Monsoon And Typhoid: ಮಳೆಗಾಲದಲ್ಲಿ ಬೀದಿ ಆಹಾರ-ಪಾನಿ ಪುರಿ ಸೇವನೆ ಆರೋಗ್ಯಕ್ಕೆ ಹಾನಿಕರ!

ಮಳೆಗಾಲದಲ್ಲಿ ಬೀದಿ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಪಾನಿ ಪುರಿ ಸೇವನೆ ಮಾಡದಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ಮಾರಾಟಗಾರರು ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದೆ. ಮತ್ತು ಸುರಕ್ಷಿತ ಕುಡಿಯುವ ನೀರು ಮಾತ್ರ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಗಾಲದಲ್ಲಿ (Monsoon) ರೋಗಗಳು (Disease) ಬರುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಕಾಡುವ ಅನಾರೋಗ್ಯ (Unhealthy) ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಅಟಕಾಯಿಸಿಕೊಳ್ಳುವ ಕಾಯಿಲೆಗಳಲ್ಲಿ ಟೈಫಾಯಿಡ್ (Typhoid) ಕೂಡ ಒಂದು. ಇದು ಸಾಮಾನ್ಯ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಗಂಭೀರ ಪರಿಣಾಮ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ. ಸದ್ಯ ತೆಲಂಗಾಣದಲ್ಲಿ ಟೈಫಾಯಿಡ್ ಸಂಚಲನ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಅತ್ಯಂತ ಪ್ರಸಿದ್ಧವಾದ ಬೀದಿ ಆಹಾರ ಪಾನಿ ಪುರಿ ಎಂದು ಆರೋಗ್ಯ ಇಲಾಖೆ ಹೇಳಿದೆ. ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸರಾವ್ ಅವರು ಟೈಫಾಯಿಡ್‌ಗೆ ಪಾನಿ ಪುರಿ ಕಾರಣ ಎಂದು ಹೇಳಿದ್ದಾರೆ.

    ಬೀದಿ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ

    ಮಳೆಗಾಲದಲ್ಲಿ ಬೀದಿ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಪಾನಿ ಪುರಿ ಸೇವನೆ ಮಾಡದಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ಮಾರಾಟಗಾರರು ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದೆ. ಮತ್ತು ಸುರಕ್ಷಿತ ಕುಡಿಯುವ ನೀರು ಮಾತ್ರ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ. ತೆಲಂಗಾಣದಲ್ಲಿ ಪಾನಿ ಪುರಿ ಸೇವಿಸಿ ಈವರೆಗೆ 2,752 ಮಂದಿ ಟೈಫಾಯಿಡ್‌ಗೆ ತುತ್ತಾಗಿದ್ದಾರೆ. ಇದರ ಜೊತೆಗೆ ಕಾಲರಾ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.

    ಟೈಫಾಯಿಡ್ ಹೇಗೆ ಹರಡುತ್ತದೆ?

    ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಟೈಫಾಯಿಡ್ ಜ್ವರ ಬರುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಟೈಫಾಯಿಡ್ ಜ್ವರ ಕಾಣಿಸುವುದು ಅಪರೂಪ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳಲ್ಲಿ ಇದು ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆ ಆಗಿದೆ. ಟೈಫಾಯಿಡ್ ಜ್ವರವು ಕಲುಷಿತ ಆಹಾರ ಮತ್ತು ನೀರಿನಿಂದ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಉಂಟಾಗುತ್ತದೆ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಟೈಫಾಯಿಡ್ ರೋಗವು ಸಾಮಾನ್ಯವಾಗಿ 7 ರಿಂದ 14 ದಿನಗಳವರೆಗೆ ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ರೋಗವು 3 ಅಥವಾ 30 ದಿನಗಳವರೆಗೆ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ವಿಶ್ವಾದ್ಯಂತ ಅಂದಾಜು 11-200 ಮಿಲಿಯನ್ ಜನರು ಪ್ರತಿ ವರ್ಷ ಟೈಫಾಯಿಡ್‌ ಕಾಯಿಲೆಗೆ ತುತ್ತಾಗುತ್ತಾರೆ. ಅದರಲ್ಲಿ 128,000 ರಿಂದ 161,000 ಜನರು ಸಾಯುತ್ತಾರೆ.

    ಟೈಫಾಯಿಡ್‌ ಲಕ್ಷಣಗಳು ಯಾವವು?

    ಆರಂಭಿಕ ಹಂತದಲ್ಲಿ ಟೈಫಾಯಿಡ್‌ ಲಕ್ಷಣಗಳು ದೀರ್ಘ ಕಾಲದ ಅಧಿಕ ಜ್ವರ, ತೀವ್ರ ಹೊಟ್ಟೆ ನೋವು, ತಲೆನೋವು, ಅತಿಸಾರ ಅಥವಾ ಮಲಬದ್ಧತೆ ಮತ್ತು ಹಸಿವಿನ ಕೊರತೆ ಉಂಟು ಮಾಡುತ್ತದೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ, ಈ ರೋಗ ಲಕ್ಷಣಗಳು ಹೆಚ್ಚು ತೀವ್ರವಾಗಬಹುದು. ಇದು ಆಯಾಸ, ತೆಳು ಚರ್ಮ, ವಾಂತಿ ರಕ್ತ ಮತ್ತು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

    ಟೈಫಾಯಿಡ್ ತಪ್ಪಿಸುವುದು ಹೇಗೆ?

    ಕುಟುಂಬದ ಎಲ್ಲ ಸದಸ್ಯರು ಸ್ವಚ್ಛತೆ ಪಾಲಿಸಬೇಕು. ಆಹಾರವನ್ನು ಸೇವಿಸುವ ಮೊದಲು ಕೈ ತೊಳೆಯುವುದು, ಶೌಚಾಲಯಕ್ಕೆ ಹೋಗಿ ಬಂದ ನಂತರ ಚೆನ್ನಾಗಿ ಕೈ ತೊಳೆಯುವುದು, ಹೊರಗಿನಿಂದ ಮನೆಗೆ ಮರಳಿದ ನಂತರ ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ಕೆಮ್ಮು, ಸೀನುತ್ತಿದ್ದರೆ, ನಿಮ್ಮ ಬಾಯಿ ಕವರ್ ಮಾಡಿ. ಕೈಗಳಿಂದ ನಿಮ್ಮ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದು ತಪ್ಪಿಸಿ.

    ಶುದ್ಧ ನೀರು ಕುಡಿಯಿರಿ

    ನೀವು ಶುದ್ಧ ನೀರು ಕುಡಿಯಿರಿ. ನೀರನ್ನು ಕುದಿಸಿ, ಆರಿಸಿ ಕುಡಿಯಿರಿ. ಹೊರಗೆ ಹೋದಾಗ ನೀರಿನ ಗುಣಮಟ್ಟ ನೋಡಿ. ಸುರಕ್ಷಿತ ಬಾಟಲ್ ನೀರು ಕುಡಿಯಲು ಆದ್ಯತೆ ನೀಡಿ. ಅತಿಸಾರ ಉಂಟು ಮಾಡುತ್ತದೆ.

    ಮಳೆಯ ಮೋಜು, ಬೀದಿ ಆಹಾರದಿಂದ ದೂರವಿರಿ

    ಮಾನ್ಸೂನ್‌ನಲ್ಲಿ ಪಾನಿ ಪುರಿ ಮತ್ತು ಇತರೆ ಬೀದಿ ಆಹಾರ ಸೇವನೆ ತಪ್ಪಿಸಿ. ಮಳೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ವೇಗವಾಗಿ ಬೆಳೆಯುತ್ತವೆ.ಹಾಗಾಗಿ ತಾಜಾ ತರಕಾರಿ ಮತ್ತು ಶುದ್ಧ ನೀರು ಕುಡಿಯಿರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಣ್ಣು, ತರಕಾರಿ ಮತ್ತು ಬೀಜಗಳನ್ನು ಸೇವಿಸಿ.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಸೊಳ್ಳೆಗಳಿಂದ ಎಚ್ಚರಿಕೆ ವಹಿಸಿ

    ಮಳೆಗಾಲದಲ್ಲಿ ಸೊಳ್ಳೆಗಳಿಂದ ಹೆಚ್ಚು ರೋಗಗಳು ಹರಡುತ್ತವೆ. ಸೊಳ್ಳೆ ಪರದೆ ಬಳಸಿ. ಕಾಲು ಮತ್ತು ಕೈಗಳನ್ನು ಚೆನ್ನಾಗಿ ಮುಚ್ಚುವ ಬಟ್ಟೆ ಧರಿಸಿ.
    Published by:renukadariyannavar
    First published: