• Home
  • »
  • News
  • »
  • lifestyle
  • »
  • Health Care: ಸಕ್ಕರೆಯಿಂದ ಮಾಡಿದ ತಿಂಡಿ ಬಾಯಿಗೆ ಸಿಹಿ, ಆದರೆ ಆರೋಗ್ಯಕ್ಕೆ ಕಹಿ! ಅದನ್ನು ಬಿಡಿ, ಆರೋಗ್ಯಕರವಾದ ಇದನ್ನು ತಿನ್ನಿ

Health Care: ಸಕ್ಕರೆಯಿಂದ ಮಾಡಿದ ತಿಂಡಿ ಬಾಯಿಗೆ ಸಿಹಿ, ಆದರೆ ಆರೋಗ್ಯಕ್ಕೆ ಕಹಿ! ಅದನ್ನು ಬಿಡಿ, ಆರೋಗ್ಯಕರವಾದ ಇದನ್ನು ತಿನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಸ್ಕರಿಸಿದ ಸಕ್ಕರೆ ಅತಿಯಾಗಿ ಅಥವಾ ನಿಯಮಿತವಾಗಿ ಸೇವನೆ ಮಾಡುವುದು ಹೆಚ್ಚು ಅಪಾಯಕಾರಿ. ಇದು ದೇಹವನ್ನು ಅನಾರೋಗ್ಯಕ್ಕೀಡು ಮಾಡುತ್ತದೆ. ಆದರೆ ಸಿಹಿಯಾದ ಸಕ್ಕರೆ ತಿನ್ನುವುದು ಬಿಡಲು ಆಗುತ್ತಿಲ್ಲ ಎನ್ನುವವರು, ಸಿಹಿ ತಿನ್ನುವ ಅಭ್ಯಾಸ ಇರುವವರು ಮತ್ತು ಪ್ರತಿ ಊಟದ ನಂತರ ಸಿಹಿ ತಿನ್ನಲು ಬಯಸುವವರು ಕೆಲವು ಪರ್ಯಾಯ ಪದಾರ್ಥ ತಿನ್ನುವ ಮೂಲಕ ಸಿಹಿ ಕಡುಬಯಕೆಯನ್ನು ಶಾಂತಗೊಳಿಸಬಹುದು.

ಮುಂದೆ ಓದಿ ...
  • Share this:

    ಸಿಹಿ ಪದಾರ್ಥ (Sweet Ingredients) ಸೇವನೆ ಆರೋಗ್ಯಕ್ಕೆ (Health) ಬೇಗ ಹಾನಿ ಉಂಟು ಮಾಡುತ್ತದೆ. ಹೆಚ್ಚು ಸಕ್ಕರೆ (Sugar) ಮತ್ತು ಸಕ್ಕರೆ ಪದಾರ್ಥಗಳ ಸೇವನೆ ಮಾಡುವುದು ತೂಕ (Weight) ಹೆಚ್ಚಿಸುತ್ತದೆ. ಜೊತೆಗೆ ಮಧುಮೇಹ (Diabetes) ಸೇರಿದಂತೆ ಅನೇಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಸಂಸ್ಕರಿಸಿದ ಸಕ್ಕರೆ ಅತಿಯಾಗಿ ಅಥವಾ ನಿಯಮಿತವಾಗಿ ಸೇವನೆ ಮಾಡುವುದು ಹೆಚ್ಚು ಅಪಾಯಕಾರಿ. ಇದು ದೇಹವನ್ನು ಅನಾರೋಗ್ಯಕ್ಕೀಡು ಮಾಡುತ್ತದೆ. ಆದರೆ ಸಿಹಿಯಾದ ಸಕ್ಕರೆ ತಿನ್ನುವುದು ಬಿಡಲು ಆಗುತ್ತಿಲ್ಲ ಎನ್ನುವವರು, ಸಿಹಿ ತಿನ್ನುವ ಅಭ್ಯಾಸ ಇರುವವರು ಮತ್ತು ಪ್ರತಿ ಊಟದ ನಂತರ ಸಿಹಿ ತಿನ್ನಲು ಬಯಸುವವರು ಕೆಲವು ಪರ್ಯಾಯ ಪದಾರ್ಥ ತಿನ್ನುವ ಮೂಲಕ ಸಿಹಿ ಕಡುಬಯಕೆಯನ್ನು ಶಾಂತಗೊಳಿಸಬಹುದು.


    ಸಕ್ಕರೆ ಬದಲು ಈ ಪದಾರ್ಥಗಳ ಸೇವನೆ ಆರೋಗ್ಯಕರ


    ಸಿಹಿ ಪದಾರ್ಥ ಸೇವನೆಯಿಂದ ಹಲ್ಲು ನೋವು ತೊಂದರೆ ಆಗಿದ್ದರೆ, ಆರೋಗ್ಯಕರ ಪರ್ಯಾಯ ಪದಾರ್ಥ ಸೇವಿಸಿ. ಸಕ್ಕರೆ ಸೇವನೆ ಬಿಟ್ಟು ಬಿಡಿ. ಆಯುರ್ವೇದ ತಜ್ಞೆ ಡಾ.ದೀಕ್ಸಾ ಭಾವಸರ್ ಸವಲಿಯಾ, ಮಧುಮೇಹಿಗಳಿಗೆ ಸಿಹಿ ತಿಂಡಿ ಸೇವನೆ ನಿಷಿದ್ಧ.


    ಮಧುಮೇಹಿಗಳು ಆರೋಗ್ಯಕ್ಕೆ ಉತ್ತಮವಾಗಿರಬೇಕು. ರಕ್ತದ ಸಕ್ಕರೆ ಹೆಚ್ಚಾಗಬಾರದು ಅಂದ್ರೆ ಕೆಲವು ಆರೋಗ್ಯಕರ ಪದಾರ್ಥ ಸೇವನೆ ಮಾಡಬಹುದು.


    ಸಂಸ್ಕರಿಸಿದ ಸಕ್ಕರೆ ಬದಲು ಕೆಲವು ಪರ್ಯಾಯ ಆಯ್ಕೆಯಾಗಿ ಯಾವ ಪದಾರ್ಥ ಸೇವನೆ ಮಾಡಬಹುದು. ಮತ್ತು ಅವುಗಳು ಹೇಗೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ ನೋಡೋಣ.




    ಖರ್ಜೂರ


    ಹಣ್ಣು ಮತ್ತು ಒಣ ರೂಪದಲ್ಲಿ ಖರ್ಜೂರ ತಿಂದರೆ ಅನೇಕ ಪ್ರಯೋಜನ ಸಿಗುತ್ತವೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸತು, ವಿಟಮಿನ್-ಬಿ6, ಎ ಮತ್ತು ಕೆ ಹೇರಳವಾಗಿದೆ.


    ಆಹಾರದ ಫೈಬರ್, ಕಾರ್ಬೋಹೈಡ್ರೇಟ್ಗಳು, ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳ ಗುಣಲಕ್ಷಣಗಳಿವೆ. ಈ ಎಲ್ಲಾ ಪೋಷಕಾಂಶಗಳು ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ದಿನಕ್ಕೆ ನಾಲ್ಕು ಖರ್ಜೂರ ಸೇವಿಸಿ.


    ಒಣದ್ರಾಕ್ಷಿ


    ಒಣದ್ರಾಕ್ಷಿಗಳಲ್ಲಿ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಬೋರಾನ್ ಸಮೃದ್ಧವಾಗಿವೆ. ಮಧುಮೇಹಿಗಳು ಒಣದ್ರಾಕ್ಷಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿಗಳ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆ. ಇನ್ಸುಲಿನ್ ಪ್ರತಿಕ್ರಿಯೆ ಸುಧಾರಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ. ದಿನಕ್ಕೆ ಒಂದು ಹಿಡಿ ಒಣದ್ರಾಕ್ಷಿ ತಿನ್ನಬಹುದು.


    ಎಳ್ಳಿನ ಉಂಡೆ


    ಬೆಲ್ಲವು ಸಂಸ್ಕರಿಸದ ಸಕ್ಕರೆ. ಹಾಗಾಗಿ ಇದು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಬೆಲ್ಲವು ಆರೋಗ್ಯಕ್ಕೆ ಪ್ರಯೋಜನಕಾರಿ. ಎಳ್ಳು, ತುಪ್ಪ ಮತ್ತು ಬೆಲ್ಲದಿಂದ ಮಾಡಿದ ಎಳ್ಳು ಚಿಕ್ಕಿ ಅಥವಾ ಲಡ್ಡು ಸೇವಿಸಿ. ಇದು ಎಲ್ಲರಿಗೂ ಉತ್ತಮವಾಗಿದೆ. ಒಂದು ಮಧ್ಯಮ ಗಾತ್ರದ ಲಾಡು ಅಥವಾ ಚಿಕ್ಕಿಯನ್ನು ದಿನವಿಡೀ ಸೇವಿಸಬಹುದು.


    ಡಾರ್ಕ್ ಚಾಕೋಲೇಟ್


    ಡಾರ್ಕ್ ಚಾಕೋಲೇಟ್ ಸೇವನೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದರಲ್ಲಿರುವ ಕೋಕೋ ಪಾಲಿಫಿನಾಲ್‌ಗಳು ಇನ್ಸುಲಿನ್ ಪ್ರತಿರೋಧದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ. ಇದು ಹೃದಯ ಮತ್ತು ಹಾರ್ಮೋನುಗಳಿಗೆ, ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ. ದಿನಕ್ಕೆ ಎರಡು ಡಾರ್ಕ್ ಚಾಕೊಲೇಟ್ ಸೇವಿಸಿ.


    ಅಂಜೂರ


    ಅಂಜೂರ ಹಣ್ಣು ಮತ್ತು ಅದರ ಎಲೆ ಪೋಷಕಾಂಶ ಗುಣ ಹೊಂದಿದೆ. ಇದು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಯೋಜನಕಾರಿ. ಅಂಜೂರದ ಎಲೆಗಳು ಈಥೈಲ್ ಅಸಿಟೇಟ್ ಸಾರ ಹೊಂದಿವೆ. ಇದು ಇನ್ಸುಲಿನ್ ಉತ್ಪಾದನೆ ಉತ್ತೇಜಿಸುವ ಮೂಲಕ ಮಧುಮೇಹ ವಿರೋಧಿ ಪರಿಣಾಮ ತೋರಿಸುತ್ತದೆ.


    ಇದನ್ನೂ ಓದಿ: ತುಪ್ಪವನ್ನು ಈ ರೀತಿ ತಿಂದರೆ ತೂಕ ಇಳಿಸೋದು ಬಲು ಸುಲಭ


    ಅಂಜೂರದ ಸೇವನೆ ಮಧುಮೇಹ ತಡೆಗಟ್ಟಲು ಸಹ ಪ್ರಯೋಜನಕಾರಿ. ಅಂಜೂರ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಹೊಂದಿದೆ. ಇದು ಮೂಳೆ ಮತ್ತು ಕೂದಲಿನ ಸಮಸ್ಯೆಗೆ ಉತ್ತಮ ಆಯ್ಕೆ. ಶಕ್ತಿ ನೀಡುತ್ತದೆ. ದಿನಕ್ಕೆ ನಾಲ್ಕು ಅಂಜೂರ ಹಣ್ಣು ಸೇವಿಸಿ.

    Published by:renukadariyannavar
    First published: