Stroke Alert: ಹೃದಯಾಘಾತದಷ್ಟೇ ಡೇಂಜರ್ ಸ್ಟ್ರೋಕ್, ಬಚಾವಾಗೋದು ಹೇಗೆ? ವೈದ್ಯರು ವಿವರಿಸಿದ್ದಾರೆ...

Paralysis and Stroke: ಪಾರ್ಶ್ವವಾಯುವನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಒಂದೇ ಬಾರಿಗೆ ಸ್ಟ್ರೋಕ್ ಆಗುವುದನ್ನು ತಡೆಯಬಹುದು. ಈ ಲಕ್ಷಣಗಳು ಕಂಡು ಬರುತ್ತಿರುವ ಸೂಚನೆ ನಿಮಗೆ ಸಿಕ್ಕಿದ್ದರೆ ಯಾವ ಕಾರಣಕ್ಕೂ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Stroke Symptoms and Treatment: ಪಾರ್ಶ್ವವಾಯು ಬಗ್ಗೆ ಸಾಕಷ್ಟು ಜನರಿಗೆ ಅರಿವಿನ ಕೊರತೆಯಿಂದ (Loss of Awareness) ಈ ರೋಗವನ್ನು ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ. ಪ್ರತಿ ವರ್ಷ ದೇಶದಲ್ಲಿ ಸುಮಾರು 1.8 ಮಿಲಿಯನ್ ಜನರು ಪಾರ್ಶ್ವವಾಯುವಿಗೆ (Brain Stroke) ಸೂಕ್ತ ಚಿಕಿತ್ಸೆ ಪಡೆಯದೇ (Proper Treatment) ಸಾವನ್ನಪ್ಪುತ್ತಿದ್ದಾರೆ. ಸ್ಟ್ರೋಕ್‌ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಇದನ್ನು ಗುಣಪಡಿಸಬಹುದು. ಆದರೆ ನಿರ್ಲಕ್ಷಿಸಿದರೆ ಸಾವು ಸಂಭವಿಸುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ ಫೋರ್ಟಿಸ್ ಆಸ್ಪತ್ರೆಯ ಹಿರಿಯ ನರವಿಜ್ಞಾನ ಸಲಹೆಗಾರ ಡಾ ನಿತಿನ್ ಕುಮಾರ್ ಎನ್.

ಪಾರ್ಶ್ವವಾಯುವಿನ ಲಕ್ಷಣವೇನು?

ಪಾಶ್ವವಾಯು ಪ್ರಾರಂಭದಲ್ಲಿ ಅಷ್ಟಾಗಿ ದೊಡ್ಡ ಮಟ್ಟದ ಲಕ್ಷಣದ ಮೂಲಕ ಗೋಚರಿಸುವುದಿಲ್ಲ. ತೊದಲು ಮಾತನಾಡುವುದು, ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು, ಮುಖದ ಒಂದು ಭಾಗ, ಕೈ ಅಥವಾ ಕಾಲುಗಳು ಆಗಾಗ್ಗೇ ಮರಟ್ಟುತ್ತಿರುವ ಅನುಭವ, ಎರಡೂ ತೋಳುಗಳು ಹಾಗೂ ತಲೆ ಎತ್ತಲು ಸಾಧ್ಯವಾಗದೇ ಇರುವುದು, ಅತಿಯಾದ ತಲೆ ನೋವು, ದೃಷ್ಟಿ ಕೊರತೆ ಆಗುತ್ತಿರುವುದು, ನಡೆಯಲು ಕಷ್ಟವಾಗುವುದು, ತಲೆ ತಿರುಗುವಿಕೆ, ವಾಕರಿಕೆ ಪಾರ್ಶ್ವವಾಯುವಿನ ಪ್ರಮುಖ ಲಕ್ಷಣಗಳು. ಇವು ಒಮ್ಮೆಲೆ ಕಾಣಿಸಿಕೊಳ್ಳದೇ ಇದ್ದರು ಈ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ನಿಮಗೆ ಸ್ಟ್ರೋಕ್‌ ಆಗುವ ಸಾಧ್ಯತೆ ಹೆಚ್ಚು. ಇನ್ನು, ಪಾರ್ಶ್ವವಾಯುವಿನ ಲಕ್ಷಣಗಳು ಕಂಡು ಬರುತ್ತಿರುವವರಿಗೆ ಪ್ರತಿ ನಿಮಿಷಕ್ಕೆ 20 ಲಕ್ಷ ಮೆದುಳಿನ ಜೀವಕೋಶಗಳು ಸಾಯುತ್ತಿರುತ್ತದೆ. ಹೀಗಾಗಿ ಪಾಶ್ವವಾಯುವಿನ ಲಕ್ಷಣ ಕಂಡು ಬಂದರೆ ಅವರಿಗೆ ಪ್ರತಿ ನಿಮಿಷವೂ ನಿರ್ಣಾಯಕ.

ಇದನ್ನೂ ಓದಿ: Stroke: ಪಾರ್ಶ್ವವಾಯುವಿನ ಅಪಾಯದಿಂದ ದೂರವಿರಲು ನಿತ್ಯ ಇವುಗಳನ್ನು ತಪ್ಪದೆ ಸೇವಿಸಿ..!

ಇದಕ್ಕೆ ಸೂಕ್ತ ಚಿಕಿತ್ಸೆ ಏನು?

ಪಾರ್ಶ್ವವಾಯುವನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಒಂದೇ ಬಾರಿಗೆ ಸ್ಟ್ರೋಕ್ ಆಗುವುದನ್ನು ತಡೆಯಬಹುದು. ಈ ಲಕ್ಷಣಗಳು ಕಂಡು ಬರುತ್ತಿರುವ ಸೂಚನೆ ನಿಮಗೆ ಸಿಕ್ಕಿದ್ದರೆ ಯಾವ ಕಾರಣಕ್ಕೂ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಬೇಕು. ಸ್ಟ್ರೋಕ್‌ ಹೊಡೆದವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವುದು ತುರ್ತು ಅವಶ್ಯಕ. ಕೆಲವರು ಇದನ್ನು ಬಿಟ್ಟು ಕೈಗೆ ಬೀಗ ನೀಡುವುದು ಕಬ್ಬಿಣ ನೀಡುವುದು ಮಾಡುತ್ತಾರೆ. ಇದರಿಂದ ಸ್ಟ್ರೋಕ್‌ ನಿಯಂತ್ರಿಸಬಹುದು ಎಂಬುದು ತಪ್ಪು ಕಲ್ಪನೆ. ಅವರು ಆ ಕ್ಷಣದಲ್ಲಿ ನಾಲಿಗೆ ಕಚ್ಚಿಕೊಳ್ಳದಂತೆ ನೋಡಿಕೊಳ್ಳಿ. ಸ್ಟ್ರೋಕ್‌ ಆದವರಿಗೆ 4 ಗಂಟೆಯನ್ನು ಗೋಲ್ಡನ್ ಹವರ್ ಎನ್ನಲಾಗುತ್ತದೆ. ಈ ಅವಧಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸದಿದ್ದರೆ ಸಾವು ಸಂಭವಿಸಬಹುದು.

ಇದನ್ನೂ ಓದಿ: Stroke management: ಸ್ಟ್ರೋಕ್​​ನಿಂದ ಚೇತರಿಸಿಕೊಳ್ಳಲು ಈ 6 ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ

ಮಿನಿ ಸ್ಟ್ರೋಕ್‌ ಎಂದರೇನು?

ಕೆಲವರಿಗೆ ಮಿನಿ ಸ್ಟ್ರೋಕ್‌ ಸಹ ಆಗಲಿದೆ. ಇದನ್ನು ಟಿಐಎ ಎಂದು ಕರೆಯಲಾಗುತ್ತದೆ. ಇದು ಸಹ ಸ್ಟ್ರೋಕ್‌ನ ರೀತಿಯ ಲಕ್ಷಣಗಳನ್ನೇ ಒಳಗೊಂಡಿರುತ್ತದೆ. ಆದರೆ, ಟಿಐಎ ಹೊಂದಿರುವವರು ಪಾರ್ಶ್ವವಾಯು ಸಂಭವಿಸುವ ಆರಂಭಿಕ ಸಂಕೇತವಾಗಿದೆ. ಆದರೆ, ಎಲ್ಲಾ ಟಿಐಎಗಳು ಪಾರ್ಶ್ವವಾಯುವಿಗೆ ಕಾರಣವಾಗುವುದಿಲ್ಲ ಎಂದೂ ಹೇಳಲಾಗುತ್ತದೆ.

ಭಯ ಅಲ್ಲ, ಜಾಗೃತಿ ಇರಲಿ

ಪ್ರತಿಯೊಬ್ಬರು ಪಾರ್ಶ್ವವಾಯುವಿನ ಲಕ್ಷಣಗಳು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಾಮಾನ್ಯವಾಗುತ್ತಿದೆ. ಹೀಗಾಗಿ ಸ್ಟ್ರೋಕ್‌ ಬಗ್ಗೆ ಎಲ್ಲರೂ ಜಾಗೃತಿ ಹೊಂದಿರಬೇಕು.
Published by:Soumya KN
First published: