ಒಂದು ಊರು, ಆ ಊರಲ್ಲಿ ಅನಾಮಿಕಾ (Anamika) ಎನ್ನುವ ಸುಂದರ ಹುಡುಗಿ. ಆ ಹುಡುಗಿ ಎಷ್ಟು ಸುಂದರಿಯೋ, ಅಷ್ಟೇ ಜಿಪುಣಿ ಎಂದು ಹೆಸರು ಪಡೆದಿದ್ದಳು. ಸುಮಾರು 25 ವರ್ಷ ತನ್ನ ಜಿಪುಣತನದಿಂದ ಅಪ್ಪ (father) ಹಾಗೂ ಅಮ್ಮನಿಗೆ (Mother) ಸಹ ಸಾಕಪ್ಪ ಎಂದು ಅನಿಸಿದ್ದಳು. ಯಾವಾಗ ಮನೆಯಿಂದ ಹೊರ ಹೋಗುತ್ತಾಳೋ ಎನ್ನುವ ಭಾವನೆ ಅವರಲ್ಲಿ ಮೂಡಿತ್ತು. ಕೊನೆಗೂ ಒಂದು ದಿನ ಅನಾಮಿಕಾಗೆ ಮದುವೆ (Wedding) ಆಯಿತು. ಶಾರದಾ ಹಾಗೂ ಪ್ರಸಾದ್ ಎನ್ನುವವರ ಮಗ ರಮೇಶ್ ಜೊತೆ ಮದುವೆ ಮಾಡಿಕೊಂಡು ಬಂದ ದಿನವೇ ಹೊಸ್ತಿಲಲ್ಲಿಯೇ ತನ್ನ ಜಿಪುಣ ಬುದ್ದಿ ತೋರಿಸಲು ಆರಂಭಿಸಿದಳು.
ಅತ್ತೆಯ ಮನೆಯಲ್ಲೂ ಜಿಪುಣತನ ಬಿಡದ ಅನಾಮಿಕಾ
ಅತ್ತೆ ಆರತಿ ಮಾಡಲು ಬಂದಾಗ ಜೋರಾಗಿ ಉರಿಯುತ್ತಿದ್ದ ದೀಪ ನೋಡಿ ಅತ್ತೆ ನಮ್ಮ ಬಳಿ ಕರ್ಪೂರದ ಫ್ಯಾಕ್ಟರಿ ಇದೆಯಾ ಎಂದು ಕೇಳುತ್ತಾಳೆ. ಯಾಕಮ್ಮಾ ಎಂದು ಶಾರದಾ ಕೇಳಿದಾಗ ಒಂದು ಕರ್ಪೂರದಲ್ಲಿ ಆರತಿ ಮಾಡಬಹುದಾದರೂ 2 ಕರ್ಪೂರ ಏಕೆ ಬಳಸಿದ್ದು ಎಂದು ಕೇಳುತ್ತಾಳೆ. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ಇವರ ಪೆಚ್ಚು ಮುಖ ನೋಡಿದ ಅನಾಮಿಕಾ, ಅಯ್ಯೋ ಮದುವೆ ಎಂದರೆ ತಮಾಷೆ ಎನ್ನುತ್ತಾರೆ, ಹಾಗಾಗಿ ಜೋಕ್ ಮಾಡಿದೆ ಎನ್ನುತ್ತಾಳೆ. ಇದನ್ನು ಕೇಳಿ ಎಲ್ಲರೂ ನಗುತ್ತಾರೆ. ನಂತರ ಬಲಗಾಲಿಟ್ಟು ಒಳಗೆ ಬಂದ ಅನಾಮಿಕಾ, ರೀ ನೀವು ನನ್ನ ಎತ್ತಿಕೊಂಡು ಹೋಗಿ, ನಿಮ್ಮ ಕಾಲಿರುವ ನನ್ನ ಕಾಲನ್ನು ಏಕೆ ಬಳಕೆ ಮಾಡಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿ ಎಲ್ಲರೂ ನಾಚಿಕೊಳ್ಳುತ್ತಾರೆ.
ಹೀಗೆ ದಿನಗಳು ಕಳೆಯುತ್ತದೆ. ಅತ್ತೆ ಮನೆಯಲ್ಲಿ ಸಹ ಜಿಪುಣತನದಿಂದ ಎಲ್ಲರಿಗೂ ಹಿಂಸೆ ನೀಡುತ್ತಾಳೆ. ಒಂದು ದಿನ ಅತ್ತೆ ಮಾವ ಹಸಿವು ಅಡುಗೆ ಏನು ಎಂದು ಕೇಳುತ್ತಾರೆ. ಆಗ ಅನಾಮಿಕಾ 10 ಇರಿ ಬರ್ತೀನಿ, ಅಲ್ಲಿ ತನಕ ಇಬ್ಬರು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಂಡು ಕುಳಿತಿರಿ ಎಂದು ಹೇಳಿ ಹೋಗುತ್ತಾಳೆ. 10 ನಿಮಿಷದ ನಂತರ ಬಂದ ಸೊಸೆ ನಿಮ್ಮ ಹಸಿವು ಕಡಿಮೆ ಆಯ್ತಾ? ಎಂದು ಕೇಳುತ್ತಾಳೆ. ಅದಕ್ಕೆ ಅತ್ತೆ-ಮಾವ ಇಲ್ಲಮ್ಮ ಏನು ತಿಂದಿಲ್ಲ, ಹೇಗೆ ಕಡಿಮೆ ಆಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಅನಾಮಿಕಾ, ನಾನು ಸಿನಿಮಾದಲ್ಲಿ ನೋಡಿದ್ದೇನೆ. ಗಂಡ-ಹೆಂಡತಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೆ ಹಸಿವು ಆಗುವುದಿಲ್ಲ, ಆಗಿದ್ದರೂ ಹೊಟ್ಟೆ ತುಂಬುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಇಬ್ಬರು ಕಕ್ಕಾಬಿಕ್ಕಿಯಾಗುತ್ತಾರೆ.
ಇದನ್ನೂ ಓದಿ: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?
ಅಲ್ಲದೇ, ಇದೇ ರೀತಿ ಊಟ-ತಿಂಡಿ ವಿಚಾರದಲ್ಲಿ ಬಹಳ ಹಿಂಸೆ ಕೊಡುತ್ತಿರುತ್ತಾಳೆ. ಒಂದು ದಿನ ಮಾರ್ಕೆಟ್ಗೆ ತರಕಾರಿ ತರಲು ಹೋಗಿದ್ದ ಅನಾಮಿಕಾಗೆ ಅವಳ ಗೆಳತಿ ಶ್ರೀವಲ್ಲಿ ಸಿಗುತ್ತಾಳೆ. ಇಬ್ಬರು ಸ್ವಲ್ಪ ಹೊತ್ತು ಮಾತನಾಡುತ್ತಾರೆ. ಹೀಗಿರುವ ಶ್ರೀವಲ್ಲಿ ಅನಾಮಿಕಾಗೆ ನಿಮ್ಮ ಮದುವೆಯ ಪಾರ್ಟಿ ಯಾವಾಗ ಕೊಡ್ತೀಯಾ ಎಂದು ಕೇಳುತ್ಥಾಳೆ. ಅದಕ್ಕೆ ಅನಾಮಿಕಾ, ನೋಡು ನಾನು ಒಬ್ಬರಿಗೆ ಒಂದೊಂದು ದಿನ ಕೊಡಲು ಆಗುವುದಿಲ್ಲ, ಒಟ್ಟಿಗೆ ಎಲ್ಲಾ ಗೆಳೆಯರು ಸಿಕ್ಕರೆ ಒಂದು ದಿನ ಕೊಡುತ್ತೀನಿ ಎನ್ನುತ್ತಾಳೆ. ಇಬ್ಬರು ಚರ್ಚೆ ಮಾಡಿ ಮುಂದಿನ ಭಾನುವಾರ ಎಂದು ನಿರ್ಧಾರ ಮಾಡುತ್ತಾರೆ.
ಜಿಪುಣ ಸೊಸೆಯ ಮದುವೆ ಪಾರ್ಟಿ
ಭಾನುವಾರ 20 ಜನ ಗೆಳತಿಯರು ಮನೆಗೆ ಬರುವ ವಿಚಾರ ತಿಳಿದ ಅನಾಮಿಕಾಗೆ ಚಿಂತೆಯಾಗುತ್ತದೆ, ಆದರೆ ಒಂದು ಉಪಾಯ ಬರುತ್ತದೆ. ಅದರಂತೆ ಬಂದ ಅತಿಥಿಗಳನ್ನು ಚಾಪೆಯ ಮೇಲೆ ಕೂರಿಸುತ್ತಾಳೆ. ಅವರ ಮುಂದೆ 4 ರಿಂದ 6 ಕಲ್ಲು ಇಡುತ್ತಾಳೆ. ನಂತರ 10ml ಜ್ಯೂಸ್ಕೊಟ್ಟು ಈ ಕಲ್ಲನ್ನು ಹಾಕಿಕೊಂಡು ಕುಡಿಯಿರಿ, ಮೇಲೆ ಬರುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಶಾಕ್ ಆದರೂ ಸುಮ್ಮನಾಗುತ್ತಾರೆ.
ನಂತರ ಇರಿ ಬಿರಿಯಾನಿ ತರುತ್ತೇನೆ ಎಂದು ಹೋಗುತ್ತಾಳೆ. ಇದನ್ನು ಕೇಳಿದ ಸ್ನೇಹಿತರು ಚಿಕನ್ ಅಥವಾ ಮಟನ್ ಯಾವುದು ಎಂದು ಕೇಳುತ್ತಾರೆ. ಅದಕ್ಕೆ ಯಾವುದು ಬೇಕೋ ಅದು ಎಂದು ಹೇಳಿ ಹೋಗುತ್ತಾಳೆ. ಸ್ನೇಹಿತರ ಮುಂದೆ ಎಲೆ ಹಾಕಿದ ಅನಾಮಿಕಾ ಸೌತೆಕಾಯಿ ಹಾಗೂ 4 ಕ್ಯಾರೆಟ್ ತುಂಡು ಹಾಕಿ, ಸ್ವಲ್ಪ ಅನ್ನವನ್ನು ಹಾಕುತ್ತಾಳೆ. ನಂತರ ಬಾಗಿಲು ತೆಗೆದು ಅಲ್ಲಿ ಕೋಳಿ ಹಾಗೂ ಕುರಿ ಕಟ್ಟಿದ್ದೇನೆ, ನಿಮಗೆ ಯಾವುದು ಬೇಕೋ ಅದನ್ನು ನೋಡಿಕೊಂಡು ತಿನ್ನಿ ಎನ್ನುತ್ತಾಳೆ.
ಇದನ್ನೂ ಓದಿ: ಬೀಟ್ರೂಟ್ನಲ್ಲೂ ಮಾಡಬಹುದು ಸಖತ್ ಟೆಸ್ಟಿ ಹಲ್ವಾ!
ಇದನ್ನು ಕೇಳಿದ ಅವಳ ಸ್ನೇಹಿತರು ಅನಾಮಿಕಾಳ ಮರ್ಯಾದೆ ತೆಗೆದು, ಸ್ನೇಹವೇ ಬೇಡ ಎಂದು ಹೋಗುತ್ತಾರೆ. ಈ ಕಥೆಯ ನೀತಿ ಎಂದರೆ ಹಣ ಉಳಿಸುವ ಅವಶ್ಯಕತೆ ಇದೆ, ಆದರೆ ಅತಿಯಾಗಿ ಜಿಪುಣತನ ಒಳ್ಳೆಯದಲ್ಲ ಇದರಿಂದ ಎಲ್ಲರನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ