Jaljeera Recipe: ಹೊಟ್ಟೆ ಸಂಬಂಧಿತ ಸಮಸ್ಯೆ ನಿವಾರಿಸಲು ಒಮ್ಮೆ ಈ ಜ್ಯೂಸ್ ಕುಡಿದು ನೋಡಿ

ಮಾರುಕಟ್ಟೆಯಲ್ಲಿ ಹಲವು ವಿಧದ ಜಲ್ಜೀರಾ ಪುಡಿ ಲಭ್ಯ ಇದೆ. ಆದರೆ ನೀವು ಅದನ್ನು ಆರೋಗ್ಯಕರ ರೀತಿಯಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಆಗ ಅದನ್ನು ಮಾರುಕಟ್ಟೆಯಿಂದ ಖರೀದಿಸುವ ಅವಶ್ಯಕತೆ ಇರಲ್ಲ. ಅನೇಕ ಬಾರಿ ಹೊಟ್ಟೆಯ ಸಮಸ್ಯೆ ಗುಣಪಡಿಸುವ ಬದಲು, ಮಾರುಕಟ್ಟೆಯಿಂದ ಖರೀದಿಸಿದ ಜಲ್ಜೀರಾ ಸಮಸ್ಯೆ ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಪ್ಪು ಆಹಾರ ಪದ್ಧತಿ (Bad Food Plan) ಮತ್ತು ಅಸಿಡಿಟಿ ಸಮಸ್ಯೆ (Acidity Problem) ಹಲವು ರೀತಿಯಲ್ಲಿ ಅನಾರೋಗ್ಯ (Unhealth) ಉಂಟು ಮಾಡುತ್ತದೆ. ಹೊಟ್ಟೆ ಉರಿ, ವಾಕರಿಕೆ, ಬಾಯಿಯಲ್ಲಿ ಕೆಟ್ಟ ರುಚಿ ಮುಂತಾದ ಸಮಸ್ಯೆ ಯಾರನ್ನು ಬೇಕಾದ್ರೂ ಕಾಡುತ್ತವೆ. ಆಗ ನೀವು ಹೊಟ್ಟೆಯನ್ನು ತಂಪಾಗಿ ಇಡುವುದು ಬಹಳ ಮುಖ್ಯ. ಆಗ ನೀವು ಟೇಸ್ಟಿ, ಆರೋಗ್ಯಕರ ಮತ್ತು ರಿಫ್ರೆಶ್ ಜಲ್ಜೀರಾ ಪದಾರ್ಥ ಟ್ರೈ ಮಾಡಬಹುದು. ಆರೋಗ್ಯಕರ ಮತ್ತು ರಿಫ್ರೆಶ್ ಜಲ್ಜೀರಾ ಪದಾರ್ಥ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಮರ್ಥವಾಗಿದೆ. ಜಲ್ಜೀರಾ ತುಂಬಾ ತಂಪಾಗಿಸುವ ಪರಿಣಾಮ ಹೊಂದಿದೆ. ಮತ್ತು ಇದು ಹೊಟ್ಟೆಯನ್ನು ತಂಪಾಗಿಸುತ್ತದೆ.

  ಇದು ವಿವಿಧ ರೀತಿಯ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ನಿಭಾಯಿಸುತ್ತದೆ. ಇದು ಆರೋಗ್ಯಕರ ಆಯ್ಕೆಯಾಗಿದೆ.

  ಮನೆಯಲ್ಲಿ ತಯಾರಿಸಿದ ಜಲ್ಜೀರಾ ಉತ್ತಮ ಪರಿಹಾರ

  ಮಾರುಕಟ್ಟೆಯಲ್ಲಿ ಹಲವು ವಿಧದ ಜಲ್ಜೀರಾ ಪುಡಿ ಲಭ್ಯ ಇದೆ. ಆದರೆ ನೀವು ಅದನ್ನು ಆರೋಗ್ಯಕರ ರೀತಿಯಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಆಗ ಅದನ್ನು ಮಾರುಕಟ್ಟೆಯಿಂದ ಖರೀದಿಸುವ ಅವಶ್ಯಕತೆ ಇರಲ್ಲ. ಅನೇಕ ಬಾರಿ ಹೊಟ್ಟೆಯ ಸಮಸ್ಯೆ ಗುಣಪಡಿಸುವ ಬದಲು, ಮಾರುಕಟ್ಟೆಯಿಂದ ಖರೀದಿಸಿದ ಜಲ್ಜೀರಾ ಸಮಸ್ಯೆ ಹೆಚ್ಚಿಸುತ್ತದೆ.

  ಹಾಗಾಗಿ ನಿಮ್ಮ ಆರೋಗ್ಯ, ಹೊಟ್ಟೆ ಮತ್ತು ರುಚಿ ಕಾಳಜಿ ವಹಿಸಿ. ನಾವು ನಿಮಗಾಗಿ ಟೇಸ್ಟಿ ಮತ್ತು ಆರೋಗ್ಯಕರ ಜಲ್ಜೀರಾ ಪಾಕವಿಧಾನ ಮಾಡುವ ವಿಧಾನ ಇಲ್ಲಿ ನೋಡೋಣ. ಹೆಚ್ಚಿನ ಜನರು ಜಲ್ಜೀರಾವನ್ನು ಸೋಡಾ ಸಹಾಯದಿಂದ ತಯಾರಿಸುತ್ತಾರೆ.

  ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

  ಕೆಲವರು ಅದನ್ನು ಶುದ್ಧ ಮಸಾಲೆ ಜೊತೆ ಸರಳ ನೀರಿನಿಂದ ತಯಾರಿಸುತ್ತಾರೆ. ಇದು ಕರುಳಿನ ಆರೋಗ್ಯಕ್ಕೆ ಸಹಕಾರಿ ಆಗಿದೆ. ಜಲ್ಜೀರಾದ ಈ ರುಚಿಕರವಾದ ಪಾಕವಿಧಾನವನ್ನು ತ್ವರಿತವಾಗಿ ಹೇಗೆ ಮಾಡುವುದು?

  ಜಲ್ಜೀರಾ ಕರುಳಿನ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

  ಜಲ್ಜೀರಾದ ಮೂಲ ಘಟಕಾಂಶವೆಂದರೆ ಜೀರಿಗೆ. ನಿಮ್ಮ ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಜೀರಿಗೆಯಲ್ಲಿರುವ ನಾರಿನಂಶವು ಜಠರಗರುಳಿನ ಪ್ರದೇಶವನ್ನು ಆರೋಗ್ಯವಾಗಿಡುತ್ತದೆ.

  ಇದರಲ್ಲಿರುವ ಇತರ ಪದಾರ್ಥಗಳಾದ ಪುದೀನ ಎಲೆಗಳು ಹೊಟ್ಟೆಯನ್ನು ತಂಪಾಗಿಸುತ್ತದೆ.. ಜೊತೆಗೆ ಅದನ್ನು ಸ್ವಚ್ಛವಾಗಿಡುತ್ತದೆ. ಅಜೀರ್ಣ, ಗ್ಯಾಸ್, ಹೊಟ್ಟೆ ಉರಿ ಮುಂತಾದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

  ಇದರ ಜೊತೆ ಜಲ್ಜೀರಾವು ದೌರ್ಬಲ್ಯ, ವಾಕರಿಕೆ, ತಲೆ ತಿರುಗುವಿಕೆ ಮತ್ತು ವಾಂತಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಉತ್ತಮ ಕೂಲಿಂಗ್ ಡ್ರಿಂಕ್ ಎಂದು ಹೆಸರುವಾಸಿ. ಜಲ್ಜೀರಾದ ತಂಪಾಗಿಸುವ ಪರಿಣಾಮ ದೇಹದ ಶಾಖ ತೆಗೆದು ಹಾಕುತ್ತದೆ. ಮತ್ತು ಒಳಗಿನಿಂದ ತಂಪು ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಿ ಶಕ್ತಿ ನೀಡುತ್ತದೆ.

  ಜಲ್ಜೀರಾ ತೂಕ ಇಳಿಕೆಗೂ ಸಹಕಾರಿ

  ಜಲ್ಜೀರಾ ಯಾವುದೇ ಪ್ರಮಾಣದ ಕ್ಯಾಲೊರಿ ಹೊಂದಿಲ್ಲ. ಹಾಗಾಗಿ ನೀವು ತೂಕ ಇಳಿಸಲು ಯೋಜಿಸುತ್ತಿದ್ದರೆ, ಆಹಾರದಲ್ಲಿ ಸೇರಿಸಿ. ತೂಕ ನಷ್ಟದಲ್ಲಿ ಜಲ್ಜೀರಾ ಮಾಡಲು ಬಳಸುವ ಎಲ್ಲಾ ಪದಾರ್ಥಗಳು ಒಟ್ಟಿಗೆ ಉತ್ತಮ ರುಚಿ ನೀಡುತ್ತದೆ.

  ಜೀರಿಗೆ ಸಾಕಷ್ಟು ಪ್ರಮಾಣದ ಫೈಬರ್ ಹೊಂದಿದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಉತ್ತೇಜಿಸುತ್ತದೆ. ಇದರೊಂದಿಗೆ ಹಸಿವು ನಿಯಂತ್ರಿಸುತ್ತದೆ. ಇದರಿಂದಾಗಿ ನಾವು ಕಡಿಮೆ ಕ್ಯಾಲೋರಿ ಸೇವಿಸುವ ಮೂಲಕ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ದೇಹವನ್ನು ಹೈಡ್ರೇಟ್ ಮತ್ತು ಶಕ್ತಿಯುತವಾಗಿರಿಸುತ್ತದೆ. ದೀರ್ಘಕಾಲದವರೆಗೆ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ.

  ಈಗ ರಿಫ್ರೆಶ್ ಜಲ್ಜೀರಾ ಆರೋಗ್ಯಕರ ಪಾಕವಿಧಾನ ತಿಳಿಯೋಣ.

  ಜಲ್ಜೀರಾ ಮಾಡಲು ಬೇಕಾಗುವ ಪದಾರ್ಥಗಳು

  ಜೀರಿಗೆ, ಸೋಂಪು, ಮಾವಿನ ಸಿಪ್ಪೆ ಪುಡಿ, ತಾಜಾ ಪುದೀನ ಎಲೆಗಳು, ಕೊತ್ತಂಬರಿ, ಕರಿ ಮೆಣಸು, ಕಪ್ಪು ಉಪ್ಪು (ರುಚಿಗೆ ತಕ್ಕಂತೆ), ಶುಂಠಿ, ಹುಣಸೆಹಣ್ಣು, ಮಂಜುಗಡ್ಡೆ, ನಿಂಬೆಹಣ್ಣು.

  ಜಲ್ಜೀರಾ ತಯಾರಿಸುವ ವಿಧಾನ

  ಮೊದಲು ಹುಣಸೆ ಹಣ್ಣನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ಈಗ ಬಾಣಲೆಯಲ್ಲಿ ಜೀರಿಗೆ ಹಾಕಿ ಒಣಗಿಸಿ ಹುರಿದು ಪುಡಿ ಮಾಡಿ. ಗ್ರೈಂಡರ್ ಜಾರ್‌ನಲ್ಲಿ, ತಾಜಾ ಪುದೀನ ಮತ್ತು ಕೊತ್ತಂಬರಿ ಸೊಪ್ಪು, ಶುಂಠಿ, ಕರಿಮೆಣಸು, ಸೋಂಪು ಮತ್ತು ಹುಣಸೆಹಣ್ಣುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಅಗತ್ಯವಿರುವಷ್ಟು ನೀರು ಸೇರಿಸಿ ತೆಳುವಾದ ಪೇಸ್ಟ್ ತಯಾರಿಸಿ.

  ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಹೆಚ್ಚುತ್ತಿರುವ ತೂಕಕ್ಕೆ ಮದ್ದು ಅರೆಯಬಹುದು!

  ನಂತರ ಜಗ್ ಅಥವಾ ಗ್ಲಾಸ್ ತೆಗೆದುಕೊಂಡು, ಅದರ ಪ್ರಮಾಣಕ್ಕೆ ಅನುಗುಣವಾಗಿ ಐಸ್ ತುಂಡುಗಳು, ಹುರಿದ ಜೀರಿಗೆ ಪುಡಿ, ರುಚಿಗೆ ಕಪ್ಪು ಉಪ್ಪು ಮತ್ತು ಸಿದ್ಧಪಡಿಸಿದ ಪೇಸ್ಟ್ ಅನ್ನು ಸೇರಿಸಿ. ಈಗ ಮತ್ತೆ ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ನಿಂಬೆ ರಸ ಹಿಂಡಿ ಮತ್ತು ಕೊತ್ತಂಬರಿ-ಪುದೀನ ಎಲೆಗಳಿಂದ ಅಲಂಕರಿಸಿ.
  Published by:renukadariyannavar
  First published: