ಮೂತ್ರ ವಿಸರ್ಜನೆ (Urinary Disease) ಪದೇ ಪದೇ ಹೋಗಬೇಕಾಗಿ ಬಂದಾಗ ತುಂಬಾ ಮುಜುಗರ ಆಗುತ್ತದೆ. ಪ್ರಯಾಣದಲ್ಲಿರುವಾಗ (Travel) ಮೂತ್ರ ವಿಸರ್ಜನೆ ತೊಂದರೆಯಿಂದಾಗಿ ಎಷ್ಟೋ ಜನರು (People) ಕಡಿಮೆ ನೀರು (Water) ಕುಡಿಯುತ್ತಾರೆ. ಇನ್ನು ಕೆಲವರು ನೀರು ಕುಡಿಯುವುದೇ ಇಲ್ಲ. ಅದಾಗ್ಯೂ ಮೂತ್ರ ವಿಸರ್ಜನೆ ಬಂದಾಗ ತಡೆದು ನಿಲ್ಲಿಸುವುದು ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ (Health) ಹಾನಿ ಉಂಟು ಮಾಡುತ್ತದೆ ಅಂತಾರೆ ತಜ್ಞರು. ಮೂತ್ರ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಒಂದು ಸಾಮಾನ್ಯ ಕಾಯಿಲೆ (Disease) ಆಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ (SUI) ಎಂದು ಕರೆಯುತ್ತಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ರೋಗದಿಂದ ಬಳಲುತ್ತಿದ್ದಾರೆ.
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ (SUI) ಕಾಯಿಲೆ
ವಾಸ್ತವದಲ್ಲಿ ಮೂತ್ರವು ವೇಗವಾಗಿ ಬಂದಾಗ ತುಂಬಾ ಜನರು ಬೇಗ ಮೂತ್ರ ವಿಸರ್ಜನೆಗೆ ಹೋಗುವುದಿಲ್ಲ. ಅದನ್ನು ಸ್ವಲ್ಪ ಸಮಯ ನಿಯಂತ್ರಿಸುತ್ತಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಕೆಮ್ಮಿದಾಗ, ನಗುವಾಗ ಅಥವಾ ವ್ಯಾಯಾಮ ಮಾಡುವಾಗ ಮೂತ್ರವು ಸೋರಿಕೆ ಸಮಸ್ಯೆ ಆಗುತ್ತದೆ.
ಈ ರೋಗವು ಮುಜುಗರ ಉಂಟು ಮಾಡುತ್ತದೆ. ಈ ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡಬಹುದು. ಆದರೆ ಮೂತ್ರ ಸೋರಿಕೆ ಕಾಯಿಲೆಗೆ ಕಾರಣಗಳೇನು ಮತ್ತು ಅದನ್ನು ನಿವಾರಿಸುವುದು ಹೇಗೆ ಎಂದು ಇಲ್ಲಿ ತಿಳಿಯೋಣ.
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಕಾಯಿಲೆ ಲಕ್ಷಣಗಳು ಯಾವವು?
ಮೂತ್ರ ಹಿಡಿದಿಟ್ಟುಕೊಳ್ಳುವಲ್ಲಿ ತೊಂದರೆ ಆಗುವುದು, ತುರ್ತು ಮೂತ್ರ ವಿಸರ್ಜನೆ, ಪದೇ ಪದೇ ಮೂತ್ರ ವಿಸರ್ಜಿಸಬೇಕಾದ ಅಗತ್ಯತೆ, ಕಡಿಮೆ ಮೂತ್ರದ ಹರಿವು, ಮೂತ್ರ ವಿಸರ್ಜನೆ ವೇಳೆ ಉರಿಯೂತ ಸಮಸ್ಯೆ ಆಗುವುದು, ಮೂತ್ರ ವಿಸರ್ಜಿಸಲು ಪ್ರಯಾಸ ಪಡುವುದು, ಮೂತ್ರ ಹಾದು ಹೋದ ತಕ್ಷಣ ನಿಲ್ಲಿಸುವುದು, ಮೂತ್ರಕೋಶ ಸಂಪೂರ್ಣ ಖಾಲಿಯಾಗದೇ ಇರುವುದು, ಮೂತ್ರ ವಿಸರ್ಜನೆ ನಂತರವೂ ಕೆಲವು ಹನಿ ಹಾದು ಹೋಗುವುದು ಆಗಿದೆ.
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಗೆ ಕಾರಣಗಳೇನು?
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಸಮಸ್ಯೆಗೆ ಮುಖ್ಯ ಕಾರಣವೆಂದರೆ ದುರ್ಬಲ ಶ್ರೋಣಿಯ ಮಹಡಿ. ಶ್ರೋಣಿಯ ಮಹಡಿ ಸ್ನಾಯುಗಳು ಮೂತ್ರಕೋಶ ಬೆಂಬಲಿಸಲು ಮತ್ತು ಮೂತ್ರ ವಿಸರ್ಜನೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ನಾಯುಗಳು ದುರ್ಬಲವಾದಾಗ ಇದು ಈ ರೋಗಕ್ಕೆ ಕಾರಣವಾಗಿದೆ.
ಗರ್ಭಾವಸ್ಥೆ, ಹೆರಿಗೆ, ಋತುಬಂಧ, ವಯಸ್ಸಾಗುವಿಕೆ ಮತ್ತು ಬೊಜ್ಜು ಕೂಡ ಶ್ರೋಣಿಯ ಸ್ನಾಯುಗಳ ದುರ್ಬಲವಾಗಲು ಕಾರಣವಾಗಿದೆ. ಪುರುಷರಿಗಿಂತ ಮಹಿಳೆಯರು ಇದಕ್ಕೆ ಹೆಚ್ಚು ತುತ್ತಾಗುತ್ತಾರೆ.
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಗೆ ಚಿಕಿತ್ಸೆ ಯಾವುದು?
ಸ್ಟ್ರೆಸ್ ಯೂರಿನರಿ ಇಂಟಾಲರೆನ್ಸ್ ಚಿಕಿತ್ಸೆಗೆ ಕೆಗೆಲ್ ವ್ಯಾಯಾಮ ಮಾಡಬಹುದು. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಮೂತ್ರ ವಿಸರ್ಜನೆಗೆ ಸಂಬಂಧಪಟ್ಟ ಅಸ್ವಸ್ಥತೆ ಗುಣಪಡಿಸುತ್ತದೆ.
ತೂಕ ಇಳಿಕೆ, ಧೂಮಪಾನ ತ್ಯಜಿಸುವುದು, ಮೂತ್ರಕೋಶದ ಉದ್ರೇಕಕಾರಿ ಪದಾರ್ಥ ಸೇವನೆ ತಪ್ಪಿಸುವುದು, ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ತರುವುದು ಸಹಾಯ ಮಾಡುತ್ತದೆ.
ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು
ಕೆಗೆಲ್ ವ್ಯಾಯಾಮಗಳು ಶ್ರೋಣಿಯ ಮಹಡಿ ಸ್ನಾಯುಗಳನ್ನು ಬಲಪಡಿಸುತ್ತವೆ. ಕೆಗೆಲ್ ವ್ಯಾಯಾಮದ ವೇಳೆ ಉಸಿರಾಟ ಸಾಮಾನ್ಯವಾಗಿರಲಿ. ಮತ್ತು ನಿಮ್ಮ ಕಾಲು, ನೆಲ ಅಥವಾ ಕಿಬ್ಬೊಟ್ಟೆ ಸ್ನಾಯುಗಳ ಮೇಲೆ ಒತ್ತಡ ಹೇರಬೇಡಿ.
ಲೇಸರ್ ಚಿಕಿತ್ಸೆ
ಮೂತ್ರ ಸೋರಿಕೆಗೆ ಮತ್ತೊಂದು ಪರಿಣಾಮಕಾರಿ ಚಿಕಿತ್ಸೆಯೆಂದರೆ ಲೇಸರ್ ಚಿಕಿತ್ಸೆ. ಇದು ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಯಾಗಿದೆ. ಇದು ಶ್ರೋಣಿಯ ಮಹಡಿ ಸ್ನಾಯುಗಳ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಸುಧಾರಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ದೇಹದ ಆರೋಗ್ಯ ಕಾಪಾಡುವ ಸೌತೆಕಾಯಿ ಸೌಂದರ್ಯವನ್ನೂ ಹೆಚ್ಚಿಸುತ್ತದೆ!
ಇದೊಂದು ಸಾಮಾನ್ಯ ಸಮಸ್ಯೆ. ಇದನ್ನು ತೊಡೆದು ಹಾಕಲು ವ್ಯಾಯಾಮ, ಜೀವನಶೈಲಿ ಬದಲಾವಣೆ, ಉತ್ತಮ ಚಿಕಿತ್ಸಾ ವಿಧಾನ ಆಯ್ಕೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ