Stress Relief Tea: ನಿತ್ಯ ಕಾಡೋ ಒತ್ತಡ, ಸುಸ್ತನ್ನು ಕಡಿಮೆ ಮಾಡಲು ಈ ಚಹಾ ಕುಡಿಯಿರಿ

ನೀವೂ ತುಂಬಾ ಬೇಗ ಸಿಟ್ಟು ಮಾಡಿಕೊಳ್ಳುವ ಸ್ವಭಾವ ಹೊಂದಿದ್ದರೆ, ಬೇಗ ಸುಸ್ತು ಆಗುತ್ತಿದ್ದರೆ, ಉದ್ವೇಗಕ್ಕೆ ಒಳಗಾಗುತ್ತಿದ್ದರೆ ಹೆಚ್ಚು ಆಲೋಚನೆ ಮಾಡಬೇಡಿ. ಯಾಕೆಂದರೆ ಖಂಡಿತ ನೀವು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು (Person) ಆಗಾಗ್ಗೆ ಯೋಚಿಸುವುದು (Thinking), ಹತ್ತು ಹಲವು ವಿಚಾರಗಳಲ್ಲಿ (Thoughts) ಹೆಚ್ಚು ಟೆನ್ಶನ್ (Tension) ಮಾಡಿಕೊಳ್ಳುವುದು, ಬೇರೆ ಬೇರೆ ವಿಚಾರಗಳಿಂದಾಗಿ ಹೆಚ್ಚು ಒತ್ತಡಕ್ಕೆ (Stress) ಒಳಗಾಗುವುದು ಆರೋಗ್ಯಕ್ಕೆ ಹಾನಿಕರ. ಮಾನಸಿಕವಾಗಿ ಹೆಚ್ಚುವ ಒತ್ತಡವು ಅನೇಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಇದು ಮುಂದೆ ದೊಡ್ಡ ಮಾನಸಿಕ ಸಮಸ್ಯೆಯಾಗಿ ಕಾಡುತ್ತದೆ. ಈ ವೇಗದ ಜೀವನದಲ್ಲಿ ಒತ್ತಡವನ್ನು ತಪ್ಪಿಸುವುದು ತುಂಬಾ ಕಷ್ಟ. ಹೀಗಾಗಿ ತುಂಬಾ ಜನರು ಯೋಗ, ಧ್ಯಾನದ ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ. ನಿಮ್ಮಲ್ಲಿ ಉಂಟಾಗುವ ಸ್ಟ್ರೆಸ್ ನ್ನು ಕೆಲವು ಸುಲಭ ಮಾರ್ಗಗಳಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.

    ಚಹಾ ಕುಡಿಯುವ ಮೂಲಕ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬಹುದು

    ನೀವೂ ತುಂಬಾ ಬೇಗ ಸಿಟ್ಟು ಮಾಡಿಕೊಳ್ಳುವ ಸ್ವಭಾವ ಹೊಂದಿದ್ದರೆ, ಬೇಗ ಸುಸ್ತು ಆಗುತ್ತಿದ್ದರೆ, ಉದ್ವೇಗಕ್ಕೆ ಒಳಗಾಗುತ್ತಿದ್ದರೆ ಹೆಚ್ಚು ಆಲೋಚನೆ ಮಾಡಬೇಡಿ. ಯಾಕೆಂದರೆ ಖಂಡಿತ ನೀವು ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬಹುದು.

    ನೀವು ಈ ಸಲಹೆಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಅಂದಹಾಗೆ ನಿಮ್ಮ ಒತ್ತಡ  ತೊಡೆದು ಹಾಕಲು ನೀವು ಯಾವ ಆಯ್ಕೆ ಅಳವಡಿಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ. ಅದಕ್ಕಾಗಿ ನೀವು ಸರಳ ಸಲಹೆ ಅನುಸರಿಸಬಹುದು.

    ಇದನ್ನೂ ಓದಿ: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

    ನೀವು ವಿವಿಧ ರೀತಿಯ ಚಹಾ ಕುಡಿಯುವ ಮೂಲಕ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಬಹುದು.  ಗಿಡಮೂಲಿಕೆ ಚಹಾ ಕುಡಿಯುವ ಮೂಲಕ ನೀವು ಒತ್ತಡವನ್ನು ನಿವಾರಿಸಬಹುದು. ಹೇಗೆ ಎಂದು ತಿಳಿಯೋಣ.

    ಅತಿಯಾದ ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಪಾರ್ಶ್ವವಾಯು, ಹೃದಯಾಘಾತ, ಅಲ್ಸರ್, ಮಾನಸಿಕ ಸಮಸ್ಯೆ ಉಂಟಾಗುವ ಸಮಸ್ಯೆ ಹೆಚ್ಚುತ್ತದೆ. ಹೆಚ್ಚು ಒತ್ತಡ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಸಮಸ್ಯೆ ನಿಭಾಯಿಸಲು, ಗಿಡಮೂಲಿಕೆ ಚಹಾ ಕುಡಿಯಬಹುದು.

    ಲೈಕೋರೈಸ್ ಚಹಾ

    ಲೈಕೋರೈಸ್ ಟೀ ಒತ್ತಡ ನಿವಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ವಾಸ್ತವವಾಗಿ ಲೈಕೋರೈಸ್ ಚಹಾ ಆತಂಕ-ವಿರೋಧಿ ಔಷಧಿಗಳ ಪರಿಣಾಮ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

    ವಲೇರಿಯನ್ ರೂಟ್ ಟೀ

    ಈ ಚಹಾ ಒತ್ತಡ ನಿವಾರಿಸುವುದು ಮಾತ್ರವಲ್ಲದೆ ಉತ್ತಮ ನಿದ್ರೆಗೆ ಉತ್ತಮವಾಗಿದೆ. ಶಾಂತಿ ಮತ್ತು ಉತ್ತಮ ನಿದ್ರೆಗೆ ಪರಿಹಾರವಾಗಿದೆ ನಮ್ಮ ಮೆದುಳಿನ ಗಾಮಾ ಅಮಿನೊಬ್ಯುಟರಿಕ್ ಆಮ್ಲದ ವಿಭಜನೆ ಕಡಿಮೆ ಮಾಡಲು ವ್ಯಾಲೆರಿನಿಕ್ ಆಮ್ಲ ಒಳ್ಳೆಯದು.

    ಕೆಟನಿಪ್ ಚಹಾ

    ಈ ಚಹಾ ನಮ್ಮ ದೇಹದ ಜೊತೆಗೆ ಮನಸ್ಸನ್ನು ವಿಶ್ರಾಂತಿಗೊಳಿಸಲು ಸಹಕಾರಿ. ಕ್ಯಾಟ್ನಿಪ್ ಚಹಾದ ಬಳಕೆ ಕೆಲವೊಮ್ಮೆ ಒತ್ತಡ ಮತ್ತು ನಿದ್ರಾಹೀನತೆ ಸೇರಿ ಕೆಲವು ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.

    ಓಟ್ ಒಣ ಹುಲ್ಲಿನ ಚಹಾ

    ಓಟ್ ಸ್ಟ್ರಾ ಹರ್ಬಲ್ ಟೀ ನೈಸರ್ಗಿಕ ಶಕ್ತಿ ಬೂಸ್ಟರ್ ಆಗಿದೆ. ಇದು ಮನಸ್ಸನ್ನು ಶಾಂತವಾಗಿಡುತ್ತದೆ. ಈ ಗಿಡಮೂಲಿಕೆ ಚಹಾ ಕೊಲೆಸ್ಟ್ರಾಲ್, ಹೃದಯ ಸಮಸ್ಯೆ ಹಾಗೂ ಕೆಲವು ಆರೋಗ್ಯ ಸಮಸ್ಯೆ ನಿವಾರಣೆಗೆ ಸಹ ಪ್ರಯೋಜನಕಾರಿಯಾಗಿದೆ.

    ಕ್ಯಾಮೊಮೈಲ್ ಚಹಾ

    ಈ ಚಹಾ ನಿಮ್ಮ ನರಗಳನ್ನು ಶಾಂತಗೊಳಿಸುತ್ತದೆ. ನಿದ್ದೆ ಬಾರದ ಸಮಸ್ಯೆಗೂ ಇದು ಪ್ರಯೋಜನಕಾರಿ. ಈ ಗಿಡಮೂಲಿಕೆ ಚಹಾದ ವಾಸನೆಯು ರಾತ್ರಿಯ ನಿದ್ರೆಗೆ ಸಹಕಾರಿ.

    ಇದನ್ನೂ ಓದಿ: ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಗ್ಗದ ಜಂಪಿಂಗ್ ಪ್ರಯೋಜನಕಾರಿ

    ಹೆಚ್ಚು ಯೋಚನೆ ಮಾಡಬೇಡಿ

    ಒತ್ತಡದ ಸಮಯದಲ್ಲಿ ವ್ಯಕ್ತಿ ಮನಸ್ಸಿನಲ್ಲಿ ಅನೇಕ ಚಿಂತನೆಗಳು ಮೂಡುತ್ತವೆ. ಆದರೆ ಅತಿಯಾದ ಆಲೋಚನೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಆದ್ದರಿಂದ ಒತ್ತಡ ತಪ್ಪಿಸಲು ಹೆಚ್ಚು ಯೋಚಿಸಬೇಡಿ. ನಿಮ್ಮ ಮನಸ್ಸಿನಲ್ಲಿ ಏನಾದರೂ ಟೆನ್ಷನ್ ಇದ್ದರೆ ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
    Published by:renukadariyannavar
    First published: