ದಿನನಿತ್ಯದ ಜೀವನದಲ್ಲಿ ಒತ್ತಡದ ನಿರ್ವಹಣೆ ಹೇಗೆ ಗೊತ್ತಾ?

news18
Updated:June 29, 2018, 11:05 AM IST
ದಿನನಿತ್ಯದ ಜೀವನದಲ್ಲಿ ಒತ್ತಡದ ನಿರ್ವಹಣೆ ಹೇಗೆ ಗೊತ್ತಾ?
news18
Updated: June 29, 2018, 11:05 AM IST
ಸುಜಾತಾ ನಾರಾಯಣ ರಾವ್, ನ್ಯೂಸ್ 18 ಕನ್ನಡ

ನಮಗೆ ಹೆದರಿಕೆಯಾದಾಗ, ಸವಾಲಿನ ಪರಿಸ್ಥಿತಿಯನ್ನು ಎದುರಿಸಲು ನಮ್ಮಲ್ಲಿ ಸಂಪನ್ಮೂಲಗಳನ್ನು ಹೊಂದಿಲ್ಲವೆಂದು ಭಾವಿಸಿದಾಗ ನಾವು ಒತ್ತಡವನ್ನು ಅನುಭವಿಸುತ್ತೇವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಕೆಲಸದ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಒತ್ತಡವು ಋಣಾತ್ಮಕ ಪರಿಣಾಮವನ್ನು ಸೂಚಿಸುತ್ತದೆ. ಒತ್ತಡದಲ್ಲಿ ಎರಡು ವಿಧಗಳಿವೆ, ಅವು ಎಸ್ಟ್ರೆಸ್ ಮತ್ತು ಡಿಸ್ಟ್ರೆಸ್.

1. ಎಸ್ಟ್ರೆಸ್: ಈ ರೀತಿಯ ಒತ್ತಡದಿಂದ ಧನಾತ್ಮಕ ಪರಿಣಾಮವುಂಟಾಗುತ್ತದೆ ಮತ್ತು ಇತರರಿಗೆ ಸಹಾಯವಾಗುತ್ತದೆ.

2. ಡಿಸ್ಟ್ರೆಸ್: ಈ ರೀತಿಯ ಒತ್ತಡದಿಂದ ಋಣಾತ್ಮಕ ಪರಿಣಾಮವುಂಟಾಗುತ್ತದೆ ಹಾಗೂ ಬೇರೆಯವರಿಗೆ ತೊಂದರೆಯಾಗುತ್ತದೆ.

'ವ್ಯಕ್ತಿಯು, ವೈಯಕ್ತಿಕ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಮೀರಿದ ಬೇಡಿಕೆಗಳನ್ನು ಗ್ರಹಿಸಿದಾಗ ಸಾಧ್ಯವಾಗದ ಪರಿಸ್ಥಿತಿ ಅಥವಾ ಭಾವನೆ ಅನುಭವಿಸುವುದನ್ನು ಒತ್ತಡವೆಂದು ವ್ಯಾಖ್ಯಾನಿಸಲಾಗಿದೆ. ಖ್ಯಾತ (ಇಜuಛಿಚಿಣioಟಿಚಿಟ Psಥಿಛಿhoಟogisಣ & ಅouಟಿseಟಟoಡಿ) ಶೈಕ್ಷಣಿಕ ಮನಶಾಸ್ತ್ರಜ್ಞ ಹಾಗೂ ಆಪ್ತಸಲಹೆಗಾರ್ತಿ ಪ್ರೊ. ಉಮಾದೇವಿ ವಿಶ್ಲೇಷಿಸಿರುವಂತೆ ಒತ್ತಡದ ಕುರಿತಾದ ಪ್ರಮುಖಾಂಶಗಳು ಹೀಗಿವೆ.

ಒತ್ತಡದ ಸಾಮಾನ್ಯ ರೋಗಲಕ್ಷಣಗಳು:

• ಆಗಾಗ್ಗೆ ತಲೆನೋವು ಕಾಣಿಸುವುದು.
Loading...

• ಕೈಗಳು ಮತ್ತು ಪಾದಗಳು ಶೀತಲವಾಗುವುದು ಅಥವಾ ಬೆವರುವುದು.

• ಆಗಾಗ್ಗೆ ಎದೆಯುರಿ, ಹೊಟ್ಟೆ ನೋವು, ಅಥವಾ ವಾಕರಿಕೆ ಬರುವುದು.

• ಭಯ ಅಥವಾ ಗಾಬರಿಯಿಂದ ಆತಂಕ ಆಗುವುದು.

• ಅತಿಯಾದ ನಿದ್ದೆ ಅಥವಾ ನಿದ್ರಾಹೀನತೆ.

• ನಿರಂತರವಾಗಿ ಗಮನವನ್ನು ಕೇಂದ್ರೀಕರಿಸುವ ತೊಂದರೆ.

• ಬ್ರಾಂತಿ ಹಾಗೂ ಒತ್ತಾಯದ ಅಥವಾ ರ್ನಿಭಂದಿತ ವರ್ತನೆಗಳು.

• ಸಾಮಾಜಿಕವಾಗಿ ದೂರವಿರುವುದು ಅಥವಾ ಪ್ರತ್ಯೇಕತಾ ಭಾವನೆ ಹೊಂದಿರುವುದು.

• ನಿರಂತರ ಆಯಾಸ.

• ಕಿರಿಕಿರಿ ಮತ್ತು ಕೋಪದ ಪರಿವರ್ತನೆ.

• ಗಮನಾರ್ಹ ತೂಕ ಹೆಚ್ಚಾಗುವುದು ಅಥವಾ ಇಳಿಯುವುದು.

ಒತ್ತಡದ ಪರಿಣಾಮಗಳು: ಒತ್ತಡವು ನಮ್ಮ ಉದ್ಯೋಗದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಾವು ಸಹುದ್ಯೋಗಿಗಳ ಜೊತೆಗೆ ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದರ ಮೇಲೂ ಪರಿಣಾಮ ಬೀರುತ್ತದೆ. ಇದು ನಮ್ಮ ವೃತ್ತಿಯ ಮೇಲೆ, ಯೋಗಕ್ಷೇಮ, ಮತ್ತು ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಒತ್ತಡದ ದೀರ್ಘಾವಧಿಯ ಪರಿಣಾಮಗಳು:

1. ಹೊಟ್ಟೆ ಉರಿಯುವಿಕೆ

2. ಹೃದಯ ಹಾಗು ರಕ್ತನಾಳ ಸಂಭಂದಿ ಕಾಯಿಲೆ

3. ಸ್ಟ್ರೋಕ್ ಅಥವಾ ಫಿಟ್ಸ್

4. ಖಿನ್ನತೆ

5. ಹೆಚ್ಚಿನ ಬಿಪಿ

6. ದುರ್ಬಲ ಪ್ರತಿರೋದಕ ಶಕ್ತಿ

ಸೂಕ್ತ ಸಲಹೆ: ಒತ್ತಡ ನಿರ್ವಹಿಸಲು ಉದ್ಯೋಗ ವಿಶ್ಲೇಷಣೆ ನಡೆಸುವುದು ಹಾಗು ಪ್ರಮುಖ ಆದ್ಯತೆಗಳನ್ನು ಇರಿಸಿಕೊಳ್ಳುವುದನ್ನು ಅಭ್ಯಾಸಿಸಿ. ಉತ್ತಮ ಸಮಯ ನಿರ್ವಹಣೆಯನ್ನು ಅನುಸರಿಸಿ, ನಕಾರಾತ್ಮಕ ಚಿಂತನೆ ಬಿಟ್ಟುಬಿಡಿ. ಧನಾತ್ಮಕ ದೃಷ್ಟಿಕೋನವನ್ನು ತರಲು ಮತ್ತು ಧನಾತ್ಮಕ ದೃಢೀಕರಣಗಳನ್ನು ಬಳಸಿಕೊಳ್ಳಿ. ಸಾಕಷ್ಟು ವ್ಯಾಯಾಮ, ಯೋಗ ಮತ್ತು ಕನಿಷ್ಠ ನಿದ್ರೆ ಮತ್ತು ಒತ್ತಡವಿರುವಾಗ ಅಲ್ಪ ವಿಶ್ರಾಂತಿ ಪಡೆಯಲು ಅಭ್ಯಾಸ ಮಾಡಿಕೊಳ್ಳಿ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...