• Home
  • »
  • News
  • »
  • lifestyle
  • »
  • Diabetes Mistakes: ಬೀದಿ ದೀಪಗಳ ಬೆಳಕಿನಿಂದ ರಕ್ತದಲ್ಲಿ ಶುಗರ್​ ಜಾಸ್ತಿ ಆಗುತ್ತೆ, ಮಧುಮೇಹಿಗಳಿಗೆ ಇದು ಡೇಂಜರ್​

Diabetes Mistakes: ಬೀದಿ ದೀಪಗಳ ಬೆಳಕಿನಿಂದ ರಕ್ತದಲ್ಲಿ ಶುಗರ್​ ಜಾಸ್ತಿ ಆಗುತ್ತೆ, ಮಧುಮೇಹಿಗಳಿಗೆ ಇದು ಡೇಂಜರ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾದ ವಿಶ್ವವಿದ್ಯಾನಿಲಯದ ಸಂಶೋಧಕರು ಮಧುಮೇಹ ಮತ್ತು ಬೆಳಕಿನ ನಡುವಿನ ಸಂಬಂಧ ಕಂಡು ಹಿಡಿಯಲು ಅಧ್ಯಯನ ನಡೆಸಿದ್ದರು. ಈ ಅಧ್ಯಯನ ಈಗ ಡಯಾಬಿಟೋಲೋಜಿಯಾ ಜರ್ನಲ್‌ ನಲ್ಲಿ ಪ್ರಕಟವಾಗಿದೆ. ಬೀದಿಗಳಲ್ಲಿ ಅಳವಡಿಕೆ ಮಾಡಲಾಗಿರುವ ದೊಡ್ಡ ದೀಪಗಳಿಗೆ ಒಡ್ಡಿಕೊಳ್ಳುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಕಾಯಿಲೆ ವಯಸ್ಸಾದವರಲ್ಲಿ ಮಾತ್ರವಲ್ಲದೇ ವಯಸ್ಕರರು ಮತ್ತು ಮಕ್ಕಳಲ್ಲಿಯೂ ವೇಗವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ 422 ಮಿಲಿಯನ್ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ರೋಗವು ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಅಂಧತ್ವ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಆದರೆ ಈಗ ಅದರ ಕ್ಷಿಪ್ರ ಹರಡುವಿಕೆಗೆ ಕಾರಣ ಏನು ಎಂಬುದನ್ನು ತಜ್ಞರು ಹೇಳಿದ್ದಾರೆ. ಒಂದು ಅಧ್ಯಯನದ ಪ್ರಕಾರ, ಬೀದಿಗಳಲ್ಲಿ ಬೀದಿ ದೀಪಗಳ ಕೆಳಗೆ ಹೆಚ್ಚು ಹೊತ್ತು ಸಮಯ ಕಳೆಯುವುದು ರಕ್ತದ ಸಕ್ಕರೆ ಹೆಚ್ಚಿಸುತ್ತದೆ ಎಂದು ಹೇಳಿದೆ.


    ಮಧುಮೇಹ ಮತ್ತು ಬೆಳಕಿನ ನಡುವಿನ ಸಂಬಂಧ


    ಚೀನಾದ ವಿಶ್ವವಿದ್ಯಾನಿಲಯದ ಸಂಶೋಧಕರು, ಮಧುಮೇಹ ಮತ್ತು ಬೆಳಕಿನ ನಡುವಿನ ಸಂಬಂಧ ಕಂಡು ಹಿಡಿಯಲು ಅಧ್ಯಯನ ನಡೆಸಿದ್ದರು. ಈ ಅಧ್ಯಯನ ಈಗ ಡಯಾಬಿಟೋಲೋಜಿಯಾ ಜರ್ನಲ್‌ ನಲ್ಲಿ ಪ್ರಕಟವಾಗಿದೆ.


    ಬೀದಿಗಳಲ್ಲಿ ಅಳವಡಿಕೆ ಮಾಡಲಾಗಿರುವ ದೊಡ್ಡ ಬೀದಿ ದೀಪಗಳಿಗೆ ಒಡ್ಡಿಕೊಳ್ಳುವುದು ಮಧುಮೇಹದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನದ ಪ್ರಮುಖ ಸಂಶೋಧಕರು ಕಂಡು ಹಿಡಿದಿದ್ದಾರೆ.




    ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ


    ಈ ಅಧ್ಯಯನದಲ್ಲಿ ಚೀನಾದ ಜನರನ್ನು ಬಳಸಿಕೊಳ್ಳಲಾಗಿತ್ತು. ಈ ಜನರ ಮೇಲೆ ಅಧ್ಯಯನ ಮಾಡಲಾಗಿದೆ. ಇದರಲ್ಲಿ ಈ ಲ್ಯಾನ್ (LAN) ಬೆಳಕು, ಬೆಳಕಿನ ಮಾಲಿನ್ಯ ಉಂಟು ಮಾಡುತ್ತಿರುವುದು ಕಂಡು ಬಂದಿದೆ. ಈ ಬೆಳಕಿನ ಕೆಟ್ಟ ಪರಿಣಾಮ ನಮ್ಮ ಆರೋಗ್ಯದ ಮೇಲೆ ಬೀಳುತ್ತಿದ್ದು, ಕೆಲ ದಿನಗಳಲ್ಲೇ ಗೋಚರಿಸುತ್ತದೆ.


    ಈ ಬೀದಿ ದೀಪದ ಲ್ಯಾನ್ ಬೆಳಕು ರಕ್ತದ ಸಕ್ಕರೆ ನಿಯಂತ್ರಿಸುವ ಇನ್ಸುಲಿನ್ ಮತ್ತು ಗ್ಲುಕಗನ್ ಹಾರ್ಮೋನುಗಳಿಗೆ ತೊಂದರೆ ಉಂಟು ಮಾಡುತ್ತದೆ. ಹೀಗಾಗಿ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗೂ ಮಧುಮೇಹ ಉಂಟಾಗುತ್ತದೆ. ಹಾಗಾಗಿ ನಿಯಮಿತವಾಗಿ ಡಯಾಬಿಟಿಸ್ ಪರೀಕ್ಷೆ ಮಾಡಬೇಕು ಎನ್ನುತ್ತಾರೆ ತಜ್ಞರು.


    ಯಾವ ತಪ್ಪುಗಳಿಂದ ಮಧುಮೇಹ ಹೆಚ್ಚು ಗಂಭೀರವಾಗುತ್ತದೆ?


    ಕೆಲವು ತಪ್ಪುಗಳಿಂದ ಮಧುಮೇಹ ಕಾಯಿಲೆ ಹೆಚ್ಚು ಗಂಭೀರವಾಗುತ್ತಿದೆ ಎಂದು ಸಿಡಿಸಿ ಹೇಳಿದೆ. ರೋಗಿಗಳು ರಕ್ತದ ಸಕ್ಕರೆ ನಿಯಮಿತ ಪರೀಕ್ಷೆ ಮಾಡಿಸುವುದಿಲ್ಲ. ಹೀಗೆ ಮಾಡಿದಾಗ ರಕ್ತದ ಸಕ್ಕರೆ ನಿಯಂತ್ರಣ ತಪ್ಪುತ್ತದೆ. ಅದು ಗೊತ್ತೇ ಆಗುವುದಿಲ್ಲ. ಯಾವಾಗಲೂ ನಿಯಮಿತವಾಗಿ ಪರೀಕ್ಷೆ ಮಾಡುವುದು ಮಧುಮೇಹ ನಿಯಂತ್ರಣದಲ್ಲಿದೆಯೋ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆ ತಿಳಿಸುತ್ತದೆ.


    ವ್ಯಾಯಾಮ ಮತ್ತು ಆಹಾರ


    ಮಧುಮೇಹ ಇರುವವರು ವ್ಯಾಯಾಮ ಮಾಡಲೇಬೇಕು. ವ್ಯಾಯಾಮ ಮಾಡದೇ ಇರುವ ತಪ್ಪು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಚೆನ್ನಾಗಿ ತಿಂದು ವ್ಯಾಯಾಮ ಮಾಡದೇ ಇದ್ದರೆ, ಅಥವಾ ಸರಿಯಾದ ಆಹಾರ ಸೇವನೆ ಮಾಡದಿದ್ದರೆ ಮಧುಮೇಹವು ಗಂಭೀರವಾಗುತ್ತದೆ. ಹಾಗಾಗಿ ನಿಯಮಿತವಾಗಿ ವ್ಯಾಯಾಮ ಮಾಡಿ. ಮತ್ತು ಒಳ್ಳೆಯ ಆಹಾರ ಸೇವನೆ ಮಾಡಿ. ಇದು ಹೃದಯಾಘಾತ ಅಥವಾ ಕೊಲೆಸ್ಟ್ರಾಲ್ ಹೆಚ್ಚಳ ತಡೆಯಲು ಸಹಕಾರಿ.


    ವೈದ್ಯರ ಭೇಟಿ ಮಾಡುವುದು ತಪ್ಪಿಸುವುದು


    ರಕ್ತದ ಸಕ್ಕರೆ ಪರೀಕ್ಷಿಸುವುದು ಮಾತ್ರವಲ್ಲದೇ, ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕು. ಕಾಲ ಕಾಲಕ್ಕೆ ಮಧುಮೇಹ ಔಷಧ ಮತ್ತು ಆಹಾರಕ್ರಮ ಬದಲಾಯಿಸುವ ಅಗತ್ಯವಿದೆ. ಇದು ವೈದ್ಯರಿಗೆ ಮಾತ್ರ ಚೆನ್ನಾಗಿ ತಿಳಿದಿದೆ.


    ಇದನ್ನೂ ಓದಿ: ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ವ್ಯಾಯಾಮ ಮಾಡದಿರಿ!


    ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆ ಹೆಚ್ಚಾಗುವುದು


    ಮಧುಮೇಹ ಇರುವಾಗ ದೇಹವು ಕೆಲವು ಲಕ್ಷಣ ತೋರಿಸುತ್ತದೆ. ಈ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ರೋಗದ ತೀವ್ರತೆ ನಿರ್ಣಯಿಸಬಹುದು. ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಆಗಾಗ್ಗೆ ಏಳುವುದು, ತುಂಬಾ ಬಾಯಾರಿಕೆ ಆಗುವುದು ಗಂಭೀರ ಮಧುಮೇಹದ ಸಂಕೇತ ಆಗಿರಬಹುದು.

    Published by:renukadariyannavar
    First published: