• Home
  • »
  • News
  • »
  • lifestyle
  • »
  • Brain Health: ಮೆದುಳಿನ ಕಾರ್ಯ ಚಟುವಟಿಕೆ ಮತ್ತು ಆರೋಗ್ಯ ಬಲಪಡಿಸುತ್ತದೆ ಈ ಆಯುರ್ವೇದ ಗಿಡಮೂಲಿಕೆ!

Brain Health: ಮೆದುಳಿನ ಕಾರ್ಯ ಚಟುವಟಿಕೆ ಮತ್ತು ಆರೋಗ್ಯ ಬಲಪಡಿಸುತ್ತದೆ ಈ ಆಯುರ್ವೇದ ಗಿಡಮೂಲಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದ ಗಿಡಮೂಲಿಕೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಅಂತಹ ಒಂದು ಮೂಲಿಕೆ ಶಂಖಪುಷ್ಪಿ ಆಗಿದೆ. ಶಂಖಪುಷ್ಪಿ ಮೆದುಳಿಗೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಆಗಿದೆ. ಇದು ಮೆದುಳಿನ ಅನಾರೋಗ್ಯ ತೆಗೆದು ಹಾಕುತ್ತದೆ.

  • Share this:

    ಆಯುರ್ವೇದ ಗಿಡಮೂಲಿಕೆಗಳನ್ನು (Ayurveda Herb) ಹಲವು ಕಾಯಿಲೆಗಳ (Disease) ನಿವಾರಣೆಗೆ ಔಷಧವಾಗಿ (Medicinal) ಬಳಕೆ ಮಾಡಲಾಗುತ್ತದೆ. ದೇಹದ (Body) ಪ್ರತಿಯೊಂದು ಭಾಗಕ್ಕೂ ಆಯುರ್ವೇದ ಗಿಡಮೂಲಿಕೆಗಳು ಪ್ರಯೋಜನಕಾರಿ (Benefits). ಆಯುರ್ವೇದ ಗಿಡಮೂಲಿಕೆಗಳಲ್ಲಿ ಉತ್ತಮವಾದ ವಿಷಯವಿದೆ. ಇದು ಇತರೆ ಅಂಗಗಳಿಗೆ ಅಡ್ಡ ಪರಿಣಾಮ (Bad Effects) ಬೀರಲ್ಲ. ಆಯುರ್ವೇದ ಗಿಡಮೂಲಿಕೆಗಳು ಸಂಪೂರ್ಣವಾಗಿ ನಿರುಪದ್ರವಿಗಳು ಎಂದು ಹೇಳಲಾಗಿದೆ. ಅಂದರೆ ಅಡ್ಡ ಪರಿಣಾಮ ನೀಡುವುದಿಲ್ಲ ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಆಯುರ್ವೇದ ಗಿಡಮೂಲಿಕೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಅಂತಹ ಒಂದು ಮೂಲಿಕೆ ಶಂಖಪುಷ್ಪಿ ಆಗಿದೆ. ಶಂಖಪುಷ್ಪಿ ಮೆದುಳಿಗೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಆಗಿದೆ. ಇದು ಮೆದುಳಿನ ಅನಾರೋಗ್ಯ ತೆಗೆದು ಹಾಕುತ್ತದೆ.


    ಶಂಖಪುಷ್ಪಿ ಗಿಡಮೂಲಿಕೆ


    ಹಿಂದಿನ ಕಾಲದಲ್ಲಿ ಋಷಿಮುನಿಗಳು ಜ್ಞಾಪಕ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಗಿಡಮೂಲಿಕೆ ಸೇವನೆ ಮಾಡುತ್ತಿದ್ದರು. ಶಂಖಪುಷ್ಪಿ ಮೆದುಳಿಗೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯುವುದು ಮುಖ್ಯ. ಈ ಬಗ್ಗೆ ವೇದಾಸ್ ಕ್ಯೂರ್‌ನ ಸಂಸ್ಥಾಪಕ ಮತ್ತು ಆಯುರ್ವೇದ ತಜ್ಞ ಡಾ.ವಿಕಾಸ್ ಚಾವ್ಲಾ ಏನು ಹೇಳಿದ್ದಾರೆ ನೋಡೋಣ.


    ಮೆದುಳನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಶಂಖಪುಷ್ಪಿ ಗಿಡಮೂಲಿಕೆ


    ಮೆದುಳು ದೇಹದ ಪ್ರಮುಖ ಭಾಗ ಆಗಿದೆ. ಇದು ಎಲ್ಲಾ ಕೆಲಸಗಳನ್ನು ಸುಗಮವಾಗಿ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸರಿಯಾದ ಕೆಲಸದ ವಿಧಾನ ನಿರ್ಧರಿಸುತ್ತದೆ. ಉತ್ತಮ ಫಲಿತಾಂಶ ಪಡೆಯಲು ಮೆದುಳು ಎಲ್ಲಾ ಅಂಗಗಳನ್ನು ನಿರ್ದೇಶಿಸುತ್ತದೆ. ಹಾಗಾಗಿ ಮೆದುಳಿನ ಉತ್ತಮ ಆರೈಕೆಯೂ ಮುಖ್ಯವಾಗಿದೆ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಆಹಾರ ಮತ್ತು ಚಟುವಟಿಕೆಗಳತ್ತ ಗಮನ ಹರಿಸುವುದು ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮಾನಸಿಕ ಚಟುವಟಿಕೆ ಮತ್ತು ಪೌಷ್ಟಿಕಾಂಶ-ಭರಿತ ಆಹಾರ ಸೇವನೆ ಮಾಡುವುದು ಮೆದುಳಿನ ಆರೋಗ್ಯ ಕಪಾಡಲು ಸಹಾಯ ಮಾಡುತ್ತದೆ.


    ಮೆದುಳನ್ನು ಆರೋಗ್ಯವಾಗಿಡಲು ಆಯುರ್ವೇದ ಪರಿಹಾರ ಆಯ್ಕೆ ಸೂಕ್ತ


    ಶಂಖಪುಷ್ಪಿ ಮೆದುಳಿಗೆ ಆರೋಗ್ಯಕರ ಮೂಲಿಕೆ


    ಆಯುರ್ವೇದ ತಜ್ಞ ವಿಕಾಸ್ ಚಾವ್ಲಾ ಅವರು ಹೇಳುವ ಪ್ರಕಾರ, ಶಂಖಪುಷ್ಪಿ ಒಂದು ಪರಿಣಾಮಕಾರಿ ಗಿಡಮೂಲಿಕೆ. ಇದು ಮೆದುಳಿನ ಕಾರ್ಯ ನಿರ್ವಹಣೆ ಬಲಪಡಿಸುತ್ತದೆ. ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಶಂಖಪುಷ್ಪಿ ಆಯುರ್ವೇದ ಮೂಲಿಕೆಯ ನಿಯಮಿತ ಸೇವನೆ ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆ ದೂರ ಮಾಡಲು ಸಹಕಾರಿ.


    ಶಂಖಪುಷ್ಪಿ ಬಹುವಾರ್ಷಿಕ ಮೂಲಿಕೆ. ಶಂಖಪುಷ್ಪಿಯನ್ನು ಔಷಧೀಯ ಪ್ರಯೋಜನಗಳಿಗಾಗಿ ಬಳಕೆ ಮಾಡ್ತಾರೆ. ಇದು ಸೌಮ್ಯ ವಿರೇಚಕ ಗುಣಗಳಿಂದ ಸಮೃದ್ಧ ಆಗಿದೆ. ಇದು ಕಳಪೆ ಸ್ಮರಣೆ, ​​ನಿದ್ರಾಹೀನತೆ, ಡಿಸ್ಪೆಪ್ಸಿಯಾ, ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ ಮತ್ತು ಇತರ ಅನೇಕ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡುತ್ತದೆ.


    ಸ್ಮೃತಿ ವರ್ಧಕ ಶಂಖಪುಷ್ಪಿ


    ಇದು ಸಂಭಾವ್ಯ ಮೆಮೊರಿ ಬೂಸ್ಟರ್ ಮತ್ತು ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಬುದ್ಧಿವಂತಿಕೆ ಮತ್ತು ಮೆದುಳಿನ ಕಾರ್ಯನಿರ್ವಹಣೆ ಸುಧಾರಿಸಲು ಇದು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಏಕಾಗ್ರತೆ, ಕಲಿಕೆ ಸಾಮರ್ಥ್ಯ, ಮಾನಸಿಕ ಆಯಾಸ, ಒತ್ತಡ, ಆತಂಕ, ಖಿನ್ನತೆ ಇತ್ಯಾದಿ ಸುಧಾರಿಸಲು ಇದು ಪ್ರಯೋಜನಕಾರಿ.


    ಯಾರು ಬೇಕಾದರೂ ಶಂಖಪುಷ್ಪಿ ಮೂಲಿಕೆ ಬಳಸಬಹುದು. ಸ್ಮರಣ ಶಕ್ತಿ ಹೆಚ್ಚಿಸಲು ಶಂಖುಪುಷ್ಪಿಯನ್ನು ಹೇಗೆ ಬಳಸುವುದು ಎಂಬ ಬಗ್ಗೆ ತಿಳಿಯಿರಿ.


    ಶಂಖಪುಷ್ಪಿಯನ್ನು ನೀರು ಅಥವಾ ಹಾಲಿನೊಂದಿಗೆ ಸೇವಿಸಿ. ಶಂಖಪುಷ್ಪಿ ಚೂರ್ಣ, ರಸ, ಮಾತ್ರೆ ಅಥವಾ ಸಿರಪ್ ರೂಪದಲ್ಲಿ ಲಭ್ಯವಿದೆ. ಇದನ್ನು ದಿನದಲ್ಲಿ ಊಟದ ನಂತರ ನೀರು ಅಥವಾ ಹಾಲಿನೊಂದಿಗೆ ಸೇವಿಸಿ.


    ಶಂಖಪುಷ್ಪಿ ಎಲೆಗಳ ರಸ


    ಶಂಖಪುಷ್ಪಿ ಎಲೆಗಳ ರಸವನ್ನು ಹಾಲಿನೊಂದಿಗೆ ಸೇವಿಸಬಹುದು.


    ಶಂಖಪುಷ್ಪಿ ಹೂವಿನ ಚಹಾ


    ಶಂಖಪುಷ್ಪಿಯ ಹೂಗಳನ್ನು ಕಡಿಮೆ ಉರಿಯಲ್ಲಿ ಕುದಿಸಿ ಅದರ ಚಹಾ ಸೇವಿಸುವುದು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ತುಳಸಿ ಮತ್ತು ಶುಂಠಿ ಜೊತೆ


    ಶಂಖಪುಷ್ಪಿಯ ಎಲೆಗಳನ್ನು ತುಳಸಿ ಎಲೆಗಳು ಮತ್ತು ಶುಂಠಿ ಜೊತೆ ಪುಡಿ ಮಾಡಿ ಸೇವಿಸಿ. ಇದಕ್ಕೂ ಮೊದಲು ಆಯುರ್ವೇದ ತಜ್ಞರನ್ನು ಸಂಪರ್ಕಿಸಿ.

    Published by:renukadariyannavar
    First published: