Weight Loss Tips: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ರೆ ಪ್ರತಿದಿನ ಹೀಗೆ ಮಾಡಿ ಸಾಕು

Tips To Loss Weight: ಪ್ರತಿಯೊಬ್ಬರು ಪ್ರತಿದಿನ ವ್ಯಾಯಾಮ ಮಾಡುವುದು ಬಹಲ ಮೂಕ್ಯ. ಕೇವಲ ತೂಕ ಇಳಿಸಲು ಮಾತ್ರವಲ್ಲದೇ ಇದು ನಮ್ಮ ಆರೋಗ್ಯವನ್ನು ಚನ್ನಾಗಿಡಲು ಸಹ ಸಹಕಾರಿ. ಹಾಗಾಗಿ ದಿನನಿತ್ಯ ತಪ್ಪದೇ ಕೇವಲ 15 ನಿಮಿಷವಾದರು ವ್ಯಾಯಾಮ ಮಾಡುವುದು ಮುಖ್ಯ. ಅದರಲ್ಲೂ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದರೆ ವ್ಯಾಯಾಮ ಮಾಡದೇ ತೂಕ ಇಳಿಸುವುದು ಸಾಧ್ಯವಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಸಿಕೊಳ್ಳುವುದು(Weight Loss) ಮಾತನಾಡಿದಷ್ಟು ಸುಲಭವಲ್ಲ. ಹೆಚ್ಚು ಜಾಗರೂಕತೆಯಿಂದ ನಾವು ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬೇಕು. ಅದರಲ್ಲೂ ಹೊಟ್ಟೆಯ ಬೊಜ್ಜು(Fat) ಎಲ್ಲರ ಚಿಂತೆಯ ವಿಚಾರ ಎಂದರೆ ತಪ್ಪಾಗಲಾರದು. ನೀವು ಗಮನಿಸಿ ನೋಡಿ ಅದೆಷ್ಟೇ ವ್ಯಾಯಾಮ ಮಾಡಿದ್ರೂ ಆಹಾರದಲ್ಲಿ ಡಯೆಟ್(Diet) ಮಾಡಿದ್ರೂ ಸಹ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಅದಕ್ಕೆ ಕೆಲವೊಂದು ಸರಳ ನಿಯಮಗಳನ್ನು ಪಾಲಿಸಿದ್ರೆ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ವ್ಯಾಯಾಮ ಮಾಡುವುದು

ಪ್ರತಿಯೊಬ್ಬರು ಪ್ರತಿದಿನ ವ್ಯಾಯಾಮ ಮಾಡುವುದು ಬಹಲ ಮೂಕ್ಯ. ಕೇವಲ ತೂಕ ಇಳಿಸಲು ಮಾತ್ರವಲ್ಲದೇ ಇದು ನಮ್ಮ ಆರೋಗ್ಯವನ್ನು ಚನ್ನಾಗಿಡಲು ಸಹ ಸಹಕಾರಿ. ಹಾಗಾಗಿ ದಿನನಿತ್ಯ ತಪ್ಪದೇ ಕೇವಲ 15 ನಿಮಿಷವಾದರು ವ್ಯಾಯಾಮ ಮಾಡುವುದು ಮುಖ್ಯ. ಅದರಲ್ಲೂ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದರೆ ವ್ಯಾಯಾಮ ಮಾಡದೇ ತೂಕ ಇಳಿಸುವುದು ಸಾಧ್ಯವಿಲ್ಲ.  ಕನಿಷ್ಟ ಇಪ್ಪತ್ತು ನಿಮಿಷಗಳ, ಸರಳ ವ್ಯಾಯಾಮಗಳ ಅಗತ್ಯ ಬಹಳಷ್ಟಿದೆ.. ಇದು ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೆ ಮೆದುಳಿನಲ್ಲಿ ಎಂಡಾರ್ಫಿನ್ನುಗಳನ್ನು ಬಿಡುಗಡೆ ಮಾಡಿ ಮನಸ್ಸನ್ನು ಮುದಗೊಳಿಸುತ್ತದೆ ಎಂಬುದು ಸಾಬೀತಾಗಿದೆ.

ಉಪ್ಪು ಸೇವನೆಯನ್ನು ತಪ್ಪಿಸಿ

ದೇಹದಲ್ಲಿ ನೀರು ಹೀರಿಕೊಳ್ಳುವುದನ್ನ ಕಡಿಮೆ ಮಾಡಲು, ನೀವು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ. ಇದರರ್ಥ ನೀವು ಉಪ್ಪಿನ ಸೇವೆನೆಯನ್ನು ತಪ್ಪಿಸಬೇಕು. ಬದಲಾಗಿ ನೀವು ಇತರ ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ನಿಮ್ಮ ಆಹಾರವನ್ನು ಸೇವನೆ ಮಾಡಬಹುದು. ನಿಮ್ಮ ಆಹಾರ ಪದ್ದತಿ ಸಹ ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನ ಮರೆಯಬೇಡಿ.

 ನೀರನ್ನು ಹೆಚ್ಚಾಗಿ ಕುಡಿಯಿರಿ

ದೇಹದಿಂದ ವಿಷವನ್ನು ಹೊರಹಾಕಲು ಸಾಕಷ್ಟು ನೀರನ್ನು ಕುಡಿಯುವುದು ಮುಖ್ಯವಾಗುತ್ತದೆ. ಇದು ನಿಮಗೆ ಹೊಳೆಯುವ ಚರ್ಮ ಮತ್ತು ಸಮತಟ್ಟಾದ ಹೊಟ್ಟೆ ಹೀಗೆ ಈ  ಎರಡು ಪ್ರಯೋಜನಗಳನ್ನು ನೀಡುತ್ತದೆ. ನೀರು ಕುಡಿಯುವುದು ಎಂದರೆ ಕೇವಲ ಒಂದು ದಿನದಲ್ಲಿ  ಕೇವಲ ನೀರನ್ನು ಕುಡಿಯುವುದು ಮಾತ್ರವಲ್ಲ, ಹಸಿರು ಚಹಾಗಳಂತಹ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುವುದು ಹಾಗೂ  ಆಂಟಿ-ಆಕ್ಸಿಡೆಂಟ್‌ಗಳಿರುವ ತಾಜಾ ತರಕಾರಿ ಮತ್ತು ಹಣ್ಣಿನ ಜ್ಯುಸ್​ಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ದೋಸೆ ಬರೀ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ

ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ಬಿಸಿ ನಿರನ್ನು ಕುಡಿಯುವುದು ಹೆಚ್ಚು ಉಪಯುಕ್ತ ಎಂದು ಹೇಳಲಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.  ನಿತ್ಯವೂ ಎದ್ದ ತಕ್ಷಣ ಎರಡು ದೊಡ್ಡ ಲೋಟದಷ್ಟು ಬಿಸಿನೀರನ್ನು ಕುಡಿಯಿರಿ. ಬಳಿಕ ಕನಿಷ್ಟ ಮೂವತ್ತರಿಂದ ನಲವತ್ತೈದು ನಿಮಿಷಗಳವರೆಗೆ ಏನನ್ನೂ ಸೇವಿಸಬಾರದು. ಆಗ ಮಾತ್ರ ದೇಹದ ತೂಕದಲ್ಲಿ ಬದಲಾವಣೆ ಮಾಡಲು ಸಾಧ್ಯ.

ಮದ್ಯಪಾನದಿಂದ ದೂರವಿರಿ

ಆಲ್ಕೊಹಾಲ್ ನಿಮ್ಮ ಹೊಟ್ಟೆಯನ್ನು ಉಬ್ಬುವಂತೆ ಮಾಡುತ್ತದೆ.ಅಲ್ಲದೇ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಸಹ ಆಲ್ಕೋಹಾಲ್ ಉತ್ತಮವಲ್ಲ. ಹಾಗಾಗಿ ಮದ್ಯಪಾನದಿಂದ ದೂರವಿರುವುದು ಒಳ್ಳೆಯದು.

ಒತ್ತಡಕ್ಕೆ ಬೈ-ಬೈ ಹೇಳಿ

ಒತ್ತಡ ಮತ್ತು ಆತಂಕವು ಕಾರ್ಟಿಸೋಲ್ ಎಂಬ ನಿರ್ದಿಷ್ಟ ಹಾರ್ಮೋನ್‌ನ ಅತಿಯಾದ ಉತ್ಪಾದನೆಗೆ ಕಾರಣವಾಗಬಹುದು, ಇದು ಹೊಟ್ಟೆ ಪ್ರದೇಶದ ತೂಕ ಹೆಚ್ಚಾಗುವುದನ್ನು ಉತ್ತೇಜಿಸುತ್ತದೆ. ಆದ್ದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಚಿಂತೆ ಮಾಡವುದನ್ನ ಬಿಡಿ.

ತಣ್ಣೀರಿನಲ್ಲಿ ಸ್ನಾನ ಮಾಡಿ

ಇದನ್ನೂ ಓದಿ: ಮುಖದ ಅಂದಕ್ಕೆ ಮನೆಯಲ್ಲಿಯೇ ಟ್ರೈ ಮಾಡಿ ಕಾಫಿ ಫೇಶಿಯಲ್

ತಣ್ಣೀರಿನ ಸ್ನಾನ ಆರೋಗ್ಯಕರ ಎಂಬುದನ್ನ ಹಲವಾರು ಅಧ್ಯಯನಗಳು ಸಾಬೀತು ಮಾಡಿದೆ. ಮೈ ಮೇಲೆ ಬಿದ್ದ ತಕ್ಷಣ ಉಂಟಾಗುವ ನಡುಕದಿಂದ ಚರ್ಮದ ಅಡಿಯಲ್ಲಿ ಶೀತಲಗೊಂಡಿದ್ದ ಅಡಿಪೋಸ್ ಅಂಗಾಂಶಗಳೂ ಚುರುಕುಗೊಳ್ಳುತ್ತವೆ. ಈ ಮೂಲಕ ಕೊಬ್ಬಿನ ಸಂಗ್ರಹ ಕಡಿಮೆಯಾಗುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಂಡು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
Published by:Sandhya M
First published: