• Home
 • »
 • News
 • »
 • lifestyle
 • »
 • Weight Loss: ಹೊಟ್ಟೆ ಭಾಗದಲ್ಲಿಯ ಹಠಮಾರಿ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಟಿಪ್ಸ್​

Weight Loss: ಹೊಟ್ಟೆ ಭಾಗದಲ್ಲಿಯ ಹಠಮಾರಿ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಟಿಪ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಟ್ಟೆ ಭಾಗದ ಹಠಮಾರಿ ಕೊಬ್ಬನ್ನು ಕರಗಿಸಲು ಇಲ್ಲಿ ಕೆಲವು ಸರಳ ಸಲಹೆ ತಿಳಿಸಲಾಗಿದೆ. ಇವುಗಳನ್ನು ನೀವು ಅನುಸರಿಸಿದ್ರೆ ನಿಮ್ಮ ಹೊಟ್ಟೆ ಭಾಗದ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಕಾರಿ ಆಗುತ್ತದೆ. ದೇಹದಲ್ಲಿ ಮೊದಲು ಕೊಬ್ಬು ಸಂಗ್ರಹವಾಗುವುದೇ ಹೊಟ್ಟೆಯ ಸುತ್ತ. ಹೊಟ್ಟೆ ಭಾಗದ ಕೊಬ್ಬನ್ನು ಹೋಗಲಾಡಿಸುವುದು ತುಂಬಾ ಕಷ್ಟ.

ಮುಂದೆ ಓದಿ ...
 • Share this:

  ತೂಕ ಇಳಿಕೆಯಲ್ಲಿ (Weight Loss) ಹೊಟ್ಟೆಯ ಕೊಬ್ಬು (Belly Fat) ಕರಗಿಸುವುದು ಸಾಕಷ್ಟು ಸಮಯ ಮತ್ತು ಶ್ರಮ (Time And Effort) ಬೇಕಾಗುತ್ತದೆ. ದೇಹದ ಕೊಬ್ಬು (Obesity) ಕರಗಿಸಲು ವ್ಯಯಿಸುವ ದುಪ್ಪಟ್ಟು ಸಮಯ ಮತ್ತು ಶ್ರಮ ಹೊಟ್ಟೆ ಕೊಬ್ಬು ಕರಗಿಸುವಾಗ ಹೋಗುತ್ತದೆ. ಕಿಬ್ಬೊಟ್ಟೆಯ ಕೊಬ್ಬು ತುಂಬಾ ಅಸಹ್ಯ ತಂದೊಡ್ಡುತ್ತದೆ. ಇಷ್ಟದ ಬಟ್ಟೆ ಸೈಜ್ ಸಿಗುವುದಿಲ್ಲ. ಸಿಕ್ಕರೂ ಹೊಟ್ಟೆಯಿಂದಾಗಿ ಕೆಟ್ಟದಾಗಿ ಕಾಣಿಸುತ್ತದೆ. ಹಾಗಾಗಿ ತುಂಬಾ ಜನರು ಹೊಟ್ಟೆ ಕೊಬ್ಬು ಕರಗಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ಕೆಲವರು ಬೇಸತ್ತು ಅರ್ಧಕ್ಕೆ ಕಸರತ್ತನ್ನು ಕೈ ಬಿಡ್ತಾರೆ. ಆದರೆ ಹಾಗೆ ಮಾಡ್ಬೇಡಿ. ಇಲ್ಲಿ ಕೆಲವು ಡಯಟ್ ಟಿಪ್ಸ್ (Diet Tips) ಹೇಳಲಾಗಿದೆ.


  ಹೊಟ್ಟೆ ಭಾಗದ ಹಠಮಾರಿ ಕೊಬ್ಬನ್ನು ಕರಗಿಸಲು ಸಿಂಪಲ್ ಟಿಪ್ಸ್ ಹೀಗಿದೆ


  ಹೊಟ್ಟೆ ಭಾಗದ ಹಠಮಾರಿ ಕೊಬ್ಬನ್ನು ಕರಗಿಸಲು ಇಲ್ಲಿ ಕೆಲವು ಸರಳ ಸಲಹೆ ತಿಳಿಸಲಾಗಿದೆ. ಇವುಗಳನ್ನು ನೀವು ಅನುಸರಿಸಿದ್ರೆ ನಿಮ್ಮ ಹೊಟ್ಟೆ ಭಾಗದ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಕಾರಿ ಆಗುತ್ತದೆ. ದೇಹದಲ್ಲಿ ಮೊದಲು ಕೊಬ್ಬು ಸಂಗ್ರಹವಾಗುವುದೇ ಹೊಟ್ಟೆಯ ಸುತ್ತ.


  ಅಷ್ಟೇ ಅಲ್ಲ, ಹೊಟ್ಟೆ ಭಾಗದ ಕೊಬ್ಬನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಇದು ನಿಮಗೂ ಗೊತ್ತಿರಬಹುದು. ಕಿಬ್ಬೊಟ್ಟೆಯ ಕೊಬ್ಬು ಅಸಹ್ಯಕರ. ಜೊತೆಗೆ ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗ ಹಾಗೂ ಚಯಾಪಚಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಹೊಟ್ಟೆಯ ಕೊಬ್ಬನ್ನು ತೊಡೆದು ಹಾಕಲು ಪ್ರಯತ್ನಿಸಿ.
  ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸಲು ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದು ತುಂಬಾ ಪ್ರಯೋಜನ ನೀಡುತ್ತದೆ. ಯೋಗ ಮಾಡಿದ್ರೆ, ಉತ್ತಮ ಆಹಾರ ಪದ್ಧತಿ ಫಾಲೋ ಮಾಡಿದ್ರೆ, ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಂಡರೆ ಬೇಗ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.


  ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕೆಲವು ಡಯಟ್ ಟಿಪ್ಸ್ ನೀಡಿದ್ದಾರೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಮುಖ್ಯ ಗುರಿಯಾಗಿರಲಿ. ಹೆಚ್ಚಿನ ಜನರು ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಆಹಾರ ಮತ್ತು ವ್ಯಾಯಾಮ ಪ್ರಯತ್ನಿಸುತ್ತಾರೆ.


  ಅಲ್ಪಾವಧಿಗೆ ಕೆಲವು ಇಂಚು ಕಡಿಮೆ ಆಗಬಹುದು. ಆದ್ರೆ ನೀವು ಈ ಆಹಾರದ ಬದಲಾವಣೆ ಮಾಡಿದ್ರೆ ಹೆಚ್ಚಿನ ತೂಕ ಇಳಿಕೆ ಮಾಡಬಹುದು.


  ಆಹಾರದಲ್ಲಿ ಫೈಬರ್ ಪದಾರ್ಥ ಸೇವಿಸಿ


  ಫೈಬರ್ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ. ಇದು ಕೊಬ್ಬನ್ನು ಸುಡುತ್ತದೆ. ಆಹಾರದಲ್ಲಿ ಕಡಿಮೆ ಕ್ಯಾಲೊರಿ ಪದಾರ್ಥ ಸೇರಿಸಿ. ಇದು ನಿಮಗೆ ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ.


  ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಸ್ಥೂಲಕಾಯ ಕಡಿಮೆ ಆಗುತ್ತದೆ. ಗೋಧಿ ಹಿಟ್ಟು, ಓಟ್ ಹೊಟ್ಟು ಮತ್ತು ಜೋಳ ಅತ್ಯುತ್ತಮವಾದ ಫೈಬರ್ ಆಹಾರ ಪದಾರ್ಥಗಳಾಗಿವೆ.


  ಸಾಂದರ್ಭಿಕ ಚಿತ್ರ


  ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸೇವನೆ ತಪ್ಪಿಸಿ


  ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜ ಪದಾರ್ಥವಿರುವುದಿಲ್ಲ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ದೇಹಕ್ಕೆ ಯಾವುದೇ ಪ್ರಯೋಜನ ನೀಡಲ್ಲ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವನೆಯಿಂದ


  ಹಾರ್ಮೋನ್ ಅಸಮತೋಲನ, ಸ್ಥೂಲಕಾಯ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಬಿಳಿ ಅಕ್ಕಿ, ಬಿಳಿ ಬ್ರೆಡ್, ಕೇಕ್ ಮತ್ತು ಪಿಜ್ಜಾ, ಬರ್ಗರ್ ನಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವಿಸದಿರುವಂತೆ ಸಲಹೆ ನೀಡಿದ್ದಾರೆ.


  ಕಾರ್ಬೋಹೈಡ್ರೇಟ್‌ ಪದಾರ್ಥಗಳ ಸೇವನೆ ಮಿತವಾಗಿರಲಿ


  ತಜ್ಞರ ಪ್ರಕಾರ 40 ವರ್ಷ ವಯಸ್ಸಿನ ನಂತರ ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು 40% ರಷ್ಟು ಕಡಿಮೆ ಮಾಡಿ ಅಂತಾರೆ. ವಯಸ್ಸು ಹೆಚ್ಚಾದಂತೆ ಕಾರ್ಬೋಹೈಡ್ರೇಟ್‌ ಬರ್ನ್ ಮಾಡಲು ದೇಹದ ಸಾಮರ್ಥ್ಯ ಸಾಕಾಗುವುದಿಲ್ಲ. ಇದು ಹೆಚ್ಚುವರಿ ಕೊಬ್ಬು ಹೊಟ್ಟೆಯ ಸುತ್ತ ಬೆಳೆಯಲು ಕಾರಣವಾಗುತ್ತದೆ.


  ಮಿನಿ ಊಟ ಮಾಡಿ


  ಒಂದೇ ಸಮಯದಲ್ಲಿ ಭಾರವಾದ ಊಟ ಮಾಡುವುದು ಸ್ಥೂಲಕಾಯ ಹೆಚ್ಚಿಸುತ್ತದೆ. ಹಾಗಾಗಿ ಆಹಾರವನ್ನು ಚಿಕ್ಕ ಚಿಕ್ಕ ಭಾಗಗಳಲ್ಲಿ ಸೇವನೆ ಮಾಡಿ. ಆಹಾರವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿ. ಇದು ಉಬ್ಬುವಿಕೆ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ.


  ಇದನ್ನೂ ಓದಿ: ಈ ಪಾನೀಯಗಳನ್ನು ಕುಡಿದರೆ ಸಾಕು, ನಿಮ್ಮ ತೂಕ ಕಡಿಮೆ ಆಗುತ್ತೆ


  ಊಟದ ನಡುವೆ ಸಮಯದ ಅಂತರವಿರಲಿ


  ಆಹಾರ ಸೇವನೆಯ ಮಧ್ಯ ನಾಲ್ಕು ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

  Published by:renukadariyannavar
  First published: