ದುರ್ಗಾ ಪೂಜಾ ಸಮಿತಿಯಿಂದ ಹೊಸ ಪ್ರಯತ್ನ: ಲೈಂಗಿಕ ಕಾರ್ಯಕರ್ತೆಯರ ಬೀದಿಯಲ್ಲಿ ಅರಳಿದ ಚಿತ್ತಾರ

news18
Updated:October 9, 2018, 12:17 PM IST
ದುರ್ಗಾ ಪೂಜಾ ಸಮಿತಿಯಿಂದ ಹೊಸ ಪ್ರಯತ್ನ: ಲೈಂಗಿಕ ಕಾರ್ಯಕರ್ತೆಯರ ಬೀದಿಯಲ್ಲಿ ಅರಳಿದ ಚಿತ್ತಾರ
PTI10_8_2018_000083B
  • News18
  • Last Updated: October 9, 2018, 12:17 PM IST
  • Share this:
-ನ್ಯೂಸ್ 18 ಕನ್ನಡ

ಏಷ್ಯಾದ ಅತಿ ದೊಡ್ಡ ರೆಡ್​ಲೈಟ್ ಏರಿಯಾ ಎಂದು ಕರೆಸಿಕೊಳ್ಳುವ ಕೋಲ್ಕತ್ತಾದ ಸೋನಾಗಚಿ ಪ್ರದೇಶದ ಮುಖ್ಯ ರಸ್ತೆಯಗಳು ಥೀಮ್ ಪೈಟಿಂಗ್​ಗಳಿಂದ ಕಂಗೊಳಿಸುತ್ತಿದೆ.  ಕತ್ತಲಾಗುತ್ತಿದ್ದಂತೆ ಜನಜಂಗುಳಿಯಿಂದ ಜಿನುಗುಡುತ್ತಿದ್ದ ಈ ರಸ್ತೆಗಳು ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಇನ್ನೇನು ದುರ್ಗಾಪೂಜಾ ಆರಂಭವಾಗಲಿದ್ದು, ಇದರ ಸಲುವಾಗಿ ಲೈಂಗಿಕ ಕಾರ್ಯಕರ್ತೆಯರ ಜೀವನ ಮತ್ತು ಹೋರಾಟದ ಮೇಲೆ ಬೆಳಕು ಚೆಲ್ಲಲು ಅಹಿರಿಟೊಲಾ ಪ್ರದೇಶದ ದುರ್ಗಾ ಪೂಜಾ ಸಮಿತಿ ಇಂತದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಈ ಪ್ರದೇಶದ ಬೀದಿಗಳಲ್ಲಿ ಲೈಂಗಿಕ ಕಾರ್ಯಕರ್ತೆಯರು ಅನುಭವಿಸುವ ಶೋಷಣೆ, ಕಿರುಕುಳದ ಕಥೆಗಳನ್ನು ಪೈಂಟಿಂಗ್​ ಮೂಲಕ ವಿವರಿಸುವ ಪ್ರಯತ್ನ ಮಾಡಲಾಗಿದೆ. ಅಹಿರಿಟೊಲಾ ಪ್ರದೇಶದ 300 ಅಡಿ ಉದ್ದದ ರಸ್ತೆಯು ಈಗ ಬಣ್ಣದೋಕುಳಿಯಿಂದ ಕೂಡಿದ್ದು, ಈ ಬಣ್ಣಗಳ ಹಿಂದೆ ಲೈಂಗಿಕ ಕಾರ್ಯಕರ್ತೆಯರ ಕರಾಳ ಬದುಕಿನ ಕಥೆ ತಿಳಿಸಲಾಗಿದೆ.

(PTI Photo/Swapan Mahapatra)


ಲೈಂಗಿಕ ಕಾರ್ಯಕರ್ತರ ಜೀವನ ಮತ್ತು ಹಕ್ಕುಗಳ ಕುರಿತು ನಮ್ಮ ಸಮಾಜಕ್ಕೆ ಅರಿವು ಮೂಡಿಸಲು ಇಂತಹದೊಂದು ಪ್ರಯತ್ನವನ್ನು ಮಾಡಿದ್ದೇವೆ. ಇದರಿಂದಾಗಿ ಜನರಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಜಾಗೃತಿ ಮೂಡಬಹುದು ಎಂದು ಭಾವಿಸುತ್ತೇನೆ ಎಂದು ಅಹಿರಿಟೊಲಾ ಪ್ರದೇಶದ ಜುಬಕ್​ಬ್ರಿಂದಾ ದುರ್ಗಾ ಪೂಜಾ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಉತ್ತಮ್ ಸಾಹಾ ತಿಳಿಸಿದ್ದಾರೆ.

ಅಹಿರಿಟೊಲಾದಿಂದ ಒಂದು ಕಿ.ಮೀ ದೂರದಲ್ಲಿರುವ ಸೋನಾಗಚಿ ವೇಶ್ಯಾಗೃಹ ಪ್ರದೇಶವು ಏಷ್ಯಾದ ಅತಿದೊಡ್ಡ ರೆಡ್​ ಲೈಟ್ ಏರಿಯಾವಾಗಿದೆ. ಇಲ್ಲಿನ ಜನರ ಜೀವನ, ಕಷ್ಟ ಕಾರ್ಪಣ್ಯಗಳನ್ನು ಬಣ್ಣದ ಮೂಲಕ ಕಟ್ಟಿಕೊಡಲಾಗಿದೆ. ಈ ಪ್ರದೇಶದ ಮತ್ತೊಂದು ವಿಶೇಷತೆ ಎಂದರೆ ಅಹಿರಿಟೊಲಾ ದುರ್ಗಾದೇವಿ ವಿಗ್ರಹವನ್ನು ತಯಾರಿಸಲು ಇಲ್ಲಿನ ಮಣ್ಣನ್ನು ಬಳಸಲಾಗುತ್ತದೆ.

ವಿವಿಧ ರೀತಿಯ ಥೀಮ್​ಗಳ ಮೂಲಕ ಲೈಂಗಿಕ ಕಾರ್ಯಕರ್ತೆಯರ ಜೀವನದ ಹಲವು ಮಜಲುಗಳನ್ನು ಕೈ ಚಳಕದಲ್ಲಿ ಅರಳಿದ್ದು, ಈ ಚಿತ್ತಾರಗಳನ್ನು ಮೂಡಿಸಲು ವಿವಿಧ ರೀತಿಯ ಬಣ್ಣಗಳನ್ನು ಬಳಸಲಾಗಿದೆ ಎಂದು ಈ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದ ಸೌಮೆನ್ ಸರ್ಕಾರ್ ತಿಳಿಸಿದ್ದಾರೆ.ಒಬ್ಬ ಮಹಿಳೆಯು ತನ್ನ ಕುಟುಂಬವನ್ನು ಸಾಕಲು ಅಥವಾ ಕಳ್ಳಸಾಗಣೆದಾರರ ಕೈಗೆ ಸಿಲುಕಿ ಲೈಂಗಿಕ ಕಾರ್ಯಕರ್ತೆಯಾಗುತ್ತಾಳೆ.​ ಅವಳು ಕೂಡ ಒಬ್ಬ ಹೆಣ್ಣಾಗಿದ್ದು, ತನ್ನ ಕುಟುಂಬವನ್ನು ನಿರ್ವಹಿಸುವ ತಾಯಿಯ ಪಾತ್ರ ನಿರ್ವಹಿಸುತ್ತಾಳೆ. ದುರ್ಗಾದೇವಿಯ ರೂಪದಲ್ಲಿ ನಾವು ಮಹಿಳೆಯ ಪ್ರತಿರೂಪವನ್ನು ಆಚರಿಸಿಕೊಳ್ಳುವಾಗ ಇಲ್ಲಿ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಕಲಾವಿದ ಮಾನಸ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ದುರ್ಗಾ ಪೂಜಾ ಸಮಿತಿಯ ಬೆಂಬಲದಿಂದ ಈ ಬಾರಿ ಮಹಿಳೆಯರ ಕುರಿತಾದ ಹಲವು ಚಿತ್ರ ಬರಹಗಳನ್ನು ನಾವು ಚಿತ್ರಿಸಿದ್ದೇವೆ. ಅದರಲ್ಲೂ ಹಣೆಯ ಮೇಲಿನ ಕುಂಕುಮವನ್ನು ವಿರೂಪಗೊಳಿಸಲಾಗುವ ಪೈಂಟಿಂಗ್​ಗಳು ಈ ಸಮುದಾಯದ ಕಣ್ಣೀರಿಗೆ ಹಿಡಿದ ಕನ್ನಡಿಯಂತಿದೆ ಎಂದು ಸೌಮೆನ್ ಸರ್ಕಾರ್ ತಮ್ಮ ಹೊಸ ಪ್ರಯತ್ನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
First published: October 9, 2018, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading