ಸೌತೆಕಾಯಿ(Cucumber) ತಿನ್ನುವುದರಿಂದ ಆರೋಗ್ಯಕ್ಕೆ(Health) ಒಳ್ಳೆಯದು ಎಂದು ಹಲವರು ತಿಳಿದುಕೊಂಡಿರುತ್ತಾರೆ. ಕೆಲವರು ತಮ್ಮ ಡಯಟ್‍ಗೆಂದು(Diet) ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಜನರು ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿಗಳು ನೈಸರ್ಗಿವಾಗಿಯೇ ಕ್ಯಾಲೋರಿ(Calorie) ಕಾರ್ಬೋ ಹೈಡ್ರೇಟ್ ಸೋಡಿಯಂ(Sodium) ಕೊಬ್ಬು ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ. ಇದರಲ್ಲಿ ಸಣ್ಣ ಪ್ರಮಾಣದ ವಿಟಮಿನ್ ಸಿ ಕೆ(Vitamin C and K) ಮ್ಯಾಗ್ನಿಷಿಯಂ ಸೋಡಿಯಂ ಮತ್ತು ಮ್ಯಾಂಗನೀಸ್ ಹೆಚ್ಚಾಗಿ ಇರುತ್ತದೆ. ಹೀಗಾಗಿ ಕೋಸಂಬರಿ ಆಗಿ ವಿವಿಧ ಕಾರ್ಯಕ್ರಮದಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಬಳಸುತ್ತಾರೆ. ಡಯೆಟ್ ಮಾಡುವುದಕ್ಕೆ ಸೌತೆಕಾಯಿಯನ್ನು ಬಳಸುತ್ತಾರೆ.
ಸೌತೆಕಾಯಿ ನಮ್ಮ ದೇಹಕ್ಕೆ ತುಂಬಾ ತುಂಬಾ ಉತ್ತಮವಾದ ತರಕಾರಿ ಅಂತ ಹೇಳಿದರೆ ತಪ್ಪಾಗಲಾರದು.ಹಾಗಂತ ಇದನ್ನು ಹೆಚ್ಚಾಗಿ ಕೂಡ ಸೇವಿಸಿದರೆ ಅನಾರೋಗ್ಯವನ್ನು ಕೂಡ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಕೆಲವು ಜನರು ಡಯೆಟ್ ಅಂತ ದಿನಕ್ಕೆ ಎಂಟರಿಂದ ಹತ್ತು ಸೌತೆಕಯಿಯನ್ನು ತಿನ್ನುತ್ತಾರೆ. ಹಾಗೆ ಇದನ್ನು ಸೇವಿಸುವುದರಿಂದ ಹಲವಾರು ಲಾಭಗಳು ದೊರೆಯುತ್ತವೆ.
ಈ ತರಕಾರಿ ದೇಹಕ್ಕೆ ಎಷ್ಟು ಒಳ್ಳೆಯದು ಹಾಗೆಯೇ ಇದನ್ನು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅನಾರೋಗ್ಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ ತಿನ್ನುವುದರಿಂದ ವಿಷವು ಅಮೃತವಾಗುತ್ತದೆ ಎಂಬ ಗಾದೆಯನ್ನು ಇಲ್ಲಿ ವ್ಯಕ್ತ ಪಡಿಸಿದರೆ ತಪ್ಪಾಗಲಾರದು.
ಸೌತೆಕಾಯಿಯನ್ನು ರಾತ್ರಿಯ ಸಮಯದಲ್ಲಿ ತಿನ್ನಬಾರದು. ಇದನ್ನು ಬೆಳಿಗ್ಗೆ ಸಮಯದಲ್ಲಿ ತಿನ್ನಬೇಕು. ಹಾಗೂ ಮಧ್ಯಾಹ್ನ ಸಮಯದಲ್ಲೂ ಸೌತೆಕಾಯಿಯನ್ನು ಸೇವಿಸಬಹುದು. ಆದರೆ ರಾತ್ರಿ ವೇಳೆಯಲ್ಲಿ ತಿಂದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಸೌತೆಕಾಯಿಯಲ್ಲಿದೆ ವಿಷಕಾರಿ ಅಂಶ
ಇನ್ನೂ ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದ ನಿಮ್ಮ ಲಿವರ್, ಪ್ಯಾಂಕ್ರಿಯಾಟಿಕ್ ಮತ್ತು ಮೂತ್ರಪಿಂಡ ಊತವಾಗುತ್ತದೆ. ಹಾಗಾಗಿ ಸೌತೆಕಾಯಿಯನ್ನು ಮಿತಿಯಲ್ಲಿ ತಿಂದರೆ ಉತ್ತಮ.
ಇದನ್ನೂ ಓದಿ: ನಿಮ್ಮ ಮುದ್ದು ನಾಯಿ ಮಂಕಾಗಿದ್ಯಾ? ಈ ಸಮಸ್ಯೆ ಇರಬಹುದು ನೋಡಿ, ಬೇಗ ವೈದ್ಯರನ್ನು ಭೇಟಿ ಮಾಡಿ
೧) ನಿರ್ಜಲೀಕರಣ: ಅತಿಯಾದ ಸೌತೆಕಾಯಿ ಸೇವನೆಯೂ ನಿಮ್ಮ ದೇಹದಲ್ಲಿ ನೀರಿನಂಶದ ಕೊರತೆಯನ್ನು ಮಾಡಬಹುದು ಎಂಬುದು ಗೊತ್ತೆ. ಇದು ದೇಹದ ಅಸಮತೋಲನಕ್ಕೆ ಕಾರಣವಾಗಬಹುದು.
ಸೌತೆಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ದ್ರವದ ನಷ್ಟಕ್ಕೆ ಮುಖ್ಯ ಕಾರಣವೆಂದರೆ ಸೌತೆಕಾಯಿ ಬೀಜಗಳಲ್ಲಿ ಕುಕುರ್ಬಿಟಾಸಿನ್ ಮತ್ತು ಕೊಬ್ಬಿನ ಎಣ್ಣೆ. ಸೌತೆಕಾಯಿಯಲ್ಲಿರುವ ಕುಕುರ್ಬಿಟಾಸಿನ್ ಮತ್ತು ಕೊಬ್ಬಿನ ಎಣ್ಣೆ ಈ ಸಂಯುಕ್ತಗಳು ಮೂತ್ರವರ್ಧಕವಾಗಿದ್ದು, ಸೌತೆಕಾಯಿಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರ ವಿಸರ್ಜನೆಯ ಆವರ್ತನವನ್ನು ಹೆಚ್ಚಿಸಬಹುದು.
ಇದು ಅಂತಿಮವಾಗಿ ನಮ್ಮ ದೇಹದಿಂದ ದ್ರವಗಳು ಮತ್ತು ಎಲೆಕ್ಟ್ರೋಲೈಟ್‌ಗಳ ನಷ್ಟಕ್ಕೆ ಕಾರಣವಾಗುತ್ತದೆ, ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು.
೨)ವಿಟಮಿನ್ ಸಿ ಹೆಚ್ಚಳ: ಸೌತೆಕಾಯಿ ವಿಟಮಿನ್ ಸಿ ಆಗರ. ಹೆಚ್ಚಾಗಿ ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿ ಸಿ ವಿಟಮಿನ್ ಪ್ರಮಾಣ ಹೆಚ್ಚಳವಾಗಲಿದೆ. ವಿಟಮಿನ್ C ಹೆಚ್ಚು ಸೇವಿಸಿದಾಗ ಪ್ರೋ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ,
ಸ್ವತಂತ್ರ ರಾಡಿಕಲ್ಗಳ ಬೆಳವಣಿಗೆ, ಹರಡುವಿಕೆಯನ್ನು ಪ್ರಚೋದಿಸುತ್ತದೆ ಮತ್ತು ಈ ಸ್ವತಂತ್ರ ರಾಡಿಕಲ್ಗಳು ನಮ್ಮ ದೇಹದೊಳಗೆ ಮುಕ್ತವಾಗಿ ಸಂಚರಿಸಬಹುದು, ಇದು ನಮ್ಮ ದೇಹದ ಜೀವಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಹೆಚ್ಚಿಸಬಹುದು ಕ್ಯಾನ್ಸರ್, ಮೊಡವೆ, ಅಕಾಲಿಕ ವಯಸ್ಸಾಗುವಿಕೆ ಇತ್ಯಾದಿ ಅಪಾಯ ಹೆಚ್ಚು.
೩) ಗ್ಯಾಸ್ಟಿಕ್ ಸಮಸ್ಯೆ: ಸೌತೆಕಾಯಿಗಳನ್ನು ತಿನ್ನುವ ಧನಾತ್ಮಕ ಅಂಶವೆಂದರೆ ಇದು ಮಲಬದ್ಧತೆಯನ್ನು ತಪ್ಪಿಸಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿಗಳನ್ನು ತಿನ್ನುವುದರಿಂದ ಇದು ಗ್ಯಾಸ್‌ಗೆ ಸಹ ಕಾರಣವಾಗುತ್ತದೆ. ಸೌತೆಕಾಯಿಗಳು ಕುಕರ‍್ಬಿಟಾಸಿನ್ ಎಂಬ ಅಂಶವನ್ನು ಹೊಂದಿರುತ್ತವೆ.
ಇದು ಕುಂಬಳಕಾಯಿ, ಬೂದು ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಇತರ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಕ್ಯುಕರ‍್ಬಿಟಾಸಿನ್ ಸೌತೆಕಾಯಿಗಳಲ್ಲಿ ಕಂಡುಬರುವ ಕಹಿ ರುಚಿಯನ್ನು ಉಂಟುಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ.
೪)ಸೈನಸೈಟಿಸ್ ಹೆಚ್ಚಿಸುತ್ತದೆ: ಸೈನಸ್ ಸೋಂಕು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸೈನಸ್ ಕಾಯಿಲೆಯು ಮೂಗಿನ ದಾರಿಯ ಉರಿಯೂತಕ್ಕೆ ಕಾರಣವಾಗುತ್ತದೆ. ತಾಜಾ ಅಥವಾ ದೀರ್ಘಕಾಲದ ಸೈನಸ್ ಸೋಂಕಿನಿಂದ ಬಳಲುತ್ತಿದ್ದರೆ, ಸೌತೆಕಾಯಿಯನ್ನು ಬಳಸದೇ ಇರುವುದು ಒಳ್ಳೆಯದು.
ಇದನ್ನೂ ಓದಿ: ಹಾಳಾಗಿರುವ Olive oil ಆರೋಗ್ಯಕ್ಕೆ ಹಾನಿಕಾರಕ.. ಎಣ್ಣೆ ಕೆಟ್ಟಿರುವುದನ್ನು ಈ ರೀತಿ ಪತ್ತೆ ಹಚ್ಚಬಹುದು..
೫)ಸೌತೆಕಾಯಿಯನ್ನು ಸೇವಿಸಿ ನೀರನ್ನು ಸೇವಿಸಬೇಡಿ: ಸೌತೆಕಾಯಿಯಲ್ಲಿ ಶೇ.95ರಷ್ಟು ನೀರು ಇರುತ್ತದೆ, ಇದನ್ನು ಸೇವಿಸಿದ ನಂತರ ನೀರು ಕುಡಿದರೆ ಪೋಷಕಾಂಶಗಳಿಂದ ವಂಚಿತರಾಗುತ್ತೀರಿ. ಸೌತೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ತಾಮ್ರ, ಮೆಗ್ನೀಶಿಯಂ, ಪೊಟ್ಯಾಷಿಯಂ, ಮ್ಯಾಂಗನೀಸ್ ಮತ್ತು ಮುಖ್ಯವಾಗಿ ಸಿಲಿಕಾದಂತಹ ಅಗತ್ಯ ಪೋಷಕಾಂಶಗಳಿವೆ. ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ