ನೀವು ತೂಕ ಇಳಿಸಿಕೊಳ್ಳಬೇಕು (Weight Loss) ಎಂದುಕೊಂಡಿದ್ದೀರಾ? ಅದಕ್ಕಾಗಿ ಸಾಕಷ್ಟು ವ್ಯಾಯಾಮ (Exercise), ಡಯೆಟ್ (Diet) ಮಾಡುತ್ತೀರಾ? ಆದರೆ ಆಗಾಗ ಹೊರಗಿನಿಂದ ಫುಡ್ ಆರ್ಡರ್ (Food Order) ಮಾಡುತ್ತೀರಾ? ಹಾಗಿದ್ದರೆ ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಿ. ಈ ಮಾತನ್ನು ಬೇರ್ಯಾರೂ ಅಲ್ಲ, ಸ್ವತಃ ಚೆಫ್ ಆಗಿದ್ದ ಮಧು ಮೆನನ್ ಹೇಳಿದ್ದಾರೆ. ಹೌದು, "ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವುದನ್ನು ನಿಲ್ಲಿಸಬೇಕು" ಎಂದು ಮಾಜಿ ಬಾಣಸಿಗ ಮತ್ತು ರೆಸ್ಟೋರೆಂಟ್ ಮಾಲೀಕರಾದ (Restaurant Owner) ಮಧುಮೆನನ್ ಹೇಳಿದ್ದಾರೆ. ಅವರು ಈ ಬಗ್ಗೆ ಟ್ವೀಟ್ ಮಾಡಿ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ಕ್ಯಾಲೋರಿ ಆಹಾರವನ್ನೇ ತಯಾರಿಸಬೇಕು ಎಂಬುದಿಲ್ಲ. ಹಾಗಾಗಿ ಅವರು ಆಹಾರವನ್ನು ರುಚಿಯಾಗಿ ತಯಾರಿಸಲು ಬಯಸುತ್ತಾರೆ.
ಸಾಮಾನ್ಯವಾಗಿ ಕೊಬ್ಬು ಮತ್ತು ಸಕ್ಕರೆ ಆಹಾರಕ್ಕೆ ವಿಶೇಷ ರುಚಿ ನೀಡುತ್ತವೆ. ಆದ್ದರಿಂದ ರೆಸ್ಟೋರೆಂಟ್ ಆಹಾರದಲ್ಲಿ ಬೆಣ್ಣೆ ಮತ್ತು ಇತರ ಕೊಬ್ಬನ್ನು ಎಷ್ಟು ಬಳಸಲಾಗುತ್ತದೆ ಎಂದು ಊಹಿಸಿ. ಇದಕ್ಕೂ ಮುನ್ನ ಅವರು ತೂಕ ನಷ್ಟದ ಮೇಲೆ ಉತ್ತಮ ಆಹಾರವು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಧು ಮೆನನ್ ಬರೆಯುತ್ತಾರೆ.
ಸರಳ ಸಲಾಡ್ 360 ಕ್ಯಾಲೋರಿ ಹೊಂದಿರುತ್ತದೆ
ಒಂದು ಟನ್ ತರಕಾರಿಗಳನ್ನು ಹೊಂದಿರುವಂತೆ ತೋರುವ ಒಂದು ಸರಳವಾದ ಸಲಾಡ್ ಕೂಡ ವಿನೆಗರ್‌ಗೆ 3:1 ಎಣ್ಣೆಯಿಂದ ಕೂಡಿರಬಹುದು. 3 ಚಮಚ ಎಣ್ಣೆಯು 360 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ನಿಮ್ಮ ಸಾಮಾನ್ಯ ಊಟ ಅಥವಾ ರಾತ್ರಿಯ ಊಟದಲ್ಲಿ ಹೊಂದಿರಬೇಕಾದ ಎಲ್ಲಾ ಕ್ಯಾಲೋರಿಗಳ ಅರ್ಧದಷ್ಟು.
ಅಲ್ಲದೇ ರೆಸ್ಟೋರೆಂಟ್‌ಗೆ ಹೋದರೆ ಸಾಮಾನ್ಯವಾಗಿ ಯಾರು ಬರೀ ಸಲಾಡ್ ಆರ್ಡರ್ ಮಾಡುತ್ತಾರೆ ಹೇಳಿ? ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕೊಬ್ಬು ಹೆಚ್ಚಿರುತ್ತವೆಯಂತೆ ರೆಸ್ಟೋರೆಂಟ್ ಆಹಾರಗಳಲ್ಲಿ
ಮಧು ಮೆನನ್ ಅವರು ರೆಸ್ಟೋರೆಂಟ್‌ನಲ್ಲಿ ಮಾಡುವಂತಹ ಅಸಮತೋಲಿತ ಆಹಾರದ ಬಗ್ಗೆ ಹೇಳುತ್ತಾರೆ. ನೀವು ಹುರಿದ ತರಕಾರಿಗಳನ್ನು ಆರ್ಡರ್ ಮಾಡುತ್ತಿದ್ದರೆ, ಅವುಗಳನ್ನು ಎಣ್ಣೆ/ಬೆಣ್ಣೆಯಲ್ಲಿ ಹುರಿಯಲಾಗುತ್ತದೆ.
ನೀವು ಮೇಲೋಗರವನ್ನು ಆರ್ಡರ್ ಮಾಡುತ್ತಿದ್ದರೆ, ಅದು ಬಹುಶಃ ಸಾಸ್‌ಗೆ ಎಮಲ್ಸಿಫೈಡ್ ಮಾಡಿದ ಕೊಬ್ಬಿನಲ್ಲಿ ಮಾಡಿರಬಹುದು. 4-5 tbsp ಎಣ್ಣೆ, ಹೆಚ್ಚುವರಿ ಕೆನೆ ಅಥವಾ ಕಾಯಿ ಪೇಸ್ಟ್‌ಗಳನ್ನು ಹಾಕಲಾಗಿರುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಸಕ್ಕರೆ ಬಳಕೆಯೂ ಹೆಚ್ಚು
ಕೊಬ್ಬಿನಂತೆಯೇ, ಸಕ್ಕರೆ ಕೂಡ ಎಲ್ಲ ಆಹಾರಗಳಿಗೂ ಹಾಕಲಾಗಿರುತ್ತದೆ. ತಾಜಾ ತಿನ್ನುವ ಬಗ್ಗೆ ಹೆಮ್ಮೆಪಡುವ ನಿಮ್ಮ ನೆಚ್ಚಿನ ಸ್ಯಾಂಡ್‌ವಿಚ್ ಸಹ ಸಕ್ಕರೆ, ಕೊಬ್ಬಿನಿಂದ ಕೂಡಿರುತ್ತದೆ.
ಅದು ಕೇವಲ ಎಮಲ್ಸಿಫೈಡ್ ಕೊಬ್ಬಾಗಿರುತ್ತದೆ. ಆದರೆ ಸಕ್ಕರೆಯನ್ನು ಹೊಂದಿರುತ್ತದೆ ಎಂದು ಅವರು ಬರೆಯುತ್ತಾರೆ."ನೀವು ಸಿಹಿತಿಂಡಿ ಆರ್ಡರ್ ಮಾಡುತ್ತಿದ್ದರೆ, ನಿಮಗೆ ಹೆಚ್ಚು ಕೊಬ್ಬಿನ ಜೊತೆಗೆ ಹೆಚ್ಚಿನ ಸಕ್ಕರೆ ಎರಡೂ ಒಟ್ಟಿಗೆ ಸಿಗುತ್ತದೆ.
ಅಪರೂಪಕ್ಕೆ ಊಟಮಾಡುವುದು ಓಕೆ
ರೆಸ್ಟೋರೆಂಟ್‌ಗಳಲ್ಲಿ ಆಹಾರ ತಿನ್ನುವುದು ಅಪರೂಪಕ್ಕಾದರೆ ಸರಿ ಎಂದು ಹೇಳುವ ಮಧುಮೆನನ್, ಆದರೆ ನೀವು ಇದನ್ನೇ ಅಭ್ಯಾಸವಾಗಿ ಮಾಡಿದರೆ ನಿಮ್ಮ ದೇಹದಲ್ಲಿ ಕ್ಯಾಲೋರಿಗಳು ಹೆಚ್ಚಾಗುತ್ತದೆ ಎಂದರ್ಥ. ಇದರಿಂದ ತೂಕ ಇಳಿಕೆಯ ನಿಮ್ಮ ಉದ್ದೇಶ ಈಡೇರದೇ ಹೋಗಬಹುದು ಎಂಬುದಾಗಿ ಹೇಳುತ್ತಾರೆ. ಅದಕ್ಕಾಗಿಯೇ ಈ ಮೂಲಕ ಟ್ವೀಟ್‌ನಲ್ಲಿ ರೆಸ್ಟೋರೆಂಟ್ ಊಟಗಳ ಮೂಲಕ ಅತಿಯಾದ ಕ್ಯಾಲೋರಿ ತಿನ್ನುವ ಬಗ್ಗೆಯೇ ಹೈಲೈಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ