ನಿಮಗೆ ಗರ್ಲ್​ಫ್ರೆಂಡ್​ ಸಿಗದಿರಲು ನೀವು ಬುದ್ಧಿವಂತರಾಗಿದ್ದೇ ಕಾರಣವಂತೆ!

news18
Updated:August 30, 2018, 4:46 PM IST
ನಿಮಗೆ ಗರ್ಲ್​ಫ್ರೆಂಡ್​ ಸಿಗದಿರಲು ನೀವು ಬುದ್ಧಿವಂತರಾಗಿದ್ದೇ ಕಾರಣವಂತೆ!
news18
Updated: August 30, 2018, 4:46 PM IST
-ನ್ಯೂಸ್ 18 ಕನ್ನಡ

'ಕೇವಲ ಶೇಕಡಾ 20 ರಷ್ಟು ಹುಡುಗರಿಗೆ ಮಾತ್ರ ಮೆದುಳಿದೆ. ಯಾಕೆಂದರೆ ಉಳಿದವರಿಗೆಲ್ಲಾ ಗರ್ಲ್ ಫ್ರೆಂಡ್‌ಗಳಿದ್ದಾರೆ!' ಇಂತಹದೊಂದು ಜೋಕ್ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಈ ಹಾಸ್ಯ ಚಟಾಕಿಯಲ್ಲೂ ಸತ್ಯಾಂಶವಿದೆ ಎಂದು ಹೊಸ ಸಂಶೋಧನೆಯಿಂದ ದೃಢಪಟ್ಟಿದೆ. ನಿಮಗೆ ಗರ್ಲ್​ಫ್ರೆಂಡ್ ಅಥವಾ ಬಾಯ್​ಫ್ರೆಂಡ್​ ಸಿಗದಿರಲು ಅತಿ  ತುಂಬಾ ಬುದ್ದಿವಂತರಾಗಿರುವುದೇ ಕಾರಣ ಎಂದು ಅಧ್ಯಯನ ತಂಡವೊಂದು ತಿಳಿಸಿದೆ. ನೀವು ಬುದ್ದಿವಂತರಾಗಿದ್ದರೆ ಹುಡುಗಿ/ಹುಡುಗರಿಗೆ ನಿಮ್ಮ ಮೇಲಿನ ಆಕರ್ಷಣೆ ಕಡಿಮೆ ಇರುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ. ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಲವ್ ಡೇಟಿಂಗ್ ಅಧ್ಯಯನವು ಏಕಾಂಗಿ ಹುಡುಗರ ನೋವಿಗೆ ಹಿಡಿದ ಕನ್ನಡಿಯಂತಿದೆ. ಇದಕ್ಕಾಗಿ ಸಂಶೋಧಕರು 214 ಯುವಕ-ಯುವತಿಯರ ತಳಮಳಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ವೇಳೆ ಇವರಿಗೆ ತಮ್ಮ ಸಂಗಾತಿಗೆ ಇರಬೇಕಾದ ನಾಲ್ಕು ಗುಣಲಕ್ಷಣಗಳ ಬಗ್ಗೆ ಕೇಳಲಾಗಿತ್ತು. ಬುದ್ಧಿವಂತಿಕೆ, ಸರಳತೆ, ಕರುಣೆ ಮತ್ತು ದೇಹ ಸೌಂದರ್ಯ ಈ ನಾಲ್ಕು ವ್ಯಕ್ತಿತ್ವದಲ್ಲಿ ನಿಮ್ಮ ಸಂಗಾತಿಯಲ್ಲಿ ನೀವು ಬಯಸುವುದೇನು ಎಂಬ ಪ್ರಶ್ನೆ ನೀಡಲಾಗಿತ್ತು. ತಮ್ಮ ಸಂಭಾವ್ಯ ಸಂಗಾತಿಯು ಎಷ್ಟು ಬುದ್ದಿವಂತರಾಗಿದ್ದರೆ ನಿಮ್ಮನ್ನು ಆಕರ್ಷಿಸುತ್ತಾರೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರವಾಗಿ ಶೇ.1 ರಷ್ಟು, ಶೇ.10, ಶೇ.25, ಶೇ.25, ಶೇ.50, ಶೇ.75, ಶೇ.90 ಮತ್ತು ಶೇ.99ರಷ್ಟು ಆಯ್ಕೆಗಳನ್ನು ನೀಡಲಾಗಿತ್ತು. ಹಾಗೆಯೇ ಸರಳತೆ, ಕರುಣೆ ಮತ್ತು ದೇಹ ಸೌಂದರ್ಯಕ್ಕೂ ಇದೇ ಪ್ರಶ್ನೆಯನ್ನು ಯುವ ಸಮೂಹದ ಮುಂದಿಡಲಾಗಿತ್ತು . ಆದರೆ ಇದಕ್ಕೆ ಉತ್ತರಿಸಿದ ಶೇ.90 ರಷ್ಟು ಯುವಕ-ಯುವತಿಯರು ತಮ್ಮ ಸಂಗಾತಿಗೆ ದೇಹ ಸೌಂದರ್ಯ ಮತ್ತು ಕರುಣೆ ಇದ್ದರೆ ಸಾಕೆಂದು ತಿಳಿಸಿದ್ದಾರೆ.ಅತಿ ಬುದ್ದಿವಂತಿಕೆ ಇರುವವರೊಂದಿಗೆ ಕೆಲವರಿಗೆ ಅಸುರಕ್ಷಿತ ಭಾವನೆಗಳನ್ನು ಮೂಡಿಸುತ್ತದೆ ಎಂದು ಈ ಹಿಂದಿನ ಅಧ್ಯಯನವು ತಿಳಿಸಿತ್ತು. ಇದಕ್ಕೆ ಅನುಗುಣವಾಗಿ ವಿಶ್ವಾಸ, ಅಸಾಧಾರಣ ವ್ಯಕ್ತಿತ್ವ ಅಥವಾ ಮಹತ್ವಾಕಾಂಕ್ಷೆಯ ಕೊರತೆ ಕೂಡ ಬುದ್ದಿವಂತ ಸಂಗಾತಿಯನ್ನು ಆಯ್ಕೆ ಮಾಡದಿರಲು ಕಾರಣವಾಗಿರಬಹುದು ಎಂದು ಎಂದು ಅಧ್ಯಯನ ತಂಡದಲ್ಲಿದ್ದ ಮುಖ್ಯ ಲೇಖಕ ಗಿಲ್ಲೆಸ್ ಗಿಗ್ನಾಕ್ ತಿಳಿಸಿದ್ದಾರೆ. ಇದೇ ಅಧ್ಯಯನದಲ್ಲಿ ತಮ್ಮ ಸಂಗಾತಿಯ ಆಯ್ಕೆಯಲ್ಲಿ ಹುಡುಗಿಯರು ಕರುಣೆ ಮತ್ತು ಬುದ್ದಿವಂತಿಕೆ ಕಡೆ ಪುರುಷರಿಗಿಂತ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದು ಸಾಬೀತಾಗಿದೆ. ಆದರೆ ಒಟ್ಟಾರೆ ಅಧ್ಯಯನದ ಪ್ರಕಾರ ಹುಡುಗ ಮತ್ತು ಹುಡುಗಿಯರ ಸಂಗಾತಿಗಳ ಆಯ್ಕೆಯಲ್ಲಿ ದೈಹಿಕ ಆಕರ್ಷಣೆ ಮತ್ತು ಕರುಣೆಗೆ ಮೊದಲ ಆದ್ಯತೆ ನೀಡುತ್ತಾರೆಂದು ತಿಳಿಸಿದ್ದಾರೆ. ಡೇಟಿಂಗ್ ಪಾರ್ಟನರ್ ಕುರಿತಾಗಿ ನಡೆಸಲಾದ ಈ ಅಧ್ಯಯನಕ್ಕಾಗಿ ನಾಲ್ಕು ಗುಣ ಲಕ್ಷಣಗಳನ್ನು ಸೂಚಿಸಲಾಗಿದೆ. ಈ ಮೂಲಕ ಸಂಗಾತಿಯೊಂದಿಗಿನ ತಮ್ಮ ದೀರ್ಘಕಾಲ ಸಂಬಂಧಕ್ಕೆ ಬೇಕಾಗಿರುವ ಗುಣಲಕ್ಷಣಗಳನ್ನು ಪರೀಕ್ಷಿಸಲಾಗಿತ್ತು. ಬ್ರಿಟಿಷ್ ಜರ್ನಲ್​ ಆಫ್ ಸೈಕಾಲಜಿಯಲ್ಲಿ ಪ್ರಕಟಿಸಲಾಗಿರುವ ಈ ಅಧ್ಯಯನದಿಂದ ಸಂಗಾತಿಗಳಿಲ್ಲದೆ ಕೊರಗುವ ಒಂದಷ್ಟು ಒಂಟಿ ಜೀವಗಳು ನಿಟ್ಟುಸಿರು ಬಿಟ್ಟಿರುವುದಂತು ಸುಳ್ಳಲ್ಲ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ