ಪಾನ್ ಕಾರ್ಡ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ ಇಷ್ಟೆಲ್ಲಾ ಬೆನಿಫಿಟ್ಸ್!; ಸ್ಟುಡೆಂಟ್​ ಪಾನ್​ ಕಾರ್ಡ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್​​ಲೈನ್​​ ಮೂಲಕ ಪಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಲು ಬಯಸುವುದಾದರೆ ಮೊದಲು ಎನ್ಎಸ್​​ಡಿಎಲ್ ಅಥವಾ ಯುಟಿಐಐಎಸ್ಎಲ್ ವೆಬ್​ಸೈಟ್​​ಗೆ ಭೇಟಿ ನೀಡಬೇಕು.

news18-kannada
Updated:October 1, 2020, 7:33 PM IST
ಪಾನ್ ಕಾರ್ಡ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ ಇಷ್ಟೆಲ್ಲಾ ಬೆನಿಫಿಟ್ಸ್!; ಸ್ಟುಡೆಂಟ್​ ಪಾನ್​ ಕಾರ್ಡ್​ಗೆ ಅರ್ಜಿ ಸಲ್ಲಿಸುವುದು ಹೇಗೆ?
ಆನ್​​ಲೈನ್​​ ಮೂಲಕ ಪಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಲು ಬಯಸುವುದಾದರೆ ಮೊದಲು ಎನ್ಎಸ್​​ಡಿಎಲ್ ಅಥವಾ ಯುಟಿಐಐಎಸ್ಎಲ್ ವೆಬ್​ಸೈಟ್​​ಗೆ ಭೇಟಿ ನೀಡಬೇಕು.
  • Share this:
ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್ ಕಾರ್ಡ್) ಇಂದು ಅತಿ ಮುಖ್ಯವಾಗಿದೆ. ಭಾರತೀಯ ಆದಾಯ ತೆರಿಗೆ ಇಲಾಖೆ ದೃಢಿಕರೀಸಿ ಈ ಕಾರ್ಡ್ ಅನ್ನು ನೀಡುತ್ತದೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ.


ಪಾನ್​​ ಕಾರ್ಡ್
ವಿದ್ಯಾರ್ಥಿಗಳಿಗೂ ಪಾನ್ ಕಾಡ್​ನಿಂದ ಹಲವಾರು ಉಪಯೋಗಗಳಿವೆ. ವಿದ್ಯಾರ್ಥಿಯಾಗಿರುವಾಗ ಸುಲಭವಾಗಿ ಪಾನ್​ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಆಫ್ ಲೈನ್ ಮತ್ತು ಆನ್​ಲೈನ್ ಮೂಲಕ ಪಾನ್​​ ಕಾರ್ಡ್​ ಮಾಡಬಹುದಾಗಿದೆ.


ವಿದ್ಯಾರ್ಥಿಗಳಿಗೆ ಪಾನ್ ಕಾರ್ಡ್ ಮಾಡಿಸಲು ಸುಲಭ ವಿದಾನವನ್ನು ಇಲ್ಲಿ ನೀಡಲಾಗಿದೆ.


ಆನ್​​ಲೈನ್​​ ಮೂಲಕ ಪಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಲು ಬಯಸುವುದಾದರೆ ಮೊದಲು ಎನ್ಎಸ್​​ಡಿಎಲ್ ಅಥವಾ ಯುಟಿಐಐಎಸ್ಎಲ್ ವೆಬ್​ಸೈಟ್​​ಗೆ ಭೇಟಿ ನೀಡಬೇಕು. ನಂತರ ಫಾರ್ಮ್ 49ಎ ಅನ್ನು ಭರ್ತಿ ಮಾಡಬೇಕು.


ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆ ಪೂರ್ತಿಗೊಳಿಸಿದ ಬಳಿಕ 15 ಅಂಕೆಗಳ ಸಂಖ್ಯೆ ಸಿಗುತ್ತದೆ. ಪಾನ್ ಕಾರ್ಡ್ ಮಾಡುವ ವಿದ್ಯಾರ್ಥಿ ಭಾರತ ಮೂಲದವರಾಗಿದ್ದರೆ 110 ರೂ ನೀಡಬೇಕು.


ಹೊರಗಿನವರಾದರೆ 1020 ರೂ ಪಾವತಿಸಬೇಕು. ಈ ಪಾವತಿ ಪ್ರಕ್ರಿಯೆಯನ್ನು ಆಲ್​ಲೈನ್​ ಮೂಲಕ ಮಾಡಬೇಕು.


ಆನ್​ಲೈನ್​ ಪಾವತಿ ಮಾಡಿದ ನಂತರ ವ್ಯಕ್ತಿ ಪಾಸ್​​ಸ್ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿ ಬೇಕಾಗುತ್ತದೆ. ಅದರ ಜೊತೆಗೆ ಗುರುತಿನ ಚೀಟಿ, ವಿಳಾಸ, ಹುಟ್ಟಿದ ದಿನಾಂಕದ ಪುರಾವೆಯನ್ನು ಲಗತ್ತಿಸಿ ಆದಾಯ ತೆರಿಗೆ ಇಲಾಗೆಗೆ ಕಳುಹಿಸಬೇಕು.
ಅರ್ಜಿಯನ್ನು ಸಲ್ಲಿಸಿದ 15 ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ತಲುಪುತ್ತದೆ. ನಂತರ ವ್ಯಕ್ತಿ ಅರ್ಜಿಯಲ್ಲಿ ನೀಡಿದ ಸ್ಥಳಕ್ಕೆ ಪಾನ್​ಕಾರ್ಡ್ ಅಂಚೆ ಮೂಲಕ ಬರುತ್ತದೆ.


ಪಾನ್​​ ಕಾರ್ಡ್​


ಪಾನ್​​ ಕಾರ್ಡ್​
Published by: Harshith AS
First published: October 1, 2020, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading