Weight Loss: ಸಕ್ಕರೆಯಿಂದ ಮಾಡಿದ ಪದಾರ್ಥ ಸೇವನೆ ಬಿಡಿ ಪರ್ಯಾಯ ಪದಾರ್ಥ ಸೇವಿಸಿ, ತೂಕ ಇಳಿಸಿ!

ತೂಕ ಹೆಚ್ಚಿರುವ ಮತ್ತು ಸಿಹಿ ಪದಾರ್ಥಗಳಿಂದ ದೂರವಿರಲು ಸಾಧ್ಯವಾಗದ ಜನರಿಗೆ ತಜ್ಞರು ಕೆಲ ಆಯ್ಕೆ ನೀಡಿದ್ದಾರೆ. ಈ ಪದಾರ್ಥಗಳು ಅವರ ಸಿಹಿ ತಿನ್ನುವ ಕಡು ಬಯಕೆಗಳನ್ನು ಶಾಂತಗೊಳಿಸುತ್ತದೆ. ಜೊತೆಗೆ ಇವುಗಳ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ (Unhealthy Food) ಸೇವನೆಯು ಸಾಕಷ್ಟು ಜನರಲ್ಲಿ (People) ತೂಕ ಹೆಚ್ಚಳಕ್ಕೆ (Weight Gain) ಕಾರಣವಾಗುತ್ತಿದ್ದು, ಜನರು ರೋಸಿ ಹೋಗಿದ್ದಾರೆ. ತೂಕ ಹೆಚ್ಚಳ ದೀರ್ಘಕಾಲದವರೆಗೆ ಮುಂದುವರೆದರೆ ಅದು ಅನೇಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಅಲ್ಲದೇ ಯಾರು ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನುವ ಅಭ್ಯಾಸ ಹೊಂದಿರುತ್ತಾರೋ ಅಂತವರು ವೇಗವಾಗಿ ತೂಕ ಹೆಚ್ಚಿಸುತ್ತಾರೆ. ಸಕ್ಕರೆ ಮತ್ತು ಅದರಿಂದ ತಯಾರಿಸಿದ ಸಿಹಿ ಪದಾರ್ಥಗಳ ಸೇವನೆ ಬೊಜ್ಜನ್ನು ವೇಗವಾಗಿ ಹೆಚ್ಚಿಸುತ್ತದೆ. ಅಂತಹ ಜನರು ಸುಲಭವಾಗಿ ಅಂದ್ರೆ ಬೇಗ ತೂಕ ಕಳೆದುಕೊಳ್ಳಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಾರೆ. ಇಲ್ಲಿ ಸಿಹಿ ತಿನ್ನದೆ ಇರಲು ಸಾಧ್ಯವಾಗಲ್ಲ ಎನ್ನುವವರಿಗೆ ತಜ್ಞರು ಕೆಲವು ಆಯ್ಕೆಗಳನ್ನು ನೀಡಿದ್ದಾರೆ.  

    ತೂಕ ಹೆಚ್ಚಿರುವ ಮತ್ತು ಸಿಹಿ ಪದಾರ್ಥಗಳಿಂದ ದೂರವಿರಲು ಸಾಧ್ಯವಾಗದ ಜನರಿಗೆ ತಜ್ಞರು ಕೆಲ ಆಯ್ಕೆ ನೀಡಿದ್ದಾರೆ. ಈ ಪದಾರ್ಥಗಳು ಅವರ ಸಿಹಿ ತಿನ್ನುವ ಕಡು ಬಯಕೆಗಳನ್ನು ಶಾಂತಗೊಳಿಸುತ್ತದೆ. ಜೊತೆಗೆ ಇವುಗಳ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ನೀವು ಸಿಹಿ ತಿನ್ನಲು ಇಷ್ಟ ಪಡುವವರಾಗಿದ್ದರೆ,

    ಕೆಲವು ಆರೋಗ್ಯಕರ ಆಹಾರ ತಿನ್ನಲು ನೀಡಿರುವ ಸಲಹೆಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ. ಪರೀಕ್ಷೆಯಲ್ಲಿ ಸಿಹಿ ಆದರೆ ಆರೋಗ್ಯಕರ. ಅವುಗಳನ್ನು ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುವುದಿಲ್ಲ.

    ಇದನ್ನೂ ಓದಿ: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

    ಆರೋಗ್ಯಕರ ಸಿಹಿ ಪದಾರ್ಥಗಳು ಯಾವವು?

    ಬೆಲ್ಲ

    ಏನಾದರೂ ತಿಂದ ನಂತರ ಸಿಹಿ ಪದಾರ್ಥ ತಿನ್ನಬೇಕು ಎಂದು ಅನಿಸಿದರೆ ಮನೆಯಲ್ಲಿರುವ ಬೆಲ್ಲದ ಒಂದು ತುಂಡು ಸೇವಿಸಿ ಅಂತಾರೆ ತಜ್ಞರು. ಬೆಲ್ಲವು ಸಕ್ಕರೆಗಿಂತ ಕಡಿಮೆ ಕ್ಯಾಲೋರಿ ಹೊಂದಿದೆ. ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ. ಬೆಲ್ಲ ಜೀರ್ಣಕ್ರಿಯೆಗೂ ಒಳ್ಳೆಯದು. ಇದು ದೇಹದಲ್ಲಿನ ಕಬ್ಬಿಣದ ಕೊರತೆ ಸಹ ಪೂರೈಸುತ್ತದೆ.

    ಜೇನುತುಪ್ಪ

    ನೀವು ಸಕ್ಕರೆ ಮತ್ತು ಅದರಿಂದ ತಯಾರಾದ ಪದಾರ್ಥಗಳನ್ನು ತಪ್ಪಿಸಿ. ಮತ್ತು ಸಕ್ಕರೆ ಪದಾರ್ಥಗಳ ಬದಲು ಜೇನುತುಪ್ಪ ಸೇವಿಸಿ. ಇದು ನಿಮ್ಮ ಸಿಹಿ ಆಹಾರದ ಕಡು ಬಯಕೆಯನ್ನು ಶಾಂತಗೊಳಿಸುತ್ತದೆ. ಜೇನುತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.

    ಇದು ಕೆಮ್ಮು, ನೋಯುತ್ತಿರುವ ಗಂಟಲುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಜೇನುತುಪ್ಪ ಸೇವಿಸುವುದು ತೂಕ ಹೆಚ್ಚಿಸಲ್ಲ. ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

    ಒಣ ಹಣ್ಣುಗಳು

    ನಿಮಗೆ ಸಿಹಿ ಪದಾರ್ಥ ತಿನ್ನುವ ಬಯಕೆ ಉಂಟಾದಾಗ ಒಣ ಹಣ್ಣುಗಳನ್ನು ತಿನ್ನಬಹುದು. ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಬಹಳಷ್ಟು ಸಿಹಿ ಅಂಶ ಹೊಂದಿರುತ್ತವೆ. ಮತ್ತು ಕಡಿಮೆ ಕ್ಯಾಲೋರಿ ಹೊಂದಿವೆ. ಒಣ ಹಣ್ಣುಗಳನ್ನು ತಿನ್ನುವ ಮೂಲಕ ಸಿಹಿ ಆಹಾರದ ಹಂಬಲ ತಣಿಸಬಹುದು. ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬನ್ನು ದೇಹಕ್ಕೆ ಒದಗಿಸುತ್ತದೆ.

    ಖರ್ಜೂರ

    ನೀವು ಯಾವುದೇ ಸಕ್ಕರೆಯಿಂದ ಮಾಡಿದ ಪದಾರ್ಥದ ಕ್ರೇವಿಂಗ್ ಅನುಭವಿಸುತ್ತಿದ್ದರೆ, ಸಕ್ಕರೆ ಪದಾರ್ಥಗಳ ಬದಲು ಸಿಹಿಗಾಗಿ ನೀವು ಖರ್ಜೂರ ಸೇವಿಸಿ. ಖರ್ಜೂರವು ತುಂಬಾ ಸಿಹಿ ಮತ್ತು ಶಕ್ತಿಯಿಂದ ತುಂಬಿದೆ. ಇದನ್ನು ತಿನ್ನುವುದರಿಂದ ಸಿಹಿ ಆಹಾರದ ಹಂಬಲ ಕಡಿಮೆಯಾಗುತ್ತದೆ.

    ಶೇಂಗಾ ಬೆಣ್ಣೆ

    ಡಯೆಟ್ ಮಾಡುವವರಿಗೆ ಮತ್ತು ಜಿಮ್‌ಗೆ ಹೋಗುವವರಿಗೆ ಕಡಲೆಕಾಯಿ ಬೆಣ್ಣೆಯು ಉತ್ತಮ ಆಯ್ಕೆ. ಇದು ಕ್ಯಾಲೋರಿ ಹೊಂದಿದೆ. ಆದ್ರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾನಿಯಿಲ್ಲ. ಇದು ಪ್ರೋಟೀನ್ ಸಮೃದ್ಧವಾಗಿದೆ.

    ತೂಕ ಇಳಿಸಲು ಕೆಲವು ಸಲಹೆಗಳು

    - ನಿಮ್ಮ ದಿನವನ್ನು ವ್ಯಾಯಾಮದೊಂದಿಗೆ ಪ್ರಾರಂಭಿಸಿ.

    - ಆರೋಗ್ಯಕರ ಉಪಹಾರ ಸೇವಿಸಿ.

    - ಪ್ರತಿದಿನ ಸೇಬು ಹಣ್ಣು ಸೇವಿಸಿ

    ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?

    - ಹೊರಗಿನ ಆಹಾರ ಸೇವನೆ, ಕರಿದ ಮತ್ತು ಜಂಕ್ ಫುಡ್ ಸೇವನೆ ತಪ್ಪಿಸಿ.

    - ಪ್ರತಿದಿನ ಹೆಚ್ಚು ನೀರು ಸೇವಿಸಿ.

    - ಸರಿಯಾದ ಸಮಯಕ್ಕೆ ಊಟ ಮಾಡಿ. ರಾತ್ರಿ ಊಟ 8 ಗಂಟೆಯೊಳಗೆ ಮಾಡಿ. ರಾತ್ರಿ ಆದಷ್ಟು ಲಘು ಆಹಾರ ಸೇವಿಸಿ.
    Published by:renukadariyannavar
    First published: