ಸ್ಟ್ರಾಬೆರಿ, ಡ್ರ್ಯಾಗನ್ ಹಣ್ಣುಗಳನ್ನು ಮನೆಯಲ್ಲಿಯೇ ಬೆಳೆಸಿ: 10 ಬಗೆಯ ಹಣ್ಣುಗಳನ್ನು ಬೆಳೆಸುವ ಮಾಹಿತಿ ಇಲ್ಲಿದೆ!

ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುತ್ತಿದ್ದ ಅವರ ಟೆರೇಸ್ ಗಾರ್ಡನ್ ಹವ್ಯಾಸ ಇದೀಗ 1,000 ಚದರ ಅಡಿಯ ವರೆಗೆ ವಿಸ್ತರಿಸಿದ್ದು, ಹಲವಾರು ವಿಧಧ ಹಣ್ಣುಗಳು, ತರಕಾರಿಗಳು ಮತ್ತು ಔಷಧಿಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ.

ಮನೆ ತೋಟದಲ್ಲಿ ಹಣ್ಣು.

ಮನೆ ತೋಟದಲ್ಲಿ ಹಣ್ಣು.

 • Share this:

  “ಅನುಭವದಿಂದ ಕಲಿಯುವುದರಲ್ಲಿ ಏನೋ ವಿಶೇಷವಿದೆ. ನೀವು ಪ್ರಶ್ನೆ ಕೇಳುತ್ತೀರಿ, ಪರಿಹಾರ ಕಂಡುಕೊಳ್ಳುತ್ತೇವೆ ಮತ್ತು ಅಂತಿಮವಾಗಿ ಅದರಿಂದ ಪಾಠ ಕಲಿಯುತ್ತೇವೆ,ಅದು ಜೀವನ ಪೂರ್ತಿ ನಿಮ್ಮೊಂದಿಗೆ ಉಳಿಯುತ್ತದೆ” ಎಂದು ಅಶ್ವಿನ್ ಗಜೇಂದ್ರನ್ ಹೇಳುತ್ತಾರೆ. ಮೈಸೂರಿನ ಪರಿಧಿಯ ಸಮೀಪದ ಉಪನಗರದಲ್ಲಿ ನೆಲೆಸಿರುವ ಅವರು, ಮನೆಯಲ್ಲಿಯೇ ದಿನಬಳಕೆಗೆ ಅಗತ್ಯವಿರುವ ಸೊಪ್ಪನ್ನು ಬೆಳೆದುಕೊಂಡು, ನಗರದಲ್ಲಿದ್ದರೂ ತಾಜಾ ಹಣ್ಣು ತರಕಾರಿಗಳನ್ನು ಸೇವಿಸುತ್ತಿರುವ ಅದೃಷ್ಟಶಾಲಿ. ಆದರೆ , ಮನೆಯಲ್ಲಿಯೇ ಅಪರೂಪದ ಹಣ್ಣು ತರಕಾರಿಗಳನ್ನು ಬೆಳೆದುಕೊಳ್ಳುವುದನ್ನು ಕಲಿತದ್ದು, ಅದನ್ನು ಉಳಿಸಿಕೊಳ್ಳುವುದು, ಆ ನಿಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹೀಗೆ ಎಲ್ಲವೂ ಅವರಿಗೆ ಖುಷಿ ಕೊಡುವಂತಹ ಸಂಗತಿಗಳು.


  ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಬೆಳೆದುಕೊಳ್ಳುತ್ತಿದ್ದ ಅವರ ಟೆರೇಸ್ ಗಾರ್ಡನ್ ಹವ್ಯಾಸ ಇದೀಗ 1,000 ಚದರ ಅಡಿಯ ವರೆಗೆ ವಿಸ್ತರಿಸಿದ್ದು, ಹಲವಾರು ವಿಧಧ ಹಣ್ಣುಗಳು, ತರಕಾರಿಗಳು ಮತ್ತು ಔಷಧಿಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಅವರು ಮನೆಯಲ್ಲಿಯೇ 10 ತರಹದ ಹಣ್ಣುಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬ ಕುರಿತು ಸಲಹೆ ನೀಡಿದ್ದಾರೆ.


  1. ಸ್ಟ್ರಾಬೆರಿಗಳು –ಸ್ಟ್ರಾಬೆರಿಗಳನ್ನು ಬೆಳೆಯಲು ಸಾಕಷ್ಟು ಸಾವಯವ ಪದಾರ್ಥಗಳನ್ನು ಬಳಸುತ್ತಾರೆ ಅಶ್ವಿನಿ. ”ಹೆಚ್ಚು ಕಾಂಪೋಸ್ಟ್ , ಕಡಿಮೆ ಮಣ್ಣು” ಅವರ ಮಂತ್ರ. ಅವರ ಪ್ರಕಾರ ನರ್ಸರಿಯ ಸ್ಟ್ರಾಬೆರಿ ಗಿಡಗಳಿಗಿಂತ , ಬೇರೆಯವರ ಮನೆಗಳಿಂದ ತಂದ ಮೊಳಕೆ ಚಿಗುರುಗಳನ್ನು ನೆಟ್ಟರೆ ಚೆನ್ನಾಗಿ ಬೆಳೆಯುತ್ತದೆ.


  2. ಆ್ಯಪಲ್ ಬೇರ್ ( ಜುಜುಬೆ)
  ಆ್ಯಪಲ್ ಬೇರ್‌ಗಳನ್ನು ಚೈನೀಸ್ ಡೇಟ್ಸ್ ಎಂದು ಕೂಡ ಕರೆಯುತ್ತಾರೆ. ಅದನ್ನು ಸಣ್ಣ ಕುಂಡದಲ್ಲಿ ಬೆಳೆಯಬಹುದು, ಹೆಚ್ಚು ಹಣ್ಣುಗಳನ್ನು ಬೆಳೆಯಬೇಕೆಂದರೆ ದೊಡ್ಡ ಡ್ರಮ್‍ನಲ್ಲಿ ಬೆಳೆಸಬೇಕು.


  3. ಸೌತೆಕಾಯಿ
  ಸೌತೆಕಾಯಿ ಸಸ್ಯಕ್ಕೆ ಪರಾಗಸ್ಪರ್ಶದ ಅಗತ್ಯವಿದೆ. ಹಾಗಾಗಿ ಜೇನು ನೊಣಗಳು, ದುಂಬಿಗಳು ಹೆಚ್ಚು ಓಡಾಡಿಕೊಂಡಿರುವಂತೆ ಮಾಡಲು, ಸೌತೆಕಾಯಿ ಗಿಡದ ಸುತ್ತ ಹೆಚ್ಚು ಗಿಡಗಳನ್ನು ಬೆಳೆಸುವುದು ಉತ್ತಮ.


  4. ದ್ರಾಕ್ಷಿ
  ದ್ರಾಕ್ಷಿ ಬಳ್ಳಿಗಳನ್ನು ನಿಯಮಿತವಾಗಿ ಕತ್ತರಿಸಬೇಕು. ಫಲ ಕೊಡುವಾಗಲೂ ಕತ್ತರಿಸಬೇಕು. ಎಷ್ಟು ಕತ್ತರಿಸುತ್ತೀರೋ ಅಷ್ಟು ಹುಲುಸಾಗಿ ಗಿಡ ಬೆಳೆಯುತ್ತದೆ.


  5. ಡ್ರಾಗನ್ ಹಣ್ಣು
  ಡ್ರಾಗನ್ ಹಣ್ಣಿನ ಗಿಡ ಹೆಚ್ಚು ಇಳುವರಿ ಕೊಡುತ್ತದೆ. ಗಿಡ ನೆಟ್ಟು, ಬಹಳ ದಿನಗಳ ವರೆಗೆ ಅದನ್ನು ಗಮನಿಸದೆ ಹೋದರೂ,ಅದು ಒಳ್ಳೆಯ ಫಲಿತಾಂಶ ಕೊಡಬಲ್ಲದು. ಅದು ಕಳ್ಳಿ ಗಿಡದ ಕುಟುಂಬದಿಂದ ಬಂದ ಸಸ್ಯವಾಗಿರುವುದರಿಂದ, ಅದರಲ್ಲಿ ಮುಳ್ಳುಗಳಿರುತ್ತವೆ. ಹಾಗಾಗಿ ಅದನ್ನು ತಾರಸಿಯ ಯಾವುದಾದರೂ ಮೂಲೆಯಲ್ಲಿ ನೆಡುವುದು ಒಳಿತು.


  6. ಬಾಳೆ ಹಣ್ಣು
  ತಾರಸಿಯ ಮೇಲೆ ಬಾಳೆಹಣ್ಣಿನ ಗಿಡವನ್ನು ಬೆಳೆಯಬಹುದು. ಆದರೆ ಅದಕ್ಕಾಗಿ ದೊಡ್ಡ ಗಾತ್ರ ಗ್ರೋ ಬ್ಯಾಗ್ ಅಥವಾ ಕಂಟೇನರ್ ಬಳಸಬೇಕು. ಅಶ್ವಿನಿ ಅವರಿಗೆ ಅದರಿಂದ ಇಳುವರಿ ಪಡೆಯಲು ಒಂದೂವರೆ ವರ್ಷ ಬೇಕಾಯಿತು. ಬಾಳೆಗಿಡ ಪುನಹ ಚಿಗುರುತ್ತದೆ, ಹಾಗಾಗಿ ಮೇಲ್ಭಾಗ ತೆಗೆದ ನಂತರ ಎಲೆಗಳ ಉಪಯೋಗಕ್ಕಾಗಿ ಅದನ್ನು ಇಟ್ಟು ಕೊಳ್ಳಬಹುದು.


  ಇದನ್ನೂ ಓದಿ: Sidharth Shukla| ‘ಅಮ್ಮ ನನ್ನ ಆತ್ಮೀಯ ಸ್ನೇಹಿತೆ’ : ಸಿದ್ದಾರ್ಥ್ ಶುಕ್ಲಾ ಅವರಿಗಿತ್ತು ತಾಯಿಯೊಂದಿಗೆ ವಿಶೇಷ ಬಾಂಧವ್ಯ

  7. ಮಲ್ಬೆರೀ ಹಣ್ಣು
  ಮಲ್ಬೆರೀ ಹಣ್ಣು ಬೆಳೆಯಲು ಅತ್ಯಂತ ಅಗತ್ಯ ಇರುವುದು ಸೂರ್ಯನ ಬೆಳಕು ಮತ್ತು ಸೂಕ್ತ ಕತ್ತರಿಸುವಿಕೆ. ಅದರ ವಿಪರೀತ ಆರೈಕೆಯ ಅಗತ್ಯ ಇಲ್ಲ. ಅಲ್ಲದೇ ಈ ಹಣ್ಣು ದೀರ್ಘ ಜೀವಿತಾವಧಿ ಹೊಂದಿಲ್ಲವಾದ ಕಾರಣ ತಾಜಾವಾಗಿ ತಿನ್ನಬೇಕು.


  8. ಸೇಬು
  ಎಲ್ಲ ಗಿಡಗಳಿಗೂ ಅಗತ್ಯವಿರುವಂತೆ ಸೇಬಿನ ಗಿಡಕ್ಕೂ ಸೂರ್ಯನ ಬೆಳಕಿನ ಅಗತ್ಯ ಇರುತ್ತದೆ,ಆದರೆ ಗಿಡ ಎಷ್ಟು ಪ್ರಮಾಣದ ಮತ್ತು ಯಾವ ರೀತಿಯ ಸೂರ್ಯನ ಬೆಳಕನ್ನು ಪಡೆಯುತ್ತದೆ ಎಂಬುವುದು ಮುಖ್ಯ. ಸೂರ್ಯನ ಬೆಳಕು ದೀರ್ಘ ಕಾಲ ಬೀಳದ ಕಡಿಮೆ ನೆರಳಿನ ಸ್ಥಳದಲ್ಲಿ ಸೇಬು ಗಿಡಗಳು ಚೆನ್ನಾಗಿ ಬೆಳೆಯುತ್ತದೆ. ಅಂದರೆ ಈ ಗಿಡ ಮಧ್ಯಾಹ್ನದ ಸೂರ್ಯನ ನೇರ ಬೆಳಕನ್ನು ತಪ್ಪಿಸಬೇಕು.


  ಇದನ್ನೂ ಓದಿ: Taliban: ಅಫ್ಘಾನ್​ನಲ್ಲಿ ನಾಳೆ ಸರ್ಕಾರ ರಚನೆ ಮಾಡಲಿರುವ ತಾಲಿಬಾನ್​ಗಳು

  9. ಪಪ್ಪಾಯ
  ನಿಮ್ಮ ಪಪ್ಪಾಯ ಗಿಡದಲ್ಲಿ ಹಣ್ಣುಗಳಾಗುವ ಲಕ್ಷಣ ಕಾಣದಿದ್ದಲ್ಲಿ, ಅವುಗಳ ಕಾಂಡಕ್ಕೆ ಉಗುರು ಅಥವಾ ಚಾಕುವಿನಿಂದ ಸ್ವಲ್ಪ ಚುಚ್ಚಿರಿ. ಹಾಗೆ ಮಾಡುವುದರಿಂದ ಅವು ಹಣ್ಣು ನೀಡುವ ಪ್ರಕ್ರಿಯೆ ಚುರುಕಾಗುತ್ತದೆ.


  10. ಸಿಹಿ ನಿಂಬೆ ಮತ್ತು ಇತರ ಸಿಟ್ರೆಸ್ ಹಣ್ಣುಗಳು
  ಸಿಟ್ರೆಸ್ ಹಣ್ಣುಗಳಿಗೆ ಅತಿಯಾಗಿ ಅಥವಾ ನಿತ್ಯವೂ ನೀರು ಹಾಕುವ ಅಗತ್ಯ ಇಲ್ಲ. ಹಾಗಾಗಿ ತಾರಸಿ ತೋಟಕ್ಕೆ ಇದು ಒಳ್ಳೆಯ ಆಯ್ಕೆ.

  Published by:MAshok Kumar
  First published: