿ ವರದಿ ತಯಾರಿಸಿದ್ದಾರೆ.

ಸಲಿಂಗಿ ಸಂಗಾತಿಗಳಿಗೆ ಸಾರ್ವಜನಿಕ ಸಾರಿಗೆ ಇಷ್ಟ

ಜರ್ನಲ್ ಪ್ಲಸ್ ಒನ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಸಲಿಂಗಿ ಸಂಗಾತಿಗಳು ಬಹುತೇಕ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ ಮತ್ತು ಭಿನ್ನ ಲಿಂಗದ ಸಂಗಾತಿಗಳಂತೆ ಒಬ್ಬರೇ ವಾಹನ ಚಾಲನೆ ಮಾಡಿಕೊಂಡು ಉದ್ಯೋಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿದೆ.

ವಿವರಗಳ ಪ್ರಕಾರ, ದೊಡ್ಡ ವ್ಯತ್ಯಾಸ ಪುರುಷರಲ್ಲಿ ಕಂಡು ಬಂದಿದೆ. ಮಹಿಳೆಯರಿಗೆ ಹೋಲಿಸಿದರೆ (ಶೇ. 3ರಷ್ಟು) ಸಲಿಂಗಿಗಳು ಹಾಗೂ ಉಭಯಲಿಂಗಿಗಳು ಶೇ. 7ರಷ್ಟು ಹೆಚ್ಚು ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ಶೇ. 13ರಷ್ಟು ಮಂದಿ ಒಬ್ಬರೇ ವಾಹನ ಚಾಲನೆ ಮಾಡಿಕೊಂಡು ಉದ್ಯೋಗಕ್ಕೆ ತೆರಳುವುದಿಲ್ಲ. ಶೇ. 69ರಷ್ಟು ಸಲಿಂಗಿ ಪುರುಷರು ಒಂದೋ ನಡೆದುಕೊಂಡು ಉದ್ಯೋಗಕ್ಕೆ ತೆರಳುತ್ತಾರೆ ಇಲ್ಲವೆ ಬೈಕ್‌ನಲ್ಲಿ ತೆರಳುತ್ತಾರೆ.

ಪರಿಸರ ಪ್ರೀತಿ

ಹಾಗಾದರೆ ಸಲಿಂಗಿ ಪುರುಷರು, ಸಲಿಂಗಿ ಮಹಿಳೆಯರು ಹಾಗೂ ಉಭಯಲಿಂಗಿಗಳು ಸಾರ್ವಜನಿಕ ಸಾರಿಗೆಯನ್ನೇ ಏಕೆ ಹೆಚ್ಚಾಗಿ ಬಳಸುತ್ತಾರೆ? ಈ ಯೋಚನೆಯು ಲೈಂಗಿಕಾಸಕ್ತಿ ಕೇಂದ್ರೀಕರಣವು ಈ ವಿಷಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಅಚ್ಚರಿಯನ್ನು ಹುಟ್ಟಿಸುತ್ತದೆ. ಹೀಗಿದ್ದೂ, ಸಂಶೋಧಕರು ಮಾತ್ರ ಈ ಸಂಗಾತಿಗಳು ಮಾತ್ರ ಇಂತಹ ಪರಿಸರದ (Nature) ಮೇಲೆ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದಾರೆ ಎಂದು ನಂಬಿದ್ದಾರೆ. ಈ ವಿವರವು ಅವರಿಗೆ ಕೇಳಲಾದ ವಾಯು ಮಾಲಿನ್ಯ, ಬದಲಿ ಇಂಧನ ಮೂಲಗಳು ಮತ್ತು ಸರ್ಕಾರಗಳು (Governments) ಪರಿಸರದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿಲ್ಲ ಎಂಬಂಥ ಪ್ರಶ್ನೆಗಳಿಗೆ ಅವರು ನೀಡಿರುವ ಪ್ರತಿಕ್ರಿಯೆಗಳನ್ನು ಆಧರಿಸಿದೆ.

ಇದನ್ನೂ ಓದಿ: ಸಾಮಾನ್ಯ ಜನರಂತೆ ನಾನು ಏಕೆ ಲೈಂಗಿಕ ಆಕರ್ಷಣೆ, ಭಾವನಾತ್ಮಕ ಸಂಪರ್ಕ ಪಡೆಯಲಾಗುತ್ತಿಲ್ಲ?

ಸಂಶೋಧಕರು 450 ಪುರುಷ ಸಲಿಂಗಿಗಳು, ಮಹಿಳಾ ಸಲಿಂಗಿಗಳು ಹಾಗೂ ಉಭಯಲಿಂಗಿಗಳನ್ನು ಗುರುತಿಸಿದ್ದು, ಅವರನ್ನು ನೀವು ಪರಿಸರ ಮಾಲಿನ್ಯದ ಬಗ್ಗೆ ಎಷ್ಟು ಆಸಕ್ತರಾಗಿದ್ದೀರಿ, ಸರ್ಕಾರಗಳು ಪರಿಸರದ ಮೇಲೆ ಹೆಚ್ಚು ಹೂಡಿಕೆ (Investments) ಮಾಡುತ್ತಿಲ್ಲ ಮತ್ತು ಬದಲಿ ಇಂಧನ ಮೂಲಗಳ ಕುರಿತು ಪ್ರಶ್ನಿಸಿದ್ದರು.

ಪರಿಸರ ಕಾಳಜಿ ಸ್ವಲ್ಪ ಹೆಚ್ಚು

ನಮ್ಮ ಅಧ್ಯಯನವು ವಿಭಿನ್ನ ಲಿಂಗದ ಸಂಗಾತಿಗಳಿಗೆ ಹೋಲಿಸಿದರೆ ಸಲಿಂಗ ಪುರುಷ ಮತ್ತು ಮಹಿಳಾ ಸಂಗಾತಿಗಳು ಹೆಚ್ಚು ಆರೋಗ್ಯಕರವಾಗಿದ್ದು (Healthy), ಉದ್ಯೋಗಕ್ಕೆ ತೆರಳುವ ಸಾರಿಗೆ ವಿಚಾರದಲ್ಲಿ ಹೆಚ್ಚು ಪರಿಸರ ಪ್ರಜ್ಞೆ ಹೊಂದಿದ್ದಾರೆ ಎಂದು ಎಕ್ಸೆಟರ್ ಬಿಸಿನೆಸ್ ಸ್ಕೂಲ್ ವಿಶ್ವವಿದ್ಯಾಲಯದಲ್ಲಿ ಹಣಕಾಸು ಪ್ರಾಧ್ಯಾಪಕರಾಗಿರುವ ಒರೆಫಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರಿಗಿಂತ ಬಸ್ ಓಕೆ

ಭಿನ್ನ ಲಿಂಗಿಗಳಿಗೆ ಹೋಲಿಸಿದರೆ ಪುರುಷ ಸಲಿಂಗಿಗಳು, ಮಹಿಳಾ ಸಲಿಂಗಿಗಳು ಹಾಗೂ ಉಭಯಲಿಂಗಿಗಳು ಶೇ. 10ರಷ್ಟು ಬಲಿಷ್ಠವಾಗಿ ಪರಿಸರ ನೈರ್ಮಲ್ಯದ ಕುರಿತು ಪ್ರತಿಪಾದಿಸಿದ್ದಾರೆ ಎಂಬ ಅಂಶ ಅಧ್ಯಯನದಿಂದ ಬಹಿರಂಗಗೊಂಡಿದೆ. ಈ ಪ್ರತಿಪಾದನೆಯು ಅವರ ಕಾರು ಪ್ರಯಾಣಕ್ಕಿಂತ ಸಾರ್ವಜನಿಕ ಸಾರಿಗೆ ಬಳಕೆಯ ಆಯ್ಕೆಯನ್ನು ಸಮರ್ಥವಾಗಿ ವಿವರಿಸಬಲ್ಲದು. ಲಿಂಗ ಸಾಮ್ಯತೆಗಳು (Gender similarities) ಜನರ ಉದ್ಯೋಗಕ್ಕಾಗಿನ ಸಾರಿಗೆ ಸೇವೆ ಆಯ್ಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮಗೆ ಗರ್ಲ್​ಫ್ರೆಂಡ್ ಸಿಗದಿರಲು ಇದುವೇ ಮುಖ್ಯ ಕಾರಣ..!

"ಈ ಅಂಶವು ನೀತಿ ನಿರೂಪಕರು ಹಾಗೂ ಆರೋಗ್ಯ ವೃತ್ತಿಗಾರರು ಉದ್ಯೋಗಕ್ಕಾಗಿನ ಸಾರಿಗೆ ಆಯ್ಕೆಯನ್ನು ಸಾಂಪ್ರದಾಯಿಕ ಕುಟುಂಬ ಕೇಂದ್ರಿತ ರೀತಿಯಲ್ಲಿ ಎದುರುಗೊಳ್ಳುವ ಬದಲು ಹೆಚ್ಚು ವಿಭಿನ್ನವಾಗಿ ನೋಡುವಂತೆ ಮಾಡುತ್ತಿದೆ" ಎಂದು ಸಂಶೋಧಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
Published by:Divya D
First published: