ನೀವು ಹೇಗೆ ಚಹಾ ತಯಾರಿಸುತ್ತೀರಿ?, ಬ್ರಿಟನ್ನಿನಲ್ಲಿ ನಡೆಯಿತು ಒಂದು ಆಸಕ್ತಿಕರ ಸಮೀಕ್ಷೆ

news18
Updated:August 5, 2018, 5:48 PM IST
ನೀವು ಹೇಗೆ ಚಹಾ ತಯಾರಿಸುತ್ತೀರಿ?, ಬ್ರಿಟನ್ನಿನಲ್ಲಿ ನಡೆಯಿತು ಒಂದು ಆಸಕ್ತಿಕರ ಸಮೀಕ್ಷೆ
  • News18
  • Last Updated: August 5, 2018, 5:48 PM IST
  • Share this:
-ನ್ಯೂಸ್ 18 ಕನ್ನಡ

ಚಹಾ ಎಂಬುದು ಎಲ್ಲ ದೇಶಿಗರ ನೆಚ್ಚಿನ ಪಾನೀಯ ಎಂಬುದರಲ್ಲಿ ಸಂಶಯವೇ ಇಲ್ಲ. ಅನಾದಿಕಾಲದಿಂದಲೂ ಟೀ ಕುಡಿಯುವುದನ್ನು ರೂಢಿಸಿಕೊಂಡು ಬಂದಿರುವ ಬ್ರಿಟನ್​ನಲ್ಲಿ ಇತ್ತೀಚೆಗೆ ವಿಶೇಷ ರೀತಿಯ ಅಧ್ಯಯನ ನಡೆಸಲಾಗಿದೆ. ಶತಮಾನಗಳಿಂದ ಟೀ ಕುಡಿಯುತ್ತಿರುವ ಆಂಗ್ಲರು ಯಾವ ರೀತಿಯಾಗಿ ಚಹಾ ತಯಾರಿಸುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಬ್ರಿಟನ್​ನಲ್ಲಿ ಚಹಾ ತಯಾರಿಸಿದ ಬಳಿಕವಷ್ಟೇ ಹೆಚ್ಚಿನವರು ಹಾಲು ಸೇರಿಸುತ್ತಾರೆ ಎಂದು ದಿ ಯುಗೊವ್ ಒಮ್ನಿಬಸ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಸಮೀಕ್ಷೆಯಲ್ಲಿ ಶೇ.79 ರಷ್ಟು ಜನರು ಚಹಾ ಮಾಡಿ ಕೊನೆಗೆ ಹಾಲು ಹಾಕುವುದಾಗಿ ತಿಳಿಸಿದ​ರೆ, ಶೇ.20 ರಷ್ಟು ಮಂದಿ ಇದನ್ನು ನಿರಾಕರಿಸಿದರು. 65 ವರ್ಷ ಪ್ರಾಯದ ಶೇ.32ರಷ್ಟು ಜನರಿಗೆ ಹೋಲಿಸಿದರೆ 18-24 ವಯೋಮಾನದ ಶೇ.96 ರಷ್ಟು ಮಂದಿ ಮೊದಲು ಹಾಲು ಸೇರಿಸಬೇಕೆಂದು ತಿಳಿದುಕೊಂಡಿದ್ದಾರೆ.

1946ರಲ್ಲಿ ಲೇಖಕ ಜಾರ್ಜ್ ಒರ್ವೆಲ್​ ಬರೆದ ಎ ನೈಸ್ ಕಪ್ ಆಫ್ ಟೀ ಎಂಬ ಪ್ರಬಂಧದಲ್ಲಿ ಬ್ರಿಟನ್​ನ ಕುಟುಂಬದಲ್ಲಿ ಒಂದೇ ವಿಷಯದ ಬಗ್ಗೆ ಎರಡು ಚಿಂತನೆಗಳಿರುತ್ತದೆ ಎಂದು ತಿಳಿಸಿದ್ದರು. ಇದು ಬ್ರಿಟನ್​​ನ ಸಾಧಾರಣ ಕುಟುಂಬದಿಂದ ಹಿಡಿದು ಚಿನ್ನದ ಕಪ್​ನಲ್ಲಿ ಟೀ ಕುಡಿಯುತ್ತಿರುವ ಶ್ರೀಮಂತ ವರ್ಗದವರಿಗೂ ಅನ್ವಯಿಸುತ್ತದೆ. ಏಕೆಂದರೆ ಈ ಸಮೀಕ್ಷೆಯಲ್ಲಿ ಒಂದೇ ಕುಟುಂಬದಲ್ಲಿರುವರು ಕೂಡ ಭಿನ್ನವಾಗಿ ಟೀ ತಯಾರಿಸುವುದನ್ನು ಕಂಡುಕೊಳ್ಳಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಹಾ ತಯಾರಿಸುವಾಗ ಮೊದಲು ಹಾಲು ಕುದಿಸಿ ಟೀ ಪುಡಿಯನ್ನು ಹಾಕುವ ಅಭ್ಯಾಸವನ್ನು ಎಲ್ಲಾ ವರ್ಗದವರು ರೂಢಿಸಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
First published: August 5, 2018, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading