Lung Cancer Symptoms: ಈ 11 ರೋಗಲಕ್ಷಣಗಳು ಶ್ವಾಸಕೋಶದ ಕ್ಯಾನ್ಸರ್ ಗೆ ಸಂಬಂಧಿಸಿವೆಯಂತೆ! ನಿರ್ಲಕ್ಷಿಸದಿರಿ

ಭಾರತದಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದ ಸಾವುಗಳಲ್ಲಿ ಸುಮಾರು 8.1 ಪ್ರತಿಶತದಷ್ಟು ಈ ಶ್ವಾಸಕೋಶದ ಕ್ಯಾನ್ಸರ್ ನಿಂದ ಉಂಟಾಗುತ್ತವೆ ಎಂದು ಹೇಳಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಜನವರಿ 1, 2012 ಮತ್ತು ಡಿಸೆಂಬರ್ 31, 2019 ರ ನಡುವೆ ರೋಗನಿರ್ಣಯ ಮಾಡಲಾದ ವಯಸ್ಕರಲ್ಲಿ 698 ಪ್ರಾಥಮಿಕ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಮೇಲೆ ನಡೆಸಿದ ಸಂಶೋಧನಾ ಅಧ್ಯಯನವು ಶ್ವಾಸಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದಂತಹ 11 ರೋಗಲಕ್ಷಣಗಳನ್ನು ಕಂಡು ಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ಯಾನ್ಸರ್  (Cancer) ರೋಗದ ಹೆಸರು ಕೇಳಿದ್ರೆ ಬಹುತೇಕರಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ . ಏಕೆಂದರೆ ಈ ಕ್ಯಾನ್ಸರ್ ರೋಗವೇ ಅಂತದ್ದು, ಇದರಲ್ಲಿ ಅನೇಕ ರೀತಿಯ ಕ್ಯಾನ್ಸರ್ ರೋಗಗಳ ಪ್ರಕಾರಗಳಿವೆ. ಭಾರತದಲ್ಲಿ (India) ಕ್ಯಾನ್ಸರ್ ಗೆ ಸಂಬಂಧಿಸಿದ ಸಾವುಗಳಲ್ಲಿ  (Death) ಸುಮಾರು 8.1 ಪ್ರತಿಶತದಷ್ಟು ಈ ಶ್ವಾಸಕೋಶದ ಕ್ಯಾನ್ಸರ್ (Lung Cancer) ನಿಂದ ಉಂಟಾಗುತ್ತವೆ ಎಂದು ಹೇಳಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಜನವರಿ 1, 2012 ಮತ್ತು ಡಿಸೆಂಬರ್ 31, 2019 ರ ನಡುವೆ ರೋಗನಿರ್ಣಯ ಮಾಡಲಾದ ವಯಸ್ಕರಲ್ಲಿ 698 ಪ್ರಾಥಮಿಕ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಮೇಲೆ ನಡೆಸಿದ ಸಂಶೋಧನಾ ಅಧ್ಯಯನವು ಶ್ವಾಸಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದಂತಹ 11 ರೋಗಲಕ್ಷಣಗಳನ್ನು ಕಂಡು ಕೊಂಡಿದೆ. ಈ ಅಧ್ಯಯನವನ್ನು medrxiv.org ಎಂಬ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ ಮತ್ತು ಇನ್ನೂ ಇದರ ವಿಮರ್ಶೆ ಮಾಡಲಾಗಿಲ್ಲ.

ಈ ಅಧ್ಯಯನವು ಕಂಡು ಕೊಂಡ ರೋಗಲಕ್ಷಣಗಳು ಹಿಮೋಪ್ಟಿಸಿಸ್ ನಂತಹ ಅಪರೂಪದ ರೋಗಲಕ್ಷಣಗಳಿಂದ ಹಿಡಿದು ನಿರಂತರ ಕೆಮ್ಮು ಮತ್ತು ವಿಪರೀತ ದೇಹದಲ್ಲಿನ ತೂಕ ಕಡಿಮೆ ಆಗಬಹುದಾದಂತಹ ಸಾಮಾನ್ಯ ರೋಗಲಕ್ಷಣಗಳವರೆಗೆ ಇರುತ್ತವೆ. ಈ ಅಧ್ಯಯನದಲ್ಲಿ ಭಾಗಿಯಾಗಿದ್ದಂತಹ ರೋಗಿಗಳು ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೇಟರಿ ಆರೈಕೆಯನ್ನು ಪಡೆದ ರೋಗಿಗಳಾಗಿದ್ದರು. ಕ್ಯಾನ್ಸರ್ ರಿಸರ್ಚ್ ಯುಕೆ ಮತ್ತು ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಈ ಅಧ್ಯಯನಕ್ಕೆ ಧನಸಹಾಯ ನೀಡಿವೆ.

ಶ್ವಾಸಕೋಶದ ಕ್ಯಾನ್ಸರ್ ನ ಹರಡುವಿಕೆ ಎಷ್ಟರ ಮಟ್ಟಿಗಿದೆ?
ಶ್ವಾಸಕೋಶದ ಕ್ಯಾನ್ಸರ್ ವಿಶ್ವದಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದು ರೋಗನಿರ್ಣಯ ಮಾಡಲಾದ ಎಲ್ಲಾ ಕ್ಯಾನ್ಸರ್ ಗಳಲ್ಲಿ 5.9 ಪ್ರತಿಶತದಷ್ಟು ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿದ ಎಲ್ಲಾ ಸಾವುಗಳಲ್ಲಿ 8.1 ಪ್ರತಿಶತದಷ್ಟಿದೆ.

ಇದನ್ನೂ ಓದಿ: Delivery after Diet: ಹೆರಿಗೆಯ ನಂತರ ತಾಯಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು? ಇಲ್ಲಿದೆ ಮಾಹಿತಿ

"ಈ ರೋಗವು ಹೆಚ್ಚಾಗಿ ದಶಕಗಳಿಂದ ವಯಸ್ಸಾದ ಮತ್ತು ಹೆಚ್ಚು ತಂಬಾಕು ಸೇದುವ ಪುರುಷರನ್ನು ಪ್ರಮುಖವಾಗಿ ಬಾಧಿಸುವುದರಿಂದ ಹಿಡಿದು, ಯುವ ವಯಸ್ಸಿನ, ಧೂಮಪಾನಿಗಳಲ್ಲದವರು ಮತ್ತು ಆಗಾಗ್ಗೆ ಧೂಮಪಾನ ಮಾಡುವವರ ಮತ್ತು ಮಹಿಳೆಯರ ಮೇಲೆ ಈ ಶ್ವಾಸಕೋಶದ ಕ್ಯಾನ್ಸರ್ ತುಂಬಾನೇ ಪರಿಣಾಮ ಬೀರುತ್ತಿದೆ" ಎಂದು 2021ರ ಸಂಶೋಧನಾ ಅಧ್ಯಯನವು ಹೇಳುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಗೆ ಭಿನ್ನವಾದ ರೋಗಲಕ್ಷಣಗಳು ಯಾವುವು?
ಶ್ವಾಸಕೋಶದ ಕ್ಯಾನ್ಸರ್ ಗೆ ಗಮನಾರ್ಹವಾಗಿ ಸಂಬಂಧಿಸಿದ ಈ ಕೆಳಗಿನ 11 ರೋಗಲಕ್ಷಣಗಳನ್ನು ಅಧ್ಯಯನವು ಕಂಡು ಕೊಂಡಿದೆ ನೋಡಿ:

  1. ಫಿಂಗರ್ ಕ್ಲಬ್ಬಿಂಗ್

  2. ಹಿಮೋಪ್ಟಿಸಿಸ್ 

  3. ಕೆಮ್ಮು

  4. ಎದೆಯ ಉಬ್ಬಸ

  5. ಲಿಂಫಡೆನೊಪತಿ 

  6. ಮೂಳೆ ನೋವು

  7. ತೂಕ ಕಡಿಮೆಯಾಗುವುದು

  8. ಆಯಾಸವಾಗುವುದು

  9. ಬೆನ್ನು ನೋವು

  10. ಕಡಿಮೆ ಉಸಿರಾಡುವಿಕೆ

  11. ಎದೆ ನೋವು


ಈ ಎಲ್ಲಾ ರೋಗಲಕ್ಷಣಗಳಲ್ಲಿ ಹಿಮೋಪ್ಟಿಸಿಸ್, ಕೆಮ್ಮು, ಎದೆಯ ಉಬ್ಬಸ, ಮೂಳೆ ನೋವು, ಬೆನ್ನು ನೋವು, ತೂಕ ಕಡಿಮೆಯಾಗುವುದು ಮತ್ತು ಆಯಾಸವಾಗುವುದು ಆಗಿದೆ. ರೋಗನಿರ್ಣಯವಾಗುವ ಆರು ತಿಂಗಳ ಮೊದಲು ಶ್ವಾಸಕೋಶದ ಕ್ಯಾನ್ಸರ್ ನೊಂದಿಗೆ ಗಮನಾರ್ಹವಾಗಿ ಸಂಬಂಧಿಸಿದೆ ಎಂದು ಅಧ್ಯಯನವು ತೀರ್ಮಾನಿಸಿದೆ.

ಇವುಗಳಲ್ಲಿ, ತೂಕ ಕಡಿಮೆಯಾಗುವುದನ್ನು ಹೊರತುಪಡಿಸಿ ಉಳಿದೆಲ್ಲವೂ ರೋಗನಿರ್ಣಯವಾಗುವ 12 ತಿಂಗಳ ಮೊದಲು ಪ್ರಕರಣಗಳೊಂದಿಗೆ ಗಮನಾರ್ಹವಾಗಿ ಸಂಬಂಧ ಹೊಂದಿವೆ. ಉಸಿರಾಟದ ತೊಂದರೆ ಮತ್ತು ಎದೆ ನೋವು ರೋಗನಿರ್ಣಯವಾಗುವ 3 ತಿಂಗಳ ಮೊದಲು, ಲಿಂಫಡೆನೊಪತಿ ಮತ್ತು ಫಿಂಗರ್ ಕ್ಲಬ್ಬಿಂಗ್ 1 ತಿಂಗಳ ಮೊದಲು ಕಾಣಿಸಿಕೊಳ್ಳುತ್ತವೆ" ಎಂದು ಅಧ್ಯಯನವು ಕಂಡು ಹಿಡಿದಿದೆ.

ಈ ಸಂಶೋಧನಾ ಅಧ್ಯಯನವು ಏಕೆ ಮುಖ್ಯವಾಗಿದೆ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುವ ವೇಳೆಗೆ ಅದು ತುಂಬಾನೇ ಮುಂದುವರಿದ ಹಂತದಲ್ಲಿರುತ್ತದೆ ಎಂದು ಹೇಳಲಾಗುತ್ತಿದೆ. ರೋಗದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗಲಕ್ಷಣಗಳು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಆದಾಗ್ಯೂ, ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗಳು ದೇಹಕ್ಕೆ ಸಣ್ಣ ಸಂಕೇತಗಳನ್ನು ನೀಡುತ್ತದೆ, ಅದನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಇದನ್ನೂ ಓದಿ: Health Tips: ನೀವು ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಮನೆ ಮದ್ದು ಟ್ರೈ ಮಾಡಿ

ಈ ರೋಗಲಕ್ಷಣಗಳು ನಮಗೆ ತುಂಬಾನೇ ಸಾಮಾನ್ಯವೆಂದು ತೋರಿದರೂ, ದೇಹದಲ್ಲಿ ದೀರ್ಘಕಾಲದವರೆಗೆ ಉಳಿಯುತ್ತವೆ ಮತ್ತು ರೋಗವು ಮುಂದುವರಿದಂತೆ ಕ್ರಮೇಣ ತೀವ್ರತೆಯಲ್ಲಿ ಹೆಚ್ಚುತ್ತವೆ. ಹಲವಾರು ಆರೋಗ್ಯ ವರದಿಗಳ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಅನ್ನು ರೋಗದ 3 ಅಥವಾ 4ನೆಯ ಹಂತದಲ್ಲಿ ಪತ್ತೆ ಹಚ್ಚಲಾಗುತ್ತದೆ.

ಆದ್ದರಿಂದ ಈ ರೋಗಕ್ಕೆ ಸಂಬಂಧಿಸಿದ ರೋಗಲಕ್ಷಣಗಳ ಮಾದರಿಯನ್ನು ಗುರುತಿಸುವುದು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗಕ್ಕೆ ಬೇಗನೆ ಚಿಕಿತ್ಸೆ ಶುರು ಮಾಡಲು ವೈದ್ಯರಿಗೆ ಸಹಾಯ ಮಾಡುತ್ತದೆ.
Published by:Ashwini Prabhu
First published: