• Home
  • »
  • News
  • »
  • lifestyle
  • »
  • Stomach Cancer: ಹೊಟ್ಟೆಯ ಕ್ಯಾನ್ಸರ್​ಗೆ ಕಾರಣವಾಗಬಹುದು ನೀವು ಸೇವಿಸುವ ಈ ಆಹಾರಗಳು, ತಿನ್ನುವ ಮುನ್ನ ಎಚ್ಚರ

Stomach Cancer: ಹೊಟ್ಟೆಯ ಕ್ಯಾನ್ಸರ್​ಗೆ ಕಾರಣವಾಗಬಹುದು ನೀವು ಸೇವಿಸುವ ಈ ಆಹಾರಗಳು, ತಿನ್ನುವ ಮುನ್ನ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Stomach Cancer Awareness Month: ಹೊಟ್ಟೆ ಕ್ಯಾನ್ಸರ್‌ಗೆ ಕಾರಣವಾಗುವ ಆಹಾರಗಳ ಬಗ್ಗೆ, ಅದಕ್ಕೆ ಕಾರಣಗಳೇನು? ಇದನ್ನು ಹೇಗೆ ನಿಯಂತ್ರಿಸಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್‌ ಡಾ. ಸಂದೀಪ್‌ ನಾಯಕ್‌ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗಳ (Cancer) ಪೈಕಿ ಹೊಟ್ಟೆ ಕ್ಯಾನ್ಸರ್‌ (stomach Cancer) ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ನಾವು ಪ್ರತಿನಿತ್ಯ ಸೇವಿಸುವ ಗುಣಮಟ್ಟವಲ್ಲದ ಆಹಾರದಿಂದ (Food) ನಮ್ಮ ಹೊಟ್ಟೆಯಲ್ಲಿ ಕ್ಯಾನ್ಸರ್‌ ಅಭಿವೃದ್ಧಿ ಪಡಿಸುತ್ತಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಹೊಟ್ಟೆಯ ಕ್ಯಾನ್ಸರ್‌ ಭಾರತದಲ್ಲಿ ನಾಲ್ಕನೇ ಕ್ಯಾನ್ಸರ್‌ ಆಗಿರುವುದು ಆತಂಕಕಾರಿ ಬೆಳವಣಿಗೆ. ಸಾಮಾನ್ಯವಾಗಿ ಹೊಟ್ಟೆ ಕ್ಯಾನ್ಸರ್‌ ಅನ್ನನಾಳದಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹೊಟ್ಟೆಯ ಕೆಳಭಾಗದಲ್ಲಿ ಕ್ಯಾನ್ಸರ್‌ ಕಣಗಳು ಉತ್ಪತ್ತಿಯಾಗುತ್ತದೆ. ನವೆಂಬರ್‌ (November) ತಿಂಗಳನ್ನು ಹೊಟ್ಟೆ ಕ್ಯಾನ್ಸರ್‌ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದ್ದು, ಹೊಟ್ಟೆ ಕ್ಯಾನ್ಸರ್‌ಗೆ ಕಾರಣವಾಗುವ ಆಹಾರಗಳ ಬಗ್ಗೆ, ಅದಕ್ಕೆ ಕಾರಣಗಳೇನು? ಇದನ್ನು ಹೇಗೆ ನಿಯಂತ್ರಿಸಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್‌ ಡಾ. ಸಂದೀಪ್‌ ನಾಯಕ್‌ ತಿಳಿಸಿದ್ದಾರೆ.


ಪೌಷ್ಟಿಕಾಂಶ ಮತ್ತು ಕ್ಯಾನ್ಸರ್ ಅಪಾಯದ ಬಗ್ಗೆ ನಡೆಯುತ್ತಿರುವ ಸಂಶೋಧನೆಯ ಪ್ರಕಾರ, ನಾವು ಆಯ್ಕೆ ಮಾಡಿಕೊಳ್ಳುವ ಆಹಾರಗಳು ನಮ್ಮ ದೇಹದಲ್ಲಿ ಕ್ಯಾನ್ಸರ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಅದರಲ್ಲಿ ಈ ಆಹಾರ ಪದಾರ್ಥಗಳು ಪ್ರಮುಖವಾಗಿದೆ.


ಉಪ್ಪು ಅಧಿಕವಿರುವ ಆಹಾರಗಳು:
ಹೊಟ್ಟೆಯ ಕ್ಯಾನ್ಸರ್‌ಗೆ ಉಪ್ಪು ಮೊದಲ ಸ್ಥಾನ ಪಡೆಯುತ್ತದೆ. ಆಹಾರದಲ್ಲಿ ನಿಯಮಿತ ಉಪ್ಪು ಸೇವನೆ ಒಳ್ಳೆಯದು. ಅಧಿಕ ಉಪ್ಪು ಹಾಗೂ ಅಧಿಕ ಉಪ್ಪಿನಕಾಯಿ ಬೆಳವಣಿಗೆ ಹೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಕಣಗಳು ಬೆಳೆಯಲು ಸಹಕಾರಿಯಾಗುತ್ತದೆ. ಅಧಿಕ ಉಪ್ಪು ಸೇವನೆಯಿಂದ ಎನ್-ನೈಟ್ರೋಸೊ ಉತ್ಪತ್ತಿಗೆ ಕಾರಣವಾಗಿ, ಅನ್ನನಾಳ ಮತ್ತು ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ದಿನಕ್ಕೆ ಸುಮಾರು 2,300 ಮಿಲಿಗ್ರಾಂಗಳಿಗಿಂತ ಕಡಿಮೆಗೊಳಿಸುವುದು ಸೂಕ್ತ.


ಇದನ್ನೂ ಓದಿ: ಚಳಿಗಾಲದಲ್ಲಿ ಮೊಸರು ತಿನ್ನಬಹುದಾ, ಆಯುರ್ವೇದ ಏನು ಹೇಳುತ್ತದೆ?


ಆಹಾರ ಸೋಂಕು:
ಕೆಲವರಿಗೆ ಅಶುಚಿತ್ವವಿರುವ ಆಹಾರ, ತಂಗಳು ಆಹಾರ ಹಾಗೂ ಸರಿಯಾಗಿ ಶುಚಿ ಮಾಡದ ತರಕಾರಿಗಳ ಸೇವನೆಯಿಂದಲೂ ಹೊಟ್ಟೆ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ. ಅಶುಚಿತ್ವ ಆಹಾರದಲ್ಲಿ ಪೈಲೋರಿ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲಿದ್ದು, ಇದು ಆಹಾರವನ್ನು ವಿಷವಾಗಿ ಪರಿವರ್ತಿಸಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಬಡತನ ಹೆಚ್ಚಿರುವ ಭಾರತದಲ್ಲಿ ಈ ಸೋಂಕು ಸಾಮಾನ್ಯವಾಗಿದೆ.




ಕೆಂಪು ಮತ್ತು ಸಂಸ್ಕರಿಸಿದ ಮಾಂಸಗಳ ಅತಿಯಾದ ಸೇವನೆ:
ಕೆಂಪು ಮಾಂಸ ಅತಿಯಾದ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಇದು ಕೇವಲ ಹೊಟ್ಟೆ ಕ್ಯಾನ್ಸರ್‌ ಅಲ್ಲದೇ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗೂ ಕಾರಣವಾಗುತ್ತದೆ. ಇನ್ನು, ಸಂಸ್ಕರಿಸಿದ ಹಾಗೂ ಸರಿಯಾಗಿ ಸ್ವಚ್ಛಗೊಳಿಸದ ಮಾಂಸದ ಸೇವನೆಯೂ ಅತ್ಯಂತ ಅಪಾಯಕಾರಿ. ಟ್ರಸ್ಟೆಡ್ ಸೋರ್ಸ್‌ನ 2018 ರ ವಿಶ್ಲೇಷಣೆಯ ಪ್ರಕಾರ, ಸಂಸ್ಕರಿಸಿದ ಮಾಂಸವನ್ನು ದಿನಕ್ಕೆ 60 ಗ್ರಾಂ ಮತ್ತು ಕೆಂಪು ಮಾಂಸವನ್ನು ದಿನಕ್ಕೆ 150 ಗ್ರಾಂ ವರೆಗೆ ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಸುಮಾರು 20% ರಷ್ಟು ಹೆಚ್ಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮೌಲ್ಯಮಾಪನದ ಪ್ರಕಾರ, ಸಂಸ್ಕರಿಸಿದ ಮಾಂಸಗಳು ಮನುಷ್ಯರಿಗೆ ಕ್ಯಾನ್ಸರ್ ಕಾರಕವಾಗಿದ್ದು, ನಿಮ್ಮ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು 18% ರಷ್ಟು ಹೆಚ್ಚಿಸುತ್ತದೆ.


ಪ್ಯಾಕೇಜ್‌ ಆಹಾರಪದಾರ್ಥಗಳು:
ಇಂದಿನ ಯುಗದಲ್ಲಿ ಸಮಯದ ಅಭಾವದಿಂದ ಪ್ಯಾಕ್‌ ಮಾಡಿದ ಆಹಾರಗಳ ಸೇವನೆಗೇ ಜನ ಹೆಚ್ಚು ಒಲವು ತೋರುತ್ತಾರೆ. ಇದು ಅತ್ಯಂತ ಅಪಾಯಕಾರಿ. ಆಹಾರ ಕೆಡದಂತೆ ಹಾಕಿರುವ ಪ್ರೆಸರ್ವೇಟಿವ್‌ ನಮ್ಮ ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತಾ, ಕ್ಯಾನ್ಸರ್‌ಗೆ ಕಾರಣವಾಗಬಹುದು.


ಇದನ್ನೂ ಓದಿ: ವಿವಿಧ ರೀತಿಯ ಆರೋಗ್ಯ ಸಮಸ್ಯೆ ತಡೆಗೆ ಚೆಸ್ಟ್ ನಟ್ ಹೇಗೆ ಸಹಕಾರಿ?


ಅದರಲ್ಲೂ ಹೆಚ್ಚು ತಂಪುಪಾನೀಯಗಳು, ಹೆಚ್ಚು ಸಂಸ್ಕೃರಿಸಿದ ಪದಾರ್ಥಗಳು, ಸೋಡಾ ಪಾನೀಯಗಳು, ಹೆಚ್ಚು ದಿನ ಸಂಸ್ಕರಿಸಿದ ಸಿಹಿತಿನಿಸುಗಳು, ಅಲ್ಟ್ರಾಪೊಸೆಸ್ಡ್‌ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅದರಲ್ಲೂ ಹೊಟ್ಟೆ ಕ್ಯಾನ್ಸರ್‌ಗೆ ಹಾದಿ ಮಾಡಿಕೊಡುತ್ತದೆ. ಹೀಗಾಗಿ ಸಾಧ್ಯವಾದಷ್ಟೂ ಆಹಾರಗಳನ್ನು ಮನೆಯಲ್ಲಿಯೇ ಸಿದ್ಧಪಡಿಸಿಕೊಂಡು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Published by:Sandhya M
First published: