ಕಾಫಿ (Coffee) ಮುಂಜಾವಿನ(Morning) ಚೈತನ್ಯಭರಿತ ಪಾನೀಯ. ಜಗತ್ತಿನಾದ್ಯಂತ(World) ಕಾಫಿಗೆ ತನ್ನದೇ ಆದ ಬೇಡಿಕೆ ಇದೆ. ಎಷ್ಟೋ ಮಂದಿ ಒಂದು ಕಪ್(Cup) ಕಾಫಿಯಿಂದಲೇ ತನ್ನ ದಿನದ ಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ. ನನಗೆ ಕಾಫಿ ಇಲ್ಲದೇ ಇರಲು ಸಾಧ್ಯವಾಗುವುದೇ ಇಲ್ಲ, ಒಂದು ಕಪ್ ಕಾಫಿ ಕುಡಿದರೆ ಮೂಡ್ ಫ್ರೆಶ್(Mood fresh) ಆಗುತ್ತೆ ಎಂಬ ಮಾತುಗಳು ಜನರು ಹೇಳುತ್ತಿರುತ್ತಾರೆ. ಆದರೆ ಒಂದು ಕಪ್ ಕಾಫಿಯನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ(Empty Stomach) ಕುಡಿದರೆ ಏನಾಗುತ್ತದೆ ಎಂದು ತಿಳಿದಿದೆಯೇ? ಕೆಲವರು ಕಾಫಿಯನ್ನು ತೂಕ ಇಳಿಕೆಗೂ ಸಹಾಯವಾಗುತ್ತದೆ ಎನ್ನುತ್ತಾರೆ. ನೀವು ಕಾಫಿ ಕುಡಿಯುವ ಮೂಲಕ ಮಧುಮೇಹ ಕಡಿಮೆ ಮಾಡಿಕೊಳ್ಳಬಹುದು. ಕಾಫಿಯು ಟೈಪ್ 2 ಡಯಾಬಿಟಿಸ್ ಅನ್ನು ತಡೆಯಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಕಾಫಿಯ ಕುರಿತಾಗಿ ಸಂಶೋಧಕರಾಗಲಿ, ಜನರಿಗಾಗಲಿ ತುಂಬಾ ದ್ವಂದ್ವಗಳಿವೆ. ಕೆಲವರು ಆರೋಗ್ಯಕ್ಕೆ ಉತ್ತಮ ಎಂದರೆ ಇನ್ನು ಕೆಲವರು ದೇಹದಲ್ಲಿನ ಉಷ್ಣಾಂಶ ಹೆಚ್ಚಿಸುತ್ತದೆ, ಅದು ಇದು ಎಂದು ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ.
ಆದರೆ ಇದೆಲ್ಲದರ ಹೊರತಾಗಿ ಯಾವುದೇ ವಿಚಾರದಲ್ಲಿ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತನ್ನು ಮರೆಯುವಂತಿಲ್ಲ. ಅದರಂತೆ ಕಾಫಿಯನ್ನು ಅತಿಯಾಗಿ ಸೇವಿಸಬಾರದು. ಆಹಾರ, ಪಾನೀಯಗಳು ಹಿತ ಮಿತವಾಗಿದ್ದರೆ ಆರೊಗ್ಯವೂ ಉತ್ತಮವಾಗಿರುತ್ತದೆ. ಆದರೆ ಕೆಲವು ಆಹಾರಗಳನ್ನು ಸೇವಿಸಲು ಕ್ರಮಗಳಿವೆ. ಇವುಗಳನ್ನು ಪಾಲಿಸಿದರಂತೂ ರೋಗಗಳು ಸುಳಿಯುವುದೇ ಇಲ್ಲ.
ಇದನ್ನೂ ಓದಿ: ಸಂಜೆ ಟೀ ಜೊತೆ ಟ್ರೈ ಮಾಡಿ ಈ ಸ್ಪೆಷಲ್ ಸ್ನ್ಯಾಕ್ಸ್
ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆಗುವುದೇನು?
ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಎದ್ದ ತಕ್ಷಣ ಕುಡಿಯುವುದು ಆರೋಗ್ಯದ ವಿಚಾರದಲ್ಲಿ ಒಳಿತಲ್ಲ. ಕಾಫಿ ಕುಡಿಯಲೇ ಬೇಕೆಂದರೆ ಯಾವುದಾದರೂ ಒಂದು ಹಣ್ಣು ಅಥವಾ ತಿಂಡಿಯ ನಂತರ ಸೇವಿಸಿದರೆ ಅಷ್ಟೊಂದು ಅಡ್ಡಪರಿಣಾಮವಾಗಲು ಸಂಭವಿಸುವುದಿಲ್ಲ. ಹಾಗಾದರೆ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮ ಬೀಳುತ್ತದೆ. ಇಲ್ಲಿದೆ ನೋಡಿ ಮಾಹಿತಿ.
1. ಗ್ಯಾಸ್, ಆ್ಯಸಿಡ್ ರಿಫ್ಲಕ್ಸ್, ವಾಕರಿಕೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳು ಪ್ರಾರಂಭವಾಗುತ್ತದೆ
2. ಗರ್ಭಿಣಿಯರು ಮೊದಲು ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ದೂರ ಇರಬೇಕು.
3. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಕರುಳಿನ ಪದರಕ್ಕೆ ಹಾನಿ ಉಂಟಾಗುತ್ತದೆ.
ಕಾಫಿಯನ್ನು ಸೇವಿಸುವುದು ಹೇಗೆ?
ಕಾಫಿ ಕುಡಿಯಲೇ ಬೇಕು ಎಂದಾದಲ್ಲಿ ಇದಕ್ಕೆ ಹಲವು ಸುರಕ್ಷಿತ ವಿಧಾನಗಳಿವೆ. ಇವುಗಳನ್ನು ಅನುಸರಿಸಿದರೆ ಅನಾರೋಗ್ಯದಿಂದ ದೂರವಿರಬಹುದು.
1. ವಯಸ್ಸಿನ ಆಧಾರದ ಮೇಲೆ ಕಾಫಿಯಲ್ಲಿರುವ ಕೆಫಿನ್ ಅಂಶ ಸೇವಿಸುವ ಬಗ್ಗೆ ಕೆಲವು ಅಧ್ಯಯನಗಳು ಶಿಫಾರಸ್ಸು ಮಾಡಿವೆ. ಅದರ ಪ್ರಕಾರ 400 ಮಿಲಿ ಗ್ರಾಂ ನಮ್ಮ ದೇಹಕ್ಕೆ ಸೇರಿದರೆ ಸಾಕು. ಈ ಪ್ರಮಾಣಕ್ಕಿಂತ ಹೆಚ್ಚು ಸೇವಿಸಬಾರದು
2. ಕೆಲವರಿಗೆ ಕಾಫಿಗೆ ಹೆಚ್ಚು ಸಕ್ಕರೆ ಬಳಸಿ ಕುಡಿಯುವುದು ರೂಢಿ. ಮೊದಲು ಈ ಅಭ್ಯಾಸದಿಂದ ದೂರ ಇರಿ. ಬದಲಿಗೆ ಸ್ಟೀವಿಯಾದಂತಹ ಆರೋಗ್ಯಕರ ಸಿಹಿಕಾರಕಗಳನ್ನು ಬಳಸಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಸ್ಟ್ ಕಾಫಿ ಸಿಗುವ ಟಾಪ್ 6 ಸ್ಥಳಗಳ ಲಿಸ್ಟ್ ಇಲ್ಲಿದೆ
3. ಪ್ರತಿದಿನ ಮೊದಲು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
4. ಕೆಲವರು ಸಂಜೆ ಅಥವಾ ರಾತ್ರಿ ಕಾಫಿ ಕುಡಿಯುತ್ತಾರೆ. ಇದರಿಂದ ರಾತ್ರಿ ನಿದ್ರೆಗೆ ತೊಂದರೆ ಉಂಟಾಗಬಹುದು. ಹಾಗಾಗಿ ಸಂಜೆ ಮತ್ತು ರಾತ್ರಿ ಕಾಫಿ ಕುಡಿಯುವುದರಿಂದ ದೂರ ಉಳಿದರೆ ಒಳಿತು.
5. ಮುಂಜಾನೆ ಕಾಫಿ ಕುಡಿಯುವ ಮೊದಲು ಯಾವುದಾದರೂ ಹಣ್ಣು, ಡ್ರೈಫ್ರೂಟ್ಸ್ ತಿನ್ನಿರಿ ತದನಂತರ ಕಾಫಿ ಕುಡಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ