ನೀವು ದಿನನಿತ್ಯ ಕಾಫಿ ಕುಡಿಯುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಮೈಗ್ರೇನ್ ಸಮಸ್ಯೆಯಿಂದ 10 ಕೋಟಿಗೂ ಅಧಿಕ ಮಂದಿ ಬಳಲುತ್ತಿದ್ದಾರೆ. ಇದಕ್ಕೆ ಒಂದು ಕಾರಣ ನಾವು ದಿನನಿತ್ಯ ಸೇವಿಸುವ ಕಾಫಿ ಎಂದು ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.

zahir | news18-kannada
Updated:August 21, 2019, 6:36 PM IST
ನೀವು ದಿನನಿತ್ಯ ಕಾಫಿ ಕುಡಿಯುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ
coffee
  • Share this:
ಮುಂಜಾನೆ ಎದ್ದ ತಕ್ಷಣ ಕೆಲವರಿಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ, ಮತ್ತೆ ಕೆಲವರಿಗೆ ಕಾಫಿ ಇರಲೇಬೇಕು. ಇನ್ನು ಆಫೀಸ್​ನಲ್ಲಿ ಟೀ ಬ್ರೇಕ್ ಇದ್ದೇ ಇರುತ್ತದೆ. ಹಾಗೆಯೇ ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಅಥವಾ ಫ್ರೆಂಡ್​ ಜೊತೆಗೂ ಒಂದೆರೆಡು ಕಪ್ ಕಾಫಿ ಹೀರುವವರು ಇದ್ದಾರೆ. ಹೀಗೆ ಪ್ರತಿನಿತ್ಯ ಕಡಿಮೆ ಅಂದರೂ ಐದಾರು ಕಪ್ ಕಾಫಿ ಕುಡಿಯುವರಿದ್ದಾರೆ. ಇಂತಹದೊಂದು ಅಭ್ಯಾಸದಿಂದ ನೀವು ಕಾಫಿ ಪ್ರಿಯರು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಇತ್ತೀಚಿನ ಅಧ್ಯಯನವೊಂದು ದಿನದಲ್ಲಿ ಮೂರು ಕಪ್​ಗಿಂತ ಹೆಚ್ಚು ಬಾರಿ ಕಾಫಿ ಕುಡಿಯುವುದು ಅಪಾಯಕಾರಿ ಎಂದು ತಿಳಿಸಿದೆ.

ಪ್ರತಿ ದಿನ ಮೂರಕ್ಕಿಂತ ಹೆಚ್ಚು ಬಾರಿ ಕಾಫಿ ಸೇವಿಸುವವರಲ್ಲಿ ಮೈಗ್ರೇನ್ ತಲೆನೋವು ಕಂಡು ಬರುತ್ತದೆ ಎಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ತಲೆನೋವಿಗೆ ತಲೆನೋವಾಗಿರುವ ಮೈಗ್ರೇನ್ ಸಮಸ್ಯೆಯಿಂದ 10 ಕೋಟಿಗೂ ಅಧಿಕ ಮಂದಿ ಬಳಲುತ್ತಿದ್ದಾರೆ. ಇದಕ್ಕೆ ಒಂದು ಕಾರಣ ನಾವು ದಿನನಿತ್ಯ ಸೇವಿಸುವ ಕಾಫಿ ಎಂದು ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಅಂದರೆ ಒಂದು ದಿನ ನಾಲ್ಕೈದು ಕಪ್ ಕಾಫಿ ಕುಡಿಯುವವರಲ್ಲಿ ಮೈಗ್ರೇನ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿರುವ ಬೆಥ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್​ನ ಸಂಶೋಧಕರು ಅತಿಯಾಗಿ ಕಾಫಿ ಸೇವಿಸುವವರಲ್ಲಿ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಹೆಚ್ಚಿನವರು ಮೈಗ್ರೇನ್ ಸಮಸ್ಯೆಗೆ ತುತ್ತಾಗಿದ್ದರು ಎಂದು ಸಂಶೋಧಕರ ತಂಡ ತಿಳಿಸಿದೆ. ಹೀಗಾಗಿ ದಿನನಿತ್ಯದ ಪಾನೀಯಗಳಲ್ಲಿ ಕಾಫಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಲು ಅಧ್ಯಯನ ತಂಡ ತಿಳಿಸಿದೆ.

ಮೈಗ್ರೇನ್​ನ ಲಕ್ಷಣಗಳು:
- ತುಂಬಾ ಮತ್ತು ಅಸಹನೀಯ ತಲೆನೋವು
- ವಾಕರಿಕೆ ಮತ್ತು ವಾಂತಿ
- ಹೊಡೆದಂತಾಗುವ ತೀವ್ರವಾದ ತಲೆಗೆ ನೋವು- ಬಾಯಾರಿಕೆ

ಪರಿಹಾರ:
- ಪ್ರತಿದಿನ ಉಪಾಹಾರ ಮತ್ತು ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ
- ಚೆನ್ನಾಗಿ ನಿದ್ರಿಸಿ
- ವ್ಯಾಯಾಮ ಕಡೆ ಗಮನ ನೀಡಿ
- ಧೂಮಪಾನದಿಂದ ದೂರವಿರಿ
-ಸಾಧ್ಯವಾದಷ್ಟು ಕಾಫಿ ಸೇವನೆ ಕಡಿಮೆ ಮಾಡಿ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ


First published: August 21, 2019, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading